For Quick Alerts
ALLOW NOTIFICATIONS  
For Daily Alerts

ರಾಶಿಭವಿಷ್ಯ ಈ ಐದು ರಾಶಿಯವರು, ಸಾಮಾನ್ಯರಲ್ಲ- ಅಸಾಮಾನ್ಯರು!

By Deepu
|

ಕೆಲವು ಪ್ರಭಾವಶಾಲಿ ರಾಶಿಗಳಲ್ಲಿ ಜನಿಸಿರುವುದು ಕೆಲವರಿಗೆ ತುಂಬಾ ನೆರವಾಗುದು. ರಾಶಿಚಕ್ರಗಳಲ್ಲಿ ಐದು ರಾಶಿಗಳು ತುಂಬಾ ಪ್ರಭಾವ ಹೊಂದಿರುವುದು ಎಂದು ಹೇಳಲಾಗುತ್ತದೆ. ಈ ಲೇಖನದಲ್ಲಿ ಈ ಐದು ರಾಶಿಗಳು ಯಾವುದು ಎಂದು ನೀವು ತಿಳಿದುಕೊಳ್ಳಿ. ನೀವು ಈ ರಾಶಿಯವರಾಗಿದ್ದರೆ ತುಂಬಾ ಅದೃಷ್ಟವಂತರು ಎಂದು ಹೇಳಬಹುದು....

ಮೇಷ

ಮೇಷ

ಇವರು ತುಂಬಾ ಧೈರ್ಯಶಾಲಿಗಳು ಮತ್ತು ಯಾವುದೇ ಗುರಿ ಸಾಧಿಸಬಲ್ಲರು. ಇವರು ತಮ್ಮ ಗುರಿಸಾಧನೆಗೆ ಯಾವುದೇ ಹಂತಕ್ಕೂ ಹೋಗಬಲ್ಲರು ಮತ್ತು ಇವರ ಶಕ್ತಿಯ ಮಟ್ಟವು ಬೇರೆಯವರಿಗಿಂತ ಭಿನ್ನವಾಗಿರುವುದು. ಇವರಿಗೆ ಒಂದು ಹಿನ್ನಡೆಯೆಂದರೆ ಇವರು ತುಂಬಾ ಹಠಮಾರಿ ಸ್ವಭಾವದವರಾಗಿರುವರು. ರಾಶಿಚಕ್ರಗಳಲ್ಲಿ ಮೇಷ ರಾಶಿಯು ತುಂಬಾ ಶಕ್ತಿಶಾಲಿ ರಾಶಿಯಾಗಿದೆ. ಇವರಲ್ಲಿ ಶಕ್ತಿ ಹಾಗೂ ಅತ್ಯುತ್ಸಾಹವು ಕುದಿಯುತ್ತಿರುವುದು. ಇವರು ತುಂಬಾ ತೀಕ್ಷ್ಣ ಹಾಗೂ ಅನ್ವೇಷಿಸುವವರು. ಇವರಲ್ಲಿ ಇರುವಂತಹ ಅದಮ್ಯ ಸ್ಫೂರ್ತಿಯು ಯಾವುದೇ ರೀತಿಯ ಅಡೆತಡೆಗಳನ್ನು ಪುಡಿ ಮಾಡಬಲ್ಲದು. ಇನ್ನೊಂದು ಬದಿಯಲ್ಲಿ ಇವರು ತುಂಬಾ ಸ್ವಾವಲಂಬಿಗಳು ಮತ್ತು ಇದರಂದಾಗಿ ಅವರಿಗೆ ಸ್ವರಕ್ಷಣೆಯು ತಿಳಿದಿರುವುದು. ಮೇಷ ರಾಶಿಯವರು ಶಕ್ತಿಯು ಅವರ ನಾಯಕತ್ವದ ಗುಣಗಳು, ನಿರ್ಭೀತಿಯ ಸ್ವಭಾವ ಮತ್ತು ಕೆಲಸ ಮಾಡುವ ಶಕ್ತಿಯನ್ನು ಅವಲಂಬಿಸಿದೆ.

ಮೇಷ

ಮೇಷ

ಇನ್ನು ರಾಶಿಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ರಾಶಿ ಮೇಷ. ಈ ರಾಶಿಯ ವ್ಯಕ್ತಿಗಳು ಸ್ಪರ್ಧಾತ್ಮಕ ಚೈತನ್ಯವನ್ನು ಹೊಂದಿರುತ್ತಾರೆ. ಅವರ ನಾಯಕತ್ವ ಕೌಶಲ್ಯಗಳನ್ನು ಬಹಳ ಸುಂದರವಾಗಿ ನಿಭಾಯಿಸಬಲ್ಲರು. ಸೂರ್ಯನ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ಬಹಳ ಸ್ವಾಭಿಮಾನಿಗಳಾಗಿರುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುವುದು. ಹಿರಿಯರು ಹಾಗೂ ದೈವ ಶಕ್ತಿಯಲ್ಲಿ ನಂಬಿಕೆ ಇಡುವ ಇವರು ಮುಂಗೋಪಿಗಳು ಹೌದು. ಅಷ್ಟೇ ಅಲ್ಲದೆ ಮೇಷ ರಾಶಿಯವರು ಹೆಚ್ಚು ಧೈರ್ಯಶಾಲಿಗಳಾಗಿದ್ದು ಭವಿಷ್ಯದ ಬಗ್ಗೆ ಹೆಚ್ಚು ಚಿಂತಿಸದೆಯೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವವರಾಗಿದ್ದಾರೆ. ಮುಂದಿಟ್ಟ ಹೆಜ್ಜೆಯನ್ನು ಹಿಂದಿಡುವ ಸ್ವಭಾವವನ್ನು ಈ ರಾಶಿಯವರು ಹೊಂದಿಲ್ಲ. ಆ ತಿಂಗಳು ಅವರ ದಾರಿಗೆ ಯಾವ ವಿಷಯ ಬರುತ್ತದೆಎಂಬುದು ಮುಖ್ಯವಾಗಿರುತ್ತದೆ. ತಾವೇ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಇವರು ಸಿದ್ಧಹಸ್ತರಾಗಿದ್ದು ಪ್ರತಿಯೊಂದು ಕೆಲಸವನ್ನು ಇವರು ಆರಂಭಿಸಿ ಅದನ್ನು ಮುಗಿಸುವಲ್ಲಿ ಪ್ರವೀಣರಾಗಿದ್ದಾರೆ.

ಕರ್ಕಾಟಕ

ಕರ್ಕಾಟಕ

ಈ ರಾಶಿಯು ತುಂಬಾ ಬಲಿಷ್ಠ. ಈ ರಾಶಿಯವರು ಅದ್ಭುತ ಪ್ರೇಮಿಗಳು ಮತ್ತು ಇತರರ ಬಗ್ಗೆ ಕಾಳಜಿ ಹೊಂದಿರುವವರು. ನ್ಯೂನ್ಯತೆಗಳು ಇವರನ್ನು ತಡೆಯಲು ಬಿಡಲ್ಲ. ಇವರು ತುಂಬಾ ಬದ್ಧರಾಗಿರುವರು ಮತ್ತು ತಾವು ಇಷ್ಟಪಡುವ ಜನರಿಗೆ ಇವರು ತುಂಬಾ ಸಾಧ್ಯತೆಯ ವಿಷಯವಾಗಿರುವರು. ಗುರಿ ಸಾಧಿಸಲು ಇವರು ತಮ್ಮನ್ನು ಸ್ವಪ್ರೇರಣೆಗೆ ಒಳಪಡಿಸುವರು.ಇನ್ನು ಕರ್ಕಾಟಕ ರಾಶಿಯವರು ತುಂಬಾ ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿಗಳೆಂದು ಪರಿಗಣಿಸಲಾಗಿದೆ. ಆದರೆ ಇದನ್ನು ಅವರ ದುರ್ಬಲತೆಯೆಂದು ಅಪಾರ್ಥ ಮಾಡಿಕೊಳ್ಳಬಾರದು. ಇವರು ತುಂಬಾ ಬಲ ಹಾಗೂ ಹಠ ಸ್ವಭಾವದ ವ್ಯಕ್ತಿಗಳು. ಇದರಿಂದಾಗಿ ಇವರು ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಮಹತ್ವಾಕಾಂಕ್ಷಿಯಾಗಿರುವರು.ಕರ್ಕಾಟಕ ರಾಶಿಯವರ ಬಲವು ಅವರ ಆತ್ಮವಿಶ್ವಾಸದ ಮೇಲೆ ಅವಲಂಬಿತವಾಗಿದೆ. ಕರ್ಕಾಟಕ ರಾಶಿಯವರು ತುಂಬಾ ಪ್ರೀತಿ ಮತ್ತು ಪ್ರಾಮಾಣಿಕ ಮನುಷ್ಯರೆಂದು ಕರೆಯಲಾಗುತ್ತದೆ. ಅವರಿಗೆ ಮೋಸ, ನಿರಾಶೆ ಮತ್ತು ಬೇಸರವಾದಾಗ ತುಂಬಾ ಕುಸಿಯುತ್ತಾರೆ. ಅವರ ಬಗ್ಗೆ ಬಳಸುವ ಪದಗಳ ಆಯ್ಕೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಇನ್ನು ಈ ರಾಶಿಯವರು ಅವರು ಏನೇ ಮಾಡಿದರೂ ಪ್ಯಾಷನ್ ನಿಂದ ಮಾಡುತ್ತಾರೆ. ತಮ್ಮನ್ನು ಪ್ರೀತಿಸುವವರು ಕೂಡ ಇದೇ ರೀತಿಯಾಗಿರಬೇಕೆಂದು ಬಯಸುತ್ತಾರೆ. ಅವರು ಏನೇ ಮಾಡಿದರೂ ಅದರಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಇದರಿಂದ ಕರ್ಕಾಟಕ ರಾಶಿಯವರೊಂದಿಗೆ ಸಂಬಂಧ ಬೆಳೆಸುವುದು ಉತ್ತಮ.

ಕರ್ಕಾಟಕ

ಕರ್ಕಾಟಕ

ಕರ್ಕಾಟಕ ರಾಶಿಯವರಿಗೆ ನಿರಾಶೆಯಾದಾಗ ಅಥವಾ ಮನಸ್ಸಿಗೆ ನೋವಾದಾಗ ಅವರ ಸುತ್ತಲು ಇರುವವರು ಇದನ್ನು ಅನುಭವಿಸಬೇಕಾಗುತ್ತದೆ. ಅವರ ಮನಸ್ಥಿತಿ ಯಾವ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ನೀವು ಗೊಂದಲಕ್ಕೆ ಒಳಗಾಗಬಹುದು. ಅವರನ್ನು ಏಕಾಂಗಿಯಾಗಿ ಸ್ವಲ್ಪ ಹೊತ್ತು ಬಿಟ್ಟರೆ ಮತ್ತೆ ಸಾಮಾನ್ಯ ಸ್ಥಿತಿಗೆ ಮರಳುವರು. ಇನ್ನು ಕರ್ಕಾಟಕ ರಾಶಿಯವರೊಂದಿಗೆ ವಾದ ಮಾಡಲು ಹೋದಾಗ ನೀವು ಸೋಲುವುದು ಗ್ಯಾರಂಟಿ. ಅವರು ಸರಿಯಾ ಅಥವಾ ತಪ್ಪಾ ಎಂದು ಯೋಚಿಸುವುದಿಲ್ಲ. ಆದರೆ ವಾದವನ್ನು ಗೆಲ್ಲಲು ಅವರು ಬಯಸುತ್ತಾರೆ.

ಸಿಂಹ

ಸಿಂಹ

ಇದು ತುಂಬಾ ಅಧಿಪತ್ಯ ಸಾಧಿಸುವ ರಾಶಿಯಾಗಿದೆ. ಇವರು ಜನ್ಮತಃ ಪ್ರವರ್ತಕರು ಮತ್ತು ಅಧಿಕಾರ ನಡೆಸುವಂತಹ ವ್ಯಕ್ತಿತ್ವ ಹೊಂದಿರುವರು. ಇವರು ತುಂಬಾ ಪ್ರೇರಣೆ ಹೊಂದಿರುವರು ಮತ್ತು ಒಂದೇ ಸಲ ಎಲ್ಲಾ ಕೆಲಸವನ್ನು ಮಾಡಿ ಮುಗಿಸುವರು. ಇವರಲ್ಲಿನ ಮಾತಿನ ವರಸೆಯು ಬೇರೆಯವರ ನಿಲುವನ್ನೇ ಬದಲಾಯಿಸಿ ಬಿಡಬಹುದು. ಇವರು ತುಂಬಾ ಕೋಪಿಷ್ಠರಾಗಿರುವುದು ದೊಡ್ಡ ಹಿನ್ನಡೆ. ಇನ್ನು ಗ್ಲ್ಯಾಮರ್ ನ್ನು ಇಷ್ಟಪಡುವಂತಹ ಸಿಂಹ ರಾಶಿಯವರು ತಮ್ಮನ್ನು ಕಾಡಿನ ರಾಜನೆಂದು ಭಾವಿಸಿಕೊಂಡಿರುವರು. ಇವರು ಕಠಿಣ ಪರಿಸ್ಥಿತಿ ಬಗ್ಗೆ ಭೀತಿ ಪಡುವುದಿಲ್ಲ ಮತ್ತು ಈ ಪರಿಸ್ಥಿತಿ ಹೇಗೆ ನಿಭಾಯಿಸುವುದು ಎನ್ನುವ ಬಗ್ಗೆ ಆಲೋಚಿಸುವರು. ಅದಾಗ್ಯೂ, ಇನ್ನೊಂದು ಬದಿಯಲ್ಲಿ ಕೆಲವೊಂದು ಸಲ ತುಂಬಾ ಹೆಮ್ಮೆ ಪಟ್ಟುಕೊಳ್ಳುವುದು ಮತ್ತು ಆಕ್ರಮಣಶೀಲ ಪ್ರವೃತ್ತಿಯಿಂದ ಅವರ ಬಲವು ಅವರಿಗೆ ಮುಳುವಾಗುವುದು. ಸಿಂಹ ರಾಶಿಯವರ ಶಕ್ತಿಯು ಅವರ ಚರಿಷ್ಮಾದಲ್ಲಿ ಅಡಗಿದೆ. ಇನ್ನು ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಜನ್ಮತಃ ನಾಯಕರಾಗಿರುತ್ತಾರೆ. ಇವರು ವಿಶ್ವಾಸಿಗಳೂ, ಇತರರ ಮೇಲೆ ಪ್ರಭಾವ ಬೀರಬಲ್ಲವರೂ ಹಾಗೂ ಕ್ರಿಯಾತ್ಮಕರೂ ಆಗಿರುತ್ತಾರೆ ಹಾಗೂ ಜೀವನದಲ್ಲಿ ಎದುರಾಗುವ ಯಾವುದೇ ತೊಡಕುಗಳನ್ನು ಎದುರಿಸಿ ಜಯಗಳಿಸಲು ಯತ್ನಿಸುವ ಮೂಲಕ ಸದಾ ಜಯಶೀಲರಾಗಿರುತ್ತಾರೆ.

ಸಿಂಹ

ಸಿಂಹ

ಇವರ ನಿಷ್ಠೆ ಮತ್ತು ಔದಾರ್ಯ ಸ್ವಭಾವಗಳು ಅಲ್ಪಸಮಯದಲ್ಲಿಯೇ ಹೆಚ್ಚಿನ ಸ್ನೇಹಿತರನ್ನು ಪಡೆಯಲು ನೆರವಾಗುತ್ತದೆ. ವೈಯಕ್ತಿಕವಗಿ ಇವರು ಆಕರ್ಷಕ ಮತ್ತು ಭವ್ಯ ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೂ ಇವರು ಇತರರ ಮೇಲೆ ಸುಲಭವಾಗಿ ಪ್ರಭಾವ ಬೀರಬಲ್ಲವರಾಗಿರುತ್ತಾರೆ. ಇನ್ನು ಈ ರಾಶಿಯವರು ತಮ್ಮ ಮಾತನ್ನು ಯಾರಾದರೂ ಕೇಳುತ್ತಿಲ್ಲ ಎಂದಾದರೆ ತಕ್ಷಣವೇ ಕೋಪಗೊಳ್ಳುತ್ತಾರೆ. ಇವರು ತಕ್ಷಣಕ್ಕೆ ನಿರಾಶೆಯ ಭಾವ ಮತ್ತು ಆಶ್ಚರ್ಯಕರ ಪ್ರವೃತ್ತಿಗೆ ಒಳಗಾಗುತ್ತಾರೆ. ಇವರು ಒಂದು ರೀತಿಯ ಕಿರಿಕಿರಿಗೆ ಒಳಗಾದರೆ ಬಹಳ ಬೇಸರ ಹಾಗೂ ಅಸಮಧಾನಕ್ಕೆ ಒಳಗಾಗುತ್ತಾರೆ. ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದನ್ನು ಅವರು ಭಾವಿಸಿದರೆ ಸಿಟ್ಟಿಗೆ ಒಳಗಾಗುವರು. ಕೆಲವು ವಿಚಾರಗಳನ್ನು ಇವರೇ ನಿರ್ಲಕ್ಷಿಸುತ್ತಿದ್ದರೆ ಮಾನಸಿಕವಾಗಿ ಸಮಾಧಾನದಲ್ಲಿ ಇರುತ್ತಾರೆ.

ವೃಶ್ಚಿಕ

ವೃಶ್ಚಿಕ

ಈ ರಾಶಿಯವರನ್ನು ತುಂಬಾ ಉತ್ಕಟ ಎಂದು ಕರೆಯಲಾಗುತ್ತದೆ ಮತ್ತು ಇದರಿಂದ ತಮ್ಮ ಕನಸುಗಳನ್ನು ಈಡೇರಿಸಲು ಇವರಿಗೆ ಸಾಧ್ಯವಾಗುವುದು. ಇವರು ತುಂಬಾ ಉಗ್ರರಾಗಿದ್ದರೂ ಸಹಿತ ಸುತ್ತಲಿನ ಜನರು ಇವರನ್ನು ಇಷ್ಟಪಡುವರು. ಇವರು ಒಳ್ಳೆಯ ವಿಶ್ಲೇಷಣೆಗಾರರು ಮತ್ತು ಮೌಲ್ಯಮಾಪಕರಾಗಿರುವರು. ಇನ್ನು ವೃಶ್ಚಿಕ ರಾಶಿಯವರು ತುಂಬಾ ಪ್ರಬಲ ವ್ಯಕ್ತಿತ್ವದೊಂದಿಗೆ ಜನಿಸಿರುವರು. ಇವರಲ್ಲಿರುವಂತಹ ತೀವ್ರತೆಯು ಬೇರೆಯವರಿಗಿಂತ ಇವರನ್ನು ಭಿನ್ನವಾಗಿಡುವುದು. ಅದರಲ್ಲೂ ಭಾವನಾತ್ಮಕವಾಗಿ. ಇವರು ತಮ್ಮ ಇಚ್ಛಿಸಿದನ್ನು ಪಡೆದೇ ತೀರುವ ಜಾಯಮಾನದವರು. ವೃಶ್ಚಿಕ ರಾಶಿಯವರು ಬಲು ಬದ್ಧತೆ, ಸ್ಥಿರತೆ ಮತ್ತು ಗುರಿ ಸಾಧಿಸುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ. ಇನ್ನು ವೃಶ್ಚಿಕ ರಾಶಿಯವರ ಜತೆಗೆ ನೀವಿದ್ದರೆ ಆಗ ಶೀತ ಕಂಪನಗಳ ಅನುಭವ ನಿಮಗೆ ಆಗಿರಬಹುದು. ವೃಶ್ಚಿಕ ರಾಶಿಯವರು ತುಂಬಾ ಲೆಕ್ಕಾಚಾರದವರು ಮತ್ತು ತಾವು ಯಾರೊಂದಿಗೆ ಸ್ನೇಹ ಮಾಡಬೇಕೆಂದು ಕೂಡ ಅವರು ತುಂಬಾ ಯೋಚಿಸುವರು. ರಾಶಿಗಳಲ್ಲಿ ವೃಶ್ಚಿಕ ರಾಶಿಯವರು ತುಂಬಾ ಪ್ರಭಾವಶಾಲಿಗಳು ಎಂಧು ನಂಬಲಾಗಿದೆ. ಅವರ ನಡತೆಯು ಇದನ್ನು ತೋರಿಸಿಕೊಡುವುದು. ಅವರ ಒಳಮನಸ್ಸನ್ನು ತಿಳಿಯಬೇಕಾದರೆ ಅವರು ನಿಮ್ಮನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಬೇಕು. ನಿಮ್ಮನ್ನು ಅವರು ನಂಬಿದರೆ ಸಂಪೂರ್ಣ ಹೃದಯದಿಂದ ನಂಬುವರು.

ವೃಶ್ಚಿಕ

ವೃಶ್ಚಿಕ

ಇದರಿಂದಾಗಿ ಇತರ ರಾಶಿಯವರಿಗಿಂತ ಅವರು ತುಂಬಾ ಭಿನ್ನ. ವೃಶ್ಚಿಕ ರಾಶಿಯವರು ತುಂಬಾ ಬದ್ಧತೆ ಇರುವವರು ಮತ್ತು ಅವರಿಗೆ ತಮ್ಮ ಕೆಲಸದ ಬಗ್ಗೆ ಉತ್ಸಾಹ ಇರುವುದು. ಅವರು ಮಾಡುವಂತಹ ಯಾವುದೇ ಕೆಲಸದಲ್ಲಾದರೂ ಅವರು ಭಾವನಾತ್ಮಕವಾಗಿ ತೊಡಗಿಕೊಳ್ಳುವರು. ಇದರಿಂದಾಗಿ ಅವರು ಮಾಡುವಂತಹ ಪ್ರತಿಯೊಂದು ಕೆಲಸವು ಅದ್ಭುತವಾಗಿರುವುದು. ಅವರಲ್ಲಿ ಯಾವತ್ತೂ ಹೋರಾಡುವಂತಹ ಛಾತಿ ಇರುವುದು. ಸೋಲೊಪ್ಪಿಕೊಳ್ಳುವುದು ಅವರ ಜಾಯಮಾನದಲ್ಲೇ ಇಲ್ಲ. ತಮ್ಮ ಗುರಿ ಮುಟ್ಟಲು ಅವರಿಗೆ ವಿಳಂಬ ಅಥವಾ ಅಡೆತಡೆಯುಂಟಾದರೆ ಅವರು ಚಿಂತಿಸಲ್ಲ. ಅವರು ಯಾವಾಗಲೂ ತಮ್ಮ ಗುರಿ ತಲುಪಲು ಪ್ರಯತ್ನಿಸುತ್ತಲೇ ಇರುವರು. ಈ ರಾಶಿಯವರನ್ನು ಒಂದೇ ಪದದಲ್ಲಿ ಹೇಳುವುದಾದರೆ ಇವರು ತುಂಬಾ ಸ್ವಾವಲಂಬಿಗಳು. ಈ ರಾಶಿಯವರು ತಮ್ಮ ಕೆಲಸಕ್ಕಾಗಿ ಬೇರೆ ಯಾರನ್ನೂ ನಂಬಿ ಕೂರಲ್ಲ. ಅವರು ತಾವಾಗಿಯೇ ಕೆಲಸ ಮಾಡುವರು ಮತ್ತು ತಮಗೆ ಸಾಧ್ಯವಿರುವುದನ್ನು ಸಾಧಿಸಿಯೇ ತೀರುವರು.

ಕುಂಭ

ಕುಂಭ

ಕುಂಭ ರಾಶಿಯವರ ಜಾಣ್ಮೆಯಿಂದಾಗಿ ಇವರು ತುಂಬಾ ಪ್ರಭಾವಶಾಲಿ ರಾಶಿಯವರೆಂದು ಪರಿಗಣಿಸಲಾಗುತ್ತದೆ. ಇವರು ತಮ್ಮ ವಯಸ್ಸಿಗೂ ಮೀರಿ ಜಾಣ್ಮೆ ಹೊಂದಿರುವರು ಮತ್ತು ಇದಕ್ಕೆ ಸುಲಭವಾಗಿ ಪರಿಹಾರ ಕಂಡುಕೊಳ್ಳುವರು. ಇವರು ಯಾವುದೇ ಕೆಟ್ಟ ಪರಿಸ್ಥಿತಿಯಿಂದ ಬೇಗನೆ ಹೊರಬರುವರು. ಇನ್ನು ಈ ರಾಶಿಯ ಅಧಿಪತಿ ಶನಿಯಾಗಿದ್ದು ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ಸ್ವತಂತ್ರ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಹಾಗೂ ತಮ್ಮದೇ ವಿಚಾರಗಳನ್ನು ಮಂಡಿಸುತ್ತಾರೆ.ಇವರು ಹೆಚ್ಚು ಪ್ರತ್ಯಕ್ಷಜನಿತರೂ ಹಾಗೂ ಪ್ರತಿಫಲಾಪೇಕ್ಷಿಗಳೂ ಆಗಿರುತ್ತಾರೆ. ಇವರು ಜನ್ಮತಃ ಸಮಾಜದ ಕುಂದು ಕೊರತೆಗಳನ್ನು ಪ್ರಶ್ನಿಸುವ ಎದೆಗಾರಿಕೆ ಹೊಂದಿರುತ್ತಾರೆ ಹಾಗೂ ದೂರ ದೃಷ್ಟಿಯುಳ್ಳ ವರಾಗಿರುತ್ತಾರೆ. ಈ ಕಾರಣಗಳಿಂದ ಇವರಿಗೆ ಜಾಣರು ಎಂಬ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ.

English summary

Powerful Zodiac Signs & Their Hidden Traits

Being born under a powerful zodiac sign is a boon for many. There are 5 specific zodiac signs, which are claimed to be very powerful. Here, we bring to you the list of the most powerful zodiac signs. So, check out if your zodiac sign also falls in this category and if it does, then we bet you are lucky enough! Check out the list.
Story first published: Friday, June 15, 2018, 10:59 [IST]
X
Desktop Bottom Promotion