Just In
- 21 min ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 1 hr ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 3 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- News ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನೇ ಗುರಿಯಾಗಿಸಿ ಐಟಿ ದಾಳಿ : ಡಿ ಕೆ ಶಿವಕುಮಾರ್ ಏನಂದ್ರು?
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಶಿ ಭವಿಷ್ಯ: ಎಲ್ಲಾ ರಾಶಿಯವರಲ್ಲೂ ಇಂತಹ ಗುಣಗಳು ಇದ್ದೇ ಇರುತ್ತದೆ!
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳೆರಡು ಇರುತ್ತವೆ. ತಮ್ಮ ಕೆಟ್ಟ ಗುಣಗಳನ್ನು ಮುಚ್ಚಿಟ್ಟುಕೊಂಡು, ಒಳ್ಳೆತನವನ್ನು ಹೆಚ್ಚು ಪ್ರದರ್ಶಿಸುವುದು ಮಾನವನ ಸಹಜ ಗುಣ. ಕೆಲವರು ಬೇರೆಯವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು, ತಾವು ಒಳ್ಳೆಯವರಂತೆ ವರ್ತಿಸುತ್ತಾರೆ.
ನೋಡುಗರ ಕಣ್ಣಿಗೆ ವ್ಯಕ್ತಿ ಒಳ್ಳೆಯವರಂತೆ ಗೋಚರಿಸುತ್ತಿದ್ದರು ಆತನ ಅಂತರಾಳದಲ್ಲಿ ದುಷ್ಟಗುಣ ಮೆರೆದಾಡುತ್ತಿರುತ್ತದೆ. ಇಂತಹ ಗುಣಗಳು ವ್ಯಕ್ತಿಯ ಸುತ್ತಲಿರುವ ಮಂದಿಗೆ ಅಪಾಯಕಾರಿಯೂ ಹೌದು. ವ್ಯಕ್ತಿಯ ಕೆಟ್ಟಗುಣ ಹಾಗೂ ಮೋಸದ ಸ್ವಭಾವಗಳು ರಾಶಿಚಕ್ರಕ್ಕೆ ಅನುಗುಣವಾಗಿರುತ್ತದೆ. ರಾಶಿಚಕ್ರಕ್ಕೆ ಅನುಗುಣವಾಗಿ ಯಾವೆಲ್ಲಾ ಮೋಸದ ಗುಣ ಹಾಗೂ ದುಷ್ಟ ಗುಣಗಳು ಅಡಗಿರುತ್ತವೆ ಎನ್ನುವುದನ್ನು ಈ ಕೆಳಗೆ ವಿವರಿಸಲಾಗಿದೆ... ಮುಂದೆ ಓದಿ...
ಮೇಷ
ಇವರು ಬಹುತೇಕ ಎಲ್ಲಾ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ. ಅದು ಇತರರ ಗಮನಕ್ಕೆ ತಿಳಿದು ಬರುವುದಿಲ್ಲ. ಇವರಿಗೆ ಸಿಟ್ಟು ಬಂದರೆ, ಸಿಟ್ಟಿಗೆ ಕಾರಣರಾದವರನ್ನು ಟೀಕಿಸಲು ಯಾವುದೇ ಮುಜುಗರ ಅಥವಾ ಕರುಣಾ ಭಾವಕ್ಕೆ ಒಳಗಾಗುವುದಿಲ್ಲ. ಇನ್ನು ಈ ರಾಶಿಯವರು ಈ ರಾಶಿಯ ಜನರು ಕೊಂಚ ಸೋಮಾರಿಗಳಾಗಿದ್ದು ತಮ್ಮ ಕಾರ್ಯಗಳಿಗೆ ಎಲ್ಲಿಯವರೆಗೆ ಅಂತಿಮ ಕರೆ ಬರುವುದಿಲ್ಲವೋ ಅಲ್ಲಿಯವರೆಗೆ ಮುಂದೂಡುವ ಅಭ್ಯಾಸದವರಾಗಿರುತ್ತಾರೆ. ಸುಳ್ಳು ಹೇಳುವ ಸಂದರ್ಭ ಬಂದರೆ ಸಮಯಕ್ಕೊಂದು ಸುಳ್ಳು ಹೇಳಲು ಸಾಧ್ಯವಾದರೂ ಇದರ ಪರಿಣಾಮಗಳನ್ನು ಸಮರ್ಥಿಸಿಕೊಳ್ಳುವ ಚಾಕಚಕ್ಯತೆ ಇವರಿಗಿರುವುದಿಲ್ಲ. ಆದ್ದರಿಂದ ಇನ್ನೊಂದು ಸುಳ್ಳು ಹೇಳಿ ಗೋಜಲಾಗಿಸಿ ಒಟ್ಟಾರೆ ತಮ್ಮ ಕೆಲಸವಾಗುವಂತೆ ನೋಡಿಕೊಳ್ಳುತ್ತಾರೆ.
ವೃಷಭ
ಇವರು ಗಾಸಿಪ್ ಪ್ರಿಯರು. ಬೇರೆಯವರ ಸಮಸ್ಯೆಯ ಬಗ್ಗೆ ಸ್ವಲ್ಪ ಹೆಚ್ಚಾಗಿಯೇ ಮಾತನಾಡುತ್ತಾರೆ. ಇವರು ಯಾವುದೇ ವಿಚಾರವನ್ನು ಹೇಳುವುದಿಲ್ಲ ಎಂದು ಭರವಸೆ ನೀಡಿದರೂ ಸಹ ಕೆಲವು ಸಂದರ್ಭದಲ್ಲಿ ಬಾಯಿ ಬಿಟ್ಟುಬಿಡುತ್ತಾರೆ.
ಮಿಥುನ
ಇವರು ಆಸಕ್ತಿ/ಇಷ್ಟ ಇಲ್ಲದ ವಿಚಾರದ ಬಗ್ಗೆ ಇಲ್ಲ ಎಂದು ಹೇಳುವ ಬದಲು ಅದನ್ನು ಮರೆ ಮಾಚಲು ಅಥವಾ ದೂರವಾಗಲು ಪ್ರಯತ್ನಿಸುತ್ತಾರೆ.ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಬದಲಿಗೆ ಇತರರನ್ನು ದ್ವೇಷಿಸುತ್ತಾರೆ. ಇನ್ನು ಈ ರಾಶಿಯ ಜನರು ಈ ವರ್ಗದ ಜನರು ದ್ವಂದ್ವ ಪ್ರವೃತ್ತಿ ಯುಳ್ಳವರಾಗಿರುತ್ತಾರೆ. ಇದೇ ಇವರನ್ನು ಅತಿ ದೊಡ್ಡ ಸುಳ್ಳುಗಾರನಾಗಿಸಿದೆ. ಈ ಅಭ್ಯಾಸದಿಂದ ಇವರು ಸಂದರ್ಭಕ್ಕನುಸಾರವಾಗಿ ಸುಳ್ಳು ಹೇಳುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಇತರ ರಾಶಿಗಳಿಗೆ ಹೋಲಿಸಿದರೆ ಸುಳ್ಳು ಹೇಳುವ ಪ್ರಮಾಣ ಇವರಲ್ಲಿ ಹೆಚ್ಚು.
ಕರ್ಕ
ಇವರು ಸದಾ ಸಾಮಾಜಿಕ ತಾಣಗಳಲ್ಲಿ ಇರಲು ಇಷ್ಟಪಡುತ್ತಾರೆ. ಸದಾ ಇತರರ ಬಗ್ಗೆ, ನಡವಳಿಕೆಯ ಬಗ್ಗೆ ಮಾತನಾಡಲು ಇಷ್ಟಪಡುತ್ತಾರೆ. ಬೇರೆಯವರ ಕೊಳಕನ್ನು ಹುಡುಕುವುದು ಹಾಗೂ ಅದರ ಬಗ್ಗೆ ಪ್ರಚಾರ ಪಡಿಸುವುದರಲ್ಲಿ ಹೆಚ್ಚು ಸಮಯ ಕಳೆಯುವ ಸ್ವಭಾವ ಇವರದ್ದು. ಕೆಲವೊಮ್ಮೆ ಈ ರಾಶಿಯ ಜನರು ಇತರರು ತಿಳಿದಿರುವುದಕ್ಕಿಂತಲೂ ಹೆಚ್ಚು ಮೃದುವಾಗಿರುತ್ತಾರೆ. ಸ್ವಭಾವತಃ ಇವರು ಒಳ್ಳೆಯವರಾಗಿದ್ದು ಇತರರ ಏಳ್ಗೆಯಲ್ಲಿಯೇ ತಮ್ಮ ಏಳ್ಗೆಯನ್ನು ಆದ್ದರಿಂದ ಕೇವಲ ಇತರರಿಗೆ ಒಳ್ಳೆಯದಾಗುವುದಿದ್ದರೆ ಮಾತ್ರ ಇವರು ಸುಳ್ಳು ಹೇಳುತ್ತಾರೆ. ಸಮಯ ಮತ್ತು ಸಂದರ್ಭ ನೋಡಿ ಇವರು ಸುಳ್ಳುಗಳನ್ನು ಹೇಳುತ್ತಾರಾದರೂ ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲದೇ ಕೇವಲ ಪರಿಸ್ಥಿತಿ ನಿಭಾಯಿಸುವುದಾಗಿರುತ್ತದೆ.
ಸಿಂಹ
ಇವರು ಎಲ್ಲಾ ವಿಚಾರದ ಬಗ್ಗೆ ಚಿಂತಿಸಲು ಇಷ್ಟಪಡುತ್ತಾರೆ. ತಮ್ಮ ಜೀವನದಲ್ಲಿ ಅದೇನೋ ಭೀಕರ ವಿಚಾರ ನಡೆದಿದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಇವರು ಎಂದಿಗೂ ನಮ್ರತೆಯ ಪರವಾಗಿ ಸಹಾಯ ಮಾಡರು. ತಮ್ಮ ಗುರಿಯ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿರುವ ಇವರು ಧೈರ್ಯವಂತರೂ ನೇರ ನಡವಳಿಕೆಯ ಸ್ವಭಾವದವರೂ ಆಗಿರುತ್ತಾರೆ. ಸ್ಪರ್ಧೆಗೆ ಸದಾ ಸಿದ್ಧರಿರುವ ಇವರು ಸ್ಪರ್ಧೆಯಲ್ಲಿ ಗೆಲ್ಲಲು ಸತ್ಯದ ಭಂಡಾರ ಖಾಲಿಯಾದರೆ ಸುಳ್ಳುಗಳನ್ನು ಬಳಸಲು ಹಿಂಜರಿಯುವುದಿಲ್ಲ. ಇತರರು ತಮ್ಮ ಜೀವನದಲ್ಲಿ ನಾಟಕವಾಡುವುದನ್ನು, ಸುಳ್ಳು ಹೇಳುವುದನ್ನು ಸಹಿಸದ ಇವರು ಆ ವ್ಯಕ್ತಿಗಳ ಸಂಗವನ್ನೇ ಬಿಟ್ಟುಬಿಡುತ್ತಾರೆ. ವ್ಯಂಗ್ಯವೆಂದರೆ ಇದೇ ಸುಳ್ಳುಗಳನ್ನು ಇವರೇ ಹೇಳಿ ಎದುರಿನವರು ತಮ್ಮೊಂದಿಗೆ ಸ್ನೇಹದಿಂದಿರಬೇಕೆಂದು ಬಯಸುತ್ತಾರೆ.
ಕನ್ಯಾ
ಇವರು ನೋಡಲು ಬಹಳ ಮುಗ್ಧರಾಗಿ ಕಾಣುತ್ತಾರೆ. ಆದರೆ ರಹಸ್ಯವನ್ನು ಗುಟ್ಟಾಗಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ. ಇವರು ಮಾಡುವ ಮೋಸ ಇತರರಿಗೆ ಕಾಣದು. ಇವರು ಮರೆಯಲ್ಲಿ ಮಾಡುವ ಮೋಸವನ್ನು ಗುರುತಿಸಲಾಗದು.
ತುಲಾ
ಇವರು ದೊಡ್ಡ ಸಾಮಾಜಿಕ ವಲಯವನ್ನು ಹೊಂದಿದವರಾಗಿರುತ್ತಾರೆ. ಸ್ನೇಹಿತರೊಡನೆ ಕೆಲವು ಸುಳ್ಳು ಯೋಜನೆಯನ್ನು ಮಾಡುವ ಸಾಧ್ಯತೆ ಇರುತ್ತದೆ. ಇವರು ಹೇಳುವ ವಿಚಾರವೆಲ್ಲಾ ದೊಡ್ಡ ಯೋಜನೆಯದ್ದು ಎಂದು ನಂಬುವ ಹಾಗಿರುವುದಿಲ್ಲ.
ವೃಶ್ಚಿಕ
ಇವರು ಸದಾ ತಮ್ಮ ದ್ವೇಷವನ್ನು ಮನದಲ್ಲಿಟ್ಟುಕೊಂಡಿರುತ್ತಾರೆ. ಇವರು ವರ್ಷಾನುಗಟ್ಟಲೆ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡಿರುತ್ತಾರೆ. ಇವರು ಇಷ್ಟ ಪಡದ ವ್ಯಕ್ತಿಗೆ ಒಂದು ನಗುವನ್ನು ಸಹ ಬೀರುವುದಿಲ್ಲ. ಇನ್ನು ಈ ರಾಶಿಯ ಜನರು ಅತಿ ತೀಕ್ಷ್ಣಮತಿಗಳಾಗಿದ್ದಾರೆ. ಇವರನ್ನು ಬೇರೆಯವರು ನಿಯಂತ್ರಿಸುವುದು ಇವರಿಗೆ ಇಷ್ಟವಿಲ್ಲ. ಬಲ ಮತ್ತು ಪ್ರಾಬಲ್ಯತೆಯನ್ನು ಹೊಂದಲು ಇಷ್ಟಪಡುವ ಇವರು ಇದಕ್ಕಾಗಿ ಯಾವ ಬಗೆಯಲ್ಲಿ ತಮ್ಮ ಮಾತುಗಳಲ್ಲಿ ಸುಳ್ಳುಗಳನ್ನು ಪೋಣಿಸುತ್ತಾರೆ ಎಂಬುದನ್ನು ಹೇಳಲು ಸಾಧ್ಯವೇ ಇಲ್ಲ. ಈ ಸುಳ್ಳುಗಳ ಸರಮಾಲೆಯಲ್ಲಿ ಸಿಲುಕಿದವರು ಈ ಗೋಜಲನ್ನು ಅರ್ಥ ಮಾಡುವಷ್ಟರಲ್ಲಿ ಆಗಲೇ ಬಲೆಗೆ ಬಿದ್ದಾಗಿರುತ್ತದೆ. ಸುಳ್ಳು ಎಂದು ಗೊತ್ತಿರುವ ಜಾಹೀರಾತುಗಳನ್ನು ನೋಡಿ ನಾವು ಉತ್ಪನ್ನಗಳನ್ನು ಕೊಳ್ಳುವುದಿಲ್ಲವೇ ಹಾಗೇ. ಅಂತೆಯ ಇವರ ನಿರ್ಯಣಗಳು ಚಂಚಲವಾಗಿದ್ದು ಕ್ಷಣಕ್ಷಣಕ್ಕೆ ಬದಲಾಗುತ್ತಿರುತ್ತವೆ.
ಧನು
ಇವರು ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಜನರೊಟ್ಟಿಗೆ ಮಾತನಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಒಬ್ಬ ವ್ಯಕ್ತಿಯಿಂದ ಮೋಸವಾಗಿದೆ ಎಂಬುದು ತಿಳಿದರೆ ಆ ವ್ಯಕ್ತಿಯ ವಿರುದ್ಧ ಇವರು ಸಹ ಮೋಸ ಮಾಡಲು ಇಳಿಯುತ್ತಾರೆ. ಕ್ಷಮೆಯಾಚಿಸಿದಲ್ಲಿ ಇವರು ಸಹ ಪ್ರಾಮಾಣಿಕವಾಗಿ ವರ್ತಿಸುತ್ತಾರೆ.
ಮಕರ
ಇವರು ಬಹಳ ಸರಳ ಸ್ವಭಾವದವರು. ಇವರ ನಡತೆಯಲ್ಲಿ ಇವರಿಗೆ ನಿಯಂತ್ರಣವಿರುತ್ತದೆ. ಹಾಗಾಗಿ ಇವರು ಮಾಡುವ ತಪ್ಪು ಯಾರಿಗೂ ತಿಳಿಯದಂತೆ ಇಡುತ್ತಾರೆ. ಅದನ್ನು ತಿದ್ದಿಕೊಳ್ಳುವ ಸಾಮರ್ಥ್ಯ ಇವರಿಗೆ ಇದೆ.
ಕುಂಬ
ಇವರು ತಾವು ಹೇಳುವ ವಿಚಾರಕ್ಕೆ ತಾವೇ ಅಂಟಿಕೊಳ್ಳುವುದಿಲ್ಲ. ಚಂಚಲ ಸ್ವಭಾವದವರಾದ ಇವರು ತಮ್ಮ ಮನಸ್ಸನ್ನು ಬದಲಾಯಿಸುತ್ತಿರುತ್ತಾರೆ. ಇವರ ವರ್ತನೆ ಸುಳ್ಳು ಎನ್ನುವುದನ್ನು ತೋರ್ಪಡಿಸುವುದಿಲ್ಲ.
ಮೀನ
ಇವರು ತಾವು ಮುಗ್ಧ ಬಲಿಪಶು ಎನ್ನುವ ರೀತಿಯಲ್ಲಿ ವರ್ತಿಸುತ್ತಾ, ತಮ್ಮ ಸುತ್ತಲಿನ ಜನರನ್ನು ದೂಷಿಸುತ್ತಾರೆ. ತಾವು ಅದೆಷ್ಟೇ ತಪ್ಪು ಮಾಡಿದರೂ ಬಹಳ ಕರುಣಾ ಶೀಲರು ಎನ್ನುವ ವರ್ತನೆ ತೋರಿಸುತ್ತಾರೆ.