For Quick Alerts
ALLOW NOTIFICATIONS  
For Daily Alerts

ಪ್ರತಿ ರಾಶಿಚಕ್ರದವರಲ್ಲಿ ಕಂಡು ಬರುವ ನಕಾರಾತ್ಮಕ ಗುಣಗಳು

|

ವ್ಯಕ್ತಿತ್ವ ಎನ್ನುವುದು ನಮ್ಮ ಭಾವನಾತ್ಮಕ ಹಾಗೂ ದೈಹಿಕ ವರ್ತನೆಗಳ ಆಧಾರದ ಮೇಲೆ ನಿರ್ಧರಿತವಾಗುತ್ತದೆ. ಹಾಗಾಗಿ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ನಮ್ಮ ವರ್ತನೆ ಹೇಗಿರುತ್ತದೆ ಎನ್ನುವುದು ಬಹುಮುಖ್ಯವಾದ ಸಂಗತಿಗಳು. ಉತ್ತಮ ನಡತೆಯನ್ನು ತೋರಿದರೆ ವ್ಯಕ್ತಿ ಉನ್ನತ ಸ್ಥಾನ ಮಾನಗಳನ್ನು ಪಡೆದುಕೊಳ್ಳುವನು. ವ್ಯಕ್ತಿಯಲ್ಲಿ ಹೇಗೆ ಉತ್ತಮ ಗುಣಗಳು ಇರುತ್ತವೆಯೋ ಹಾಗೆಯೇ ಕೆಟ್ಟ ಗುಣಗಳು ಇರುತ್ತವೆ. ಅವುಗಳಲ್ಲಿ ನಾವು ಯಾವುದನ್ನು ಹೆಚ್ಚು ತೋರಿಸುತ್ತೇವೆಯೋ ಅದರ ಆಧಾರದ ಮೇಲೆ ವ್ಯಕ್ತಿತ್ವ ನಿರ್ಧಾರ ವಾಗುತ್ತದೆ ಎಂದು ಹೇಳಬಹುದು.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿತ್ವ ಎನ್ನುವುದು ವ್ಯಕ್ತಿ ಹುಟ್ಟುವ ಸಂದರ್ಭದಲ್ಲಿ ಗ್ರಹಗತಿಗಳ ಸ್ಥಾನಮಾನ ಹೇಗಿರುತ್ತದೆ ಎನ್ನುವುದರ ಆಧಾರದ ಮೇಲೆಯೇ ನಿಂತಿರುತ್ತದೆ. ವ್ಯಕ್ತಿಯಲ್ಲಿ ಉತ್ತಮ ಗುಣಗಳು ಅಧಿಕವಾಗಿರಲಿ ಅಥವಾ ನಕಾರಾತ್ಮಕ ಗುಣಗಳೇ ಹೆಚ್ಚಾಗಿರಲಿ ಎಲ್ಲವೂ ಅವರ ರಾಶಿಚಕ್ರ ಹಾಗೂ ವ್ಯಕ್ತಿತ್ವವನ್ನು ಆಧರಿಸಿರುತ್ತದೆ ಎಂದು ಹೇಳಲಾಗುವುದು. ಆ ವರ್ತನೆಗಳ ಆಧಾರದ ಮೇಲೆಯೇ ವ್ಯಕ್ತಿ ತನ್ನ ಸಂಬಂಧಗಳನ್ನು ಹೊಂದುತ್ತಾನೆ ಎಂದು ಹೇಳಲಾಗುವುದು. ಪ್ರತಿಯೊಂದು ರಾಶಿಚಕ್ರದವರು ಸಹ ನಕಾರಾತ್ಮಕ ಗುಣಗಳನ್ನು ಹೊಂದಿರುತ್ತಾರೆ. ಅವರ ಆ ಗುಣಗಳು ಯಾವವು? ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದಿರುವ ವಿವರಣೆಯನ್ನು ಓದಿ...

ಮೇಷ

ಮೇಷ

ಇವರಲ್ಲಿ ಉರಿಯುತ್ತಿರುವಂತಹ ಉದ್ವೇಗಗಳನ್ನು ಹೊಂದಿರುತ್ತಾರೆ. ಇವರು ಕೆಲಸ ಮಾಡುವಲ್ಲಿ ಅತ್ಯಂತ ಆತುರವನ್ನು ತೋರುತ್ತಾರೆ. ಏನಾದರೂ ನಿರ್ಧರಿಸುವ ಮುನ್ನ ತಾಳ್ಮೆಯಿಂದ ಯೋಚಿಸುವರು. ಇವರಲ್ಲಿ ಬಲವಾದ ಮತ್ತು ಶಕ್ತಿಯುತವಾದ ಗುಣಗಳಿವೆ ಎಂದು ಹೇಳಬಹುದು. ಸನ್ನಿವೇಶಕ್ಕೆ ತಕ್ಕಂತೆ ಸ್ವಾಭಾವಿಕವಾಗಿಯೇ ಬದಲಾಗುವರು. ಇವರ ಅಸಹನೆಯ ಪ್ರವೃತ್ತಿಯು ಯಶಸ್ಸನ್ನು ಪಡೆಯಲು ಅಡೆತಡೆಯನ್ನು ಒಡ್ಡಬಹುದು.

ವೃಷಭ

ವೃಷಭ

ಇವರಲ್ಲಿ ಸಾಕಷ್ಟು ಸ್ವಾರ್ಥ ಹಾಗೂ ಅಸೂಯೆಯ ಗುಣವನ್ನು ಹೊಂದಿರುತ್ತಾರೆ. ಇವರು ತಮ್ಮ ಸಂಬಂಧದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಬಯಸುವರು. ಭೌತಿಕ ವಸ್ತುಗಳನ್ನು ಅತಿಯಾಗಿಯೇ ಇಷ್ಟಪಡುವುದರಿಂದ ಅದು ಕೆಲವೊಮ್ಮೆ ತೊಂದರೆಯನ್ನು ತಂದೊಡ್ಡಬಹುದು. ಕೆಲವು ನೋವುಗಳನ್ನು ಅನುಭವಿಸಿರುವ ಕಾರಣ ಮೊಂಡುತನವನ್ನು ತೋರಿಸಬಹುದು. ವಿವೇಚನೆ ಇಲ್ಲದಂತಹ ವರ್ತನೆಯನ್ನು ತೋರುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗುವುದು.

ಮಿಥುನ

ಮಿಥುನ

ಇವರಲ್ಲಿ ಸಾಮಾನ್ಯವಾಗಿ ಅತಿಯಾದ ದ್ವಂದ್ವಗಳಿರುತ್ತವೆ. ಇವರ ವ್ಯಕ್ತಿತ್ವದಲ್ಲಿ ಕಾಣುವ ಪ್ರಮುಖ ನಕಾರಾತ್ಮಕ ಗುಣ ಎಂದು ಹೇಳಬಹುದು. ಇವರು ಮಾನಸಿಕ ಸ್ಥಿತಿ ಹಾಗೂ ಭಾವನೆಗಳ ನಡುವೆ ಒಂದು ಬಗೆಯ ಘರ್ಷಣೆಯನ್ನು ಎದುರಿಸುತ್ತಿರುತ್ತಾರೆ.

ಕರ್ಕ

ಕರ್ಕ

ಸೂಕ್ಷ್ಮ ಪ್ರವೃತ್ತಿಯನ್ನು ಹೊಂದಿರುವ ವ್ಯಕ್ತಿಗಳು ಇವರು. ಮೇಲ್ನೋಟಕ್ಕೆ ಇವರು ಒರಟಾದ ವ್ಯಕ್ತಿಗಳಂತೆ ಕಂಡುಬರಬಹುದು. ಆದರೆ ಸ್ವಭಾವದಲ್ಲಿ ಆಳವಾದ ಸೂಕ್ಷ್ಮತೆಯನ್ನು ಹೊಂದಿರುತ್ತಾರೆ. ಕೆಲವು ನಕಾರಾತ್ಮಕ ಭಾವನೆಯಿಂದಾಗಿ ಸುಲಭವಾಗಿಯೇ ನಿರುತ್ಸಾಹಕ್ಕೆ ಒಳಗಾಗುತ್ತಾರೆ. ಸಣ್ಣ ಪುಟ್ಟ ವಿಚಾರಕ್ಕೂ ಭಾವನೆಗಳಲ್ಲಿ ಬದಲಾವಣೆ ಉಂಟಾಗಬಹುದು.

ಸಿಂಹ

ಸಿಂಹ

ಇವರು ಪ್ರಬಲವಾದ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಎಲ್ಲರ ನಡುವೆ ತಾವೇ ಕೇಂದ್ರ ವ್ಯಕ್ತಿಗಳಾಗಿ ಹಾಗೂ ಆಡಳಿತಗಾರನಾಗಿ ನಿಲ್ಲಲು ಬಯಸುವರು. ಸ್ವಾರ್ಥ ಗುಣಗಳಿಂದ ಸದಾ ಸೊಕ್ಕಿನ ವರ್ತನೆ ತೋರುವರು. ತಮ್ಮದೇ ಆದ ರೀತಿಯಲ್ಲಿ ವಿಷಯವನ್ನು ಅರ್ಥೈಸಿಕೊಳ್ಳಲು ಬಯಸುವರು.

ಕನ್ಯಾ

ಕನ್ಯಾ

ಇವರಿಗೆ ದೋಷಗಳನ್ನು ಮತ್ತು ತಪ್ಪುಗಳನ್ನು ನಿರ್ಲಕ್ಷಿಸಲು ಸಾಧ್ಯವಾಗುವುದಿಲ್ಲ. ಈ ಕುರಿತು ಇವರು ಸೂಕ್ತ ತೀರ್ಪು ನೀಡಲು ಬಯಸುವರು. ಸಾಮಾನ್ಯವಾಗಿ ಇವರು ತಮ್ಮ ವಿಧಾನದಲ್ಲಿ ನಕಾರಾತ್ಮಕ ಗುಣವನ್ನು ಹೊಂದಿರುತ್ತಾರೆ. ಇವರು ಕೆಲವೊಂದು ವಿಚಾರಗಳಲ್ಲಿ ಬಲವಾದ ಇಷ್ಟ ಹಾಗೂ ಕಷ್ಟಗಳು ಇರುತ್ತವೆ.

ತುಲಾ

ತುಲಾ

ಇವರ ಅತಿದೊಡ್ಡ ದೌರ್ಬಲ್ಯವೆಂದರೆ ಅವರು ನಿರ್ಭಂಧಕರಾಗಿರುವುದು. ಇವರು ಯಾವುದೇ ವಿಚಾರವಾಗಿ ನಿರ್ಣಯ ಕೈಗೊಳ್ಳಲು ಹಿಂದುಮುಂದೆ ಯೋಚಿಸುತ್ತಾರೆ. ಏಕೆಂದರೆ ಅದು ಅವರಿಗೆ ಕಠಿಣವಾದ ಸಮಯವಾಗಿರುತ್ತದೆ. ತಮ್ಮ ಮನಸ್ಸನ್ನು ಹೆಚ್ಚು ಬದಲಾಯಿಸುತ್ತಿರುತ್ತಾರೆ. ಇದರಿಂದ ಅವರು ವಿರೋಧಾತ್ಮಕ ವ್ಯಕ್ತಿಗಳಾಗಿ ಇರಬಹುದು.

ವೃಶ್ಚಿಕ

ವೃಶ್ಚಿಕ

ಇವರಲ್ಲಿ ಪ್ರತಿಕಾರ ತೀರಿಸುವಂತಹ ಗುಣಗಳಿರುತ್ತವೆ. ದೀರ್ಘ ಸಮಯದವರೆಗೆ ದ್ವೇಷವನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಅವರ ಸ್ವಭಾವವು ಸಂಬಂಧಗಳನ್ನು ವಿನಾಶಗೊಳಿಸುತ್ತದೆ. ಇದರಿಂದ ಇವರ ಪಾಲುದಾರರಿಗೆ ಹಾಗೂ ತಮ್ಮ ಜೀವನಕ್ಕೆ ಕಷ್ಟವನ್ನು ತಂದೊಡ್ಡುಕೊಳ್ಳುತ್ತಾರೆ.

ಧನು

ಧನು

ಇವರು ಇತರರಿಗೆ ನೋವುಂಟುಮಾಡುವ ವಿಚಾರದಲ್ಲಿ ಮುಂದಿರುತ್ತಾರೆ. ಯಾವುದೇ ವಿಚಾರದ ಕುರಿತು ಬದ್ಧತೆಯನ್ನು ನಿಭಾಯಿಸುವುದಿಲ್ಲ. ಸ್ವಭಾವತಃ ಬದಲಾಗುತ್ತಿರುತ್ತಾರೆ ಮತ್ತು ಅನಿರೀಕ್ಷಿತರಾಗಿರುತ್ತಾರೆ. ಇವರು ಬುದ್ಧಿವಂತಿಕೆಯನ್ನು ಹೇಗೆ ಬಳಸಬೇಕು ಎನ್ನುವುದನ್ನು ಕಲಿಯಬೇಕಿದೆ.

ಮಕರ

ಮಕರ

ಇವರು ಇತರರಿಗೆ ಹೇಗೆ ಗೌರವವನ್ನು ನೀಡಬೇಕು ಎನ್ನುವುದನ್ನು ಕಲಿಯಬೇಕು. ಇವರು ತಮ್ಮದೇ ಆದ ನಿಯಮಗಳನ್ನು ವಿಧಿಸಲು ಪ್ರಯತ್ನಿಸುತ್ತಾರೆ. ಇತರರಿಂದ ಯಾವುದೇ ಬಗೆಯ ಸಲಹೆ ಹಾಗೂ ಸೂಚನೆಯನ್ನು ಪಡೆದುಕೊಳ್ಳಲು ಇಷ್ಟಪಡದ ವ್ಯಕ್ತಿಗಳಾಗಿರುತ್ತಾರೆ. ಇವರಲ್ಲಿ ನಿರಾಶಾವಾದಿ ಪ್ರವೃತ್ತಿಯು ಮೈಗೂಡಿರುತ್ತದೆ.

ಕುಂಭ

ಕುಂಭ

ಇವರು ಇತರರಿಂದ ಆದಷ್ಟು ಅಂತರ ಹಾಗೂ ಪ್ರತ್ಯೇಕವಾಗಿರುವುದನ್ನು ಇಷ್ಟಪಡುತ್ತಾರೆ. ತಮ್ಮ ಮನಸ್ಸಿಗೆ ಬಂದಂತೆ ಬದುಕಲು ಇಷ್ಟ ಪಡುವ ಇವರು ಅಂದುಕೊಂಡ ರೀತಿಯಲ್ಲಿ ಕೆಲಸವನ್ನು ಮಾಡುತ್ತಾರೆ. ಅನೇಕ ಸಂದರ್ಭಗಳಲ್ಲಿ ತಮ್ಮ ಭಾವನೆಗಳನ್ನು ಮರೆಮಾಚುತ್ತಾರೆ ಎಂದು ಹೇಳಲಾಗುವುದು. ಹಾಗಂತ ಅತಿಯಾದ ಭಾವನಾತ್ಮಕ ಜೀವಿಗಳು ಎಂದಲ್ಲ. ಕೆಲವೊಮ್ಮೆ ಬಂಡಾಯ ಗಾರರಂತೆಯೂ ವರ್ತಿಸಬಹುದು.

ಮೀನ

ಮೀನ

ಯಾವುದೇ ವಿಚಾರವಾಗಿ ನಿರ್ದಿಷ್ಟ ನಿರ್ಣಯವನ್ನು ಹೊಂದುವುದಿಲ್ಲ. ಇವರು ಏನು ಬಯಸುತ್ತಾರೆ ಎನ್ನುವುದು ಅವರಿಗೇ ತಿಳಿದಿರುವುದಿಲ್ಲ. ಇವರು ಸಾಕಷ್ಟು ಸಮಯದಲ್ಲಿ ಕಾಲ್ಪನಿಕ ಜಗತ್ತಿನಲ್ಲಿ ವಾಸಿಸುತ್ತಿರುತ್ತಾರೆ. ವಾಸ್ತವಿಕತೆ ಹಾಗೂ ಸತ್ಯವನ್ನು ಬಯಸದ ಇವರು ಕೆಲವು ಚಟಗಳಿಗೆ ಒಳಗಾಗಿರುತ್ತಾರೆ ಎಂದು ಹೇಳಲಾಗುವುದು.

English summary

Negative Qualities Of Each Zodiac Signs

Personality is basically who we are and what we identify with as 'self'. There are many factors that influence our characteristics. At the time of our birth, the planets, the moon and the sun are said to form a unique position, thus shaping our personality. This affects our relationships and daily life. Check these out.
X
Desktop Bottom Promotion