For Quick Alerts
ALLOW NOTIFICATIONS  
For Daily Alerts

ಭಾರತೀಯ ತಾಯಂದಿರು ಮಾತ್ರ ನೀಡಬಲ್ಲ 6 ವಿಶೇಷ ಸಲಹೆಗಳಿವು

|

ಭಾರತೀಯ ಮಹಿಳೆಯರು ಅಥವಾ ತಾಯಂದಿರು ಇತರ ದೇಶದ ಮಹಿಳೆಯರಿಗಿಂತ ವಿಭಿನ್ನ ಸ್ವಭಾವವನ್ನು ಹೊಂದಿರುತ್ತಾರೆ. ಪ್ರೀತಿ, ವಾತ್ಸಲ್ಯ, ತ್ಯಾಗ ಮತ್ತು ಆರೈಕೆಯ ವಿಚಾರದಲ್ಲಿ ಇವರಿಗೆ ಸರಿಸಮನಾದವರು ಯಾರು ಇಲ್ಲ ಎಂದೇ ಹೇಳಬಹುದು. ತಮ್ಮ ಕುಟುಂಬಕ್ಕಾಗಿ ಹಾಗೂ ನಮ್ಮವರಿಗಾಗಿ ತಮ್ಮ ಸಮಯವನ್ನು ಮೀಸಲಿಡುತ್ತಾರೆ. ಕುಟುಂಬ ಮತ್ತು ಕುಟುಂಬದ ಸದಸ್ಯರ ಏಳಿಗೆ ಹಾಗೂ ಅವರ ಪಾಲನೆಯೇ ಅವರ ಪ್ರಮುಖ ಗುರಿ. ಇವುಗಳ ನಂತರ ತಮ್ಮ ಜೀವನದ ಇತರ ವಿಚಾರಗಳಿಗೆ ಆಧ್ಯತೆ ನೀಡುವರು.

ಅದರಲ್ಲೂ ಒಂದು ಮಗುವಾದ ನಂತರ ಆ ಮಗುವಿನ ಲಾಲನೆ ಮತ್ತು ಪಾಲನೆಯಲ್ಲಿಯೇ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುವರು. ಮಗುವಿನ ಆರೈಕೆಯ ನಡುವೆ ತಮ್ಮ ಆರೋಗ್ಯ ಹಾಗೂ ದೇಹ ಸ್ಥಿತಿಯ ಬಗ್ಗೆ ಹೆಚ್ಚು ಚಿಂತನೆಯನ್ನು ಮಾಡುವುದಿಲ್ಲ. ಹಾಗಾಗಿಯೇ ಪೋಷಕಾಂಶದ ಕೊರತೆ, ಸ್ಥೂಲಕಾಯ ಸೇರಿದಂತೆ ಇನ್ನಿತ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಲಿರುತ್ತಾರೆ. ಎಂದು ಮಗು ಪ್ರೌಢಾವಸ್ಥೆಗೆ ಕಾಲಿಡುತ್ತದೆಯೋ ಅಂತಹ ಸಂದರ್ಭದಲ್ಲಿ ಇವರ ಆರೋಗ್ಯದ ಮಟ್ಟ ವಿಪರೀತವನ್ನು ಮೀರಿರುತ್ತದೆ. ಆಗ ತಮ್ಮ ಆರೋಗ್ಯದ ಬಗ್ಗೆ ಅಥವಾ ವ್ಯಕ್ತಿತ್ವದ ಬಗ್ಗೆ ಚಿಂತನೆ ನೀಡಲು ಯೋಚಿಸುತ್ತಾರೆ.

ಮಹಿಳೆಯರ ಮನಃಸ್ಥಿತಿ

ಸಾಕಷ್ಟು ಸಮಯಗಳು ಕಳೆದ ಮೇಲೆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಾರಂಭಿಸುತ್ತಾರೆ. ಹಾಗಂತ ಇವರು ಸ್ವಭಾವತಹ ದಡ್ಡರು ಅಥವಾ ಮುಗ್ಧರು ಎಂದರ್ಥವಲ್ಲ. ಭಾರತೀಯ ಮಹಿಳೆಯರು ಕೇವಲ ಯಾವುದೋ ಒಂದು ಸೀಮಿತ ವಿಚಾರದಲ್ಲಷ್ಟೇ ಅಲ್ಲ, ಅನೇಕ ವಿಚಾರಗಳಲ್ಲಿ ತಮ್ಮದೇ ಆದ ನಿಲುವನ್ನು ಹೊಂದಿರುತ್ತಾರೆ. ಅದು ಕೆಲವೊಮ್ಮೆ ಅಜ್ಞಾನ ಅನಿಸಬಹುದು, ತಮಾಷೆ ಅನಿಸಬಹುದು ಅಥವಾ ಮೊಂಡುತನ ಎಂತಲು ಅನಿಸಬಹುದು.

ಹೌದು, ಹೆಚ್ಚಿನ ಸಮಯದಲ್ಲಿ ಅವರು ನೀಡುವ ಕೆಲವು ಉತ್ತರ ಹಾಗೂ ಅಭಿಪ್ರಾಯಗಳು ತಮಾಷೆಯಾಗಿಯೇ ಅನಿಸುತ್ತದೆ. ಹಾಗಾದರೆ ಅವರು ಯಾವ ಬಗೆಯಲ್ಲಿ ಯೋಚಿಸುತ್ತಾರೆ? ಅವರ ಭಾವನೆಗಳು ಹೇಗಿರುತ್ತವೆ? ಎನ್ನುವುದರ ಕುರಿತು ಈ ಮುಂದೆ ನೀಡಿರುವ ಪ್ರಮುಖ 6 ವಿಚಾರಗಳನ್ನು ಗಮನಿಸಿ...

1. ಊಟದಲ್ಲಿ ರೊಟ್ಟಿ:

1. ಊಟದಲ್ಲಿ ರೊಟ್ಟಿ:

ನಿತ್ಯದ ಆಹಾರ ಸೇವನೆಯ ಪದ್ಧತಿಯಲ್ಲಿ ಅಥವಾ ನಿತ್ಯದ ಮೂರು ಹೊತ್ತು ಊಟ ತಿಂಡಿಯಲ್ಲಿ ರೊಟ್ಟಿಯನ್ನು ಸೇವಿಸಬೇಕು. ಇಲ್ಲವಾದರೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವುದು. ರೊಟ್ಟಿ ಎನ್ನುವುದು ಒಂದೇ ನಮ್ಮ ದೇಹಕ್ಕೆ ಗಟ್ಟಿ ಆಹಾರ. ಅದರಿಂದ ಮಾತ್ರ ಹೆಚ್ಚಿನ ಪೋಷಕಾಂಶ ದೇಹಕ್ಕೆ ದೊರೆಯುವುದು ಎನ್ನುವುದು ಅವರ ಅಭಿಪ್ರಾಯವಾಗಿರುತ್ತದೆ.

2. ಚಹಾದಿಂದ ದೇಹದ ಬಣ್ಣ ಬದಲಾವಣೆ:

2. ಚಹಾದಿಂದ ದೇಹದ ಬಣ್ಣ ಬದಲಾವಣೆ:

ಚಹಾ ಸೇವನೆ ಎನ್ನುವುದು ಒಂದು ಬಗೆಯ ಪಾನೀಯ ಎನ್ನುವುದು ಎಲ್ಲರು ತಿಳಿದಿರುವ ಸಾಮಾನ್ಯ ವಿಚಾರ. ಆದರೆ ಮಹಿಳೆಯರು ಹೇಳುವುದೇನೆಂದರೆ, ಚಹಾ ಕುಡಿಯುವುದರಿಂದ ನಮ್ಮ ಮೈಬಣ್ಣದ ಬದಲಾವಣೆಯಾಗುತ್ತದೆ. ಹೆಚ್ಚು ಹೆಚ್ಚು ಚಹಾ ಕುಡಿದ ಹಾಗೆ ಮೈ ಬಣ್ಣ ಕಪ್ಪಾಗುತ್ತದೆ ಎನ್ನುವುದು ಅವರ ಅಭಿಪ್ರಾಯ ಮತ್ತು ಚಿಂತೆ.

3. ಕೂದಲ ಬೆಳವಣಿಗೆ:

3. ಕೂದಲ ಬೆಳವಣಿಗೆ:

ರಾತ್ರಿ ನಿದ್ರೆ ಮಾಡುವ ಮುನ್ನ ನಿಮ್ಮ ಕೇಶರಾಶಿಗಳನ್ನು ಸೂಕ್ತ ರೀತಿಯಲ್ಲಿ ಹೆಣೆದು ಅಥವಾ ಕಟ್ಟಿಕೊಂಡು ಮಲಗಬೇಕು. ಇಲ್ಲವಾದರೆ ಕೂದಲು ದಟ್ಟವಾಗಿ ಅಥವಾ ಉದ್ದವಾಗಿ ಬೆಳೆಯದು. ಕೂದಲ ಬೆಳವಣಿಗೆ ಆಗಬೇಕು ಎಂದರೆ ಮಲಗುವ ಮುನ್ನ ಕೂದಲನ್ನು ಕಟ್ಟಿಕೊಂಡು ಮಲಗಬೇಕು ಎನ್ನುವುದಷ್ಟೇ ಅವರ ಅಭಿಪ್ರಾಯ. ಏಕೆ? ಏನು? ಎನ್ನುವುದರ ಬಗ್ಗೆ ಅವರ ಬಳಿ ಉತ್ತರ ಇರುವುದಿಲ್ಲ.

4. ಮೊಸರು ಸೇವಿಸಿ ಹೋಗಬೇಕು:

4. ಮೊಸರು ಸೇವಿಸಿ ಹೋಗಬೇಕು:

ಮನೆಯಿಂದ ಆಚೆ ಹೋಗಬೇಕು ಎಂದಾದರೆ ಪ್ರತಿಬಾರಿಯೂ ಮೊಸರನ್ನು ತಿಂದು ಹೋಗಬೇಕು. ಬಾಯಿಗೆ ಮೊಸರನ್ನು ಶಾಸ್ತ್ರಕ್ಕೆ ಮಾತ್ರ ತಾಗಿಸಿದರೂ ಸರಿ. ಉತ್ತಮ ಸಂಸ್ಕಾರಕ್ಕಾಗಿ ಮೊಸರನ್ನು ತಿಂದು ಹೋಗಬೇಕು. ಆಗಲೇ ನಾವು ಅಂದುಕೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುವುದು. ಇಲ್ಲವಾದರೆ ಸಮಸ್ಯೆ ಉಂಟಾಗುವುದು ಎನ್ನುವುದು ಅವರ ಅಭಿಪ್ರಾಯ.

5. ಕಣ್ಣು ಕಪ್ಪಿನಿಂದ ಕಣ್ಣಿನ ಆರೋಗ್ಯ:

5. ಕಣ್ಣು ಕಪ್ಪಿನಿಂದ ಕಣ್ಣಿನ ಆರೋಗ್ಯ:

ಕಣ್ಣಿನ ಆರೋಗ್ಯ ಅತ್ಯುತ್ತಮವಾಗಿರನೇಕು ಎಂದರೆ ನಿತ್ಯವೂ ಕಣ್ಣಿಗೆ ಕಾಡಿಗೆಯನ್ನು ಹಚ್ಚಬೇಕು. ಕಣ್ಣಿಗೆ ಕಾಡಿಗೆ ಹಚ್ಚುವುದು ಎಂದರೆ ಕಣ್ಣಿನ ಸೌಂದರ್ಯವನ್ನು ವೃದ್ಧಿ ಪಡಿಸುವುದು ಅಥವಾ ಇತರರು ನಮ್ಮನ್ನು ನೋಡಿದಾಗ ಕಣ್ಣುಗಳ ಆಕಾರ ಹೆಚ್ಚಿನ ಆಕರ್ಷಣೆ ಹಾಗೂ ಸುಂದರವಾಗಿ ಕಾಣುವಂತೆ ಇರಲಿ ಎನ್ನುವುದಲ್ಲ. ಕಣ್ಣಿಗೆ ಕಾಡಿಗೆ ಹಚ್ಚುವುದರ ಉದ್ದೇಶ ಏನೇ ಆಗಿದ್ದರೂ ಸರಿ. ಆದರೆ ನಮ್ಮ ಮಹಿಳೆಯರು ಹೇಳುವುದು ಬೇರೆ. ಕಾಡಿಗೆ ಅನ್ವಯದಿಂದ ಮಾತ್ರ ಕಣ್ಣಿನ ಆರೋಗ್ಯ ಎನ್ನುವುದು.

6. ಪರಾಟ ತಿನ್ನುವುದರಿಂದ ತೂಕ ಹೆಚ್ಚುವುದಿಲ್ಲ:

6. ಪರಾಟ ತಿನ್ನುವುದರಿಂದ ತೂಕ ಹೆಚ್ಚುವುದಿಲ್ಲ:

ಪರಾಟ ಎನ್ನುವುದು ಆರೋಗ್ಯಕರವಾದ ತಿಂಡಿ. ಇದನ್ನು ಹೊಟ್ಟೆ ತುಂಬ ತಿನ್ನುವುದು ಅಥವಾ ನಿತ್ಯವೂ ಅದನ್ನು ಆಹಾರವಾಗಿ ಉಪಯೋಗಿಸಿದರೆ ಯಾವುದೇ ತೊಂದರೆ ಉಂಟಾಗದು. ಅದರಲ್ಲೂ ಪರಾಟ ತಿನ್ನುವುದರಿಂದ ತೂಕ ಹೆಚ್ಚುತ್ತದೆ ಎನ್ನುವುದು ಅವರ ಕಲ್ಪನೆಯಲ್ಲಿ ತಪ್ಪು. ತೂಕದ ಹೆಚ್ಚಳಕ್ಕೂ ಪರಾಟ ಸೇವನೆಗೂ ಯಾವುದೇ ಸಂಬಂಧ ಇಲ್ಲ ಎನ್ನುವುದಷ್ಟೇ ಅವರ ಅಭಿಪ್ರಾಯ.

English summary

only-indian-mothers-can-give-these-suggestions

only-indian-mothers-can-give-these-suggestions
Story first published: Thursday, May 17, 2018, 14:58 [IST]
X
Desktop Bottom Promotion