ಈ 4 ರಾಶಿಯವರು ಅತ್ಯಂತ ಭಾವೋದ್ರಿಕ್ತ ರಾಶಿಚಕ್ರದವರು

Posted By: Deepu
Subscribe to Boldsky

ಸಂಬಂಧ ಎನ್ನುವುದು ಬಹಳ ಪವಿತ್ರವಾದದ್ದು. ಇದು ಒಬ್ಬರಿಗೊಬ್ಬರು ಹೊಂದಿಕೊಂಡು ಬಾಳುವ ಬಂಧದ ಬೆಸುಗೆಯಾಗಿರುತ್ತದೆ. ಈ ಬೆಸುಗೆಯಲ್ಲಿ ತಮ್ಮ ಭಾವನೆಗಳನ್ನು ಹೂಡಿ ಪ್ರೀತಿಯ ಜೀವನ ನಡೆಸಲಾಗುಗುವುದು. ಇಂತಹ ಒಂದು ಸುಮಧುರ ಬಂಧನದಲ್ಲಿ ಒಮ್ಮೆ ಮೋಸ ಅಥವಾ ವೈಮನಸ್ಸು ಮೂಡಿತು ಎಂದರೆ ಆ ಬಂಧನ ಕಳಚುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಸಂಬಂಧವನ್ನು ಉಳಿಸಿಕೊಳ್ಳುವುದು ಅಥವಾ ಪ್ರೀತಿಯಿಂದ ನೋಡಿಕೊಳ್ಳುವುದು ನಮ್ಮ ಕೈಯಲ್ಲಿ ಇರುತ್ತದೆ ಎನ್ನಬಹುದು.

ಈ ಒಂದು ವಿಸ್ಮಯ ಬಂಧನಕ್ಕೆ ಪ್ರೀತಿಯ ಎರಕ ಹೊಯ್ಯಲು ವ್ಯಕ್ತಿಯಲ್ಲಿ ಭಾವನೆ ಎನ್ನುವ ಪ್ರಮುಖ ಗುಣ ಅಗತ್ಯವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಅತ್ಯಂತ ಭಾವೋದ್ರಿಕ್ತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಜೊತೆಗೆ ತಮ್ಮ ಸಂಗಾತಿಯೊಂದಿಗಿನ ಬಂಧದಲ್ಲಿ ಆಳವಾದ ಭಾವವನ್ನು ತರುತ್ತಾರೆ. ಅದು ಅವರ ಪ್ರೀತಿಯ ಜೀವನದ ಯಶಸ್ಸಿನ ಗುಟ್ಟು ಎಂದು ಸಹ ಹೇಳಬಹುದು. ಹಾಗಾದರೆ ಆ ರಾಶಿಚಕ್ರಗಳು ಯಾವವು? ಅವುಗಳ ಸ್ವಭಾವ ಹೇಗಿರುತ್ತದೆ ಎನ್ನುವ ಸೂಕ್ತ ಮಾಹಿತಿಯನ್ನು ಬೋಲ್ಡ್ ಸ್ಕೈ ಈ ಮುಂದೆ ವಿವರಿಸಿದೆ....

ವೃಶ್ಚಿಕ

ವೃಶ್ಚಿಕ

ಈ ರಾಶಿಚಕ್ರವು ನೀರಿನ ಚಿಹ್ನೆಯನ್ನು ಒಳಗೊಂಡಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯ ವ್ಯಕ್ತಿಗಳು ಹೆಚ್ಚು ಭಾವೋದ್ರಿಕ್ತ ಸ್ವಭಾವವನ್ನು ಹೊಂದಿರುತ್ತಾರೆ. ಇವರಿಗೆ ಬಲವಾದ ಇಚ್ಛಾಶಕ್ತಿಯಿರುತ್ತದೆ. ಅದು ಕೆಲವೊಮ್ಮೆ ತೀವ್ರತೆಯನ್ನು ಸಹ ಪಡೆದು ಕೊಳ್ಳಬಹುದು. ಇದು ಅವರ ಸಂಗಾತಿ ಅಥವಾ ಪ್ರೇಮಿಯ ಮೇಲೂ ಪ್ರಭಾವ ಬೀರಬಹುದು. ಇವರ ಸಂಗಾತಿ/ಪ್ರೇಮಿಗಳ ನಡುವಿನ ಸಂಬಂಧದಲ್ಲಿ ಸದಾ ವಿಸ್ಮಯತೆ ಇರುತ್ತದೆ. ಇದರೊಟ್ಟಿಗೆ ಇವರು ವಿಶೇಷವಾದ ಇಂದ್ರಿಯತೆ ಹೊಂದಿರುತ್ತಾರೆ. ಜೊತೆಗೆ ತಮ್ಮ ಸಂಗಾತಿಯಿಂದಲೂ ಅದನ್ನೇ ಪಡೆದುಕೊಳ್ಳಲು ಬಯಸುತ್ತಾರೆ.

ಧನು

ಧನು

ಹೊಸ ಅನುಭವಗಳಿಂದ ಇವರು ತಮ್ಮ ಪ್ರೀತಿಪಾತ್ರರೊಂದಿಗೆ ಉತ್ಸಾಹದಲ್ಲಿ ಇರುತ್ತಾರೆ. ಜೀವನದ ಪ್ರತಿಯೊಂದು ದಿನವೂ ವಿಶಿಷ್ಟತೆಯಿಂದ ಕೂಡಿರುವಂತೆ ನೋಡಿಕೊಳ್ಳುತ್ತಾರೆ. ಇವರು ಲೋಕೀಯ ಸಂಗತಿಗಳೊಂದಿಗೆ ಕೆಲ ಸಾಹಸಗಳನ್ನು ಮಾಡಲು ಬಯಸುತ್ತಾರೆ. ಅದು ಹಾಳೆಗಳ ಮೇಲೆ ಬರೆಯುವ ವಿಚಾರವಾದರೂ ಸರಿ. ಪಾಲುದಾರರೊಂದಿಗೆ ಸಂತೋಷದಿಂದ ಉಳಿದುಕೊಳ್ಳುವ ವಿಭಿನ್ನ ಸ್ಥಾನಗಳನ್ನು ಮತ್ತು ತಂತ್ರಗಳನ್ನು ಅನ್ವೇಷಿಸುತ್ತಲೇ ಇರುತ್ತಾರೆ. ಈ ರಾಶಿಯವರು ತಮ್ಮ ಪಾಲುದಾರರನ್ನು ಸಂತೋಷದಲ್ಲಿಟ್ಟುಕೊಳ್ಳುವುದನ್ನು ಬಯಸುತ್ತಾರೆ.

ಮಕರ

ಮಕರ

ಈ ರಾಶಿಚಕ್ರದವರು ಸ್ವಲ್ಪ ಅಂತರ ಹಾಗೂ ಶಾಂತ ಚಿತ್ತದಿಂದ ಇರಲು ಬಯಸುವ ವ್ಯಕ್ತಿಗಳು ಎಮದು ಹೇಳಬಹುದು. ಆತ್ಮ ವಿಶ್ವಾಸವನ್ನು ಹೊಂದಿರುವ ಇವರು ಅತ್ಯಂತ ಭಾವೋದ್ರಿಕ್ತ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಸಂಗಾತಿಯೊಂದಿಗೆ ಮಹಾನ್ ಪ್ರೇಮಿಯಾಗಿಯೂ ಇರುತ್ತಾರೆ ಎಂದು ಹೇಳಬಹುದು. ಇವರು ಹೊಂದಿರುವ ಭಾವೋದ್ರೇಕವು ಹೆಚ್ಚಾಗಿ ವಿಶ್ವಾಸಾರ್ಹ ಸಂಬಂಧಕ್ಕೆ ಮೀಸಲಾಗಿರುತ್ತದೆ. ಇತರರೊಂದಿಗೆ ಈ ವಿಶ್ವಾಸವನ್ನು ನಿರ್ಮಿಸಲು ಅಧಿಕ ಸಮಯವನ್ನು ತೆಗೆದುಕೊಳ್ಳುವುದು. ಒಮ್ಮೆ ಇವರು ನಂಬಿದರೆ ಅತ್ಯಂತ ಪ್ರೀತಿಯಿಂದ ಕಾಣುತ್ತಾರೆ.

ಮೇಷ

ಮೇಷ

ಈ ರಾಶಿಯವರು ಪ್ರೇಮಿಗಳಂತೆ ನೇರ ಮತ್ತು ನಿಕಟತೆಯನ್ನು ಹೊಂದಿರುತ್ತಾರೆ. ಭೌತಿಕ ಸಂಪರ್ಕವನ್ನು ಸಂಪೂರ್ಣವಾಗಿ ಆನಂದಿಸಲು ಇವರು ಬಯಸುತ್ತಾರೆ. ಇವರು ಹಾಸಿಗೆಯಲ್ಲಿ ಅತ್ಯಂತ ಶಕ್ತಿಯುತ ಮತ್ತು ಪ್ರಬಲ ವಿಶಿಷ್ಟತೆಯನ್ನು ಹೊಂದಿರುತ್ತಾರೆ. ಇವರ ಭಾವೋದ್ರೇಕವು ಉರಿಯುತ್ತಿರುವ ಒಂದು ಬಂಧದಂತೆ ಇರುವುದು. ಏಕೆಂದರೆ ಇವರು ಪ್ರೀತಿಯಲ್ಲಿರುವಾಗ ಇತರರು ಏನು ಯೋಚಿಸುತ್ತಾರೆ ಎನ್ನುವುದರ ಬಗ್ಗೆ ಚಿಂತಿಸುವುದಿಲ್ಲ. ಇವರಂತೆಯೇ ಯಾರು ಹೆಚ್ಚು ಭಾವೋದ್ರಿಕ್ತತೆಯನ್ನು ಹೊಂದಿರುತ್ತಾರೋ ಅಂತಹವರನ್ನೇ ಪಾಲುದಾರರನ್ನಾಗಿ ಪಡೆಯಲು ಬಯಸುತ್ತಾರೆ. ಇವರು ಅನಿರೀಕ್ಷಿತ ಪ್ರವಾಸಗಳ ಮೂಲಕ ಸಂಗಾತಿಯೊಂದಿಗಿನ ಬಂಧವನ್ನು ಹೆಚ್ಚಿಸುವರು.

English summary

passionate-zodiac-signs-listed-according-to-their-ranking

In astrology, there are a few zodiac signs which are considered to be more passionate than the others. The individuals of these zodiac signs are said to be emotionally passionate and they bring in a deep feeling of bonding with their partners.Here, in this article, we are revealing to you the list of the most passionate zodiac signs that you need to know about.These listed zodiac signs perfectly know on how to ignite the passion with their partners. Check out if your zodiac sign is listed here...