For Quick Alerts
ALLOW NOTIFICATIONS  
For Daily Alerts

ಈ ಮೂರು ರಾಶಿಯ ವ್ಯಕ್ತಿಗಳು ಎಂದಿಗೂ ನಿಮಗೆ ಮೋಸ ಮಾಡುವ ವ್ಯಕ್ತಿಗಳಲ್ಲ.

|

ಪ್ರತಿಯೊಬ್ಬರು ಜೀವನದಲ್ಲಿ ಮನೋವ್ಯಥೆ ಮತ್ತು ನೋವಿನಿಂದ ಹೊರಗೆ ಉಳಿಯಲು ಬಯಸುತ್ತಾರೆ. ವಾಸ್ತವವಾಗಿ ನೋವು ಕಷ್ಟ ಹಾಗೂ ದುಃಖಗಳಿಂದ ಆದಷ್ಟು ದೂರ ಇರಲು ಬಯಸುತ್ತಾರೆ. ಜೀವನದಲ್ಲಿ ಸಂತೋಷವಾಗಿರಲು ಏನೆಲ್ಲಾ ಮಾಡಬಹುದು ಎನ್ನುವುದರ ಬಗ್ಗೆ ಹೆಚ್ಚಿನ ಚಿಂತೆನೆ ನಡೆಸುತ್ತಾರೆ. ನಾವು ಪಡೆದುಕೊಂಡಿರುವುದನ್ನು ಕಳೆದುಕೊಳ್ಳುತ್ತೇವೆ ಅಥವಾ ನಮಗೆ ಬೆಕಾಗಿರುವುದು ನಮ್ಮೊಂದಿಗೆ ಇರುವುದಿಲ್ಲ ಎಂದಾಗ ಮನಸ್ಸು ಸಾಕಷ್ಟು ನೋವು ಹಾಗೂ ತಳಮಳಕ್ಕೆ ಒಳಗಾಗುತ್ತದೆ. ಇದು ಕೇವಲ ವಸ್ತುಗಳಿಗಷ್ಟೇ ಸೀಮಿತವಾದದ್ದಲ್ಲ. ವ್ಯಕ್ತಿಗಳಿಗೂ ಸಂಬಂಧಿಸಿರುತ್ತದೆ. ನಮಗೆ ಇಷ್ಟವಾಗುವ ವ್ಯಕ್ತಿಗಳು ನಮ್ಮಿಂದ ದೂರವಾಗುತ್ತಾರೆ ಎಂದಾಗ ಮನಸ್ಸು ಸಾಕಷ್ಟು ದುಃಖಕ್ಕೆ ಒಳಗಾಗುವುದು.

ಸಂಘ ಜೀವಿಗಳಾದ ಮನುಷ್ಯರು ಸಂಬಂಧಗಳ ವಿಷಯದಲ್ಲಿ ಹೆಚ್ಚು ಸೂಕ್ಷ್ಮತೆ ಹಾಗೂ ಪ್ರೀತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ನಮ್ಮ ಆಂತರಿಕ ಭಾವನೆಗಳನ್ನು ಸಾಮಾನ್ಯವಾಗಿ ಆತ್ಮೀಯರು ಎನಿಸಿಕೊಂಡವರ ಬಳಿ ಹೇಳಿಕೊಳ್ಳುವುದು ಸಹಜ. ಅಂತಹ ವ್ಯಕ್ತಿಗಳು ಬಹಳ ಆತ್ಮೀಯರಂತೆ ವರ್ತಿಸಿ ನಂತರ ಮೋಸ ಮಾಡಿದರೆ ಮನಸ್ಸಿಗೆ ಸಹಿಸಿಕೊಳ್ಳಲಾಗದಷ್ಟು ದುಃಖ ಉಂಟಾಗುವುದು. ಈ ಹಿನ್ನೆಲೆಯಿಂದಲೇ ಅನೇಕರು ಮಾನಸಿಕ ಒತ್ತಡ ಅಥವಾ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇರುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೂರು ರಾಶಿಚಕ್ರದ ವ್ಯಕ್ತಿಗಳು ಅತ್ಯಂತ ನಿಷ್ಠಾವಂತರಾಗಿರುತ್ತಾರೆ. ಇವರು ಎಂತಹ ಸಂದರ್ಭ ಎದುರಾದರೂ ಇತರರಿಗೆ ಮೋಸ ಹಾಗೂ ನೋವನ್ನುಂಟುಮಾಡಲು ಬಯಸುವುದಿಲ್ಲ ಎನ್ನಲಾಗುವುದು. ಹಾಗಾದರೆ ಆಮೂರು ರಾಶಿಚಕ್ರಗಳು ಯಾವವು? ಅವುಗಳಲ್ಲಿ ನೀವು ಅಥವಾ ನಿಮ್ಮವರ ರಾಶಿಚಕ್ರ ಇದೆಯೇ ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ವೃಷಭ

ವೃಷಭ

ಈ ರಾಶಿಯವರು ಭೂಮಿಯ ಚಿಹ್ನೆಯನ್ನು ಒಳಗೊಂಡಿರುತ್ತಾರೆ. ಸ್ಥಿರ ಚಿಹ್ನೆಯವರಾದ ಇವರು ಪ್ರತಿಯೊಂದು ವಿಷಯದಲ್ಲಿ ಹೆಚ್ಚು ಕೇಂದ್ರೀಕರಿಸುತ್ತಾರೆ ಎಂದು ಹೇಳಲಾಗುವುದು. ಒಂದು ಸ್ಥಿರವಾದ ಚಿಹ್ನೆ ಏನನ್ನಾದರೂ ಬಯಸಿದರೆ ಅದನ್ನು ಪಡೆಯಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ ಆ ಪ್ರಯತ್ನ ಎಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ಎನ್ನುವುದರ ಬಗ್ಗೆ ಚಿಂತಿಸುವುದಿಲ್ಲ.

ವೃಷಭ

ವೃಷಭ

ಇವರು ಸಾಮಾನ್ಯವಾಗಿ ಯಶಸ್ವಿ ಸಂಬಂಧವನ್ನು ಪಡೆದುಕೊಂಡಿರುತ್ತಾರೆ. ಯಾವ ಕೆಲಸವನ್ನು ಮಾಡಿದರೆ ಯಾವ ಪರಿಣಾಮ ಉಂಟಾಗುವುದು ಎನ್ನುವುದನ್ನು ಇವರು ಅರಿತಿರುತ್ತಾರೆ. ಯಾವುದೇ ವಿಷಯಗಳಿಂದ ಇತರರಿಗೆ ನೋವು ಅಥವಾ ಮೋಸವನ್ನು ಮಾಡದ ವ್ಯಕ್ತಿಗಳು ಇವರು. ತಮ್ಮ ಸಂಗಾತಿಗೆ ಅಥವಾ ಪ್ರೇಮಿಗಳಿಗಾಗಿ ಸಾಕಷ್ಟು ಭದ್ರತೆ ಹಾಗೂ ಪ್ರೀತಿಯನ್ನು ನೀಡುವರು.

Most Read: ಸರಿಯಾಗಿ ಊಟ-ತಿಂಡಿ ಮಾಡದೇ ಇದ್ದರೆ, ಇದೆಲ್ಲಾ ಸಮಸ್ಯೆ ಕಾಡಬಹುದು!

ಕನ್ಯಾ

ಕನ್ಯಾ

ಆಶಾವಾದಿಗಳಾದ ಇವರು ಭೂಮಿಯ ಚಿಹ್ನೆಯನ್ನು ಹೊಂದಿರುವ ಇನ್ನೊಂದು ರಾಶಿಚಕ್ರದವರಾಗಿರುತ್ತಾರೆ. ಇವರಲ್ಲೂ ಸ್ಥಿರತೆಯ ಗುಣ ಇರುವುದರಿಂದ ಸಾಕಷ್ಟು ಹೊಂದಾಣಿಕೆಯ ಗುಣಗಳಿರುತ್ತವೆ. ವ್ಯಕ್ತಿಗಳಲ್ಲಿ ಸಾಕಷ್ಟು ದೋಷಗಳಿದ್ದರೂ ಯಾವುದೇ ಚಿಂತೆಯಿಲ್ಲದೆ ಸಹಕಾರದ ಜೊತೆಯಲ್ಲಿಯೇ ಕೆಲಸವನ್ನು ನಿರ್ವಹಿಸುವರು.

ಕನ್ಯಾ

ಕನ್ಯಾ

ಇವರು ಅತಿಯಾದ ಪ್ರಣಯ ಪೂರ್ವಕ ವರ್ತನೆಯನ್ನು ಹೊಂದಿರದೆ ಇದ್ದರೂ ಸಾಮಾನ್ಯವಾಗಿ ಭಾವನಾತ್ಮಕ ವ್ಯಕ್ತಿಗಳು. ಇವರ ಭಾವನೆ ಹಾಗೂ ಪ್ರೀತಿಯಲ್ಲಿ ಪಾರದರ್ಶಕತೆ ಇರುತ್ತದೆ. ತಮ್ಮ ಕೆಲಸದಿಂದ ಅಥವಾ ಭಾವನೆಗಳಿಂದಾಗಿ ಯಾರಿಗೂ ಮೋಸ ಮಾಡರು. ಇವರ ಪ್ರೀತಿ ನಿಸ್ವಾರ್ಥ ಹಾಗೂ ಸಹಾನುಭೂತಿಯಿಂದ ಕೂಡಿರುತ್ತದೆ. ದಯಾಪರರು ಹಾಗೂ ಅತ್ಯುತ್ತಮ ಸಹಕಾರ ನೀಡುವ ವ್ಯಕ್ತಿಗಳಾಗಿರುತ್ತಾರೆ. ಇವರಿಂದ ಯಾರಿಗೂ ಮೋಸ ಉಂಟಾಗದು.

ಮಕರ

ಮಕರ

ಭೂಮಿಯ ಚಿಹ್ನೆಯನ್ನು ಹೊಂದಿರುವ ಈ ವ್ಯಕ್ತಿಗಳು ಸ್ವ-ಆರಂಭಿಕರಾಗಿರುತ್ತಾರೆ. ಯಾವುದೇ ವಿಷಯಗಳ ಬಗ್ಗೆ ಸೂಕ್ತ ಯೋಜನೆ ಅನುಸರಿಸಲು ಮತ್ತು ಅದನ್ನು ಸಕ್ರಿಯವಾಗಿ ಕೈಗೊಳ್ಳಲು ಬಯಸುತ್ತಾರೆ. ಇವರು ಯಾರನ್ನು ನಿರುತ್ಸಾಹಗೊಳಿಸಲು ಮುಂದಾಗುವುದಿಲ್ಲ. ಇವರ ಈ ಗುಣಗಳು ಸಂಬಂಧವನ್ನು ಚೆನ್ನಾಗಿ ಇರಿಸುತ್ತದೆ. ತಮ್ಮವರನ್ನು ಎಂದಿಗೂ ನಿರುತ್ಸಾಹಗೊಳಿಸದ ವ್ಯಕ್ತಿಗಳು ಇವರು ಎನ್ನಬಹುದು. ಇವರು ತಮ್ಮ ಪ್ರೀತಿಪಾತ್ರರೊಂದಿಗೆ ಸಾಮಾನ್ಯವಾಗಿ ವಿನೋದ ಹಾಗೂ ವಾರಾಂತ್ಯದಲ್ಲಿ ವಿಶೇಷ ಯೋಜನೆಯನ್ನು ಕೈಗೊಳ್ಳುವುದರಿಂದ ಹೆಚ್ಚು ಖುಷಿಯನ್ನು ಅನುಭವಿಸುವರು.

Most Read: ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿದರೆ- ದೇಹದ ತೂಕ ಇಳಿಸಬಹುದು!

ಮಕರ

ಮಕರ

ಇವರು ತಮ್ಮ ಕೆಲಸಕ್ಕೆ ಅತಿಯಾದ ಮಹತ್ವ ನೀಡುವುದರಿಂದ ಕೆಲವೊಮ್ಮೆ ಪ್ರೀತಿಯ ಜೀವನವು ಎರಡನೇ ಮಹತ್ವವನ್ನು ಪಡೆದುಕೊಳ್ಳಬಹುದು. ಆದರೆ ಅಗತ್ಯತೆಗೆ ಹಾಗೂ ಪ್ರೀತಿಗಾಗಿ ಸ್ಥಿರವಾದ ಅಡಿಪಾಯವನ್ನು ರಚಿಸಿರುತ್ತಾರೆ. ಇವರು ಸಂಬಂಧ ಹಾಗೂ ವೃತ್ತಿ ಎರಡು ವಿಚಾರದಲ್ಲೂ ಸಮತೋಲನವನ್ನು ಕಾಯ್ದುಕೊಳ್ಳುವರು. ಇವರಿಂದ ಇತರರಿಗೆ ನೋವು ಮತ್ತು ಮೋಸ ಮಾಡಲು ಬಯಸುವುದಿಲ್ಲ.

English summary

These three Zodiac Signs Would Never Cheat!

We've all wanted to avoid heartache and pain in our lives. In fact, avoiding pain and seeking pleasure might be the sole two motivators in what drives us. We fear losing what we have or not having what we want, and this can make things like jumping into a new relationship difficult, if not impossible. So it helps when astrology is there to at least help us feel like we're mitigating risk. Everyone wants to pick the zodiac signs that won't cheat, and while that's nearly impossible to find across the board, there are some signs that are said to be less prone to cheating.
Story first published: Friday, November 9, 2018, 14:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more