ನೋಡಿ, ಈ ನಾಲ್ಕು ರಾಶಿಚಕ್ರದವರಿಗೆ ಕೆಟ್ಟ ಕೋಪ ಬರುವುದು ಜಾಸ್ತಿಯಂತೆ!

Subscribe to Boldsky

ಆತನನ್ನು ನೋಡು ಪಿತ್ತ ನೆತ್ತಿಗೇರಿದಂತೆ ವರ್ತಿಸುತ್ತಿದ್ದಾನೆ ಎಂದು ಕಚೇರಿಯಲ್ಲಿ ಸಹೋದ್ಯೋಗಿಯ ಬಗ್ಗೆ ಮಾತುಗಳು ಕೇಳಿಬರಬಹುದು. ಇದು ಇಂದಿನ ಆಧುನಿಕ ಯುಗದಲ್ಲಿ ಸಹಜ. ಯಾಕೆಂದರೆ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿಯ ಒತ್ತಡದಲ್ಲಿ ಸಿಲುಕಿಕೊಂಡಿರುವರು. ಇದರಿಂದ ಸಣ್ಣ ಸಣ್ಣ ವಿಚಾರಕ್ಕೂ ಕೋಪ ಬರುವುದು. ಕೆಲವರು ಮನೆಯಲ್ಲಿನ ಜಗಳವನ್ನು ಕಚೇರಿಯಲ್ಲಿ ಸಹೋದ್ಯೋಗಿಗಳ ಮೇಲೆ ಕೋಪದಲ್ಲಿ ತೆಗೆಯುವರು. ಇನ್ನು ಯಾರೋ ಬಸ್ಸಿನಲ್ಲಿ ಸಹ ಪ್ರಯಾಣಿಕನ ಮೇಲೆ ಕೋಪಿಸಿಕೊಳ್ಳುವರು. ಹೀಗೆ ಕೋಪಿಸಿಕೊಂಡರೆ ಆ ದಿನ ಸಂಪೂರ್ಣವಾಗಿ ಕೆಡುವುದು.

ನಮ್ಮ ದಿನ ಮಾತ್ರವಲ್ಲದೆ, ನಮ್ಮ ಸುತ್ತಲಿನವರ ದಿನವೂ ಹಾಳಾಗುವುದು. ಜನರಿಗೆ ತಮ್ಮೊಳಗಿನ ನಿರಾಶೆಯನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದೆ ಇರುವಾಗ ಕೋಪದ ರೂಪದಲ್ಲಿ ಅದು ಹೊರಬರುವುದು. ಆದರೆ ಇನ್ನು ಕೆಲವರನ್ನು ನೋಡಿದರೆ ಅವರು ಯಾವಾಗ ನೋಡಿದರೂ ಜಗಳವಾಡುತ್ತಲೇ ಇರುವರು. ಇಂತವರನ್ನು ಕೆಟ್ಟ ಕೋಪ ಬರುವವರು ಎಂದು ಕರೆಯಲಾಗುತ್ತದೆ.

ಮೊದಲನೇಯದಾಗಿ ಕೋಪ ಮಾಡಿಕೊಳ್ಳುವುದೇ ಕೆಟ್ಟ ವಿಚಾರ. ಅದರಲ್ಲೂ ಸ್ನೇಹಿತರು, ಸಹೋದ್ಯೋಗಿಗಳ ಮೇಲೆ ಕೋಪ ಮಾಡಿಕೊಳ್ಳುವುದು ಮತ್ತಷ್ಟು ಕೆಟ್ಟದು. ಕೋಪ ವ್ಯಕ್ತಪಡಿಸಲು ಕೆಲವು ಆರೋಗ್ಯಕರ ವಿಧಾನಗಳು ಇವೆ. ಪರಿಸ್ಥಿತಿ ಮತ್ತು ಜಗಳಕ್ಕೆ ಹೊಂದಿಕೊಂಡು ವಿಭಿನ್ನವಾಗಿ ಪ್ರತಿಕ್ರಿಯಿಸುವ ವ್ಯಕ್ತಿಗಳು ಇದ್ದಾರೆ. ನೀವು ಕೆಟ್ಟ ಕೋಪ ಹೊಂದಿದ್ದರೆ ಆಗ ಅದು ಬೇರೆಯವರ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದು ನೀವು ತಿಳಿದುಕೊಳ್ಳಬೇಕು. ಪ್ರತಿಯೊಂದು ರಾಶಿಗೂ ತನ್ನದೇ ಆಗಿರುವಂತಹ ವ್ಯಕ್ತಿತ್ವವಿದೆ ಮತ್ತು ಪ್ರತಿಯೊಬ್ಬರು ತಮ್ಮದೇ ಆದ ರೀತಿಯಲ್ಲಿ ಕೋಪ ವ್ಯಕ್ತಪಡಿಸುವರು. ಕೆಟ್ಟ ಕೋಪ ಹೊಂದಿರುವಂತಹ ರಾಶಿಗಳು ಯಾವುದು ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ....

1. ಮೇಷ (ಮಾ.21-ಎ.19)

1. ಮೇಷ (ಮಾ.21-ಎ.19)

ಮೇಷ ರಾಶಿಯವರು ಹಠಾತ್ ಮತ್ತು ಆಕ್ರಮಣಕಾರಿ ಪ್ರವೃತ್ತಿಯವರು. ಇವರು ತುಂಬಾ ಸ್ಪರ್ಧಾತ್ಮಕವಾಗಿರುವವರು ಮತ್ತು ಬೇಗನೆ ಬೇಸರಗೊಳ್ಳುವರು. ಇವರು ಜಗಳ ಮತ್ತು ಕಿರಿಕಿರಿಯಾದಾಗ ಕೋಪ ವ್ಯಕ್ತಪಡಿಸುವರು. ಇವರಿಗೆ ತಾಳ್ಮೆ ತುಂಬಾ ಕಡಿಮೆ. ಉದಾಹರಣೆಗೆ ಮೇಷ ರಾಶಿಯವರು ಮನೆಗೆ ಹೋಗುವಾಗ ತುಂಬಾ ಟ್ರಾಫಿಕ್ ಇದ್ದರೆ ಅಥವಾ ಅಡಚಣೆ ಎದುರಾದರೆ ಬೇಗನೆ ಕೋಪಗೊಳ್ಳುವರು.

ಮೇಷ

ಮೇಷ

ಇನ್ನು ರಾಶಿಚಕ್ರಗಳಲ್ಲಿ ಮೇಷ ರಾಶಿಯು ತುಂಬಾ ಶಕ್ತಿಶಾಲಿ ರಾಶಿಯಾಗಿದೆ. ಇವರಲ್ಲಿ ಶಕ್ತಿ ಹಾಗೂ ಅತ್ಯುತ್ಸಾಹವು ಕುದಿಯುತ್ತಿರುವುದು. ಇವರು ತುಂಬಾ ತೀಕ್ಷ್ಣ ಹಾಗೂ ಅನ್ವೇಷಿಸುವವರು. ಇವರಲ್ಲಿ ಇರುವಂತಹ ಅದಮ್ಯ ಸ್ಫೂರ್ತಿಯು ಯಾವುದೇ ರೀತಿಯ ಅಡೆತಡೆಗಳನ್ನು ಪುಡಿ ಮಾಡಬಲ್ಲದು. ಇನ್ನೊಂದು ಬದಿಯಲ್ಲಿ ಇವರು ತುಂಬಾ ಸ್ವಾವಲಂಬಿಗಳು ಮತ್ತು ಇದರಂದಾಗಿ ಅವರಿಗೆ ಸ್ವರಕ್ಷಣೆಯು

ತಿಳಿದಿರುವುದು. ಮೇಷ ರಾಶಿಯವರು ಶಕ್ತಿಯು ಅವರ ನಾಯಕತ್ವದ ಗುಣಗಳು, ನಿರ್ಭೀತಿಯ ಸ್ವಭಾವ ಮತ್ತು ಕೆಲಸ ಮಾಡುವ ಶಕ್ತಿಯನ್ನು ಅವಲಂಬಿಸಿದೆ.

2. ಕರ್ಕಾಟಕ (ಜೂನ್ 21-ಜುಲೈ22)

2. ಕರ್ಕಾಟಕ (ಜೂನ್ 21-ಜುಲೈ22)

ಕರ್ಕಾಟಕ ರಾಶಿಯವರು ತುಂಬಾ ಭಾವನಾತ್ಮಕ ಹಾಗೂ ಸೂಕ್ಷ್ಮವಾಗಿರುವವರು. ಇದು ಕರ್ಕಾಟಕ ರಾಶಿಯವರನ್ನು ಅಸಮಾಧಾನಗೊಳಿಸುವುದಿಲ್ಲ. ಕರ್ಕಾಟಕ ರಾಶಿಯವರು ನಿರಾಶವಾದಿಗಳು ಮತ್ತು ಸಂಶಯಾಸ್ಪದ ವ್ಯಕ್ತಿಗಳು. ಇವರು ತಮ್ಮ ಸಂಗಾತಿ ಅಥವಾ ಸ್ನೇಹಿತರೊಂದಿಗೆ ಚರ್ಚೆ ಮಾಡುವಾಗ ದೊಡ್ಡ ಮಟ್ಟದ ತಂತ್ರ ಹೂಡುವರು. ಉದಾಹರಣೆಗೆ ಕರ್ಕಾಟಕ ರಾಶಿಯವರನ್ನು ಪಾರ್ಟಿಗೆ ಕರೆಯದೇ ಇದ್ದರೆ ಆಗ ಮರುದಿನ ನಿಮಗೆ ಕೋಪದಿಂದ ಕೂಡಿರುವಂತಹ ಸಂದೇಶ ಬರುವುದು

ಮತ್ತು ಇದನ್ನು ಅವರು ಸಾಮಾಜಿಕ ಜಾಲತಾಣದಲ್ಲೂ ಹೇಳಿಕೊಳ್ಳಬಹುದು. ಇನ್ನು ಇವರು ಗೊಂದಲದ ಮನಸ್ಥಿತಿ ಮತ್ತು ಕೆಲವೊಮ್ಮೆ ಆಕ್ರಮಣಕಾರಿ. ಬೇರೆ ಯಾವುದೇ ರಾಶಿಗಳು ನೀಡದೇ ಇರುವಂತಹ ಮೌನ ಚಿಕಿತ್ಸೆ ಇವರು ನೀಡಬಲ್ಲರು. ಎಲ್ಲಾ ಸಮಯದಲ್ಲೂ ಇವರಿಗೆ ಪರಿಹಾರ ಸಿಗುವುದಿಲ್ಲ. ಆದರೆ ಇವರ ಕೆಟ್ಟ ಮನಸ್ಥಿತಿಯಿಂದಾಗಿ ಪರಿಸ್ಥಿತಿ ಮತ್ತಷ್ಟು ಕೆಡುವುದು. ಇವರು ತುಂಬಾ ಸಿಟ್ಟಿನಲ್ಲಿ ಇರುವಾಗ ಇವರನ್ನು ಕಡೆಗಣಿಸಿ, ದೂರವಿರುವುದೇ ಒಳ್ಳೆಯದು.

3.ಸಿಂಹ (ಜುಲೈ 23-ಆ.22)

3.ಸಿಂಹ (ಜುಲೈ 23-ಆ.22)

ತಾಳ್ಮೆಯಲ್ಲಿ ಇರಲು ಸಿಂಹ ರಾಶಿಯವರಿಗೆ ತುಂಬಾ ಸಮಸ್ಯೆಯಾಗುವುದು. ಇವರು ತುಂಬಾ ಜೋರು ಮತ್ತು ತೀವ್ರವಾಗಿರುವರು. ಸಣ್ಣ ಸಣ್ಣ ವಿಚಾರಗಳು ಇವರನ್ನು ಕೋಪಗೊಳಿಸುವುದು. ಉದಾಹರಣೆಗೆ ಸ್ನೇಹಿತರನೊಬ್ಬ ಸಿಂಹ ರಾಶಿಯವನಿಂದ ಶರ್ಟ್ ತೆಗೆದುಕೊಂಡು ಮರಳಿ ನೀಡುವಾಗ ಅದರಲ್ಲಿ ಸಣ್ಣ ಕಲೆ ಮಾಡಿದ್ದರೂ ಸಿಂಹ ರಾಶಿಯವರು ದೊಡ್ಡ ಮಟ್ಟದಲ್ಲಿ ಜಗಳವಾಡುವರು. ಸಾರ್ವಜನಿಕ ಸ್ಥಳದಲ್ಲೂ ಸಿಂಹ ರಾಶಿಯವರು ಸಣ್ಣ ವಿಚಾರವನ್ನು ದೊಡ್ಡದು ಮಾಡುವರು. ಇನ್ನು ಈ ರಾಶಿಚಕ್ರದವರು ತುಂಬಾ ಸಿಡಿದುಬೀಳುವವರು. ಇವರು ನಿಮ್ಮ ಗೆಳೆಯರಾಗಿದ್ದರೂ ಸಹಿತ ಒಂದು ವಿಧದಲ್ಲಿ ಇವರು ನಿಮ್ಮ ಶತ್ರುಗಳಾಗಿರುವರು. ನಿಮಗೆ ಅವರೊಂದಿಗೆ ಯಾವುದೇ ರೀತಿಯ ಮನಸ್ತಾಪವಿದ್ದರೆ, ಅದನ್ನು ಸುಲಭವಾಗಿ ಪರಿಹರಿಸ ಬಹುದಾಗಿದ್ದರೂ ಈ ರಾಶಿಯವರು ಮಾತ್ರ ಅದನ್ನು ಬಹುದೊಡ್ಡ ವಿಷಯವೆಂದು ವಾದಿಸುವರು.

ಸಿಂಹ

ಸಿಂಹ

ಇವರೊಂದಿಗೆ ಮಾತನಾಡುವಾಗ ನೀವು ಬೈಗುಳ ಎದುರಿಸಬಹುದು ಅಥವಾ ಮುಖದ ಮೇಲೆ ಹೊಡೆದಂತೆ ಮಾತನಾಡಬಹುದು. ನಿಮ್ಮನ್ನು ರಕ್ಷಿಸಿಕೊಳ್ಳಲು ಹೆಚ್ಚು ಪ್ರಯತ್ನಿಸಿದಷ್ಟು ಈ ವಾದವು ಮತ್ತಷ್ಟು ಕ್ಲಿಷ್ಟವಾಗುತ್ತಾ ಹೋಗುವುದು. ಅವರೊಂದಿಗೆ ಮಾತನಾಡುವಾಗ ನಿಮ್ಮ ಭಾವನೆಗಳನ್ನು ಕಟ್ಟಿ ಹಾಕಿಕೊಳ್ಳಬೇಕು ಮತ್ತು ಮುಂದಿನ ಸಲ ಇಂತಹ ವಾಗ್ವಾದ ಎದುರಾಗದಂತೆನೋಡಿಕೊಳ್ಳಬೇಕು. ಇನ್ನು ಚತುರತೆಯ ರಾಜ ಸಿಂಹ ಅತ್ಯಂತ ಬುದ್ಧಿವಂತ ರಾಶಿ ಚಿಹ್ನೆ. ಅವರು ತಮ್ಮ ಅಂತರ್ದೃಷ್ಟಿಯಿಂದ ಮತ್ತು ಅವರ ಮಹಾನ್ ಕುತಂತ್ರದಿಂದ ನಿಯಂತ್ರಿಸುತ್ತಾರೆ. ಪ್ರತೀ ವಿಷಯದಲ್ಲಿ ತಮ್ಮ ಗುರಿಗಳನ್ನು ತಲುಪುವಲ್ಲಿ ಅವರಿಗೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ಸಿಂಹ ರಾಶಿಯವರು ಯಾವುದೇ ಅಡಚಣೆಗೆ ಶರಣಾಗುವುದಿಲ್ಲ. ಇವರು ಸದಾ ಹೋರಾಟದ ಬುದ್ಧಿಯನ್ನು ಹೊಂದಿರುತ್ತಾರೆ. ಸಿಂಹ ರಾಶಿಯವರು ಟೀಕೆಗಳನ್ನು ಒಪ್ಪಿಕೊಳ್ಳುವುದಿಲ್ಲ. ತಮ್ಮ ಸ್ವಂತ ಆಲೋಚನೆಗಳನ್ನು ರಕ್ಷಿಸಲು ಅವರು ಧೈರ್ಯವನ್ನು ಹೊಂದಿರುತ್ತಾರೆ. ಅದಕ್ಕಾಗಿಯೇ ಅವರು ಇತರರಿಗೆ ಮನವೊಲಿಸುವಲ್ಲಿ ಮಹತ್ತರರಾಗಿರುತ್ತಾರೆ. ಅವರು ಉತ್ತಮ ಭಾಷಣಕಾರರು ಮತ್ತು ರಾಜಕಾರಣಿಗಳು ಆಗಿರುತ್ತಾರೆ.

ವೃಶ್ಚಿಕ (ಅ.23-ನ.21)

ವೃಶ್ಚಿಕ (ಅ.23-ನ.21)

ವೃಶ್ಚಿಕ ರಾಶಿಯವರು ತುಂಬಾ ದೃಢ ಮತ್ತು ಉಗ್ರರಾಗಿರುವರು. ಯಾವುದೇ ವಿಚಾರವು ತಮ್ಮ ಪರವಾಗಿ ಇಲ್ಲವೆಂದಾದರೆ ಅವರು ಕೋಪಗೊಳ್ಳುವರು. ಕೆಲವು ವೃಶ್ಚಿಕ ರಾಶಿಯವರು ತುಂಬಾ ಹಿಂಸಾ ಪ್ರವೃತ್ತಿಯವರಾಗಿರುವರು. ಇವರ ಕೋಪದ ಕಟ್ಟೆಯೊಡೆದಾಗ ಬೊಬ್ಬೆ ಹಾಕುವರು ಮತ್ತು ವಸ್ತುಗಳಿಗೆ ಹಾನಿ ಮಾಡುವರು. ಮುಂದಿನ ಸಲ ವೃಶ್ಚಿಕ ರಾಶಿಯವರಿಗೆ ಸಿಟ್ಟು ಬಂದಾಗ ಎಚ್ಚರ. ಇನ್ನು ಕೆಲವೊಮ್ಮೆ ಇವರ ಸ್ವಭಾವವು ತುಂಬಾ ಕ್ರೂರ, ಮೋಸಗೊಳಿಸುವ ಮತ್ತು ದುರ್ಬಳಕೆ ಮಾಡಿ ಕೊಳ್ಳುವಂತವರು. ಇನ್ನೊಂದು ಬದಿಯಲ್ಲಿ ಇವರು ತುಂಬಾ ನಿಗೂಢ ವಾಗಿರುವರು.ಇದರಿಂದ ಬೇರೆಯವರಿಗೆ ಇವರನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುವುದು. ಅವರಲ್ಲಿ ಪ್ರತಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವರು. ಆದರೆ ನೀವು ಮೋಸ ಮಾಡಿದರೆ, ಆಗ ಅವರ ಕ್ರೋಧಾಗ್ನಿ ಎದುರಿಸಲು ವಿಶ್ವದ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಇವರು ತಮ್ಮ ಕೋಪದಿಂದಲೇ ನಿಮ್ಮನ್ನು ಕೊಂದು ಬಿಡುವರು. ಈ ರಾಶಿಗಳ ಬಗ್ಗೆ ನೀವು ಸ್ವಲ್ಪ ಎಚ್ಚರಿಕೆಯಿಂದ ಇರಿ. ಯಾಕೆಂದರೆ ಇವರು ತುಂಬಾ ಕುಖ್ಯಾತಿಯವರು.

For Quick Alerts
ALLOW NOTIFICATIONS
For Daily Alerts

    English summary

    These four Zodiac Signs With The WORST Tempers

    Everyone has days where they feel more irritable than usual. We’ve all had moments where something as small as a spilled coffee or a jammed printer practically ruined our day. Sometimes people are easily irritated because they are sleep deprived or they have not had lunch yet. When people have days like this, pretty much anything will irritate them. Most people can agree that some days are just bad days. However, some people are WAY more short-tempered than others. Like the type of person who lashes out at her friends for simply canceling tonight's plans.
    Story first published: Tuesday, June 19, 2018, 12:22 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more