For Quick Alerts
ALLOW NOTIFICATIONS  
For Daily Alerts

ಕೆಲವೊಮ್ಮೆ ಪುರುಷರು ಕೂಡ 'ಸೆಕ್ಸ್ ಬೇಡ' ಎನ್ನುತ್ತಾರಂತೆ! ಯಾಕೆ ಗೊತ್ತೇ?

By Hemanth
|

ಸೆಕ್ಸ್ ವಿಚಾರಕ್ಕೆ ಬಂದರೆ ಮಹಿಳೆಯರಿಗಿಂತ ಪುರುಷರು ಒಂದು ಕೈ ಮೇಲು ಎಂದೇ ಹೇಳಲಾಗುವುದು. ಪುರುಷರು ಸೆಕ್ಸ್ ಎಂದ ಕೂಡಲೇ ಯಾವ ಸಮಯದಲ್ಲೂ ತಯಾರಾಗಿರುವರು ಎನ್ನುವ ಮಾತಿದೆ. ಆದರೆ ಇದು ನಿಜವಲ್ಲ ಎನ್ನುತ್ತಾರೆ ಟೊರಂಟೊದ ಆನ್ ಲೈನ್ ನಿರ್ಮಾಪಕ 29ರ ಹರೆಯದ ಪಿ.ಜೆ ಎನ್ನುವವರು. ನನಗೆ ಸೆಕ್ಸ್ ಬೇಡ ಎನ್ನುವುದು ತುಂಬಾ ಅಪರೂಪ. ಆದರೆ ಬೇರೆ ವಿಚಾರದ ಬಗ್ಗೆ ತುಂಬಾ ಗಾಢವಾಗಿ ಆಲೋಚಿಸುತ್ತಿರುವಾಗ ನಾನು ಇದರಿಂದ ದೂರ ಉಳಿಯಬಲ್ಲೇ ಎಂದು ಅವರು ವಿವರಿಸುವರು.

ತುಂಬಾ ಗಾಢಾಲೋಚನೆಯಲ್ಲಿ ಇರುವಾಗ ಗರ್ಲ್ ಫ್ರೆಂಡ್ ತುಂಬಾ ಸೆಕ್ಸಿಯಾಗಿರುವಂತಹ ಬಟ್ಟೆ ಧರಿಸಿಕೊಂಡು ಬಂದರೂ ತನ್ನ ಆಸಕ್ತಿ ಅತ್ತ ಕಡೆ ಹೋಗಲಾರದು. ನಾನು ಯೋಚನಾಮಗ್ನನಾಗಿರುವೆ ಮತ್ತು ಇದರಿಂದ ಹೊರಬರಲು ಬಯಸುವುದಿಲ್ಲ. ಸೆಕ್ಸ್ ಗೆ ನೀವು ಇನ್ನೊಬ್ಬರೊಂದಿಗೆ ಬೆರೆಯಬೇಕು ಎನ್ನುತ್ತಾರೆ.
ಲೈಂಗಿಕ ಆಸಕ್ತಿಯಿರುವಂತಹ ಪುರುಷರು ಕೆಲವೊಂದು ಸಲ ಮಹಿಳೆಯರನ್ನು ತಿರಸ್ಕರಿಸುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ವ್ಯಾಂಕೋವರ್ ನ ಲೈಂಗಿಕ ತಜ್ಞ ಡೇವಿಡ್ ಮೆಂಕೆಜಿ ಅವರ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ನನ್ನಲ್ಲಿ ಬರುತ್ತಿರುವವರಲ್ಲಿ ಹೆಚ್ಚಿನ ಪುರುಷರಿಗೆ ಲೈಂಗಿಕಾಸಕ್ತಿಯು ಕಡಿಮೆಯಾಗುತ್ತಿದೆ ಮತ್ತು ಮಹಿಳೆಯರೇ ಇದಕ್ಕೆ ಮುಂದಾಗುತ್ತಿದ್ದಾರೆ ಎಂದರು.

ಸಂಗಾತಿಯು ನಿಮ್ಮಿಂದ ದೂರವಾಗುತ್ತಲಿದ್ದರೆ ಆಗ ಅದು ಆಸಕ್ತಿ ಕಡಿಮೆಯಾಗುತ್ತಿರು ಪರಿಣಾಮ ಮತ್ತು ನಿಮ್ಮ ಬಗ್ಗೆ ಆತ ಏನು ಆಲೋಚಿಸುತ್ತಾನೆ ಎನ್ನುವುದಕ್ಕೆ ಇದು ಸಂಬಂಧಿಸಿಲ್ಲ. ಕೆಲವೊಂದು ಸಾಮಾನ್ಯ ಕಾರಣಗಳಿಂದಾಗಿ ಪುರುಷರು ಲೈಂಗಿಕ ಕ್ರಿಯೆಗೆ ಇಲ್ಲವೆನ್ನಬಹುದು. ಇದು ಯಾವುದು ಮತ್ತು ಅವರನ್ನು ಒಲೈಸಿಕೊಳ್ಳುವುದು ಹೇಗೆ ಎಂದು ತಿಳಿಯಿರಿ....

1. ಆತ ಖಿನ್ನತೆಯಿಂದ ಬಳಲುತ್ತಿದ್ದಾನೆ

1. ಆತ ಖಿನ್ನತೆಯಿಂದ ಬಳಲುತ್ತಿದ್ದಾನೆ

ಖಿನ್ನತೆಯು ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆ ಮಾಡಲು ಪ್ರಮುಖ ಕಾರಣ ಎಂದು ಮೆಕೆಂಜಿ ಹೇಳುತ್ತಾರೆ. ಖಿನ್ನತೆಯಿಂದ ಬಳಲುತ್ತಿದ್ದರೆ ಹದಿಹರೆಯದಿಂದ ಹಿಡಿದು ವಯಸ್ಸಾದವರ ತನಕ ಪ್ರತಿಯೊಬ್ಬರಿಗೂ ಲೈಂಗಿಕಾಸಕ್ತಿ ಕಡಿಮೆ ಇರುವುದು.

2.ಟೆಸ್ಟೊಸ್ಟೆರಾನ್ ಮಟ್ಟ

2.ಟೆಸ್ಟೊಸ್ಟೆರಾನ್ ಮಟ್ಟ

ಪುರುಷರು 40ರ ಹರೆಯ ದಾಟಿದ ಬಳಿಕ ಟೆಸ್ಟೊಸ್ಟೆರಾನ್ ಮಟ್ಟವು ಅವರಲ್ಲಿ ಕಡಿಮೆಯಾಗುತ್ತಾ ಹೋಗುವುದು ಎಂದು ಮೆಕೆಂಜಿ ಹೇಳುತ್ತಾರೆ. ಸಮಯ ಕಳೆದಂತೆ ಇದು ಕುಗ್ಗುತ್ತಾ ಹೋದರೆ ಆಗ ಪುರುಷರಲ್ಲಿ ಲೈಂಗಿಕ ಶಕ್ತಿ ಕಡಿಮೆಯಾಗುವುದು. ಕೆಲವೊಂದು ಸಲ ಪುರುಷರಲ್ಲಿ ಟೆಸ್ಟೊಸ್ಟೆರಾನ್ ತೀವ್ರವಾಗಿ ಕುಸಿಯುವುದು. ಇಂತಹ ಪರಿಸ್ಥಿತಿಯನ್ನು ಆಂಡ್ರೊಪಾಸ್ ಎನ್ನಲಾಗುವುದು ಮತ್ತು ಇದರಿಂದ ಶಕ್ತಿ ಮಟ್ಟ ಕಡಿಮೆಯಾಗುವುದು, ಖಿನ್ನತೆ ಲಕ್ಷಣಗಲು ಮತ್ತು ಲೈಂಗಿಕಾಸಕ್ತಿ ಕುಗ್ಗುವುದು.

3. ನಿಮಿರುವಿಕೆ ಸಮಸ್ಯೆ

3. ನಿಮಿರುವಿಕೆ ಸಮಸ್ಯೆ

ನಿಮಿರುವಿಕೆ ಸಮಸ್ಯೆ ಮತ್ತು ಶೀಘ್ರ ಸ್ಖಲನ ಕೂಡ ಕೆಲವೊಂದು ಸಾಮಾನ್ಯ ಸಮಸ್ಯೆಗಳು ಎಂದು ಮೆಕೆಂಜಿ ಹೇಳುವರು. ಈ ಸಮಸ್ಯೆಗಳಿಂದ ಬಳಲುತ್ತಿರುವಂತಹ ಪುರುಷರು ಸಂಗಾತಿಯಿಂದ ದೂರಹೋಗುವರು. ತಾನು ಸಂಗಾತಿಗೆ ನಿರಾಶೆ ಮಾಡಬಹುದು ಅಥವಾ ಸಂಗಾತಿಯು ತನ್ನನ್ನು ಪುರುಷನಲ್ಲವೆಂದು ಭಾವಿಸಬಹುದು ಎನ್ನುವ ಭೀತಿ ಆತನಲ್ಲಿರುವುದು. ಆತ್ಮ ವಿಶ್ವಾಸವಿಲ್ಲದೆ ಪುರುಷರಿಗೆ ಹಾಸಿಗೆಯಲ್ಲಿ ಪ್ರದರ್ಶನ ನೀಡಲು ಆಗಲ್ಲವೆಂದು ಟೊರಂಟೊದ 28ರ ಹರೆಯದ ಸಂಗೀತಗಾರ ಡೇವಿಡ್ ಹೇಳುತ್ತಾರೆ. "ಬೆಳೆಯುತ್ತಿರುವಂತೆ ಪ್ರತಿಯೊಬ್ಬ ಯುವಕನು ಸೆಕ್ಸ್ ನಲ್ಲಿ ದೊಡ್ಡ ಆಟಗಾರನಾಗಲು ಬಯಸುವನು ಮತ್ತು ಇದರಲ್ಲಿ ಉತ್ತಮ ಪ್ರದರ್ಶನ ನೀಡಲು ಬಯಸುತ್ತಾನೆ. ಇದು ಪುರುಷರ ಸಂಸ್ಕೃತಿ''ಎನ್ನುತ್ತಾರೆ ಡೇವಿಡ್.

4. ಉದ್ಯೋಗದ ಒತ್ತಡ

4. ಉದ್ಯೋಗದ ಒತ್ತಡ

ಉದ್ಯೋಗದ ಬಗ್ಗೆ ಅತಿಯಾಗಿ ಚಿಂತಿಸುವ ಕಾರಣದಿಂದಾಗಿ ಪುರುಷರಲ್ಲಿ ಕಾಮಾಸಕ್ತಿ ಕಡಿಮೆಯಾಗುವುದು. ಕೆಲವರು ವೈಯಕ್ತಿಕ ಸುಖಕ್ಕಿಂತ ವೃತ್ತಿಯಲ್ಲಿ ಯಶಸ್ಸು ಪಡೆಯಲು ಬಯಸುವುದೇ ಇದಕ್ಕೆ ಕಾರಣ. "ನಾನು ಏನು ಅಲ್ಲ ಮತ್ತು ಇದುವರೆಗೆ ಜೀವನದಲ್ಲಿ ಏನೂ ಸಾಧನೆ ಮಾಡಿಲ್ಲ, ನಾನು ನಕಾರಾತ್ಮಕವಾಗಿದ್ದೇನೆ ಎನ್ನುವ ಭಾವನೆಯು ಸೆಕ್ಸ್ ಬೇಡವೆನ್ನಬಹುದು" ಎನ್ನುವುದು ಡೇವಿಡ್ ಅಭಿಪ್ರಾಯ.

5. ಬಳಲಿಕೆ

5. ಬಳಲಿಕೆ

ರಾತ್ರಿಯಿಂದ ನಾನು ಬಳಲಿದ್ದೇನೆ ಎಂದರೆ ಆಗ ಅದು ನಿಜವಾಗಿರಲೂ ಬಹುದು. ನಾನು ಸ್ವಲ್ಪ ಬಳಲಿದ್ದರೆ ಆಗ ನಾನು ಅದಕ್ಕೆ ಒಪ್ಪಿಗೆ ಸೂಚಿಸುವೆ ಎನ್ನುತ್ತಾರೆ ಡೇವಿಡ್. ``ಆದರೆ ಕೆಲವೊಂದು ಸಲ ನಾನು ಎಷ್ಟು ಆಯಾಸಗೊಂಡಿರುವೆನೆಂದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಅಸಮರ್ಥನಾಗಿರುವೆ''

6. ನೀವು ವೇಗವಾಗಿದ್ದೀರಿ

6. ನೀವು ವೇಗವಾಗಿದ್ದೀರಿ

ನೀವು ಈಗಾಗಲೇ ಡೇಟಿಂಗ್ ಮಾಡುತ್ತಿರುವ ಹೊಸ ಯುವಕನೊಂದಿಗೆ, ಮನೆಗೆ ಬಂದು ಒಂದು ರಾತ್ರಿ ಕಳೆದುಹೋಗು ಎಂದರೆ ಆತ ಖಂಡಿತವಾಗಿಯೂ ತಾನು ಇದಕ್ಕೆ ತಯಾರಾಗಿಲ್ಲವೆಂದು ಹೇಳುವನು. ಲೈಂಗಿಕ ಕ್ರಿಯೆಗೆ ಮೊದಲು ಭಾವನೆಗಳು ಕೂಡ ಒಂದಾಗಬೇಕು. ನಿಮಗೆ ಪರಿಚಯವೇ ಇಲ್ಲದ ವ್ಯಕ್ತಿಯೊಂದಿಗೆ ಹೇಗೆ ನೀವು ಹಾಸಿಗೆ ಹಂಚಿಕೊಳ್ಳುವಿರಿ ಎನ್ನುವುದು ಜೆ.ಪಿ. ಪ್ರಶ್ನೆ.

7. ನಿಮ್ಮೊಂದಿಗೆ ಆತನಿಗೆ ಇಷ್ಟವಿಲ್ಲದಿರಬಹುದು!

7. ನಿಮ್ಮೊಂದಿಗೆ ಆತನಿಗೆ ಇಷ್ಟವಿಲ್ಲದಿರಬಹುದು!

ನೀವು ಎಲ್ಲವನ್ನು ಸರಿಯಾಗಿ ಪ್ರಯತ್ನಿಸಿದರೂ ಆತ ನಿಮ್ಮೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ತಯಾರಿಲ್ಲವೆಂದಾದರೆ ಆಗ ಆತ ನಿಮ್ಮೊಂದಿಗೆ ಸಂತೋಷವಾಗಿಲ್ಲವೆಂದು ಅರ್ಥ. ಈ ಸಮಯದಲ್ಲಿ ಸಂಬಂಧದಲ್ಲಿ ಪ್ರೀತಿಯು ಸಾಯುವುದು ಮತ್ತು ಲೈಂಗಿಕ ಕ್ರಿಯೆಯು ನಿಮ್ಮ ಮಧ್ಯೆ ನಡೆಯುವುದು ದೂರದ ಮಾತು. ಪುರುಷನು ನಿಮ್ಮೊಂದಿಗಿನ ಸಂಬಂಧದಲ್ಲಿ ಸಂತೋಷ ವಾಗಿಲ್ಲವೆಂದಾದರೆ ಆಗ ಆತ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಬಗ್ಗೆ ಪರಿಗಣಿಸಲ್ಲ. ಆತ ಪ್ರೀತಿಸುವಂತೆ ಮಾಡಿ, ಸಂಬಂಧವು ಸುಧಾರಿಸಿದರೆ ಆಗ ಖಂಡಿತವಾಗಿಯೂ ಮತ್ತೆ ಆತ ಹಾಸಿಗೆಗೆ ಬರುತ್ತಾನೆ. ಹೀಗೆ ಆಗದೇ ಇದ್ದರೆ ನೀವು ಅದನ್ನು ಬಿಟ್ಟುಬಿಡುವುದು ಒಲಿತು. ಪುರುಷರು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಹಿಂಜರಿ ಯುವುದು ಯಾಕೆ ಎನ್ನುವುದನ್ನು ಇದು ಐದು ಕಾರಣಗಳು. ನೀವು ಸರಿಯಾಗಿ ಮಾತುಕತೆ ನಡೆಸಿ, ನಿಮ್ಮ ಲೈಂಗಿಕ ಜೀವನದ ಕಿಡಿಯನ್ನು ಉಳಿಸಿಕೊಳ್ಳಬಹುದು. ಇದಕ್ಕಾಗಿ ನಿಮ್ಮಿಬ್ಬರ ನಡುವಿನ ಪ್ರೀತಿ ಮತ್ತು ಆಕಾಂಕ್ಷೆಯು ಅತೀ ಅಗತ್ಯ. ಯಾವುದೇ ಸಮಸ್ಯೆಗಳಿದ್ದರೂ ಅದನ್ನು ನಿಮ್ಮ ಸಂಗಾತಿ ಜತೆಗೆ ಮಾತನಾಡಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಸುಂದರವಾದ ಲೈಂಗಿಕ ಜೀವನವನ್ನು ನಡೆಸಿ.

8.

8. "ನೀವು" ಆತನನ್ನು ಉದ್ರೇಕಗೊಳಿಸುತ್ತಿಲ್ಲ!

ನೀವು ಆತನನ್ನು ಉದ್ರೇಕಗೊಳಿಸಲಿಲ್ಲವಾದರೆ, ಆತ ಖಂಡಿತವಾಗಿ ನಿಮ್ಮನ್ನು ಪಕ್ಕಕ್ಕೆ ತಳ್ಳುತ್ತಾನೆ. ಆದರೂ ಹೀಗೆ ಉದ್ರೇಕಪಡಿಸುವುದು ಹೆಂಗಸರ ಸ್ವಭಾವವಲ್ಲ ಬಿಡಿ. ಒಂದೊಮ್ಮೆ ಹೀಗೆ ಉದ್ರೇಕಪಡಿಸದ ಹೆಂಡತಿಯ ಜೊತೆಗೆ ನೀವು ಸಂಸಾರ ಮಾಡುತ್ತಿದ್ದರೆ, ಆಕೆಗೆ ಅದನ್ನು ತಿಳಿಸಿ, ಅದಕ್ಕೆ ಆಕೆ ಕೆಲವೊಂದು ಹೊಸ ದಾರಿಗಳನ್ನು ಹುಡುಕಬಹುದು.

 9. ಹೊಸ ಭಂಗಿ ಕೂಡ ಕಾರಣವಾಗಿರಬಹುದು!

9. ಹೊಸ ಭಂಗಿ ಕೂಡ ಕಾರಣವಾಗಿರಬಹುದು!

ಯಾವಾಗ ಹೆಣ್ಣು ಹೊಸ ಭಂಗಿಯನ್ನು ಪ್ರಯತ್ನಿಸಲು ಸಿದ್ಧಳಾಗಿರುವುದಿಲ್ಲವೊ, ಆಗ ಗಂಡಸು ಆಕೆಯ ಬಗ್ಗೆ ತಾತ್ಸಾರ ಮಾಡಲು ಶುರು ಮಾಡುತ್ತಾನೆ. ಇದು ಸಹ ಗಂಡಸರು ಮಿಲನಕ್ಕೆ ಒಲ್ಲೆ ಎನ್ನಲು ಇರುವ ಕಾರಣಗಳಲ್ಲಿ ಒಂದು.

10. ಅತೀಯಾದ ಒತ್ತಡ!

10. ಅತೀಯಾದ ಒತ್ತಡ!

ಹೌದು ನಿಮ್ಮವರು ನಿಮ್ಮೊಂದಿಗೆ ಮಿಲನಕ್ಕೆ ಬರಲು ಮನಸ್ಸು ಮಾಡುತ್ತಿಲ್ಲವೇ? ಹಾಗಾದರೆ ಆತ ನಿಜವಾಗಿ ಒತ್ತಡದಲ್ಲಿ ಸಿಲುಕಿರಬಹುದು. ಹೀಗೆ ಆತ ಒತ್ತಡದಲ್ಲಿ ಸಿಲುಕಿರುವಾಗ ಅದರಿಂದ ಪಾರಾಗಿ ಆತ ಮೂಡ್‍ಗೆ ಬರುವುದು ತುಂಬಾ ಕಷ್ಟ.

English summary

Reasons Men Say No to Sex!

When it comes to sex, men are ready to go at any time, right? Well, not always, says 29-year-old P.J., an online producer from Toronto. “It’s rare that I don’t want to have sex, but the times I will say no are when I’m thinking about something intensely and I can’t pull myself out of it,” he explains.
Story first published: Thursday, July 12, 2018, 18:20 [IST]
X
Desktop Bottom Promotion