For Quick Alerts
ALLOW NOTIFICATIONS  
For Daily Alerts

ಲಗ್ನ ರಾಶಿ ಮೇಷದವರು ಇಂತಹ ಹರಳನ್ನು ಧರಿಸಬೇಡಿ, ಕಷ್ಟದ ಮೇಲೆ ಕಷ್ಟ ಬರಬಹುದು!

By Deepu
|

ಲಗ್ನ ರಾಶಿ ಎಂದರೆ ಜನ್ಮ ಕುಂಡಲಿಯ ಕೇಂದ್ರದಲ್ಲಿ ಇರುವ ಮೊದಲ ಮನೆಯಲ್ಲಿ ಬರುವ ರಾಶಿಚಕ್ರವನ್ನು ಸೂಚಿಸುತ್ತದೆ. ಲಗ್ನ ರಾಶಿಗೆ ಅನುಗುಣವಾಗಿ ಹರಳು ಅಥವಾ ರತ್ನದ ಕಲ್ಲುಗಳನ್ನು ಧರಿಸುತ್ತಾರೆ. ಈ ರತ್ನಗಳು ವ್ಯಕ್ತಿಯ ಸುತ್ತಲಿನ ಸೆಳವು ಮತ್ತು ವಿಕಿರಣಗಳ ಶಕ್ತಿಯನ್ನು ಪ್ರತಿಕ್ರಿಯಿಸುತ್ತದೆ. ಅದರಲ್ಲೂ ರಾಶಿಚಕ್ರಗಳಿಗೆ ಹಾಗೂ ಲಗ್ನ ರಾಶಿಗೆ ಅನುಗುಣವಾಗಿ ಧರಿಸಿದರೆ ಧನಾತ್ಮಕ ಅಲೆಗಳ ಪ್ರಭಾವ ನಮ್ಮ ಮೇಲೆ ಬೀಳುವುದು. ಜೊತೆಗೆ ಜೀವನದಲ್ಲಿ ಸಾಕಷ್ಟು ಅದೃಷ್ಟ ಹಾಗೂ ಧನಾತ್ಮಕ ಫಲಗಳನ್ನು ಅನುಭವಿಸುತ್ತೇವೆ ಎಂದು ಹೇಳಲಾಗುವುದು.

ಹರಳು: ಸ್ವಲ್ಪ ಎಡವಟ್ಟಾದರೂ, ಕಷ್ಟದ ಮೇಲೆ ಕಷ್ಟ ಬರಬಹುದು!

ಅಂತೆಯೇ ವ್ಯಕ್ತಿ ಸೂಕ್ತ ಹರಳುಗಳನ್ನು ಧರಿಸದೆ ಬೇರೆ ಯಾವುದೋ ಹರಳುಗಳನ್ನು ಧರಿಸಿದರೆ ನಕಾರಾತ್ಮಕ ಅನುಭವಗಳು ಎದುರಾಗುವುದು. ವ್ಯಕ್ತಿ ಯಾವ ಹರಳನ್ನು ಧರಿಸಬೇಕು ಎಂದು ನಿರ್ಣಯಿಸುವಾಗ ಮೊದಲು ಲಗ್ನರಾಶಿ ಯಾವುದು? ಎನ್ನುಯವುದನ್ನು ಮೊದಲು ಪರಿಗಣಿಸಬೇಕು. ಸಾಮಾನ್ಯವಾಗಿ ಜನರು ಲಗ್ನರಾಶಿ ಹಾಗೂ ರಾಶಿಚಕ್ರದ ಬಗ್ಗೆ ಹೆಚ್ಚು ಗೊಂದಲಕ್ಕೆ ಒಳಗಾಗುತ್ತಾರೆ. ಹಾಗಾಗಿ ನಿಮ್ಮ ಕುಂಡಲಿಯಲ್ಲಿ ಲಗ್ನ ರಾಶಿ ಯಾವುದೆಂದು ತಿಳಿಯಲು ಜ್ಯೋತಿಷ್ಯರನ್ನು ಭೇಟಿಯಾಗಬಹುದು...

 ಲಗ್ನ ರಾಶಿಗೆ ಅನುಗುಣವಾಗಿ ಯಾವ ಹರಳುಗಳನ್ನು ಧರಿಸಬಹುದು?

ಲಗ್ನ ರಾಶಿಗೆ ಅನುಗುಣವಾಗಿ ಯಾವ ಹರಳುಗಳನ್ನು ಧರಿಸಬಹುದು?

ಯಾವುದನ್ನು ಧರಿಸಬಾರದು? ಎನ್ನುವುದನ್ನು ಬಹು ಮುಖ್ಯವಾಗಿ ತಿಳಿದುಕೊಳ್ಳಬೇಕು. ಆಗಲೇ ಉತ್ತಮ ಫಲಿತಾಂಶವನ್ನು ಪಡೆದು ಕೊಳ್ಳಬಹುದು. ಈ ನಿಟ್ಟಿನಲ್ಲಿಯೇ ಲಗ್ನ ರಾಶಿ ಮೇಷದವರು ಯಾವ ರತ್ನಗಳನ್ನು ಧರಿಸಬೇಕು? ಯಾವುದನ್ನು ಧರಿಸಬಾರದು ಎನ್ನುವುದನ್ನು ಈ ಮುಂದಿನ ವಿವರಣೆಯಲ್ಲಿ ವಿವರಿಸಲಾಗಿದೆ.

ಲಗ್ನ ರಾಶಿ ಮೇಷದವರು ಯಾವ ಹರಳನ್ನು ಧರಿಸಬಾರದು?

ಲಗ್ನ ರಾಶಿ ಮೇಷದವರು ಯಾವ ಹರಳನ್ನು ಧರಿಸಬಾರದು?

ಜನ್ಮ ಕುಂಡಲಿಯಲ್ಲಿ ಸಾಮಾನ್ಯವಾಗಿ 12 ಮನೆಗಳಿರುತ್ತವೆ. ಅವುಗಳಲ್ಲಿ ಹುಟ್ಟಿದ ಸಮಯಕ್ಕೆ ಅನುಗುಣವಾಗಿ ಒಂದೊಂದು ವಿಶೇಷ ರಾಶಿಗಳು ಲಗ್ನರಾಶಿಯಾಗಿರುತ್ತವೆ. ಅಲ್ಲದೆ ಜನ್ಮ ಕುಂಡಲಿಯಲ್ಲಿ ಮೇಲ್ಮನೆ ಹಾಗೂ ಕೆಳಮನೆ ಎಂದು ವಿಂಗಡಿಸಲಾಗುವುದು. ರತ್ನ ದೇವತೆಯು ಕೆಳಮನೆಯಲ್ಲಿ ಕುಳಿತುಕೊಳ್ಳಬಾರದು ಎನ್ನುವುದನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಉದಾಹರಣೆಗೆ: ಋಣಾತ್ಮಕ ಪರಿಣಾಮ ಬೀರುವ ಗ್ರಹಗಳು 3, 6, 8 ಮತ್ತು 12ರ ಮನೆಯಲ್ಲಿ ಕುಳಿತು ಕೊಂಡಿದ್ದರೆ ಆ ಗ್ರಹಗಳಿಗೆ ಸಂಬಂಧಿಸಿದ ರತ್ನ ಅಥವಾ ಹರಳುಗಳನ್ನು ಧರಿಸಬಾರದು.

ಮೇಷ ಲಗ್ನದಲ್ಲಿ ಇರುವವರು ಮಕ್ರ್ಯುರಿ ಕಲ್ಲನ್ನು ಧರಿಸಬಾರದು

ಮೇಷ ಲಗ್ನದಲ್ಲಿ ಇರುವವರು ಮಕ್ರ್ಯುರಿ ಕಲ್ಲನ್ನು ಧರಿಸಬಾರದು

ಮೇಷ ಲಗ್ನದಲ್ಲಿ ಇರುವವರು ಮಕ್ರ್ಯುರಿ ಕಲ್ಲನ್ನು ಧರಿಸಬಾರದು. ಮಕ್ರ್ಯುರಿಗೆ ಸಂಬಂಧಿಸಿದ ಹರಳು ಎಂದರೆ ಪಚ್ಚೆ. ಅಲ್ಲದೆ ಇವರು ಡೈಮಂಡ್, ಬಿಳಿ ನೀಲಮಣಿ, ಕ್ಷೀರ ಸ್ಪಟಿಕ ಹರಳುಗಳನ್ನು ಧರಿಸಬಾರದು ಎಂದು ಹೇಳಲಾಗುವುದು.

ಲಗ್ನ ರಾಶಿ ಮೇಷದವರು ಧರಿಸಬಹುದಾದ ಹರಳು ಯಾವುದು?

ಲಗ್ನ ರಾಶಿ ಮೇಷದವರು ಧರಿಸಬಹುದಾದ ಹರಳು ಯಾವುದು?

ರಾಶಿಚಕ್ರಗಳಲ್ಲಿ ಮೊದಲನೆ ಮನೆಯನ್ನು ಹೊಂದಿರುವ ರಾಶಿ ಮೇಷ. ಮೇಷ ರಾಶಿಯವರಾಗಿದ್ದರೆ ಇವರನ್ನು ಆಳುವ ಗ್ರಹ ಮಂಗಳ. ಮಂಗಳ ಗ್ರಹಕ್ಕೆ ಶುಭಕರವಾದ ಹರಳು ಎಂದರೆ ಕೆಂಪು ಹವಳ. ಲಗ್ನದಲ್ಲಿ ಮೇಷವನ್ನು ಹೊಂದಿದವರು ಕೆಂಪು ಹವಳವನ್ನು ಧರಿಸಬಹುದು. ಇದರಿಂದ ಹೆಚ್ಚು ಅದೃಷ್ಟ ಹಾಗೂ ಶ್ರೇಯಸ್ ದೊರೆಯುವುದು ಎಂದು ಹೇಳಲಾಗುತ್ತದೆ.

ಸೂರ್ಯನ ರತ್ನದ ಮಾಣಿಕ್ಯವನ್ನು ಧರಿಸಬಹುದು

ಸೂರ್ಯನ ರತ್ನದ ಮಾಣಿಕ್ಯವನ್ನು ಧರಿಸಬಹುದು

ಇವರು ರೂಬಿ ಎಂದು ಕರೆಯಲ್ಪಡುವ ಸೂರ್ಯನ ರತ್ನದ ಮಾಣಿಕ್ಯವನ್ನು ಧರಿಸಬಹುದು. ಇದು ವ್ಯಕ್ತಿಗೆ ಸಕಾರಾತ್ಮಕ ಫಲಿತಾಂಶವನ್ನು ನೀಡುವುದು. ಇವರು ಗುರು ರತ್ನವನ್ನು ಧರಿಸಬಹುದು. ಗುರು ಮತ್ತು ಪುಖ್ರಾಜ್ ರತ್ನದ ಕಲ್ಲುಗಳನ್ನು ಧರಿಸಬಹುದು. ಹಳದಿ ನೀಲಮಣಿಗೆ ಹೀಗೆಂದು ಕರೆಯುತ್ತಾರೆ. ಮೇಷ ಲಗ್ನದವರಿಗೆ ಇನ್ನೊಂದು ಆಯ್ಕೆಯೆಂದರೆ ಚಂದ್ರಮಾ ರತ್ನ.

ಯೋಗ್ಯ ರೀತಿಯ ಹರಳನ್ನು ಧರಿಸಿ...

ಯೋಗ್ಯ ರೀತಿಯ ಹರಳನ್ನು ಧರಿಸಿ...

ಜನ್ಮ ಕುಂಡಲಿಗೆ ಅನುಸಾರವಾಗಿ ಲಗ್ನಾಧಿ ಪತಿಗೆ ಹೊಂದುವಂತಹ ರತ್ನಗಳ ಆಯ್ಕೆ ಮಾಡಿಕೊಳ್ಳಬೇಕು. ಯೋಗ್ಯ ರೀತಿಯ ಹರಳನ್ನು ಧರಿಸುವುದರಿಂದ ಜೀವನದಲ್ಲಿ ಸಕಾರಾತ್ಮಕ ಸಂದರ್ಭಗಳು ಕೈಗೂಡಿ ಬರುತ್ತವೆ. ಶ್ರೇಯಸ್ಸು ಹಾಗೂ ಜೀವನದಲ್ಲಿ ಏಳಿಗೆಯೂ ಅನಿರೀಕ್ಷಿತವಾಗಿ ಸಂಭವಿಸುವುದು. ಜೊತೆಗೆ ಜೀವನದಲ್ಲಿ ಸಾಕಷ್ಟು ನೆಮ್ಮದಿ ದೊರೆಯುವುದು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

English summary

Lagna Rashi Mesha: Do Not Wear These Gemstones

Lagna Rashi refers to the zodiac which sits in the first house in the centre of the birth chart. The gemstones react with the aura around the person and radiate energies accordingly. A favourable gemstone will change the energy into positive waves and affect the life positively, similarly, the aura becomes negative if the individual wears a wrong gemstone.
Story first published: Friday, July 20, 2018, 15:57 [IST]
X
Desktop Bottom Promotion