For Quick Alerts
ALLOW NOTIFICATIONS  
For Daily Alerts

ಯಾವ್ಯಾವ ರಾಶಿಯವರಿಗೆ ರಹಸ್ಯಗಳು ಬಾಯಲ್ಲಿ ನಿಲ್ಲುವುದಿಲ್ಲ ಎಂಬುದನ್ನು ನೋಡಿ..

|

ಪ್ರತಿಯೊಬ್ಬರು ತಮ್ಮನ್ನು ತಾವು ಇಷ್ಟ ಪಡುವಷ್ಟು ಬೇರೆ ಯಾರನ್ನು ಇಷ್ಟಪಡುವುದಿಲ್ಲ. ತಮಗೆ ಏನಾದರೂ ಅಪಾಯ ಆಗುತ್ತಿದೆ ಎಂದರೆ ಬಹುಬೇಗ ಅದರಿಂದ ಪಾರಾಗಲು ಬಯಸುತ್ತಾರೆ. ಅದೇ ಒಂದು ವ್ಯಕ್ತಿಯ ಜೊತೆ ಒಳ್ಳೆಯವರಾಗಬೇಕು ಎಂದಾಗ ಬೇರೆಯವರ ಚಾಡಿಗಳನ್ನು ಹೇಳುವುದರ ಮೂಲಕ ಹತ್ತಿರವಾಗುತ್ತಾರೆ. ಸಮಯ ಹೇಗೆ ಬರುತ್ತದೆಯೋ ಹಾಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡಿಕೊಳ್ಳುವವರು ಮನುಷ್ಯರು.

ವ್ಯಕ್ತಿ ವ್ಯಕ್ತಿಗಳ ನಡುವೆ ಸಾಮರಸ್ಯ ಹಾಗೂ ಪ್ರೀತಿ ಇರುವಾಗ ಎಲ್ಲವೂ ಸುಂದರವಾಗಿಯೇ ಇರುತ್ತದೆ. ಯಾವಾಗ ಮುನಿಸು ಅಥವಾ ವೈಮನಸ್ಸು ಉಂಟಾಗುವುದೋ ಅಂದಿನಿಂದ ಅವರ ನಡುವೆ ಇರುವ ರಹಸ್ಯಗಳನ್ನು ಬಹುಬೇಗ ಬಹಿರಂಗ ಪಡಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಮೇಳೆ ಅವರವರ ರಾಶಿಚಕ್ರದ ಅನ್ವಯದಲ್ಲಿ ವರ್ತನೆಗಳು ಇರುತ್ತವೆ. ಅಂತೆಯೇ ರಹಸ್ಯಗಳನ್ನು ಕಾಯ್ದುಕೊಳ್ಳುತ್ತಾರೆ. ತಮ್ಮ ಅನಾನುಕೂಲತೆಗೆ ಅನುಗುಣವಾಗಿ ಬೇರೆಯವರ ರಹಸ್ಯಗಳನ್ನು ಬಹುಬೇಗ ತೆರೆದಿಡುತ್ತಾರೆ ಎಂದು ಹೇಳಲಾಗುವುದು. ಹಾಗಾದರೆ ಯಾವ ರಾಶಿಚಕ್ರದವರು ಎಂತಹ ಸ್ಥಿತಿ ಎದುರಾದಾಗ ಬೇರೆಯವರ ರಹಸ್ಯವನ್ನು ಬಹಿರಂಗಪಡಿಸುತ್ತಾರೆ? ಎನ್ನುವುದನ್ನು ತಿಳಿದುಕೊಳ್ಳಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ....

ಮೇಷ

ಮೇಷ

ಮೇಷರಾಶಿಯವರ ಬಳಿ ಏನಾದರೂ ರಹಸ್ಯ ವಿಚಾರಗಳನ್ನು ಹಂಚಿಕೊಂಡಿದ್ದರೆ, ಅವರನ್ನು ಕೋಪಗೊಳಿಸದಂತೆ ನೋಡಿಕೊಳ್ಳಬೇಕು. ಏಕೆಂದರೆ ಇವರಿಗೆ ಕೋಪ ಬಂತೆಂದರೆ ಕ್ಷಣಾರ್ಧದಲ್ಲಿ ಎಲ್ಲವನ್ನೂ ಬಹಿರಂಗಪಡಿಸುತ್ತಾರೆ. ಇವರು ಯಾವುದನ್ನೂ ಉದ್ದೇಶ ಪೂರ್ವಕವಾಗಿ ಮಾಡುವುದಿಲ್ಲ. ಮೊದಲು ಇವರಿಗೊಂದು ಯೋಜನೆಗಳಿರುತ್ತವೆ. ನಂತರ ಹೇಳುತ್ತಾರೆ. ಅಂತೆಯೇ ಬೇರೆಯವರು ಏನೆಂದುಕೊಳ್ಳುವರು ಎನ್ನುವುದರ ಬಗ್ಗೆಯೂ ಚಿಂತನೆ ನಡೆಸುವರು.

ವೃಷಭ

ವೃಷಭ

ಇವರು ಸ್ಥಿರ ಮನಸ್ಸಿನ ವ್ಯಕ್ತಿಗಳು ಈ ರಾಶಿಯ ವ್ಯಕ್ತಿಗಳು ನಿಮ್ಮೊಂದಿಗೆ ಉತ್ತಮವಾಗಿದ್ದಾರೆ ಎಂದಾದರೆ ನೀವು ಅವರೊಂದಿಗೆ ವಿಶ್ವಾಸವನ್ನು ಇರಿಸಬಹುದು. ಅವರೊಂದಿಗೆ ಸ್ವಲ್ಪ ಸಮಯ ಬೆರೆತು, ಒಡನಾಡಿದರೂ ನಿಮಗೆ ಸ್ವಭಾವದ ಕಲ್ಪನೆ ಸಿಗುವುದು. ನೀವು ಇವರೊಂದಿಗೆ ರಹಸ್ಯಗಳನ್ನು ಹೇಳಿಕೊಳ್ಳಬಹುದು.

ಮಿಥುನ

ಮಿಥುನ

ಇವರು ಯಾವುದೇ ವಿಚಾರಗಳನ್ನು ತಮ್ಮಲ್ಲಿಯೇ ರಹಸ್ಯವಾಗಿ ಇಟ್ಟುಕೊಳ್ಳುವುದಿಲ್ಲ. ಇವರಿಗೆ ಗಾಸಿಪ್ ಹರಡುವುದು ಬಹಳ ಸಂತೋಷವನ್ನು ತಂದುಕೊಡುವುದು. ಇವರಲ್ಲಿ ಯಾವುದಾದರೂ ರಹಸ್ಯವನ್ನು ಹೇಳಿಕೊಂಡರೆ, ಅವರು ಯಾವುದೇ ಉದ್ದೇಶಗಳಿಲ್ಲದಿದ್ದರೂ ಸಹ ಕಥೆಯನ್ನು ಹರಡುವರು. ಹಾಗಾಗಿ ಇವರೊಂದಿಗೆ ವಿಚಾರಗಳನ್ನು ಹೇಳಿಕೊಳ್ಳುವಾಗ ಆದಷ್ಟು ಎಚ್ಚರಿಕೆಯಿಂದ ಇರಬೇಕು.

ಕರ್ಕ

ಕರ್ಕ

ಇವರು ನಂಬಲು ಅರ್ಹ ಹಾಗೂ ನಿಷ್ಠಾವಂತ ವ್ಯಕ್ತಿಗಳು ಎನ್ನಬಹುದು. ಇವರು ಕಾಳಜಿಯುಳ್ಳ ವ್ಯಕ್ತಿಗಳಾಗಿದ್ದರಿಂದ ಇವರನ್ನು ಉತ್ತಮ ಸ್ನೇಹಿತರನ್ನಾಗಿ ಪಡೆದುಕೊಳ್ಳಬಹುದು. ಇವರಲ್ಲಿ ಎಂತಹ ವಿಷಯಗಳನ್ನು ಹೇಳಿಕೊಂಡರೂ ಅವರು ಬಹಳ ರಹಸ್ಯವಾಗಿಯೇ ಕಾಯ್ದುಕೊಳ್ಳುವರು ಎಂದು ಹೇಳಲಾಗುತ್ತದೆ.

ಸಿಂಹ

ಸಿಂಹ

ಈ ರಾಶಿಯವರಲ್ಲಿ ರಹಸ್ಯಗಳನ್ನು ಹೇಳಿಕೊಳ್ಳಬಾರದು. ಇವರು ಬೇರೆಯವರನ್ನು ಹೆಮ್ಮೆ ಪಡಿಸುವ ಉದ್ದೇಶಕ್ಕೆ ವಿಷಯವನ್ನು ಬಹಿರಂಗಪಡಿಸಬಹುದು. ರಹಸ್ಯವು ವ್ಯಕ್ತಿಯ ಬಗ್ಗೆ ಇಷ್ಟವಿಲ್ಲದಿರುವಾಗ ಹೇಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಕನ್ಯಾ

ಕನ್ಯಾ

ಇವರು ವ್ಯಕ್ತಿ ಬಹಳ ಹತ್ತಿರದವರಾಗಿದ್ದರೆ ಹಾಗೂ ಅವರಿಗೆ ಹೆಚ್ಚು ಬೇಕಾದವರಾಗಿದ್ದರೆ ಅಂತವರು ಹೇಳಿರುವ ರಹಸ್ಯ ವಿಷಯಗಳನ್ನು ದೀರ್ಘ ಸಮಯದ ಕಾಲ ಬಚ್ಚಿಟ್ಟುಕೊಳ್ಳುತ್ತಾರೆ. ವ್ಯಕ್ತಿ ಅಷ್ಟು ಇಷ್ಟವಿಲ್ಲದೆ ಇರುವಾಗ ಅಥವಾ ಬೇಡದ ವ್ಯಕ್ತಿಗಳಾಗಿದ್ದರೆ ವಿಚಾರಗಳನ್ನು ಕಥೆಯ ರೀತಿಯಲ್ಲಿ ಹೇಳಲು ಪ್ರಾರಂಭಿಸುತ್ತಾರೆ.

ತುಲಾ

ತುಲಾ

ಇವರು ನಿಜವಾಗಲೂ ಉತ್ತಮ ಸ್ನೇಹಿತರಾಗಿರುತ್ತಾರೆ. ಕೆಲವೊಮ್ಮೆ ಇವರು ರಹಸ್ಯಗಳನ್ನು ಬಹಿರಂಗಪಡಿಸಬೇಕೇ? ಇಲ್ಲವೇ ಎನ್ನುವುದನ್ನು ನಿರ್ಧರಿಸಲು ಕಷ್ಟವಾಗುವುದು. ಇವರ ಕೆಲವೊಮ್ಮೆ ಉತ್ತಮ ರೀತಿಯಲ್ಲಿ ಗೌಪ್ಯತೆಯನ್ನು ಕಾಯ್ದುಕೊಳ್ಳುವುದಿಲ್ಲ. ಸಂತೋಷದಿಂದ ಅವರು ತಮ್ಮ ಸ್ನೇಹಿತನ ಕಥೆಗಳನ್ನು ಸುಲಭವಾಗಿ ಹರಡುತ್ತಾರೆ.

ವೃಶ್ಚಿಕ

ವೃಶ್ಚಿಕ

ಇವರು ವಿಷಯಗಳನ್ನು ಅದ್ಭುತ ರೀತಿಯಲ್ಲಿ ಬಚ್ಚಿಡುತ್ತಾರೆ. ಇವರು ಬಹಳ ಶಾಂತ ಸ್ವಭಾವದ ವ್ಯಕ್ತಿಯಂದು ಪರಿಗಣಿಸಲಾಗುವುದು. ರಹಸ್ಯಗಳನ್ನು ಸೂಕ್ತವಾಗಿ ಅರ್ಥಮಾಡಿಕೊಳ್ಳುವುದರಿಂದ ಅದನ್ನು ಕಾಪಾಡುವುದು ಹೇಗೆ ಎನ್ನುವುದು ತಿಳಿದಿರುತ್ತದೆ. ಸಾರ್ವಜನಿಕವಾಗಿ ತಪ್ಪು ಗೈದಿದ್ದರೆ ಅಥವಾ ಅವರ ವಿರುದ್ಧ ಸಂಚು ಮಾಡಿದ್ದರೆ ರಹಸ್ಯವನ್ನು ಬಹಿರಂಗ ಪಡಿಸುತ್ತಾರೆ.

ಧನು

ಧನು

ಇವರು ಒಬ್ಬ ಅದ್ಭುತ ಸ್ನೇಹಿತರಾಗಬಲ್ಲರು. ಇವರು ಒಮ್ಮೆ ಮಾತನಾಡಲು ಪ್ರಾರಂಭಿಸಿದರೆ ಅದನ್ನು ಯಾವಾಗ ನಿಲ್ಲಿಸುತ್ತಾರೆ ಎನ್ನುವುದು ಅವರಿಗೂ ತಿಳಿದಿರುವುದಿಲ್ಲ. ಇವರು ಮಾತನಾಡುವಾಗ ಗೊತ್ತಿರುವ ವಿಚಾರ ಅಥವಾ ಗೊತ್ತಿರದ ವಿಚಾರವೇ ಆಗಿರಲಿ, ಎಲ್ಲದರ ಕುರಿತಾಗಿಯೂ ಮಾತನಾಡುತ್ತಾರೆ. ಅಂತಹ ಸಂದರ್ಭದಲ್ಲಿ ಬೇರೆಯವರ ರಹಸ್ಯವೂ ಬಯಲಾಗಿ ಹೋಗುತ್ತದೆ.

ಮಕರ

ಮಕರ

ಸಾಮಾನ್ಯವಾಗಿ ಈ ರಾಶಿಯವರು ರಹಸ್ಯಗಳನ್ನು ಬಹಳ ಸುಲಭವಾಗಿ ವಿಶ್ಲೇಷಿಸಬಲ್ಲರು. ವಿಷಯವನ್ನು ಹೇಗೆ ಬಹಿರಂಗಪಡಿಸಬಹುದು ಎನ್ನುವುದು ಇವರಿಗೆ ತಿಳಿದಿರುವುದರಿಂದ ಹಾಗೆಯೇ ನಡೆದುಕೊಳ್ಳುತ್ತಾರೆ. ಇವರ ದೃಷ್ಟಿಯಲ್ಲಿ ಹಣಕಾಸು ಎನ್ನುವುದು ದೊಡ್ಡ ರಹಸ್ಯವಾಗಿರುತ್ತದೆ.

ಕುಂಭ

ಕುಂಭ

ಇವರು ರಹಸ್ಯವನ್ನು ಉಳಿಸಿಕೊಳ್ಳಬೇಕು ಎಂದರೆ ಅದು ಅತ್ಯಂತ ವಿಲಕ್ಷಣದ ವಿಚಾರವಾಗಿರಬೇಕು. ಇವರು ಸಾಮಾನ್ಯ ವಿಚಾರಗಳನ್ನು ರಹಸ್ಯವೆಂದು ಪರಿಗಣಿಸುವುದಿಲ್ಲ. ಹಾಗಾಗಿ ಇವರು ಹಾಸ್ಯದ ರೂಪದಲ್ಲಿ ವಿಷಯಗಳನ್ನು ಬಹಿರಂಗಪಡಿಸುವರು.

ಮೀನ

ಮೀನ

ಈ ವ್ಯಕ್ತಿಗಳೊಂದಿಗೆ ಯಾವುದೇ ಅಪಾಯವಿಲ್ಲ ಎನ್ನಬಹುದು. ಇವರು ಎಂತಹ ರಹಸ್ಯವಾಗಿದ್ದರೂ ಶಾಶ್ವತವಾಗಿ ಕಾಪಾಡಿಕೊಳ್ಳುತ್ತಾರೆ. ಇವರು ರಹಸ್ಯದ ವ್ಯಕ್ತಿಗಳೊಂದಿಗೆ ಇರಲು ಸಹ ಬಯಸುತ್ತಾರೆ. ಇವರು ತಮ್ಮ ಭಾವನೆಗಳಿಗೆ ವಿರೋಧವನ್ನುಂಟುಮಾಡುವವರ ರಹಸ್ಯವನ್ನು ತೆರೆದಿಡುವರು.

English summary

these-signs-the-zodiac-can-t-keep-secrets

Pay attention, signs written in bold can't keep a secret; you should keep your lips sealed before them. Signs marked with asterisks, you can confide in, but in accordance with the following instructions.
X
Desktop Bottom Promotion