For Quick Alerts
ALLOW NOTIFICATIONS  
For Daily Alerts

ಪ್ರತಿಯೊಂದು ರಾಶಿಚಕ್ರದಲ್ಲಿ ಅಡಗಿರುವ ಆಶ್ಚರ್ಯಕರ ಸಂಗತಿಗಳು

|

ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶೇಷ ಗುಣಗಳು ಅಡಗಿರುವುದು ಸಹಜ. ಅದು ಕೆಲವೊಮ್ಮೆ ಎಲ್ಲರ ಗಮನಕ್ಕೂ ಬರೆದೆ ಇರಬಹುದು. ಇನ್ನೂ ಕೆಲವೊಮ್ಮೆ ವ್ಯಕ್ತಿಯ ಸೂಕ್ತ ಗುಣವು ಏನೆಂದು ಅರ್ಥವಾಗದೆ ಇರಬಹುದು.

ಅಂತಹ ಸಂದರ್ಭದಲ್ಲೂ ವ್ಯಕ್ತಿಯ ಬಗ್ಗೆ ತಪ್ಪು ಕಲ್ಪನೆ ಅಥವಾ ಅಪಾರ್ಥಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ನಿಮಗೆ ನಿಮ್ಮ ಸ್ನೇಹಿತರ ಗುಣ ಏನು ಅವರ ಬಗ್ಗೆ ಒಂದಿಷ್ಟು ವಿಶೇಷ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ನಿಮ್ಮ ಮೇಷ ರಾಶಿಯ ಸ್ನೇಹಿತನ ಹಣೆಯ ಮೇಲೆ ಒಂದು ಗಾಯವನ್ನು, ಮೊಣಕೈ ಸಮೀಪ ಒಂದು ಗಾಯವನ್ನು, ಕತ್ತಿನ ಬಳಿ ಒಂದು ಗಾಯ ಅಥವಾ ಯಾವುದಾದರೂ ಒಂದು ಅಪಘಾತಕ್ಕೆ ಒಳಗಾಗಿರುತ್ತಾರೆ. ಕಾರಣ ಅವರಲ್ಲಿ ಒಂದು ವಿಶೇಷ ಆಕರ್ಷಕ ಶಕ್ತಿಯು ತುಂಬಿರುತ್ತದೆ ಎಂದು ಹೇಳಲಾಗುವುದು.ಅದು ಕೆಲವೊಮ್ಮೆ ಗಾಯ ಮಾಡಿಕೊಳ್ಳುವುದರಲ್ಲಿ ಕೊನೆಗೊಳ್ಳಬಹುದು ಎನ್ನಲಾಗುತ್ತದೆ.

ವೃಷಭ

ವೃಷಭ

ಈ ರಾಶಿಯವರು ತಮ್ಮನ್ನು ತಾವು ಆರೈಕೆ ಮಾಡಿಕೊಳ್ಳುವಾಗ ಉತ್ತಮವಾಗಿರುತ್ತಾರೆ. ಅವರು ಸಂವೇದನಾ ಶೀಲರೂ ಹೌದು. ಪ್ರಾಯೋಗಿಕ ತರ್ಕಬದ್ಧರಾಗಿರುತ್ತಾರೆ. ಇವರಿಗೆ ಹಣವು ಸುಲಭವಾಗಿ ದೊರೆಯುವುದು. ಇವರು ಹೆಚ್ಚಿಗೆ ಮಾತನಾಡುವುದಿಲ್ಲ. ಬದಲಿಗೆ ಉತ್ತಮ ಕೇಳುಗರಾಗಿರುತ್ತಾರೆ. ಬುದ್ಧಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಅದರಲ್ಲಿ ಯಾವುದೇ ಉತ್ಪ್ರೇಕ್ಷೆ ಇರುವುದಿಲ್ಲ. ಕೆಲವೊಮ್ಮೆ ದಬ್ಬಾಳಿಕೆಗೆ ಒಳಗಾಗಿರುತ್ತಾರೆ.

ಮಿಥುನ

ಮಿಥುನ

ಇವರು ಸಾಮಾನ್ಯವಾಗಿ ಉತ್ತಮ ಸ್ನೇಹಿತರಾಗಿರುತ್ತಾರೆ. ಇವರು ನಿಕಟ ಸ್ನೇಹಿತರಾಗಲು ಸಾಕಷ್ಟು ಆಯ್ಕೆಯನ್ನು ಮಾಡುವರು. ಇವರು ಉತ್ತಮ ಸಹಕಾರ ನೀಡುವ ವ್ಯಕ್ತಿಗಳಾಗಿರುತ್ತಾರೆ. ಇವರು ತಮ್ಮ ಆಂತರ್ಯದ ಗುಣವನ್ನು ಅತ್ಯಂತ ಆತ್ಮೀಯ ವ್ಯಕ್ತಿಯೊಂದಿಗೆ ಹೇಳಿಕೊಳ್ಳುವರು.

ಕರ್ಕ

ಕರ್ಕ

ಇವರು ತಮ್ಮ ಸ್ನೇಹಿತರ ಅಗತ್ಯತೆಗಳಿಗೆ ಮತ್ತು ಸಮಸ್ಯೆಗಳಿಗೆ ಸಂವೇದನಾಶೀಲರಾಗಿರುತ್ತಾರೆ. ಇವರು ಅತ್ಯುತ್ತಮ ಭಾವನೆಯೊಂದಿಗೆ ಅತ್ಯುತ್ತಮ ಸ್ನೇಹಿತರಾಗಿರಲ್ಲರು. ಸ್ನೇಹಿತರೆಂದು ಮೋಸ ಮಾಡಿದರೆ ಅಥವಾ ಕೆಟ್ಟದ್ದನ್ನು ಬಗೆದವರಿಗೆ ಅಷ್ಟು ಸುಲಭವಾಗಿ ಕ್ಷಮಿಸುವುದಿಲ್ಲ. ನಿಜವಾದ ಸ್ನೇಹಿತರು ಎಂದಿಗೂ ಮೋಸ ಮಾಡದ ವ್ಯಕ್ತಿಗಳು ಎಂದು ಭಾವಿಸುತ್ತಾರೆ.

ಸಿಂಹ

ಸಿಂಹ

ಇವರು ಸದಾ ಉತ್ಸಾಹ ಹಾಗೂ ಸಂತೋಷದಲ್ಲಿ ಸಮಯವನ್ನು ಕಳೆಯುವವರು. ಕೆಲವೊಮ್ಮೆ ಇವರು ಅಧಿಕಾರಶಾಹಿ ಅಥವಾ ನಾಯಕನ ರೀತಿಯಲ್ಲಿ ವರ್ತಿಸಬಹುದು. ಅವರಲ್ಲಿ ಆ ಒಂದು ಶಕ್ತಿ ಇರುವುದನ್ನು ಕಾಣಬಹುದು. ತಮ್ಮ ಕೆಲಸಕ್ಕೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ ಬಲವಾದ ಇಚ್ಛಾಶಕ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಮೇಲ್ನೋಟಕ್ಕೆ ಸಾಮಾಜಿಕ ವ್ಯಕ್ತಿಯಂತೆ ಕಂಡುಬಂದರೂ ಅವರಲ್ಲಿ ನಾಚಿಕೆ ಸ್ವಭಾವವು ಹೆಚ್ಚಾಗಿಯೇ ಇರುತ್ತದೆ. ಅಲ್ಲದೆ ಭಾವನಾತ್ಮಕ ಜೀವಿಯೂ ಹೌದು. ಇವರು ಜಿಮ್‍ಗೆ ಹೋಗಲು ಹೆಚ್ಚು ಇಷ್ಟಪಡುವರು.

ಕನ್ಯಾ

ಕನ್ಯಾ

ಇವರಲ್ಲಿ ಸೃಜನಾತ್ಮಕ ಗುಣಗಳು ಇವರಲ್ಲಿ ಇರುತ್ತದೆ. ಇವರು ತಮ್ಮ ಮುಖದಲ್ಲಿ ನಗುವನ್ನು ತುಂಬಿಕೊಳ್ಳುವುದರ ಮೂಲಕ ಹರ್ಷಚಿತ್ತರಾಗಿರುತ್ತಾರೆ. ಬಹುತೇಕ ಸಂದರ್ಭದಲ್ಲಿ ಕಣ್ಣು, ತುಟಿಗಳು ಇತರರನ್ನು ಆಕರ್ಷಿಸುತ್ತವೆ. ಇವರು ತಮ್ಮ ದೈಹಿಕ ಭಾಷೆಗಳ ಮೂಲಕವೇ ಕೆಲವೊಮ್ಮೆ ಸಂವಹನ ಹಾಗೂ ಚಿಂತನೆ ನಡೆಸುತ್ತಾರೆ ಎಂದರೆ ಆಶ್ಚರ್ಯ ಉಂಟಾಗಬಹುದು.

ತುಲಾ

ತುಲಾ

ಇವರು ಕಾಳಜಿಯುಳ್ಳ ಹಾಗೂ ಭಾವನಾತ್ಮಕ ಜೀವಿಗಳು. ಸಂಬಂಧದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವರು. ಸಂದರ್ಭ ಹಾಗೂ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳುವರು. ಆಕರ್ಷಕ ತುಟಿಗಳೊಂದಿಗೆ ಆಕರ್ಷಿಸಬಲ್ಲರು. ಬದ್ಧವಾದ ನಡತೆ ಹಾಗೂ ಮಾತುಗಳಿಂದ ಉತ್ತಮ ವ್ಯಕ್ತಿಯಾಗಿ ವರ್ತಿಸುವರು.

ವೃಶ್ಚಿಕ

ವೃಶ್ಚಿಕ

ಇವರು ಆಕರ್ಷಕ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಗಳು ಎನ್ನಬಹುದು. ಇವರದ್ದು ನೇರ ಸ್ವಭಾವ ಎನ್ನಬಹುದು. ಇವರು ಪ್ರಪಂಚದಲ್ಲಿ ಇರುವ ಹಾಗೂ ಇಲ್ಲದ ವಿಚಾರಗಳ ಕುರಿತಾಗಿಯೂ ಸಹ ಭಾವೋದ್ರಿಕ್ತರಾಗುವರು. ಇವರು ಸಾಮಾನ್ಯವಾಗಿ ಎತ್ತರ ಹಾಗೂ ತೆಳುವಾದ ದೇಹವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇವರು ವ್ಯಕ್ತಿಯ ಹಿಂದೆ ಮಾತನಾಡುವರು. ಕೆಲವೊಮ್ಮೆ ನಾಯಕತ್ವ ಸ್ವಭಾವದಿಂದ ಕಟ್ಟುನಿಟ್ಟಾಗಿರುವ ವರ್ತನೆಯನ್ನು ತೋರಬಹುದು.

ಧನು

ಧನು

ಇವರು ಸಾಹಸ ಜೀವಿಗಳು. ಜೀವನದಲ್ಲಿ ಸ್ಥಿರತೆಯಿಂದ ಇರುವುದು ಇವರಿಗೆ ಬೇಸರವನ್ನು ತರುವುದು. ದಿರ್ಘ ಸಮಯಗಳ ಕಾಲ ಒಂದೇ ಕೆಲಸಕ್ಕೆ ಅಂಟಿಕೊಂಡಿರುವುದಿಲ್ಲ. ಕೆಲವೊಮ್ಮೆ ವಿಶ್ವಾಸ ದ್ರೋಹವನ್ನು ಸಹ ಮಾಡಬಲ್ಲರು. ಆದರೆ ಉದಾರ ಗುಣ ಹಾಗೂ ಸ್ವಲ್ಪ ಮನೋಧರ್ಮಗಳಿಂದ ಇರುವುದನ್ನು ಕಾಣಬಹುದು.

ಮಕರ

ಮಕರ

ಇವರು ಶ್ರಮ ಜೀವಿಗಳು ಎನ್ನಬಹುದು. ತಮ್ಮದೇ ಆದ ನಿರ್ದಿಷ್ಟ ಗುರಿಯನ್ನು ಹೊಂದಿರುತ್ತಾರೆ. ಆ ಗುರಿಯ ಸಾಧನೆಗೆ ಸಾಕಷ್ಟು ಶ್ರಮವನ್ನು ವಹಿಸುವರು. ಇವರು ಜೀವನದಲ್ಲಿ ಶ್ರಮದಾಯಕ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡುವರು. ತಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿರುತ್ತಾರೆ.

ಕುಂಭ

ಕುಂಭ

ಇವರು ಕರುಣಾ ಜೀವಿಗಳು. ಶಾಂತತೆಯನ್ನು ಬಯಸುವ ಇವರು ಉತ್ತಮ ಪ್ರೇಮಿಯೂ ಹೌದು. ಅಂತೆಯೇ ತಾಳ್ಮೆಯನ್ನು ಹೊಂದಿರುತ್ತಾರೆ. ಇವರು ಪ್ರಜ್ಞಾ ಶೂನ್ಯ ಮಾತುಕತೆಗಳನ್ನು ಇಷ್ಟಪಡುವುದಿಲ್ಲ. ಇವರು ಪ್ರಣಯಾತ್ಮಕ ಭಾವನೆಗಳನ್ನು ಮರೆಮಾಚುವರು. ಇವರು ಇತರ ರಾಶಿಚಕ್ರಕ್ಕೆ ಹೋಲಿಸಿದರೆ ಅತ್ಯುತ್ತಮ ಶ್ರೀಮಂತರು ಎಂದು ಹೇಳಬಹುದು.

ಮೀನ

ಮೀನ

ಇವರು ಸಾಮಾಜಿಕವಾಗಿ ಮಿತ ಮಾತುಗಾರರಾಗಿರುತ್ತಾರೆ. ತಮ್ಮ ಸ್ನೇಹಿತರ ಬಳಗದಲ್ಲಿ ಮಾತ್ರ ಹೆಚ್ಚು ಮಾತು ಹಾಗೂ ಹಾಸ್ಯವನ್ನು ಮಾಡುವರು. ಇವರು ನೀಡುವ ಮಂದವಾದ ನಗುವು ಅವರಲ್ಲಿ ನಮಗೆ ವಿಶ್ವಾಸವಿದೆ ಎಂದು ಭಾಸವಾಗುವುದು. ಇವರು ಅತ್ಯಂತ ಗೊಂದಲದ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಲಾಗುವುದು.

English summary

Surprising Facts Based On Zodiac Signs

Want to know that surprising trait of your friends? Read on to know all that they have been hiding from you.
Story first published: Saturday, September 1, 2018, 8:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more