For Quick Alerts
ALLOW NOTIFICATIONS  
For Daily Alerts

ಈತ ಕೈಯಲ್ಲೇ ಮೈಕ್ರೋಚಿಪ್ ಅಳವಡಿಸಿ ಎಲೆಕ್ಟ್ರಾನಿಕ್ ವಸ್ತುಗಳ ನಿಯಂತ್ರಿಸುವನು!

|

ನೀವು ಬೆರಳನ್ನು ಸ್ಕ್ಯಾನ್ ಮಾಡಿಕೊಂಡು ಡಿಜಿಟಲ್ ಬಾಗಿಲನ್ನು ತೆರೆದರೆ ಹೇಗಿರಬಹುದು ಎಂದು ನೀವು ಎಂದಾದರೂ ಆಲೋಚನೆ ಮಾಡಿದ್ದೀರಾ? ಇದು ಸೂಪರ್ ಪವರ್ ನಂತೆ ನಿಮಗೆ ಕಾಣಿಸಬಹುದು ಅಲ್ಲವೇ? ಇಲ್ಲೊಬ್ಬ ವ್ಯಕ್ತಿಯು ತನ್ನನ್ನು ಸೈಬೊರ್ಗ್ ಎಂದು ಕರೆಯುತ್ತಿದ್ದಾನೆ. ಈತನ ಕೈ ಮತ್ತು ಮಣಿಕಟ್ಟಿನಲ್ಲಿ ಹಲವಾರು ಮೈಕ್ರೋಚಿಪ್ ಗಳಿವೆ. ಈ ಮೈಕ್ರೋಚಿಪ್ ಗಳು ಮುಂದಿನ ಬಾಗಿಲು, ಬೈಕ್ ಮತ್ತು ಆತನ ಮನೆಯ ಸುರಕ್ಷಿತ ಡ್ರಾವರ್ ಗಳನ್ನು ತೆರೆಯುತ್ತವೆ.

36ರ ಹರೆಯದ ಕೆನಡಾದ ರಸ್ ಫಾಕ್ಸ್ ಎನ್ನುವಾತನ ಕಥೆಯನ್ನು ನೀವು ಓದಿಕೊಳ್ಳಿ. ಈತನ ದೇಹದಲ್ಲಿ ಸುಮಾರು 100ಕ್ಕೂ ಹೆಚ್ಚು ಮಾರ್ಪಾಡುಗಳನ್ನು ಮಾಡಲಾಗಿದೆ. ಅಲ್ಟ್ರಾವೈಲೆಟ್ ಟ್ಯಾಟೂನಿಂದ ಹಿಡಿದ ಸಿಲಿಕಾನ್ ಕೊಬ್ಬುಗಳನ್ನು ಈತನ ಹಣೆಗೆ ಜೋಡಿಸಲಾಗಿದೆ. ಫಾಕ್ಸ್‌ನ ದೇಹ ರಚನೆ ಮಾಡಿರುವಾತ ಆತನ ದೇಹದಲ್ಲಿರುವಂತಹ ಹಲವಾರು ಚಿಪ್‌ಗಳ ಕೆಲಸವನ್ನು ತೋರಿಸಿದ್ದಾನೆ.

Microchips

ಕೈಯಿಂದ ತಯಾರಿಸಿರುವಂತಹ ಮರದ ಮರೆಮಾಚುವಿಕೆ ಟೇಬಲ್ ನ್ನು ಕೂಡ ಇದು ಅನ್ ಲಾಕ್ ಮಾಡುವುದು. ಇದು ಅತಿಯಾಗಿರುವ ಮಾರ್ಪಾಡು ಎಂದು ಪರಿಗಣಿಸಲಾಗಿದೆ. ಕೇವಲ ಅಕ್ಕಿಕಾಳಿನಷ್ಟು ದೊಡ್ಡದಾಗಿರುವ ಈ ಚಿಪ್ ಗಳನ್ನು ಚರ್ಮದ ಅಡಿಯಲ್ಲಿ ಅಳವಡಿಸಲಾಗಿದೆ ಮತ್ತು ಕೀ ಬದಲಿಗೆ ಇದು ಹೆಚ್ಚು ಉಪಯೋಗಕಾರಿ ಎಂದು ಫಾಕ್ಸ್ ಅಭಿಪ್ರಾಯ.

ರೇಡಿಯೋ ತರಂಗಗಳನ್ನು ಹೊಂದಿರುವ ಆಎಫ್ ಐಡಿ ಮತ್ತು ಫೀಲ್ಡ್ ಕಮ್ಯೂನಿಕೇಶನ್ ಟ್ರಾನ್ಸ್ ಪಾಂಡರ್ ಎನ್ ಎಫ್ ಸಿ ಯನ್ನು ಕೆಲವೇ ನಿಮಿಷಗಳಲ್ಲಿ ಅಳವಡಿಸಿಕೊಳ್ಳಬಹುದು. ಶಸ್ತ್ರಚಿಕಿತ್ಸೆಯು ಹೆಚ್ಚು ನೋವುಂಟು ಮಾಡಲ್ಲ. ಯಾಕೆಂದರೆ ಇದು 2ಮಿಮೀx12 ಮಿಮೀ. ಗಾತ್ರದ್ದಾಗಿದೆ ಎನ್ನುತ್ತಾನೆ ಫಾಕ್ಸ್. ಈ ಚಿಪ್ ಗಳು ಎಲೆಕ್ಟ್ರೋ ಮ್ಯಾಗ್ನೆಟಿಕ್ ಹೊಂದಿರುವ ಕಾರಣದಿಂದಾಗಿ ಇದಕ್ಕೆ ಯಾವುದೇ ರೀತಿಯ ಬ್ಯಾಟರಿ ಅಥವಾ ಚಾರ್ಜಿಂಗ್ ಬೇಕಿಲ್ಲವೆಂದು ಫಾಕ್ಸ್ ತಿಳಿಸುವರು.

ಈ ಕ್ರಿಯಾತ್ಮಕತೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಹಾಕಿ. ಇದೇ ಸೆಕ್ಸನ್ ನಲ್ಲಿ ಇಂತಹ ಸುದ್ದಿಗಳನ್ನು ಓದುತ್ತಲಿರಿ.

English summary

Man Has Microchips Injected In His Hands

Have you ever wondered what if you could just scan your finger and open a digital door? Seems like a superpower, right? Well, here is a man who is a self-declared 'cyborg.' He has injected microchips into his hands and wrists. These microchips act as the keys to his front door, motorcycle and even his secret drawers at his home!
Story first published: Thursday, August 23, 2018, 17:21 [IST]
X
Desktop Bottom Promotion