For Quick Alerts
ALLOW NOTIFICATIONS  
For Daily Alerts

ಕೆಲಸದ ಮೊದಲ ದಿನ 14 ಮೈಲಿ ನಡೆದ ವ್ಯಕ್ತಿಗೆ ಕಂಪೆನಿ ಸಿಇಓನಿಂದ ಕಾರು ಉಡುಗೊರೆ!

By Hemanth
|

ಕಠಿಣ ಪರಿಶ್ರಮ ಹಾಗೂ ಪ್ರಾಮಾಣಿಕತೆಯೂ ಯಾವತ್ತೂ ಜೀವನದಲ್ಲಿ ನಿಮಗೆ ಒಳ್ಳೆಯದನ್ನು ಮಾಡುವುದು. ಇದರಿಂದ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಪ್ರಾಮಾಣಿಕವಾಗಿರಬೇಕು. ಇಂತಹ ಒಂದು ಪ್ರೇರಣಾತ್ಮಕ ಕಥೆಯ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ತನ್ನ ಪ್ರಾಮಾಣಿಕತೆ ಹಾಗೂ ಬದ್ಧತೆಗಾಗಿ ಈ ಯುವಕನಿಗೆ ಕಂಪೆನಿಯು ಕಾರನ್ನು ಉಡುಗೊರೆಯಾಗಿ ನೀಡಿದೆ. ಇದು ಒಬ್ಬ ವ್ಯಕ್ತಿಯು ತುಂಬಾ ಸಂಕಷ್ಟದ ಪರಿಸ್ಥಿತಿಯಲ್ಲೂ ತನ್ನ ಬದ್ಧತೆ ಮತ್ತು ಸರಿಯಾದ ಕೆಲಸ ಮಾಡಿರುವ ಪ್ರತಿಫಲ. ವಾಲ್ಟರ್ ಕಾರ್ ಎನ್ನುವಾತನೇ ಈ ಕಥೆಯ ಸ್ಫೂರ್ತಿ.

a man who walked 14 miles on day one of his jobs

ಈತ ಹೊಸ ಉದ್ಯೋಗಕ್ಕೆ ಮರುದಿನ ಸೇರಬೇಕಿತ್ತು. ಆದರೆ ಆತನ ಕಾರು ಕೆಟ್ಟಿರುವುದು ತಿಳಿದುಬಂತು. ಇದನ್ನು ಸರಿಮಾಡಲು ಪ್ರಯತ್ನಿಸಿದ. ಆದರೆ ಕಾರು ಸ್ಟಾರ್ಟ್ ಆಗಲೇ ಇಲ್ಲ. ಮೊದಲ ದಿನವೇ ರಜೆ ಮಾಡುವ ಬದಲು ಆತ ಕಚೇರಿಗೆ ನಡೆದುಕೊಂಡೇ ಹೋಗುವ ನಿರ್ಧಾರಕ್ಕೆ ಬಂದ. ಆತನ ಮನೆಯಿಂದ ಕಚೇರಿಯು ಸುಮಾರು14 ಮೈಲಿ ದೂರದಲ್ಲಿತ್ತು. ನಾಲ್ಕು ಗಂಟೆ ನಿದ್ರೆ ಮಾಡಿಕೊಂಡ ಬಳಿಕ ಆತ ತನ್ನ ಕಚೇರಿಯತ್ತ ನಡೆಯಲು ಆರಂಭಿಸಿದ. ವಾಲ್ಟರ್ ಅಲಬಾಮದ ಹೋಮ್ ವುಡ್ ನಲ್ಲಿರುವ ತನ್ನ ಮನೆಯಿಂದ ಅಲಬಾಮದ ಪೆಲ್ಹಮ್ ಗೆ ನಡೆಯಲು ಆರಂಭಿಸಿದ. ಅದು ಕೂಡ ಮಧ್ಯರಾತ್ರಿ ವೇಳೆಗೆ....

ವಾಲ್ಟರ್ ಸುಮಾರು 14 ಮೈಲಿ ಕ್ರಮಿಸಿದ ಬಳಿಕ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಪೊಲೀಸರು ಆತನನ್ನು ಹಿಡಿದರು. ವರದಿಯ ಪ್ರಕಾರ ವಾಲ್ಟರ್ ಸುದ್ದಿ ಕೇಳಿದ ಪೊಲೀಸರು ಆತನನ್ನು ಕಚೇರಿಗೆ ತಮ್ಮ ವಾಹನದಲ್ಲಿ ಬಿಟ್ಟರು ಮತ್ತು ಆತನ ಬದ್ಧತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ತಿನಾ ಚಂಡಮಾರುತದಿಂದಾಗಿ ವಾಲ್ಟರ್ ಕುಟುಂಬವು ಮನೆ ಕಳೆದುಕೊಂಡ ಬಳಿಕ ಬರ್ಮಿಗ್ ಹ್ಯಾಮ್ ಗೆ ಸ್ಥಳಾಂತರಗೊಂಡಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ವಾಲ್ಟರ್ ಬಗ್ಗೆ ಪೋಸ್ಟ್ ಗಳು ಹರಿದಾಡಿದವು ಮತ್ತು ಆತನ ಬದ್ಧತೆಯನ್ನು ನೋಡಿ ಕಂಪೆನಿಯ ಮಾಲಕರು ಮತ್ತು ಸಹೋದ್ಯೋಗಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಕಂಪೆನಿಯ ಸಿಇಒ ಇದರ ಬಗ್ಗೆ ತಿಳಿದು ವಾಲ್ಟರ್ ಗೆ ಒಂದು ಕಾರನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದರು. ಇದರಿಂದ ಆತ ಯಾವುದೇ ತೊಂದರೆಯಿಲ್ಲದೆ ಕಚೇರಿಗೆ ಬರುವಂತೆ ಆಗುವುದು. ಇದರ ಬಗ್ಗೆ ನಿಮ್ಮ ನಿಲುವು ಏನು? ಕೆಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.

English summary

man-who-walked-14-miles-on-his-first-day-of-job-was-gifted-a-car-by-the-ceo

This is the story of a man who seems to have got a reward for his dedication and sincerity at work. The story is all about a man who was stuck in an unusual situation, yet he made the right choice of doing things, and this dedicated spirit of his was something that no man could ignore. Here we are revealing about Walter Carr who was reporting to work for the first time on the very next day, and he realised that his car had broken down.
X
Desktop Bottom Promotion