ಮಹಿಳೆಯರು ಈ 4 ರಾಶಿ ಚಕ್ರದ ಪುರುಷರಿಗೆ, ಕೂಡಲೇ ಆಕರ್ಷಿಸಲ್ಪಡುತ್ತಾರೆ!

Posted By: Deepu
Subscribe to Boldsky

ಪುರುಷರಿಗಿಂತ ಹೆಚ್ಚು ಯೋಚನೆ ಮಾಡುವವರು ಮಹಿಳೆಯರು. ಮಹಿಳೆಯರ ಆಸಕ್ತಿ ಅವರ ಅಭಿರುಚಿ ಎಲ್ಲವೂ ಪುರುಷರಿಗಿಂತ ವಿಭಿನ್ನವಾಗಿರುತ್ತದೆ. ಹಾಗಾಗಿ ಮಹಿಳೆಯರಿಗೆ ಯಾವುದಾದರೂ ಒಂದು ವಸ್ತು ಅಥವಾ ವಿಷಯ ಹೆಚ್ಚು ಇಷ್ಟವಾಗಬೇಕು ಎಂದರೆ ಅದು ಬಹಳ ಕಷ್ಟ ಎಂದು ಹೇಳಬಹುದು. ಹಾಗಾಗಿಯೇ ಮೀನಿನ ಹೆಜ್ಜೆಯನ್ನಾದರೂ ತಿಳಿದುಕೊಳ್ಳಬಹುದು ಆದರೆ ಮಹಿಳೆಯರ ಮನಸ್ಸಿನಲ್ಲಿ ಏನಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಕಷ್ಟ ಎಂದು ಹೇಳಲಾಗುತ್ತದೆ.

ಬಹಳ ಚಿಂತನೆಗಳನ್ನು ಹಾಗೂ ಅಭಿಲಾಶೆಗಳನ್ನು ಹೊಂದಿರುವ ಮಹಿಳೆಯರನ್ನು ಪುರುಷರು ಆಕರ್ಷಿಸಬೇಕು ಎಂದರೆ ಅದು ಸಾಮಾನ್ಯವಾದ ಸಂಗತಿಯಲ್ಲ. ಪುರುಷರ ನಡತೆ, ಹಾವಭಾವ, ಉದ್ಯೋಗ, ಚಿಂತನೆ ಸೇರಿದಂತೆ ಅನೇಕ ವಿಚಾರಗಳು ಮಹಿಳೆಯರಿಗೆ ಇಷ್ಟವಾಗುವಂತಿರಬೇಕು. ಆಗಲೇ ಮಹಿಳೆ ಪುರುಷನಿಗೆ ಪರವಶವಾಗಲು ಸಾಧ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದ ಪುರುಷರು ಮಹಿಳೆಯರನ್ನು ಬಹಳ ಸುಲಭವಾಗಿ ಆಕರ್ಷಿಸುತ್ತಾರೆ. ಅವರಿಂದ ಯಾವುದೇ ಸಾಹಸ ಕಾರ್ಯಗಳಿಲ್ಲದಿದ್ದರೂ ಮಹಿಳೆಯರು ಆ ಪುರುಷರಿಗೆ ಪರವಶರಾಗುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾದರೆ ಆ ನಾಲ್ಕು ರಾಶಿ ಚಕ್ರಗಳು ಯಾವವು? ಎನ್ನುವುದನ್ನು ತಿಳಿಯೋಣ ಬನ್ನಿ...

ಮಹಿಳೆಯರ ಆಧ್ಯೆತೆಯ ಪಟ್ಟಿ

ಮಹಿಳೆಯರ ಆಧ್ಯೆತೆಯ ಪಟ್ಟಿ

ಮಹಿಳೆಯರು ತಮ್ಮ ಸಂಗಾತಿ ಅಥವಾ ಗೆಳೆಯರ ಆಯ್ಕೆ ಮಾಡಿಕೊಳ್ಳುವಾಗ ಅನೇಕ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡಿರುತ್ತಾರೆ. ಕೆಲವು ಗುಣವನ್ನು ಬಯಸಿದರೆ, ಕೆಲವರು ವರ್ತನೆಗೆ ಆಧ್ಯತೆ ನೀಡುತ್ತಾರೆ, ಇನ್ನುಕೆಲವರು ಅವರ ಸ್ಥಿತಿ ಗತಿಯನ್ನು ಪರಿಗಣಿಸುತ್ತಾರೆ. ಹೀಗೆ ಅವರ ಮನಸ್ಸಿಗೆ ಅಥವಾ ಬಯಕೆಗೆ ಪರಿಪೂರ್ಣರು ಎನಿಸಿದಾಗ ಮಾತ್ರ ಅವರ ಆಯ್ಕೆಯ ಪಟ್ಟಿಯಲ್ಲಿ ಪುರುಷರು ಸೇರಿಸಿಕೊಳ್ಳುತ್ತಾರೆ.

ಯಾವ ರಾಶಿಚಕ್ರ ಮಹಿಳೆಯರನ್ನು ಆಕರ್ಷಿತ್ತದೆ?

ಯಾವ ರಾಶಿಚಕ್ರ ಮಹಿಳೆಯರನ್ನು ಆಕರ್ಷಿತ್ತದೆ?

12 ರಾಶಿಚಕ್ರದಲ್ಲಿ 4 ರಾಶಿಚಕ್ರಗಳು ಪ್ರಮುಖವಾಗಿ ಮಹಿಳೆಯರನ್ನು ಹೆಚ್ಚು ಆಕರ್ಷಿಸುತ್ತವೆ. ಆ ರಾಶಿ ಚಕ್ರದ ವ್ಯಕ್ತಿಗಳು ಬಹು ಬೇಗ ಅವರ ಮನಸ್ಸಿಗೆ ಇಷ್ಟವಾಗುತ್ತಾರೆ.

ಮಿಥುನ

ಮಿಥುನ

ಈ ರಾಶಿಯ ಪುರುಷರು ಅತ್ಯಂತ ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಇವರು ಇತರರ ಗಮನವನ್ನು ತಮ್ಮೆಡೆಗೆ ಸೆಳೆದುಕೊಳ್ಳಲು ಕಷ್ಟಪಡಬೇಕಾಗಿಲ್ಲ. ಅವರ ಆಕರ್ಷಕ ವ್ಯಕ್ತಿತ್ವವೇ ಇತರರನ್ನು ಆಕರ್ಷಿಸುತ್ತದೆ. ಅದರಲ್ಲೂ ಸ್ತ್ರೀಯರು ಇವರಿಗೆ ಮನಸೋಲುತ್ತಾರೆ ಎಂದು ಹೇಳಲಾಗುವುದು. ಈ ರಾಶಿಯ ಪುರುಷರ ಆಕರ್ಷಕ ವ್ಯಕ್ತಿತ್ವ, ಸ್ಪಷ್ಟವಾದ ನಡೆ-ನುಡಿ, ನೈಸರ್ಗಿಕ ರೀತಿಯಲ್ಲಿ ತೋರುವ ಪ್ರೀತಿ ಹಾಗೂ ಪ್ರಣಯ ಪೂರಕ ಸ್ವಭಾವವು ಇವರಿಗೆ ಇಷ್ಟವಾಗುವುದು.

 ಮಿಥುನ: (ಮುಂದುವರಿದ ಭಾಗ)

ಮಿಥುನ: (ಮುಂದುವರಿದ ಭಾಗ)

ಈ ರಾಶಿಯ ಪುರುಷರಿಗೆ ಸ್ತ್ರೀಯರೊಂದಿಗೆ ಹೇಗೆ ಮಾತನಾಡಬೇಕು ಎನ್ನುವ ಕೌಶಲ್ಯವು ತಿಳಿದಿರುತ್ತದೆ. ಅಲ್ಲದೆ ಈ ರಾಶಿಯವರು ಭಾವನಾತ್ಮಕ ಸ್ವಭಾವವನ್ನೂ ಹೊಂದಿರುತ್ತಾರೆ. ಹುಡುಗಿಯರ ಹೃದಯವನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವ ಸ್ವಭಾವ ಇವರದ್ದಾಗಿರುವುದರಿಂದ ಸ್ತ್ರೀಯರು ಬಹು ಬೇಗ ಈ ಪುರುಷರಿಗೆ ಮನಸೋಲುತ್ತಾರೆ.

ಸಿಂಹ

ಸಿಂಹ

ಈ ರಾಶಿಚಕ್ರದ ಪುರುಷರು ಹೃದಯ ಶ್ರೀಮಂತಿಕೆ ಉಳ್ಳವರು. ಅಲ್ಲದೆ ಸಂಬಂಧವನ್ನು ಅರ್ಥಮಾಡಿಕೊಳ್ಳುವವರು. ಇವರ ಪ್ರಣಯ ಪೂರಕ ಪ್ರವೃತ್ತಿಯು ಮಹಿಳೆಯರಿಗೆ ಬಹಳ ಇಷ್ಟವಾಗುವುದು. ಈ ರಾಶಿಯವರು ಬಹಳ ಪ್ರಭಾವಶಾಲಿ ಹಾಗೂ ಧೈರ್ಯವಂತರೂ ಹೌದು. ಇವರ ಸಂವೇದನಾತ್ಮಕ ವರ್ತನೆ ಹಾಗೂ ಮನಸ್ಸು ಮಹಿಳೆಯರಿಗೆ ಬಹಳ ಬೇಗ ಇಷ್ಟವಾಗುವುದು.

ಸಿಂಹ: (ಮುಂದುವರಿದ ಭಾಗ)

ಸಿಂಹ: (ಮುಂದುವರಿದ ಭಾಗ)

ಯಾವುದೇ ರೀತಿಯ ಹಾನಿಕಾರಕವಲ್ಲದ ಸ್ನೇಹವನ್ನು ಇವರು ನಿಭಾಯಿಸುತ್ತಾರೆ. ತಮ್ಮ ಮೊದಲ ನೋಟದಿಂದಲೇ ಹುಡುಗಿಯರನ್ನು ಬಹಳ ಬೇಗ ಆಕರ್ಷಿಸುವ ಸಾಮಥ್ರ್ಯವನ್ನು ಈ ರಾಶಿಯವರು ಹೊಂದಿದ್ದಾರೆ. ವಿಶಾಲವಾದ ಮನೋಭಾವ ಹಾಗೂ ಭಾವೋದ್ರಿಕ್ತವಾದ ಸ್ವಭಾವವು ಮಹಿಳೆಯರಿಗೆ ಬಹುಬೇಗ ಇಷ್ಟವಾಗುವುದು.

 ತುಲಾ

ತುಲಾ

ಈ ರಾಶಿಯ ಪುರುಷರು ಒಂದು ವಿಶೇಷ ವ್ಯಕ್ತಿತ್ವ ಹೊಂದಿದವರು ಎಂದು ಹೇಳಬಹುದು. ಇವರಿಗೆ ಸುಂದರವಾದ ಹುಡುಗಿಯರು ಬಹುಬೇಗ ಪರವಶರಾಗುತ್ತಾರೆ. ಇವರ ವರ್ತನೆ ಹಾಗೂ ವ್ಯಕ್ತಿತ್ವವು ಇತರರಿಗಿಂತ ಭಿನ್ನವಾಗಿರುವುದೇ ಮುಖ್ಯ ಕಾರಣ ಎಂದು ಹೇಳಬಹುದು. ಈ ರಾಶಿಯ ಹುಡುಗರಿಗೆ ಪ್ರೀತಿ ಎನ್ನುವುದು ಬಹಳ ಪ್ರಮುಖವಾದದ್ದು ಹಾಗೂ ಆಳವಾದ ಭಾವನೆ ಎಂದು ಪರಿಗಣಿಸುತ್ತಾರೆ.

ತುಲಾ: (ಮುಂದುವರಿದ ಭಾಗ)

ತುಲಾ: (ಮುಂದುವರಿದ ಭಾಗ)

ಪ್ರೀತಿ ಮತ್ತು ತಮ್ಮ ಕರ್ತವ್ಯಗಳನ್ನು ಬಹಳ ಸಮತೋಲನದಲ್ಲಿ ಇವರು ನಿಭಾಯಿಸುತ್ತಾರೆ. ಇದು ಬಹಳಷ್ಟು ಚಿಂತನೆಗಳನ್ನು ತೆಗೆದುಕೊಳ್ಳುವುದು. ಇವರಲ್ಲಿ ನಾಚಿಕೆ ಹಾಗೂ ಸ್ವಯಂ ಹಾನಿಕಾರಕ ಸ್ವಭಾವ ಎನ್ನಬಹುದು. ಆದರೂ ಇವರ ವ್ಯಕ್ತಿತ್ವ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ರೀತಿಗೆ ಮಹಿಳೆಯರು ಮನಸೋಲುತ್ತಾರೆ.

ಮಕರ

ಮಕರ

ಈ ರಾಶಿಯ ಪುರುಷರು ಉತ್ತಮವಾದ ನೋಟವನ್ನು ಹೊಂದಿರುತ್ತಾರೆ. ಇವರ ಸುಂದರವಾದ ವ್ಯಕ್ತಿತ್ವ ಇವರ ಶಕ್ತಿ ಎನ್ನಬಹುದು. ಇವರು ಇತರರನ್ನು ಆಕರ್ಷಿಸಲು ಯಾವುದೇ ಸಾಹಸ ಮಾಡಬೇಕಾದ ಅಗತ್ಯವಿಲ್ಲ. ಇವರ ಉತ್ತಮವಾದ ನಡತೆ, ಮಾತಿನ ಶೈಲಿ, ಕಾಳಜಿ ತೋರಿಸುವ ಪರಿ ಹಾಗೂ ಒಲವು ಮಹಿಳೆಯರಿಗೆ ಬಹಳ ಇಷ್ಟವಾಗುವಂತಿರುತ್ತದೆ.

ಮಕರ: (ಮುಂದುವರಿದ ಭಾಗ)

ಮಕರ: (ಮುಂದುವರಿದ ಭಾಗ)

ಈ ರಾಶಿಯವರು ತಮ್ಮ ಬಗ್ಗೆ ಸದಾ ಸಂತೃಪ್ತವಾದ ಭಾವನೆಯನ್ನು ಹೊಂದಿರುತ್ತಾರೆ. ಈ ಚಿಹ್ನೆಯ ಪುರುಷರು ಅತ್ಯಂತ ಕ್ರಿಯಾಶೀಲ ಮತ್ತು ಬುದ್ಧಿವಂತ ವ್ಯಕ್ತಿಗಳಾಗಿರುತ್ತಾರೆ. ಇವರು ಹುಡುಗಿಯರ ಬಗ್ಗೆ ಉತ್ತಮವಾದ ಕಾಳಜಿ ಹಾಗೂ ಪ್ರೀತಿಯನ್ನು ತೋರುತ್ತಾರೆ. ಹಾಗಾಗಿ ಮಹಿಳೆಯರು ಈ ರಾಶಿಯ ಪುರುಷರಿಗೆ ಬಹುಬೇಗ ಪರವಶರಾಗುತ್ತಾರೆ.

English summary

These four Zodiac Signs That Women Are Attracted

Based on the accurate study through astrology, we can map out one’s personality trait, true nature, likes-dislikes, future - love, career, relationship, wealth, etc.The most important one that remains on our list is to find our perfect match on this planet. While, some of us dream to find our soul mate, others desire a compatible life partner and a few just want constant attention from the opposite sex.