For Quick Alerts
ALLOW NOTIFICATIONS  
For Daily Alerts

ಈ ಮಕ್ಕಳ ಚಿಕಿತ್ಸೆಗೆ ನೆರವು ನೀಡಿ ಅವರ ಬಾಳಿನಲ್ಲಿ ಆಶಾಕಿರಣವಾಗಿ

By Deepu
|

ಜಗತ್ತಿನಲ್ಲಿ ಮಕ್ಕಳನ್ನು ಕಂದಮ್ಮನನ್ನು ದೇವರಿಗೆ ಹೋಲಿಸುತ್ತಾರೆ. ಮನೆಯಲ್ಲಿ ಮಕ್ಕಳಿದ್ದರೆ ಬಾಳು ಸಕ್ಕರೆ, ಮನೆ ಎಂದರೆ ಅಲ್ಲಿ ಮಕ್ಕಳಿದ್ದರೆ ಚಂದ ಹೀಗೆಲ್ಲಾ ಹಿರಿಯರು ಹೇಳಿರುವುದನ್ನು ನೀವು ಕೇಳಿರುತ್ತೀರಿ. ಅಂತೂ ಪ್ರತಿಯೊಬ್ಬರೂ ಮಕ್ಕಳನ್ನು ಪಡೆದಾಗ ಜೀವನದಲ್ಲಿ ಖುಷಿಯಾಗಿರುತ್ತಾರೆ ಮತ್ತು ಆ ಮಕ್ಕಳ ನಗುವಿನಿಂದ ಮನದ ಎಷ್ಟೇ ಬೇಗೆಗಳನ್ನು ಅವರು ಮರೆತುಬಿಡುತ್ತಾರೆ. ಆದರೆ ಮನೆಯ ಕಂದಮ್ಮನೇ ರೋಗಿಯಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರೆ ಆ ಮನೆಯವರ ಸ್ಥಿತಿ ಹೇಗಾಗಬೇಡ ಅಲ್ಲವೇ? ಅದನ್ನೇ ನಾವು ನಮ್ಮ ಇಂದಿನ ಲೇಖನದಲ್ಲಿ ವಿಷದವಾಗಿ ವಿವರಿಸಲಿದ್ದೇವೆ.

ಹೌದು ಈ ಮಕ್ಕಳ ಕಥೆ ಕೇಳಿದರೆ ಯಾರ ಕಣ್ಣಲ್ಲಿ ಕೂಡ ನೀರು ಬಂದುಬಿಡುತ್ತದೆ. ಕಲ್ಲು ಹೃದಯ ಕೂಡ ಕರಗುವಂತಹ ಹೃದಯ ವಿದ್ರಾವಕ ಸ್ಥಿತಿಯಲ್ಲಿ ಈ ಮಕ್ಕಳು ಜೀವನ ನಡೆಸುತ್ತಿದ್ದಾರೆ. ಬಡವರಿಗೆ ಕಷ್ಟಗಳು ಬಹಳವಂತೆ ಆದರೆ ಈ ಮುದ್ದು ಕಂದಮ್ಮಗಳ ಪರಿಸ್ಥಿತಿ ಕೂಡ ಹಾಗೆಯೇ ಆಗಿದೆ. ಇವರ ಮನೆಯಲ್ಲಿ ಬಡತನವಿದ್ದರೂ ಸಂತಸವಿತ್ತು, ಹೊಟ್ಟೆ ತುಂಬುವಷ್ಟು ತುಂಬಿಸುವಷ್ಟು ಸ್ಥಿತಿವಂತರು ಇವಾಗಿದ್ದರು.

ಆದರೆ ವಿಧಿಯಾಟವೇ ಬೇರೆ ಎಂಬಂತೆ ಈ ಮಕ್ಕಳು ಈಗ ಭಯಾನಕ ಕಾಯಿಲೆಗಳಿಂದ ನರಳುತ್ತಿದ್ದು ವೈದ್ಯಕೀಯವ ವೆಚ್ಚವನ್ನು ಭರಿಸಲು ಸಾಧ್ಯಾವಾಗದೇ ಇರುವಂತಹ ಸ್ಥಿತಿಯಲ್ಲಿ ಮಕ್ಕಳ ತಂದೆ ತಾಯಿಯರಿದ್ದಾರೆ. ಹಾಗಿದ್ದರೆ ಆ ಮಕ್ಕಳು ಯಾರು ಅವರು ಅನುಭವಿಸುತ್ತಿರುವ ನೋವು ಏನು ಮಕ್ಕಳ ತಂದೆ ತಾಯಂದಿರುವ ಎದುರಿಸುತ್ತಿರುವ ಸಂಕಷ್ಟವೇನು ಎಂಬುದನ್ನು ವಿಷದವಾಗಿ ತಿಳಿದುಕೊಳ್ಳೋಣ....

ವಿಶಾಖಾ

ವಿಶಾಖಾ

ಈ ಮಗುವಿಗೆ ಓದು ಎಂದರೆ ಪಂಚಪ್ರಾಣ. ಶಾಲೆಯಲ್ಲಿ ಓದುವುದರಲ್ಲೂ ಈಕೆ ಮುಂದಿದ್ದಳು. ಆಸ್ಪತ್ರೆಗೆ ಸೇರುವ ಮುನ್ನ ಕೂಡ ತನ್ನ ಶಾಲಾ ಕೆಲಸಗಳನ್ನು ಮುಗಿಸಿಯೇ ಈಕೆ ಮನೆಬಿಟ್ಟಿದ್ದು ಎಂದು ಹೇಳುವಾಗ ವಿಶಾಖಾಳ ತಂದೆ ತಾಯಿ ಕಣ್ಣಲ್ಲಿ ನೀರು ತುಂಬಿತ್ತು. ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಈಕೆ ಈಗ ಯಕೃತ್ ಶ್ವಾಸಕೋಶಗಳು ದುರ್ಬಲ ಸ್ಥಿತಿಯನ್ನು ಪಡೆದಿರುವಂತಹ ಸ್ಥಿತಿಗೆ ಬಂದಿದ್ದಾಳೆ. ವಿಶಾಖಾಳ ತೀವ್ರವಾದ ಅನಾರೋಗ್ಯದ ಕಾರಣಕ್ಕೆ ವೆಂಟಿಲೇಟರ್ ನಲ್ಲಿ ಇಡಲಾಗಿದೆ. ಈಗಾಗಲೇ 5 ಲಕ್ಷ ರುಪಾಯಿ ವೈದ್ಯಕೀಯ ವೆಚ್ಚಗಳಿಗೆ ಅಂತಲೇ ಆಗಿದೆ. ಅವಳ ತಂದೆ ಆರ್‍ಟಿಓ ಕಚೇರಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡ್ತಾರೆ. ಅವರ ತಿಂಗಳ ಆದಾಯ ಹೆಚ್ಚೆಂದರೆ 7000 ರೂಪಾಯಿ. ಆದರೆ ಇದೀಗ ಮಗಳ ಚಿಕಿತ್ಸೆಗಾಗಿ 7 ಲಕ್ಷ ರುಪಾಯಿಯನ್ನು ಹೊಂದಿಸಬೇಕಿದೆ. ಹಾಗಂತ ಅವರು ಕೈ ಚೆಲ್ಲಿಲ್ಲ. ಸಾಕಷ್ಟು ಕಷ್ಟ ಪಡುತ್ತಿದ್ದಾರೆ. "ನಿತ್ಯ ಮುಂಜಾನೆ ನನ್ನ ಮಗಳ ಹಾಸಿಗೆಯನ್ನು ಸರಿ ಪಡಿಸುತ್ತೇನೆ. ಇಂದಾದರೂ ಅವಳ ಆರೋಗ್ಯ ಸುಧಾರಣೆಯಾಗಿ ಮನೆಗೆ ಬರಲಿ ಎಂದು ಬಯಸುತ್ತೇನೆ. ಹೀಗೆ ಮಾಡುವುದರಿಂದ ನನಗೊಂದು ರೀತಿಯ ಮಾನಸಿಕ ಧೈರ್ಯ ದೊರೆಯುತ್ತದೆ. ಅವಳ ತಮ್ಮ ನಿತ್ಯವೂ ರಾತ್ರಿ ಮಲಗುವಾಗ ಅಕ್ಕನ ಬಗ್ಗೆ ಕೇಳುತ್ತಾನೆ. ಅವಳು ಬೆಳಗ್ಗೆ ಬರುತ್ತಾಳೆ ಎಂದು ಅವನನ್ನು ಸಂತೈಸುತ್ತೇನೆ ಎಂದು ಹೇಳುವಾಗ ವಿಶಾಖಾಳ ತಂದೆಯ ಕಣ್ಣು ನೀರಾಗಿತ್ತು. ಈಗ ವಿಶಾಖಾಳ ಚಿಕಿತ್ಸಾ ವೆಚ್ಚವನ್ನು ಭರಿಸಲು ಆಕೆಯ ತಂದೆ ತಾಯಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿಯೇ ವಿಶಾಖಾಳ ತಂದೆ ತಾಯಿ ವಿನಮ್ರರಾದ ಓದುಗರಲ್ಲಿ ಸಹಾಯವನ್ನು ಯಾಚಿಸುತ್ತಿದ್ದಾರೆ.

ಮಗುವಿಗೆ ನೆರವು ಮಾಡಲು ಈ ಲಿಂಕ್ ಕ್ಲಿಕ್ ಮಾಡಿ-ವಿಶಾಖಾನಿಗೆ ಸಹಾಯ ಮಾಡಿ

ವಿಶಾಖಾ

ವಿಶಾಖಾ

ವಿಶಾಖಾಳಂತೆಯೇ ಒಂದು ವರ್ಷದ ಕಂದ ಸಾಮ್ರಾಟ್ ಕೂಡ ನ್ಯುಮೋನಿಯಾದಿಂದ ಬಳಲುತ್ತಿರುವ ಕಂದಮ್ಮ. ಇಂದು ಸಾಮ್ರಾಟ್ ತಂದೆ ಮನೋಜ್ ತನ್ನ ಮಗನನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಮನೆಗೆ ಹೊಸ ಅತಿಥಿಯಾಗಿ ಬಂದ ಸಾಮ್ರಾಟ್ ತನ್ನ ತಂದೆ-ತಾಯಿಗೆ ಹೊಸ ಜೀವನದ ಅಧ್ಯಾಯವನ್ನು ಪ್ರಾರಂಭಿಸಿದ್ದ. ಸಂತೋಷದ ಜೀವನವನ್ನು ನಡೆಸುತ್ತಿದ್ದ ಇವರ ಬದುಕಿನಲ್ಲಿ ಒಂದು ದುಃಖದ ಸಂಗತಿ ಎದುರಾಗಿತ್ತು. ಸಾಮ್ರಾಟ್‍ಗೆ 1 ವರ್ಷ ಆಗುತ್ತಿದ್ದಂತೆ ಆರೋಗ್ಯ ಸಮಸ್ಯೆ ಕಾಡಲು ಪ್ರಾರಂಭಿಸಿತು. ಆಗಾಗ ಜ್ವರ ಮತ್ತು ಶೀತವು ಕಾಡುತ್ತಿತ್ತು. ಆರೋಗ್ಯ ತಪಾಸಣೆ ನಡೆಸಿದಾಗ ಅವನು ಸ್ವಲ್ಪ ಮಟ್ಟಿಗೆ ನ್ಯುಮೋನಿಯಾದಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ಬಹಿರಂಗ ಪಡಿಸಿದರು. ಈ ಹಿನ್ನೆಲೆಯಲ್ಲಿಯೇ ಸುಮಾರು 8 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗಾಗಿ ದಾಖಲು ಮಾಡಲಾಯಿತು. ಆರೋಗ್ಯದಲ್ಲಿ ಚೇತರಿಕೆ ಆದ ಬಳಿಕ ಮನೆಗೆ ಕರೆದುಕೊಂಡು ಬಂದರು. ಆದರೆ, ಸಮಸ್ಯೆ ಇಲ್ಲಿಗೇ ಮುಗಿದಿರಲಿಲ್ಲ. ಮತ್ತೆ-ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಅದಕ್ಕಾಗಿ ದಂಪತಿಗಳು ಮಗನ ಆರೋಗ್ಯ ತಪಾಸಣೆಗಾಗಿ ಹಲವಾರು ಪರೀಕ್ಷೆಗಳನ್ನು ಮಾಡಿಸಿದರು. ಕೊನೆಗೆ ಸಾಮ್ರಾಟನ ಹೃದಯದಲ್ಲಿ ರಂಧ್ರವಿದೆ ಎನ್ನುವುದು ತಿಳಿದು ಬಂದಿತು. ಮಗನ ಚಿಕಿತ್ಸೆಗಾಗಿ ಹೆಚ್ಚಿನ ಹಣ ಖರ್ಚು ಮಾಡಿರುವ ಮನೋಜ್ ದಂಪತಿಗಳು ಈಗ ಚಿಕಿತ್ಸೆ ವೆಚ್ಚ ಭರಿಸಲಾಗದೇ ಕುಸಿದಿದ್ದಾರೆ. ಇವರಿಗೂ ಸಹಾಯ ಹಸ್ತದ ಅವಶ್ಯಕತೆ ಇದೆ.

ಮಗುವಿಗೆ ನೆರವು ಮಾಡಲು ಈ ಲಿಂಕ್ ಕ್ಲಿಕ್ ಮಾಡಿ- ಸಾಮ್ರಾಟ್ ಗೆ ಸಹಾಯ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ವೀರ್

ವೀರ್

ಈ ಕುಟುಂಬದ್ದಂತೂ ಹೃದಯ ಮಿಡಿಯುವ ಕಥೆಯಾಗಿದೆ. ಶರ್ಮರ ಎರಡನೆಯ ಕಂದ ವೀರ್ ಥಲ್‌ಸೇಮಿಯಾ ರೋಗದಿಂದ ಬಳಲುತ್ತಿದ್ದು ಇವರ ಹೆತ್ತವರು ಮಗನನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಎಲ್ಲರಂತೆಯೇ ಆಟವಾಡಿ ನಲಿಯಬೇಕಿದ್ದ ಸಮಯದಲ್ಲಿ ವೀರ್ ಆಸ್ಪತ್ರೆಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವೀರ್ ತನ್ನ ಸಹೋದರನನ್ನು ಕಳೆದುಕೊಂಡು ಈಗಲೇ ನೋವಿನಿಂದ ಇರುವಾಗ ಈ ರೋಗ ಕೂಡ ವೀರ್‌ನನನ್ನು ಮುತ್ತಿಕ್ಕಿ ಕೊಲ್ಲುತ್ತಿದೆ. ಒಬ್ಬ ಮಗನನ್ನೇ ಕಳೆದುಕೊಂಡು ರೋಧಿಸುತ್ತಿರುವ ವೀರ್‌ನ ಹೆತ್ತವರು ಈಗ ವೀರ್‌ನನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಶಥಪ್ರಯತ್ನ ನಡೆಸುತ್ತಿದ್ದಾರೆ. ಈ ಕಂದನನ್ನು ನಾವು ಖಂಡಿತ ಕಳೆದುಕೊಳ್ಳುವುದಿಲ್ಲ ಎಂಬದು ವೀರ್ ಹೆತ್ತವರ ಮಾತಾಗಿದೆ. ಈಗ ವೀರ್‌ಗೆ ಬೋನ್ ಮ್ಯಾರೋ ಚಿಕತ್ಸೆಯನ್ನು ನಡೆಸಬೇಕಾಗಿದೆ ಇದಕ್ಕೆ 15 ಲಕ್ಷ ವೆಚ್ಚ ತಗಲುತ್ತದೆ. ಇದಕ್ಕಾಗಿ ವೀರ್ ತಂದೆ ತಾಯಿ ನೆರವನ್ನು ಹಸ್ತವನ್ನು ಚಾಚುತ್ತಿದ್ದಾರೆ.

ಮಗುವಿಗೆ ನೆರವು ಮಾಡಲು ಈ ಲಿಂಕ್ ಕ್ಲಿಕ್ ಮಾಡಿ- ವೀರ್ ಗೆ ಸಹಾಯ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಧನಶ್ರೀ

ಧನಶ್ರೀ

ಧನಶ್ರೀ ಎಂಬ ಪುಟ್ಟ ಕಂದಮ್ಮನದು ಕರುಳು ಹಿಂಡುವ ಕಥೆಯಾಗಿದೆ. ಗಂಟೆಗಳ ಕಾಲ ಆಡುತ್ತಿದ್ದರೂ ಧನಶ್ರೀಗೆ ದಣಿವು ಆಗುತ್ತಿರಲಿಲ್ಲ. ಆದರೆ ಹಿಂದಿನಿಂತೆ ಈಗ ಆ ಮಗು ಆಟವಾಡುತ್ತಿಲ್ಲ ಇರುವುದು ಆಸ್ಪತ್ರೆಯಲ್ಲಿ. ಕಳೆದ 5 ತಿಂಗಳಿಂದ ದನಶ್ರೀ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ವರ್ಷಗಳ ಕಾಲ ಮಗುವನ್ನು ಪಡೆಯಬೇಕು ಎಂದು ಹಂಬಲಿಸುತ್ತಿದ್ದ ವಿಶ್ವಾಸ ಪ್ರಿಯಾ ಅವರಿಗೆ ಧನಶ್ರೀ ಮಗಳಾಗಿ ಹುಟ್ಟಿ ಸಂತೋಷವನ್ನು ತಂದುಕೊಟ್ಟಿದ್ದಳು. 34 ವರ್ಷದಲ್ಲಿ ಅವಳನ್ನು ಮಗಳಾಗಿ ಪಡೆದ ನಮಗೆ ದೇವರು ಆಶೀರ್ವದಿಸಿದ್ದಾನೆ ಎಂದು ಅಂದುಕೊಂಡಿದ್ದವು. ಅಲ್ಲದೆ ತುಂಬಾ ಖುಷಿಯನ್ನು ಅನುಭವಿಸುತ್ತಿದ್ದೆವು. ಆದರೆ ಇದೀಗ ದೇವರು ನಮಗೆ ಕಷ್ಟವನ್ನು ನೀಡಿದ್ದಾನೆ. ಇದೀಗ ನನ್ನ ಮಗು ಶ್ವಾಸನಾಳದ ಕವಾಟದ ಕುಸಿತದಿಂದ ಬಳಲುತ್ತಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ದನಶ್ರೀಯ ತಾಯಿ ಹೇಳುವ ಪ್ರಕಾರ, ಮಗುವು 7 ತಿಂಗಳಗಳ ಕಾಲ ಆರೋಗ್ಯವಂತ ಮಗುವಾಗಿತ್ತು. ಒಂದು ದಿನ ದನಶ್ರೀ ವಾಂತಿಯನ್ನು ಮಾಡಲು ಪ್ರಾರಂಭಿಸಿದಳು. ಆಗ ಉಸಿರಾಟದ ತೊಂದರೆಯನ್ನು ಅನುಭವಿಸಿದಳು. ಇದೇನೋ ಒಂದು ಬಗೆಯ ಗಂಭೀರ ಸಮಸ್ಯೆ ಎನ್ನುವುದು ನಮ್ಮ ಗಮನಕ್ಕೆ ಬಂತು. ಜೊತೆಗೆ ಮಗು ನೋವಿನಿಂದ ಅಳಲು ಪ್ರಾರಂಭಿಸಿದಳು. ನಮ್ಮ ತವರು ಮನೆಯಾದ ತಿರುಪೂರ್‌ನಿಂದ ಎರಡು ಗಂಟೆಗಳ ಕಾಲ ದೂರ ಇರುವ ಸೇಲಂನ ಆಸ್ಪತ್ರೆಗೆ ಕರೆದೊಯ್ದೆವು. ಧನಶ್ರೀಗೆ ನಿತ್ಯವೂ ಆಮ್ಲಜನಕದ ಬೆಂಬಲ ಕೊಡಬೇಕಾಗಿದೆ. ಜೊತೆಗೆ ಎರಡು ತಿಂಗಳಗಳ ಕಾಲ ಆಸ್ಪತ್ರೆಯಲ್ಲಿಯೇ ಇಡಬೇಕಾಗುವುದು ಎಂದು ವೈದ್ಯರು ಹೇಳಿದ್ದಾರೆ. ಅವಳ ಹೆಚ್ಚುವರಿ ಚಿಕಿತ್ಸೆಗಾಗಿ ಇನ್ನೂ 5 ಲಕ್ಷ ರೂಪಾಯಿಯ ಅಗತ್ಯವಿದೆ. ಹಾಗಾಗಿ ಧನಶ್ರೀಯ ಕುಟುಂಬದವರು ಜನರಲ್ಲಿ ಸಹಾಯವನ್ನು ಯಾಚಿಸುತ್ತಿದ್ದಾರೆ. ನೀವು ಧನಶ್ರೀಯ ಚಿಕಿತ್ಸೆಗೆ ಸಹಾಯ ಮಾಡಲು ಸಹಾಯ ನಿಧಿಗೆ ಹಣವನ್ನು ನೀಡಬಹುದು.

ಮಗುವಿಗೆ ನೆರವು ಮಾಡಲು ಈ ಲಿಂಕ್ ಕ್ಲಿಕ್ ಮಾಡಿ- ಧನಶ್ರೀ ಗೆ ಸಹಾಯ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಕೈಲಾಗುವಷ್ಟು ಧನ ಸಹಾಯವನ್ನು ಮಾಡಿ

ಕೈಲಾಗುವಷ್ಟು ಧನ ಸಹಾಯವನ್ನು ಮಾಡಿ

ಈ ಲೇಖನದಲ್ಲಿ ನಾವು ಪ್ರಸ್ತುತ ಪಡಿಸಿರುವ ಮಕ್ಕಳ ಆರೋಗ್ಯ ಸಮಸ್ಯೆಗಳು ಯಾರ ಕಣ್ಣಿನಲ್ಲಿಯೂ ನೀರು ತರಿಸುವುದು ಖಂಡಿತ. ಹೊಟ್ಟೆ ತುಂಬಿಸುವಷ್ಟು ಸಂಪಾದನೆಯನ್ನು ಮಕ್ಕಳ ತಂದೆ ತಾಯಂದಿರು ಮಾಡುತ್ತಿದ್ದರೂ ಇವರು ಅನುಭವಿಸುತ್ತಿರುವ ಕಾಯಿಲೆಯಿಂದ ಇವರುಗಳು ದುಡ್ಡಿನ ಸಮಸ್ಯೆಯನ್ನು ಅನುಭವಿಸುವಂತಹದಾಗಿದೆ. ವೈದ್ಯಕೀಯ ವೆಚ್ಚವನ್ನು ಭರಿಸಲು ಸಾಧ್ಯಾವಾಗದೇ ಇವರುಗಳು ಕಂಗಾಲಾಗಿದ್ದಾರೆ. ಸಹೃದಯರಾದ ಒದುಗರು ಈ ಪಾಲಕರ ಕೂಗಿಗೆ ದನಿಯಾಗಬಹುದು. ಅವರ ಸಮಸ್ಯೆಯ ಜವಬ್ದಾರಿಯನ್ನು ಸ್ವಲ್ಪವಾದರೂ ಹೊತ್ತುಕೊಳ್ಳಬಹುದಾಗಿದೆ. ನಿಮ್ಮ ಕೈಲಾಗುವಷ್ಟು ಧನ ಸಹಾಯವನ್ನು ಮಾಡಿ ಕಿಂಚಿತ್ ಪುಣ್ಯದ ಕಾರ್ಯವನ್ನು ನೀವು ಮಾಡಬಹುದು. ಧನ ಸಹಾಯ ಮಾಡುವ ಮನಸ್ಸು ನಿಮಗಿದ್ದರೆ ಲೇಖನದಲ್ಲಿ ನೀಡಿರುವ ನೆರವಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಖಾತೆ ವಿವರಗಳ ಮಾಹಿತಿ ಪಡೆದುಕೊಂಡು ಹಣ ಸಹಾಯವನ್ನು ಮಾಡಬಹುದು.

English summary

these-four-kids-need-immediate-donations-for-their-survival

This is an article which is an action call to all the fellow citizens to save the lives of 4 young kids who are battling with their lives as they are suffering from different health conditions. Here we bring in stories of these four kids who need immediate help to get their treatments started as with each passing day, these little souls are struggling to fight the battle for survival.
Story first published: Wednesday, August 8, 2018, 14:15 [IST]
X
Desktop Bottom Promotion