For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಅನುಸಾರ ಯಾವ ರೀತಿಯ ಪತಿಯಾಗಿರುತ್ತಾರೆ ನೋಡಿ

|

ಜೀವನದ ಸಂಗಾತಿ ಎಂದರೆ ಎಲ್ಲಾ ಸಂಬಂಧಗಳಿಗಿಂತ ಬಹಳ ಹತ್ತಿರವಾದ ಅಥವಾ ಆತ್ಮೀಯತೆಯ ಬಂಧ ಎನ್ನಲಾಗುವುದು. ಹಾಗಾಗಿಯೇ ಪ್ರತಿಯೊಬ್ಬರು ಸಂಗಾತಿಯ ಆಯ್ಕೆಯಲ್ಲಿ ವಿಶೇಷ ಸಮಯವನ್ನು ಕೈಗೊಳ್ಳುತ್ತಾರೆ. ಅಲ್ಲದೆ ಕೆಲವು ವಿಶೇಷ ಗುಣಗಳು ಹಾಗೂ ಹವ್ಯಾಸಗಳು ಇರಬೇಕು ಎಂದು ಬಯಸುತ್ತಾರೆ. ನಮಗೆ ಹೊಂದುವ ವರ್ತನೆಗಳು ಹಾಗೂ ಹವ್ಯಾಸಗಳು ಇದ್ದರೆ ಹೊಂದಾಣಿಕೆ ಉತ್ತಮವಾಗಿರುತ್ತದೆ. ಆಗ ಜೀವನದಲ್ಲಿ ಸಾಕಷ್ಟು ಸಂತೋಷ ಹಾಗೂ ನೆಮ್ಮದಿಯನ್ನು ಹೊಂದಬಹುದು ಎಂದು ಎಲ್ಲರೂ ಬಯಸುತ್ತಾರೆ.

ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯ ವರ್ತನೆ, ಭವಿಷ್ಯ ಹಾಗೂ ಸಂಗಾತಿಗಳ ಸಂಬಂಧ ಎಲ್ಲವೂ ಅವರವರ ರಾಶಿಚಕ್ರಕ್ಕೆ ಅನುಗುಣವಾಗಿರುತ್ತವೆ. ವ್ಯಕ್ತಿ ಯಾವ ರಾಶಿಚಕ್ರದವನು ಹಾಗೂ ಯಾವ ಬಗೆಯ ಗ್ರಹಗತಿಗಳ ಫಲವನ್ನು ಪಡೆದುಕೊಂಡಿದ್ದಾನೆ ಎನ್ನುವುದರ ಆಧಾರದ ಮೇಲೆಯೇ ಬಾಳ ಸಂಗಾತಿ ಅಥವಾ ಪತಿ ದೊರೆಯುತ್ತಾನೆ ಎನ್ನಲಾಗುವುದು. ಪ್ರತಿಯೊಂದು ರಾಶಿಚಕ್ರದವರು ತಮ್ಮದೇ ಆದ ಪ್ರಮುಖ ಗುಣಗಳನ್ನು ಹೊಂದಿರುತ್ತಾರೆ. ಪತಿ ಎನ್ನುವ ಪವಿತ್ರ ಸಂಬಂಧಗಳ ನಿರ್ವಹಣೆ ವಿಚಾರಕ್ಕೆ ಬಂದಾಗ ಪ್ರತಿಯೊಂದು ರಾಶಿಚಕ್ರದವರು ತಮ್ಮದೇ ಆದ ಕೆಲವು ವಿಶೇಷ ವರ್ತನೆಯನ್ನು ತೋರುವರು. ಹಾಗಾದರೆ ಆ ಗುಣಗಳು ಯಾವವು? ಎನ್ನುವುದನ್ನು ರಾಶಿಚಕ್ರದ ಅನ್ವಯದ ಅಡಿಯಲ್ಲಿ ಬೋಲ್ಡ್ ಸ್ಕೈ ಈ ಮುಂದೆ ಸೂಕ್ತ ವಿವರಣೆಯನ್ನು ನೀಡಿದೆ.

 ಮೇಷ

ಮೇಷ

ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಮೊಂಡುತನವನ್ನು ಹೊಂದಿರುತ್ತಾರೆ. ಇದು ಅವರ ಬದ್ಧತೆಯ ಮೇಲೆ ಪ್ರಭಾವ ಬೀರುವುದು ಎನ್ನಲಾಗುವುದು. ಇವರು ತಮಗೆ ಯಾವ ರೀತಿಯ ಪ್ರೀತಿಯನ್ನು ತೋರಿಸುತ್ತಾರೋ ಅದೇ ರೀತಿಯಲ್ಲಿ ವ್ಯಕ್ತಿಗೆ ಪ್ರತಿಕ್ರಿಯೆಯನ್ನು ನೀಡುತ್ತಾರೆ. ತಮ್ಮನ್ನು ಆತ್ಮೀಯ ವ್ಯಕ್ತಿಯನ್ನಾಗಿ ಕಂಡರೆ ಇವರು ಸಹ ಅವರನ್ನು ಜೀವನ ಪರ್ಯಂತ ಆತ್ಮೀಯತೆಯಿಂದಲೇ ಪೂಜಿಸುತ್ತಾರೆ. ಪ್ರಾಯೋಗಿಕ ಜೀವನವನ್ನು ಬಯಸುವ ಇವರು ಸಂಗಾತಿಯಿಂದ ಹೊಸ ಅನುಭವಗಳಿಗಾಗಿ ಹಂಬಲಿಸುವುದಿಲ್ಲ. ಉತ್ತಮ ಪಾಲುದಾರರಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುವರು.

ವೃಷಭ

ವೃಷಭ

ಇವರು ವಸ್ತುಗಳ ಮೇಲೆ ಹೆಚ್ಚು ಪ್ರೀತಿಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಉತ್ತಮ ಅಥವಾ ಶ್ರೀಮಂತಿಕೆಯ ಜೀವನ ನಡೆಸಲು ಬಯಸುವರು. ಉತ್ತಮ ಲೈಂಗಿಕ ಸಂಬಂಧಗಳೊಂದಿಗೆ ಸಂಬಂಧವನ್ನು ಭದ್ರಪಡಿಸುವರು. ನೈಸರ್ಗಿಕವಾಗಿ ಉತ್ತಮ ವರ್ತನೆಯನ್ನು ಹೊಂದಿರುವ ಇವರು ಸಂಬಂಧಗಳ ವಿಚಾರದಲ್ಲಿ ಹೆಚ್ಚು ಪ್ರೀತಿ ವಿಶ್ವಾಸವನ್ನು ತೋರುವರು. ಇವರು ಪತಿಯ ಸ್ಥಾನಕ್ಕೆ ನ್ಯಾಯವನ್ನು ತುಂಬಿಕೊಡುವ ವ್ಯಕ್ತಿಗಳಾಗಿರುತ್ತಾರೆ ಎನ್ನಲಾಗುವುದು.

ಮಿಥುನ

ಮಿಥುನ

ಇವರು ಅತಿಯಾದ ಉತ್ಸಾಹ ಹೊಂದಿದ ವ್ಯಕ್ತಿಗಳಾಗಿರುವುದಿಲ್ಲ. ಇದು ಕೇವಲ ಇವರ ವರ್ತನೆ ಎಂದಲ್ಲ. ಬದಲಿಗೆ ಸಂಬಂಧಗಳ ವಿಚಾರದಲ್ಲೂ ಅನ್ವಯ ಆಗುವುದು. ಕೆಟ್ಟದ್ದನ್ನು ಬಯಸಿದವರಿಗೆ ಕೆಟ್ಟದ್ದನ್ನೇ ಎಸಗುವರು. ಬೇಸರಕ್ಕೆ ಒಳಗಾದಾಗ ಇವರು ಅತ್ಯಂತ ದುಃಖವನ್ನು ಅನುಭವಿಸುವರು. ಅಂತರ್ಮುಖಿ ವ್ಯಕ್ತಿತ್ವವನ್ನು ಹೊಂದಿದ್ದರೂ ತಮ್ಮದೇ ಆದ ಮಹತ್ವಾಕಾಂಕ್ಷೆ ಹಾಗೂ ಕನಸುಗಳ ಬಗ್ಗೆ ಅತ್ಯಂತ ದೃಢತೆಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರೊಂದಿಗೆ ಜೀವನ ನಡೆಸುವವರಿಗೆ ಎಂದಿಗೂ ಬೇಸರವುಂಟಾಗದು ಎನ್ನಲಾಗುವುದು.

ಕರ್ಕ

ಕರ್ಕ

ಈ ರಾಶಿಚಕ್ರದವರು ಸಾಮಾನ್ಯವಾಗಿ ಸಂತೋಷ ಹಾಗೂ ಆರಾಮದಾಯಕ ಜೀವನದ ಮೇಲೆ ಹೆಚ್ಚಿನ ಗಮನವನ್ನು ಹರಿಸುವರು. ಇವರು ಸಂಬಂಧಗಳಿ ಹೆಚ್ಚಿನ ಮಹತ್ವ ನೀಡುವುದಲ್ಲದೆ ತಮ್ಮ ಆತ್ಮೀಯರಿಗೆ ಸಂಗಾತಿಗೆ ಪ್ರೀತಿಯ ಮಳೆ ಸುರಿಸುವರು. ಸಂಗಾತಿಗೆ ಹಾಗೂ ಕುಟುಂಬದ ವಿಚಾರಕ್ಕೆ ಹೆಚ್ಚಿನ ಮಹತ್ವ ನೀಡುವರು. ಸಂಗಾತಿಯಾಗಿ ಅಥವಾ ಪತಿಯ ಸ್ಥಾನಕ್ಕೆ ಗೌರವವನ್ನು ತಂದುಕೊಡುವರು. ಅಲ್ಲದೆ ಸಂಗಾತಿಗೆ ಉತ್ತಮ ಸ್ನೇಹಿತ ಮತ್ತು ಪ್ರೇಮಿಯಾಗಿ ಇರುವರು.

ಸಿಂಹ

ಸಿಂಹ

ಈ ರಾಶಿಯವರು ಅಹಂಕಾರದ ವಿಷಯಗಳಿಗೆ ಹೆಚ್ಚು ಪ್ರಸಿದ್ಧತೆಯನ್ನು ಪಡೆದುಕೊಂಡಿರುವ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುವುದು. ಆದರೆ ಪತಿಗೆ ಅಥವಾ ಸಂಬಂಧಗಳ ವಿಚಾರದಲ್ಲಿ ಅತ್ಯುತ್ತಮ ಬೆಂಬಲ ನೀಡುವರು. ಇವರು ತಮ್ಮ ಸಂಗಾತಿಯನ್ನು ಪೂರ್ಣ ಹೃದಯದಿಂದ ಪ್ರೀತಿಸುತ್ತಾರೆ. ಇವರು ತಮ್ಮ ಸಂಗಾತಿ ಯಾದವರು ಯಾವುದೆ ಭಯ ಆತಂಕವಿಲ್ಲದೆ ಜೊತೆಯಾಗಿ ಇರಬೇಕು ಎಂದು ಬಯಸುತ್ತಾರೆ. ಅಲ್ಲದೆ ಸಾಕಷ್ಟು ಸುರಕ್ಷಿತವಾಗಿರುವಂತೆ ಮಾಡುತ್ತಾರೆ.

ಕನ್ಯಾ

ಕನ್ಯಾ

ಇವರು ಅತ್ಯಂತ ಪ್ರೀತಿ ಹಾಗೂ ಕಾಳಜಿಯನ್ನು ವಹಿಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಪ್ರತಿಯೊಂದು ದಿನವು ಸಂತೋಷ ಹಾಗೂ ಆರಾಮದಾಯಕವಾದ ಅನುಭವವನ್ನು ಹೊಂದಬೇಕು ಎಂದು ಬಯಸುತ್ತಾರೆ. ಇವರು ಏನನ್ನಾದರೂ ಹೂಡಿಕೆ ಮಾಡಿದರೆ ಅಥವಾ ಯೋಜನೆಯನ್ನು ಕೈಗೊಂಡರೆ ಅದು ಸಂಪೂರ್ಣವಾದ ಫಲಿತಾಂಶವನ್ನು ನೀಡಬೇಕೆಂದು ಬಯಸುವರು. ಇವರು ತಮ್ಮ ಮನಸ್ಸನ್ನು ಗೆದ್ದವರಿಗೆ ಅಥವಾ ಪ್ರೀತಿಪಾತ್ರರಿಗೆ ಹೆಚ್ಚಿನ ಮಹತ್ವ ಹಾಗೂ ಪ್ರೀತಿಯನ್ನು ಎರೆಯುವರು.

ತುಲಾ

ತುಲಾ

ಶುಕ್ರ ಗ್ರಹದ ಆಳ್ವಿಕೆಗೆ ಒಳಗಾಗುವ ಈ ರಾಶಿಚಕ್ರದವರು ಸಾಮಾನ್ಯವಾಗಿ ಎಲ್ಲಾ ವಿಚಾರದಲ್ಲೂ ಸಮತೋಲವನ್ನು ಹೊಂದಲು ಬಯಸುತ್ತಾರೆ. ಸೌಂದರ್ಯ, ಸಮತೋಲನ, ಪ್ರೀತಿ, ಶಾಂತಿ, ನೆಮ್ಮದಿ, ಸಾಮರಸ್ಯ, ಕ್ರಮಬದ್ಧತೆ ಹಾಗೂ ಲೈಗಿಂಕ ಜೀವನದ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡುವರು. ಇವರು ಸಂಗಾತಿಯಾಗಿ ಅತ್ಯುತ್ತಮ ಸ್ಥಾನವನ್ನು ತುಂಬುವರು. ತಮ್ಮ ಪ್ರೀತಿಯನ್ನು ಸಹ ಅತ್ಯುತ್ತಮ ರೀತಿಯಲ್ಲಿಯೇ ವ್ಯಕ್ತಪಡಿಸುವರು. ಕೆಲವೊಮ್ಮೆ ಇವರು ಸೋಮಾರಿತನವನ್ನು ವ್ಯಕ್ತಪಡಿಸಬಹುದು. ಆದರೆ ಪ್ರೀತಿ ಮತ್ತು ಪ್ರೇರಣೆಯ ವಿಚಾರದಲ್ಲಿ ಅತ್ಯುತ್ತಮ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುವುದು.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ವ್ಯಕ್ತಿಗಳು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚು ಅಂಟಿಕೊಂಡಿರುವ ವ್ಯಕ್ತಿಗಳಾಗಿರುತ್ತಾರೆ. ಮೇಲ್ನೋಟಕ್ಕೆ ಕೆಲವು ವಿಷಯಗಳನ್ನು ಇವರು ಮರೆಮಾಚಬಲ್ಲರು. ಆದರೆ ಸಂಗಾತಿಯ ವಿಷಯದಲ್ಲಿ ಅತ್ಯುತ್ತಮ ರೀತಿಯ ಪ್ರೀತಿ ತೋರುವರು. ಸಂಗಾತಿಗೆ ವಿಶೇಷ ಕಾಳಜಿ ಹಾಗೂ ಪ್ರೀತಿಯನ್ನು ನೀಡುವುದರ ಮೂಲಕ ಸಂಬಂಧಗಳಿಗೆ ಸೂಕ್ತ ಗೌರವ ನೀಡುವರು.

ಧನು

ಧನು

ಈ ರಾಶಿಯ ವ್ಯಕ್ತಿಗಳು ಅಧಿಕ ಪ್ರಯಾಣ ಕೈಗೊಳ್ಳುವರು. ಅಲಂಕಾರಿ ವಸ್ತುಗಳ ಖರೀದಿ ಇವರಿಗೆ ಹೆಚ್ಚಿನ ಸಂತೋಷ ನೀಡುವುದು. ಸಂಬಂಧಗಳಲ್ಲಿ ಆಳವಾಗಿ ಮುಳುಗಿಕೊಳ್ಳಲು ಇಷ್ಟ ಪಡದೆ ಇದ್ದರೂ ಸಂಗಾತಿಯ ವಿಚಾರದಲ್ಲಿ ಸೂಕ್ತ ಗೌರವ ಹಾಗೂ ಪ್ರೀತಿಯನ್ನು ತೋರುವರು. ತಮ್ಮ ಕೆಲವು ಕರ್ತವ್ಯ ಹಾಗೂ ಕೆಲಸದ ವಿಷಯದಲ್ಲಿ ಸಾಕಷ್ಟು ಅದ್ಭುತಗಳಂತೆ ಕಾರ್ಯ ನಿರ್ವಹಿಸುವರು. ಪತಿಯಾಗಿಯೂ ಸಂಗಾತಿಗೆ ಅಧಿಕ ಸಂತೋಷ ನೀಡುವರು.

ಮಕರ

ಮಕರ

ಮಕರ ರಾಶಿಯವರು ಭವಿಷ್ಯ ಆಧಾರಿತ ವ್ಯಕ್ತಿಗಳು ಪ್ರಾಯೋಗಿಕವಾದ ಚಿಂತನೆ ಹಾಗೂ ಕೆಲಸ ಕೈಗೊಳ್ಳುವುದರಲ್ಲಿ ಹೆಸರುವಾಸಿಯಾಗುವ ವ್ಯಕ್ತಿಗಳು. ವಿಷಯಗಳಲ್ಲಿ ಶ್ರದ್ಧೆ ಹಾಗೂ ಗಂಭೀರತೆಯನ್ನು ತೋರುವ ವ್ಯಕ್ತಿಗಳಾಗಿರುತ್ತಾರೆ. ಇವರು ಸ್ಥಿರವಾದ ಸಂಬಂಧವನ್ನು ಹೊಂದಲು ಬಯಸುವರು. ಉತ್ತಮವಾದ ಕೆಲಸ ನಿರ್ವಹಣೆಯ ಜೊತೆಗೆ ಸಂಬಂಧಗಳಲ್ಲೂ ಸಮತೋಲನ ಹಾಗೂ ಪ್ರೀತಿಯನ್ನು ತೋರುವ ವ್ಯಕ್ತಿಗಳಾಗಿರುತ್ತಾರೆ. ಉತ್ತಮ ಪಾಲುದಾರರಾಗಿ ಸಂಬಂಧಗಳಲ್ಲಿ ಯಾವುದೇ ತೊಡಕುಂಟಾಗದಂತೆ ನೋಡಿಕೊಳ್ಳುವರು.

ಕುಂಭ

ಕುಂಭ

ಇವರು ಅತ್ಯಂತ ಸ್ವತಂತ್ರ್ಯ ಪ್ರಿಯರು ಎನ್ನಬಹುದು. ಮಾನವೀಯತೆಗೆ ಹೆಚ್ಚು ಮಹತ್ವ ನೀಡುವ ಈ ವ್ಯಕ್ತಿಗಳು ಉದ್ಯಮ, ವ್ಯವಹಾರ ಹಾಗೂ ವ್ಯಾಪರಗಳ ಬಗ್ಗೆ ಹೆಚ್ಚಿನ ಸಮಯವನ್ನು ವಿನಿಯೋಗಿಸುವರು. ಹಾಗಾಗಿಯೇ ಇವರು ಜೀವನದಲ್ಲಿ ಕೆಲವು ಗುರಿಗಳನ್ನು ಪೂರ್ಣಗೊಳಿಸಲು ಸಾಕಷ್ಟು ಸಾಹಸವನ್ನು ಕೈಗೊಳ್ಳುವರು. ದೃಢ ಹಾಗೂ ಬಲವಾದ ವ್ಯಕ್ತಿತ್ವ ಹೊಂದಿರುವ ಇವರು ಸಂಬಂಧಗಳ ವಿಷಯದಲ್ಲೂ ಕೆಲವು ಧ್ಯೇಯವನ್ನು ಹೊಂದಿರುವರು. ತಮಗಾಗಿ ಸ್ವಲ್ಪ ಸಮಯವನ್ನು ಪ್ರತ್ಯೇಕವಾಗಿಯೇ ಇಟ್ಟುಕೊಳ್ಳಲು ಬಯಸುವ ಇವರು ಉತ್ತಮ ರೀತಿಯಲ್ಲಿಯೇ ಸಂಬಂಧಗಳನ್ನು ನಿಭಾಯಿಸುವರು.

ಮೀನ

ಮೀನ

ಈ ರಾಶಿಚಕ್ರದವರನ್ನು ಅತ್ಯಂತ ಭಾವನಾತ್ಮಕ ಮತ್ತು ಅರ್ಥಗರ್ಭಿತ ವ್ಯಕ್ತಿಗಳು ಎಂದು ಕರೆಯಲಾಗುವುದು. ಪ್ರೀತಿಯ ವಿಷಯದಲ್ಲಿ ಅಂತ್ಯವಿಲ್ಲದ ವ್ಯಕ್ತಿಗಳಾಗಿರುತ್ತಾರೆ. ಇವರು ಜೀವನದಲ್ಲಿ ಆಧ್ಯಾತ್ಮಿಕ ಪ್ರಣಯದ ಅನುಭವವನ್ನು ನೀಡುವರು. ಭಾವೋದ್ರಿಕ್ತತೆಯ ರೀತಿಯಲ್ಲಿ ಸಂಬಂಧಗಳನ್ನು ಸುಂದರವಾಗಿ ನಿಭಾಯಿಸುವರು. ಸೃಜನಾತ್ಮಕ ರೀತಿಯಲ್ಲಿ ಕವಿತೆಯನ್ನು ಬರೆಯುವುದರ ಮೂಲಕ ಮಾನಸಿಕ ಹಾಗೂ ದೈಹಿಕ ಸಂಬಂಧಗಳನ್ನು ಗಟ್ಟಿಗೊಳಿಸುವರು. ಪತಿಯಾಗಿ ಸಂಬಂಧವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವರು.

English summary

The Kind of Husband He Will Be Based On His Zodiac Sign

Although you should not base your decision of selecting a life partner based entirely on Astrology but knowing these personality raits of different zodiac signs will sure give you an idea of how your potential mate will be like as a Husband, based on his Zodiac sign.
Story first published: Monday, November 12, 2018, 18:01 [IST]
X
Desktop Bottom Promotion