For Quick Alerts
ALLOW NOTIFICATIONS  
For Daily Alerts

ಈ ಗ್ರಾಮದ ಜನರು ಹಾವಿನೊಂದಿಗೆ ವಾಸಿಸುತ್ತಾರೆ! ಅದರೊಟ್ಟಿಗೆಯೇ ಆಟವಾಡುತ್ತಾರೆ!!

|

ವನ್ಯ ಜೀವಿಗಳು ಹಾಗೂ ಸರಿಸ್ರಪಗಳು ಎಂದರೆ ಒಂದು ರೀತಿಯ ಭಯ. ಅವುಗಳನ್ನು ದೂರಿನಿಂದ ನೋಡುತ್ತಿದ್ದರೆ ಸಾಕು ಒಂದು ಬಗೆಯ ಆತಂಕಗಳು ನಮ್ಮನ್ನು ಆವರಿಸಿ ಬಿಡುತ್ತವೆ. ಇನ್ನು ಅವುಗಳೊಂದಿಗೆ ಕಾಲ ಕಳೆಯುವುದು ಎಂದರೆ ಅದೊಂದು ಕನಸಿನ ಮಾತು. ಅದರಲ್ಲೂ ಹಾವಿನಂತಹ ವಿಷ ಪೂರಿತ ಜೀವಿಗಳು ಒಮ್ಮೆ ಕಡಿದರೆ ಸಾಕು ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆಗಳೇ ಹೆಚ್ಚು. ಕೆಲವೊಂದು ಜಾತಿಯ ಹಾವುಗಳ ಎಂಜಲು ತಾಗಿದರೂ ದೇಹದ ಭಾಗಗಳು ಕೊಳೆಯಲು ಪ್ರಾರಂಭವಾಗುತ್ತವೆ. ಹಾಗಾಗಿ ಮನುಷ್ಯರು ಆದಷ್ಟು ಇಂತಹ ಪ್ರಾಣಿಗಳಿಂದ ದೂರ ಇರಲು ಬಯಸುತ್ತಾರೆ.

ಆದರೆ ಇಲ್ಲೊಂದು ಹಳ್ಳಿಯಿದೆ. ಆ ಹಳ್ಳಿಯ ಜನರೆಲ್ಲಾ ಹಾವುಗಳೊಂದಿಗೆ ಜೀವಿಸುತ್ತಾರೆ. ಹಾವುಗಳು ಅವರ ಮೈಮೇಲೆ ಹರೆದಾಡುತ್ತಾ ಇದ್ದರೂ ಅವರಿಗೆ ಏನೂ ಮಾಡದು. ಚಿಕ್ಕ ಮಕ್ಕಳು ಹಾಗೂ ದೊಡ್ಡವರು ಎನ್ನುವ ಯಾವುದೇ ತಾರತಮ್ಯವಿಲ್ಲ. ಎಲ್ಲರೂ ಹಾವಿನೊಂದಿಗೆ ಸಮಯವನ್ನು ಕಳೆಯುತ್ತಾರೆ.

ಈ ವಿಚಾರ ನಂಬಲು ಸ್ವಲ್ಪ ಕಷ್ಟವಾದರೂ ಇದು ನಿಜ. ಹೌದು, ಮಹಾರಾಷ್ಟ್ರದ ಪುಣೆಯ ಸಮೀಪದಲ್ಲಿ ಇರುವ ಶೆಟ್ಟಪಾಲ್ ಹಳ್ಳಿಯ ಜನರು ಹಾವಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಮಹಾರಾಷ್ಟ್ರದಲ್ಲಿ ಹಾವಾಡಿಗರ ಸಂಖ್ಯೆ ಹೆಚ್ಚೆಂದು ಹೇಳಲಾಗುವುದು. ಶುಷ್ಕ ವಾತಾವರಣವನ್ನು ಹೊಂದಿರುವ ಈ ಪ್ರದೇಶದಲ್ಲಿ ಹಾವುಗಳ ಸಂಖ್ಯೆಯು ಅಧಿಕವಾಗಿವೆ. ಇಲ್ಲಿ ವಿವಿಧ ಬಗೆಯ ಹಾವುಗಳು ಓಡಾಡುತ್ತಿರುತ್ತವೆ. ಆ ಹಾವುಗಳನ್ನು ಯಾರು ಏನು ಮಾಡುವುದಿಲ್ಲ.

ಜೊತೆಗೆ ಹಾವುಗಳು ಸಹ ಮನುಷ್ಯರಿಗೆ ಯಾವುದೇ ಹಾನಿಯುಂಟುಮಾಡುವುದಿಲ್ಲ. ಇಲ್ಲಿಯ ಜನರು ಹಾವನ್ನು ಮನೆಯೊಳಗೆ ಸ್ವಾಗತಿಸುತ್ತಾರೆ. ಹಾವುಗಳು ಬಹಳಷ್ಟು ಸಮಯ ಮನೆಯೊಳಗೆ ಓಡಾಡಿಕೊಂಡು ಇರುತ್ತವೆ ಎನ್ನುತ್ತಾರೆ.

ನಿತ್ಯವೂ ಹಾವಿಗೆ ಪೂಜೆ ಮಾಡುತ್ತಾರೆ

ನಿತ್ಯವೂ ಹಾವಿಗೆ ಪೂಜೆ ಮಾಡುತ್ತಾರೆ

ಶೋಲಾಪುರ ಜಿಲ್ಲೆಯ ಆವೃತ್ತಿಯಲ್ಲಿ ಬರುವ ಈ ಹಳ್ಳಿಯ ಜನರು ನಿತ್ಯವೂ ಹಾವಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಈ ಹಳ್ಳಿಯಲ್ಲಿ ಸರಿ ಸುಮಾರು 2500 ಮಂದಿ ಜನಸಂಖ್ಯೆಯನ್ನು ಹೊಂದಿದೆ. ಆದರೆ ಇಲ್ಲಿರುವ ಈ ಪದ್ಧತಿಗಳು ಎಂದಿನಿಂದ ಆರಂಭವಾಗಿದೆ ಎನ್ನುವುದನ್ನು ಯಾರೂ ತಿಳಿದಿಲ್ಲ.

ಹಾವಿಗೊಂದು ಸ್ಥಾನದ ಕೋಣೆ!

ಹಾವಿಗೊಂದು ಸ್ಥಾನದ ಕೋಣೆ!

ಈ ಹಳ್ಳಿಯಲ್ಲಿ ಹೊಸದಾಗಿ ಮನೆ ಕಟ್ಟುವವರು ಸಹ ಹಾವಿಗಾಗಿ ಮನೆಯಲ್ಲೊಂದು ವಿಶೇಷ ಪೊಟರೆಯನ್ನು ಮಾಡಿರುತ್ತಾರೆ ಎಂದು ಹೇಳಲಾಗುತ್ತದೆ. ಅದು ಹಾವಿಗೆ ವಿಶ್ರಾಂತಿ ಪಡೆಯಲು ಮಾಡುವ ವ್ಯವಸ್ಥೆ ಎನ್ನುತ್ತಾರೆ. ಹಾವಿಗಾಗಿ ಮಾಡಿರುವ ವಿಶೇಷ ಪೊಟರೆಯನ್ನು ದೇವಸ್ಥಾನ ಎಂದು ಸಹ ಕರೆಯುತ್ತಾರೆ. ಇದು ಕೇವಲ ನಾಗರಹಾವಿಗಷ್ಟೇ ಅಲ್ಲ. ಪ್ರಾಣಾಂತಿಕ ಹಾವುಗಳಿಗೂ ಅವಕಾಶ ನೀಡಲಾಗುವುದು. ಎಲ್ಲಾ ಹಾವುಗಳು ಸ್ವತಂತ್ರವಾಗಿ ಓಡಾಡುತ್ತವೆ.

ಮಕ್ಕಳೊಂದಿಗೆ ಆಟ!

ಮಕ್ಕಳೊಂದಿಗೆ ಆಟ!

ಮಕ್ಕಳು ಹಾವುಗಳನ್ನು ಕಂಡರೆ ಭಯಪಡುವುದಿಲ್ಲ. ಅವುಗಳೊಂದಿಗೂ ಆಡುತ್ತಾರೆ. ಶಾಲೆಯ ಕೊಠಡಿಗಳಲ್ಲೂ ಹಾವುಗಳ ವಾಸವಿರುತ್ತದೆ ಎಂದು ಹೇಳಲಾಗುತ್ತದೆ.

ಸಿಂಧೇಶ್ವರ ದೇವಸ್ಥಾನ

ಸಿಂಧೇಶ್ವರ ದೇವಸ್ಥಾನ

ಈ ಹಳ್ಳಿಯಲ್ಲಿ ಸಿಂಧೇಶ್ವರ ಎನ್ನುವ ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಏಳು ತಲೆಯ ಹಾವು ಶಿವನ ವಿಗ್ರಹದ ಮೇಲೆ ಇರುವಂತಹ ವಿಗ್ರಹವಿದೆ. ಹಳ್ಳಿಯಲ್ಲಿ ಯಾರಿಗಾದರೂ ಹಾವು ಕಚ್ಚಿದರೆ ಈ ದೇವಸ್ಥಾನಕ್ಕೆ ಬಂದರೆ ಕಡಿಮೆಯಾಗುತ್ತದೆ ಎಂದು ಗ್ರಾಮಸ್ಥರು ನಂಬಿಕೆಯಿಟ್ಟಿದ್ದಾರೆ. ಗ್ರಾಮಸ್ಥರು ಹೇಳುವ ಪ್ರಕಾರ ಈ ವರೆಗೆ ಯಾವುದೇ ಹಾವು ಮನುಷ್ಯರಿಗೆ ಕಡಿದಿಲ್ಲ ಎನ್ನುತ್ತಾರೆ.

 ಹಾವುಗಳು ಪುರಾಣ ಇತಿಹಾಸದಿಂದಲೂ ವಿಶೇಷವಾದ ಪವಿತ್ರತೆಯನ್ನು ಪಡೆದುಕೊಂಡಿದೆ

ಹಾವುಗಳು ಪುರಾಣ ಇತಿಹಾಸದಿಂದಲೂ ವಿಶೇಷವಾದ ಪವಿತ್ರತೆಯನ್ನು ಪಡೆದುಕೊಂಡಿದೆ

ಭಾರತೀಯ ಕಥೆ ಪುರಾಣಗಳ ಪ್ರಕಾರ ನಾಗರ ಹಾವನ್ನು ಬಹಳ ಪವಿತ್ರವಾದ ಹಾವು ಎಂದು ಪರಿಗಣಿಸಲಾಗುತ್ತದೆ. ಹಾವು ಶಿವನ ಸಂಕೇತ ಎಂದು ಕರೆಯಲಾಗುವುದು. ಹಾವು, ಜನ್ಮ, ಪುನರ್ಜನ್ಮ ಮತ್ತು ಮರಣಗಳನ್ನು ಪ್ರತಿನಿಧಿಸುತ್ತದೆ. ಹಾವು ಎಂಟು ಅವತಾರವನ್ನು ತಾಳಿದೆ. ವಿಷ್ಣುವು ಆದಿಶೇಷನ ಮೇಲೆ ಮಲಗಿ ನಿದ್ರಿಸುತ್ತಾನೆ ಎನ್ನಲಾಗುವುದು. ಅಲ್ಲದೆ ಹಾವುಗಳು ಪುರಾಣ ಇತಿಹಾಸದಿಂದಲೂ ವಿಶೇಷವಾದ ಪವಿತ್ರತೆಯನ್ನು ಪಡೆದುಕೊಂಡಿದೆ ಎಂದು ಹೇಳಲಾಗುವುದು.

ಹಳ್ಳಿಗೆ ಭೇಟಿ

ಹಳ್ಳಿಗೆ ಭೇಟಿ

ಈ ಹಳ್ಳಿಗೆ ಭೇಟಿ ನೀಡಬೇಕು ಎಂದುಕೊಂಡಿದ್ದರೆ ಪುಣೆಯ ವಿಮಾನ ನಿಲ್ದಾಣಕ್ಕೆ ಹತ್ತಿರದಲ್ಲಿರುವ ರೈಲ್ವೆ ನಿಲ್ದಾಣದ ಸಂಪರ್ಕಗಳ ಮೂಲಕ ಹಳ್ಳಿಯನ್ನು ತಲುಪಬಹುದು. ಆದರೆ ಹಳ್ಳಿಗೆ ಭೇಟಿ ನೀಡಲು ನಿಮಗೆ ಧೈರ್ಯ ಇದೆಯೇ ಎನ್ನುವುದನ್ನು ಮೊದಲು ಕಚಿತಪಡಿಸಿಕೊಳ್ಳಿ. ಹಳ್ಳಿಯಲ್ಲಿ ಹಾವುಗಳು ಕಡಿಯುವುದಿಲ್ಲ. ಅವುಗಳ ಬಗ್ಗೆ ಯಾವುದೇ ಆರೋಪಗಳನ್ನು ಮಾಡಬಾರದು ಎಂದು ಜನರು ಬಯಸುತ್ತಾರೆ.

Image Courtesy

ವನ್ಯ ಜೀವಿಯ ಕಾಯ್ದೆ ಪ್ರಕಾರ

ವನ್ಯ ಜೀವಿಯ ಕಾಯ್ದೆ ಪ್ರಕಾರ

ಹಾವು ಹಾಲನ್ನು ಕುಡಿಯುವುದಿಲ್ಲ. ಹಾಲನ್ನು ಜೀರ್ಣಿಸಿಕೊಳ್ಳುವ ಶಕ್ತಿಯೂ ಇರುವುದಿಲ್ಲ ಎಂದು ಹೇಳಲಾಗುವುದು. ಭಾವನಾತ್ಮಕ ಜೀವಿ ಹಾವು. ಅವು ಬೆದರಿಕೆಯನ್ನು ಅನುಭವಿಸಿದಾಗ ಆಕ್ರಮಣಶೀಲ ಪ್ರವೃತ್ತಿಯನ್ನು ತೋರುತ್ತವೆ. ಹಾಗೆಯೇ ಪರಿಸ್ಥಿತಿಗೆ ಅವಲಂಬಿತರಾಗಿ ಶಾಂತವಾಗಿ ಇರುತ್ತಾರೆ. ಹಾವು ಸಾಕು ಪ್ರಾಣಿಗಳಲ್ಲ. ಅವು ವನ್ಯ ಜೀವಿಗಳು. ವನ್ಯ ಜೀವಿಯ ಕಾಯ್ದೆ ಪ್ರಕಾರ 1972ರ ಅಡಿಯಲ್ಲಿ ಹಾವುಗಳನ್ನು ರಕ್ಷಿಸಲಾಗುವುದು. ಕೋಬ್ರಾಸ್, ಪೈಥಾನ್ಸ್, ಸ್ಯಾಂಡ್ ಬೋಯಾಸ್ ಹಾವುಗಳು ಅಳಿವಿನಂಚಿನಲ್ಲಿವೆ.

ಹಾವಿನ ಕೋರೆ ಹಲ್ಲುಗಳ ಬಳಿ ವಿಷದ ಚೀಲವಿರುತ್ತವೆ

ಹಾವಿನ ಕೋರೆ ಹಲ್ಲುಗಳ ಬಳಿ ವಿಷದ ಚೀಲವಿರುತ್ತವೆ

ಹಾವಿನ ಕೋರೆ ಹಲ್ಲುಗಳ ಬಳಿ ವಿಷದ ಚೀಲವಿರುತ್ತವೆ. ಅವು ಕತ್ತರಿಸಿ ಹೋದರೆ ಏನನ್ನು ತಿನ್ನುವುದಿಲ್ಲ. ಹಾಗೆಯೇ ಹಾವುಗಳು ಸಾವನ್ನಪ್ಪುಯತ್ತವೆ ಎಂದು ಹೇಳಲಾಗುವುದು. ಹಾವುಗಳು ಚಲನಚಿತ್ರದಲ್ಲಿ ತೋರಿಸುವ ರೀತಿಯಲ್ಲಿ 12 ವರ್ಷಗಳ ಸೇಡನ್ನು ಹೊಂದಿರುವುದಿಲ್ಲ. ಹಾಗೆಯೇ ಹಾವಿನ ತಲೆಯ ಮೇಲೆ ವಜ್ರದ ಮಣಿ ಇರುವುದಿಲ್ಲ. ಅದರ ಬೆನ್ನತ್ತಿ ಹೋಗದಿರಿ.

ಹಾವನ್ನು ಬಹುತೇಕ ಜನರು ದುರುಪಯೋಗ ಪಡಿಸಿಕೊಳ್ಳುತ್ತಾರೆ

ಹಾವನ್ನು ಬಹುತೇಕ ಜನರು ದುರುಪಯೋಗ ಪಡಿಸಿಕೊಳ್ಳುತ್ತಾರೆ

ಹಾವಿನ ವ್ಯಾಪಾರ ಬಹಳ ಬೆಲೆಬಾಳುತ್ತವೆ. ಹಾವಿನ ಚರ್ಮವನ್ನು ಜನರು ವಿವಿಧ ಉಪಯೋಗಗಳಿಗೆ ಬಳಸಿಕೊಳ್ಳುತ್ತಾರೆ. ಹಾಗಾಗಿಯೇ ಹಾವು ಮಂಗಳಕರ ಎಂದು ಭಾವಿಸುತ್ತಾರೆ. ಕೆಲವೆಡೆ ಬಾರ್ ಗಳಲ್ಲಿ ಹಾವನ್ನು ಬಳಸಿ ಮಧ್ಯಗಳನ್ನು ಶೇಖರಿಸಿಡುತ್ತಾರೆ ಎಂದು ಸಹ ಹೇಳಲಾಗುವುದು. ಹಾವನ್ನು ಬಹುತೇಕ ಜನರು ದುರುಪಯೋಗ ಪಡಿಸಿಕೊಳ್ಳುತ್ತಾರೆ. ಈ ಕುರಿತು ಸಾಕಷ್ಟು ಎಚ್ಚರಿಕೆಯಿಂದ ಇರಬೇಕು

English summary

People Actually Live With Snakes At This Village In India!

It is really unbelievable – it is strange to even think of a place where people live with snakes and are not scared of them even a bit. Such a village exists in Maharashtra! Shetpal – a village in India where people practically live with snakes is a real place near Pune, Maharashtra. Yes, really! Shetpal is roughly 200kms from Pune, Maharashtra is the land of snake charmers. Due to the region’s dry and arid environment
Story first published: Tuesday, August 14, 2018, 17:06 [IST]
X
Desktop Bottom Promotion