For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಚಿಹ್ನೆ ಹಾಗೂ ಅವರ ಸ್ವಭಾವದ ಬಗ್ಗೆ ತಿಳಿಯಿರಿ

By Divya Pandit
|

ಜ್ಯೋತಿಷ್ಯ ಎನ್ನುವುದು ವಿವಿಧ ವಸ್ತು ಹಾಗೂ ವ್ಯಕ್ತಿಗಳ ಚಲನೆ ಹಾಗೂ ಸ್ವಭಾವವನ್ನು ತಿಳಿದುಕೊಳ್ಳಲು ಸಹಾಯ ಮಾಡುವ ಒಂದು ಶಕ್ತಿಶಾಲಿ ಸಾಧನ ಅಥವಾ ಸಂಗತಿ ಎನ್ನಬಹುದು. ಮುಂದಿನ ಕ್ಷಣ ಹೇಗಿರುತ್ತದೆ ಎನ್ನುವುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಕೇವಲ ನಂಬಿಕೆ ಹಾಗೂ ವಿಶ್ವಾಸದ ಆಧಾರದ ಮೇಲೆಯೇ ದಿನವು ಕಳೆಯುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಮೂಲಕ ಖಗೋಳದ ಗ್ರಹಗತಿಗಳ ಸ್ಥಿತಿ ಹಾಗೂ ಅವರ ಪ್ರಭಾವ ಏನು ಎನ್ನುವುದನ್ನು ತಿಳಿದುಕೊಳ್ಳಬಹುದು.

Know about Zodiac Signs & their Nature

ಜೀವನದಲ್ಲಿ ನಡೆಯುವ ನಕಾರಾತ್ಮಕ ಹಾಗೂ ಧನಾತ್ಮಕ ವಿಚಾರಗಳನ್ನು ಸುಲಭವಾಗಿ ತುಲನೆ ಮಾಡುವುದರ ಮೂಲಕ ಭವಿಷ್ಯದ ಬಗ್ಗೆ ತಿಳಿಯಬಹುದು. ಅಲ್ಲದೆ ಕೆಲವು ಮುನ್ನೆಚ್ಚರಿಕೆ ಕ್ರಮ ಹಾಗೂ ಸಿದ್ಧತೆಯನ್ನು ಮಾಡಿಕೊಳ್ಳಬಹುದು. ಹಾಗೆಯೇ ವ್ಯಕ್ತಿಯ ರಾಶಿಚಕ್ರದ ಆಧಾರದ ಮೇಲೆ ಅವನ ಸ್ವಭಾವ ಹಾಗೂ ವರ್ತನೆ ಏನು? ಎನ್ನುವುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ನಿಮಗೂ ನಿಮ್ಮ ಹಾಗೂ ನಿಮ್ಮವರ ಸ್ವಭಾವ ಏನು ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲವಿದ್ದರೆ ಮುಂದಿರುವ ವಿವರಣೆಯನ್ನು ಪರಿಶೀಲಿಸಿ.

ಮೇಷ

ಮೇಷ

ಈ ರಾಶಿಯ ಸಂಕೇತ ಟಗರು. ಈ ರಾಶಿಯ ವ್ಯಕ್ತಿಗಳು ಸದಾ ಶಕ್ತಿಯುತರಾಗಿ ಇರುತ್ತಾರೆ. ಯಾವುದೇ ಸಂದರ್ಭಗಳಲ್ಲಾದರೂ ಸವಾಲುಗಳನ್ನು ಸ್ವೀಕರಿಸಲು ಸಿದ್ಧರಾಗಿರುತ್ತಾರೆ. ಈ ವ್ಯಕ್ತಿಗಳು ತೀವ್ರತೆಯನ್ನು ಹೊಂದಿರುವವರು ಹಾಗೂ ಹಠಾತ್ ವರ್ತನೆಯನ್ನು ತೋರಿಸುವ ಪ್ರವೃತ್ತಿ ಹೊಂದಿರುತ್ತಾರೆ ಎಂದು ಹೇಳಲಾಗುವುದು. ಕೆಲವೊಮ್ಮೆ ತಕ್ಷಣದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದರ ಬಗ್ಗೆ ಎರಡನೇ ಬಾರಿ ಚಿಂತಿಸುವುದೇ ಇಲ್ಲ. ಇದರಿಂದಾಗಿ ಕೆಲವೊಂದು ಅಡಚಣೆಗೆ ಒಳಗಾಗುವ ಸಾಧ್ಯತೆಗಳಿವೆ. ಇವರು ಕೆಲವೊಮ್ಮೆ ತಮ್ಮ ಆಲೋಚನೆಗಳಲ್ಲಿ ಮೊಂಡುತನವನ್ನು ತೋರಿಸುವರು. ವಿನೋದ ಪ್ರಿಯರು ಹಾಗೂ ಪ್ರೀತಿಯಿಂದ ಕಾಣುವ ಸ್ವಭಾವ ಇವರದ್ದಾಗಿರುತ್ತದೆ. ಕಷ್ಟಗಳು ಎದುರಾದಾಗ ಅದನ್ನು ಎದುರಿಸಲು ಕಟ್ಟುನಿಟ್ಟಾದ ಶಕ್ತಿಯನ್ನು ತೋರುತ್ತಾರೆ.

ವೃಷಭ

ವೃಷಭ

ಈ ರಾಶಿಯ ಚಿಹ್ನೆ ಎತ್ತು ಎಂದು ಹೇಳಲಾಗುತ್ತದೆ. ಈ ರಾಶಿಯ ಜನರು ಆಂತರಿಕ ಶಾಂತಿಯೊಂದಿಗೆ ತಂಪಾಗಿರುತ್ತಾರೆ ಎಂದು ಹೇಳಲಾಗುವುದು. ಇವರು ಅಷ್ಟು ಸುಲಭವಾಗಿ ತೊಂದರೆಗಳಿಗೆ ಸಿಲುಕಿಕೊಳ್ಳುವುದಿಲ್ಲ ಎಂದು ಹೇಳಲಾಗುತ್ತದೆ. ಇತರ ಚಿಹ್ನೆಗಳಿಗೆ ಹೋಲಿಸಿದರೆ ಕಷ್ಟದ ಸಂದರ್ಭದಲ್ಲಿ ಹಠಾತ್ ಒತ್ತಡ ಮತ್ತು ಅಸಮಧಾನವನ್ನು ಅನುಭವಿಸಬಹುದು. ಕುಟುಂಬದ ಸದಸ್ಯರನ್ನು ಸುರಕ್ಷಿತವಾಗಿ ಇಡುವುದು ಈ ರಾಶಿಯವರ ಮೊದಲ ಆಧ್ಯತೆಯಾಗಿರುತ್ತದೆ.

ಮಿಥುನ

ಮಿಥುನ

ಈ ರಾಶಿಯು ಅವಳಿ ಸಂಕೇತವನ್ನು ಹೊಂದಿರುತ್ತದೆ. ಈ ರಾಶಿಯ ಜನರು ಬಹಳ ಸಂತೋಷದ ಪ್ರಕೃತಿಯನ್ನು ಹೊಂದಿರುತ್ತಾರೆ. ಇವರು ಸಾಮಾನ್ಯವಾಗಿ ಗುಂಪುಗಳಲ್ಲಿ ಉಳಿದುಕೊಳ್ಳಲು ಬಯಸುತ್ತಾರೆ. ಇವರು ತಮ್ಮ ಭಾವನೆಗಳನ್ನು ಇತರರೊಂದಿಗೆ ಸುಲಭವಾಗಿ ಹಂಚಿಕೊಳ್ಳುತ್ತಾರೆ. ಬುದ್ಧಿವಂತರಾದ ಇವರು ಚಾಣಾಕ್ಷತನದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಇತರರೊಂದಿಗೆ ಸಾಮಾಜಿವಾಗಿ ಬೆರೆತು ಸಾಗುವ ಜನರಾಗಿರುತ್ತಾರೆ ಇವರು. ಸಮಾಜದ ಅಥವಾ ಒಂದು ಗುಂಪಿನಲ್ಲಿ ಇರುವಾಗ ಇವರ ಅಭಿಪ್ರಾಯ ಹಾಗೂ ಆಲೋಚನೆಗಳು ಭಿನ್ನವಾಗಿರುತ್ತದೆ. ಪರಿಶೋಧನೆ ಹಾಗೂ ಒಳ್ಳೆತನದಿಂದ ವಿವಿಧ ವಿಚಾರಗಳನ್ನು ತಿಳಿದುಕೊಳ್ಳುವುದರ ಮೂಲಕ ಹೊಸ ಜ್ಞಾನವನ್ನು ಪಡೆದುಕೊಳ್ಳುವರು.

ಕರ್ಕ

ಕರ್ಕ

ಈ ರಾಶಿಯ ಚಿಹ್ನೆ ಏಡಿಯಾಗಿರುತ್ತದೆ. ಇವರು ಉನ್ನತ ಹಾಗೂ ಮೃದುವಾದ ಸ್ವಭಾವವನ್ನು ಆಂತರಿಕವಾಗಿ ಹೊಂದಿರುತ್ತಾರೆ ಎನ್ನಲಾಗುವುದು. ಸಂವಹನದಲ್ಲಿ ಅಷ್ಟಾಗಿ ತೊಡಗಿಕೊಳ್ಳದ ಇವರು ಇತರ ಜನರೊಂದಿಗೆ ಸುರಕ್ಷಿತರಾಗಿರುತ್ತಾರೆ. ಇವರು ಮೃದುವಾಗಿರುವಾಗ ಸುಲಭವಾಗಿ ತೆರೆದುಕೊಳ್ಳುತ್ತಾರೆ ಎನ್ನಲಾಗುವುದು. ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಸದಸ್ಯರೊಂದಿಗೆ ಸೆಳೆದುಕೊಳ್ಳುತ್ತಾರೆ. ಸಾಮಾನ್ಯವಾಗಿ ಚರ್ಚೆಗಳಲ್ಲಿ ಇವರು ತೊಡಗಿಕೊಳ್ಳುವುದಿಲ್ಲ ಎನ್ನಲಾಗುವುದು. ಘರ್ಷಣೆಯಿಂದ ದೂರ ಸರಿಯುವ ವ್ಯಕ್ತಿಗಳು. ಉತ್ತಮ ಪ್ರೀತಿ ಹಾಗೂ ಕಾಳಜಿ ತೋರಿಸುವುದರ ಮೂಲಕ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮುವರು.

ಸಿಂಹ

ಸಿಂಹ

ಸಿಂಹದ ಚಿಹ್ನೆಯನ್ನು ಹೊಂದಿರುವ ಈ ರಾಶಿಚಕ್ರದ ಜನರು ಕಾಡಿನ ರಾಜ ಸಿಂಹನಂತಹ ಗುಣವನ್ನೇ ಹೊಂದಿರುತ್ತಾರೆ ಎಂದು ಹೇಳಲಾಗುವುದು. ಪ್ರಜಾಪ್ರಭುತ್ವವನ್ನು ಬಯಸುವ ಇವರು ಅಧಿüಕಾರವನ್ನು ಪಡೆದುಕೊಳ್ಳಲು ಬಯಸುವ ಇವರು ಹುಟ್ಟಾ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಎಂದು ಹೇಳಬಹುದು. ಯಾವುದೇ ಸಂಕೀರ್ಣದ ಸಂದರ್ಭದಲ್ಲಿ ಅಥವಾ ತೊಂದರೆಗೆ ಈಡಾಗಿರುವಾಗ ಸಂದರ್ಭಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರವೃತ್ತಿ ಇವರದ್ದಾಗಿರುತ್ತದೆ.

ಕನ್ಯಾ

ಕನ್ಯಾ

ಕನ್ಯೆಯ ಚಿಹ್ನೆಯನ್ನು ಹೊಂದಿರುವ ಈ ರಾಶಿಚಕ್ರದ ಜನರು ನಿಷ್ಠಾವಂತರು ಮತ್ತು ಶುದ್ಧ ಮನಸ್ಸನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ ಎನ್ನಲಾಗುವುದು. ಈ ರಾಶಿಯವರು ಸಾಮಾನ್ಯವಾಗಿ ಭರವಸೆ ಮತ್ತು ಪ್ರೀತಿಯಿಂದ ತುಂಬಿದವರಾಗಿರುತ್ತಾರೆ. ಇವರು ಪ್ರತಿಯೊಂದು ವಿಚಾರದಲ್ಲಿಯೂ ಹೆಚ್ಚಿನ ಚಿಂತನೆ ಹಾಗೂ ವಿಶ್ಲೇಷಣೆ ನಡೆಸುತ್ತಾರೆ. ಸಕ್ರಿಯ ಮನಸ್ಸನ್ನು ಹೊಂದಿರುವ ಇವರು ಉತ್ತಮ ಸ್ಮರಣೆ ಹಾಗೂ ತರ್ಕವನ್ನು ಮಾಡಬಲ್ಲರು. ಕೆಲಸವನ್ನು ಬಹಳ ಕಷ್ಟ ಪಟ್ಟು ನಿರ್ವಹಿಸಬಲ್ಲರು. ಆದರೆ ಅತಿಯಾದ ಒತ್ತಡಕ್ಕೆ ಒಳಗಾದರೆ ಗೀಳಿಗೆ ಒಳಗಾಗಬಹುದು.

ತುಲಾ

ತುಲಾ

ತಕ್ಕಡಿಯ/ನ್ಯಾಯದ ಚಿಹ್ನೆಯನ್ನು ಒಳಗೊಂಡಿರುವ ಈ ರಾಶಿಯ ವ್ಯಕ್ತಿಗಳು ಜೀವನದಲ್ಲಿ ಎಲ್ಲದರಲ್ಲೂ ಸಮಾನತೆಯನ್ನು ಕಂಡುಕೊಳ್ಳುತ್ತಾರೆ. ಇವರಿಗೆ ಕೆಲವೊಮ್ಮೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಕಷ್ಟವಾಗುವುದು ಎನ್ನಲಾಗುತ್ತದೆ. ಇವರು ಸ್ವಲ್ಪ ದುರ್ಬಲ ಹಾಗೂ ಸೋಮಾರಿ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಸೌಂದರ್ಯ ಹಾಗೂ ಶಾಂತಿಯನ್ನು ಪಡೆಯಲು ಬಯಸುವ ಇವರು ನಿರ್ಧಾರ ಕೈಗೊಳ್ಳುವಾಗ ನ್ಯಾಯಯುತವಾದ ಆಯ್ಕೆ ಮಾಡುತ್ತಾರೆ ಎನ್ನಲಾಗುವುದು.

ವೃಶ್ಚಿಕ

ವೃಶ್ಚಿಕ

ಚೇಳಿನ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ನಿರ್ಭಯ ಹಾಗೂ ರಹಸ್ಯವಾದ ವ್ಯಕ್ತಿಗಳಾಗಿರುತ್ತಾರೆ. ಇತರರ ಆಸಕ್ತಿಗೆ ಅನುಗುಣವಾಗಿ ತಮ್ಮನ್ನು ತಾವು ವ್ಯಕ್ತಪಡಿಸಲು ಸಾಕಷ್ಟು ಸಾಹಸ ಮಾಡುವರು. ಏಕಾಂಗಿಯಾಗಿರಲು ಬಯಸುವ ಇವರು ಯಾವುದೇ ಚಿಂತನೆ ಅಥವಾ ವಿಷಯಗಳ ಮೇಲೆ ಆಕ್ರಮಣಶೀಲ ಪ್ರವೃತ್ತಿಯನ್ನು ತೋರುವುದಿಲ್ಲ ಎನ್ನಲಾಗುವುದು. ಇವರು ಅಸಮಧಾನಕ್ಕೆ ಅಥವಾ ಉಲ್ಭಣ ಸ್ಥಿತಿಯಲ್ಲಿರುವಾಗ ವೇಗವಾದ ಪ್ರತಿಕ್ರಿಯೆಯನ್ನು ನೀಡುವರು.

ಧನು

ಧನು

ಬಾಣದ ಚಿಹ್ನೆಯನ್ನು ಹೊಂದಿರುವ ಈ ರಾಶಿಯ ವ್ಯಕ್ತಿಗಳು ಜ್ಞಾನ ಹೊಂದುವುದು ಹಾಗೂ ಸ್ವಾತಂತ್ರ್ಯವಾಗಿರಲು ಹೆಚ್ಚು ಬಯಸುವ ವ್ಯಕ್ತಿಗಳಾಗಿರುತ್ತಾರೆ. ಇವರು ಹೊರಗಿನ ಪ್ರಪಂಚವನ್ನು ಇಷ್ಟ ಪಡುವ ಇವರು ಸದಾ ಪ್ರಯಾಣದಲ್ಲಿ ತೊಡಗಿಕೊಂಡಿರಲು ಬಯಸುತ್ತಾರೆ. ಇವರನ್ನು ಹಿಡಿದಿಡುವುದು ಅಥವಾ ಬಂಧಿಸುವಂತಹ ಜೀವನವನ್ನು ಇವರು ಇಷ್ಟಪಡುವುದಿಲ್ಲ. ಇವರ ಜ್ಞಾನವು ಸದಾ ಸ್ವಾತಂತ್ರ್ಯದೊಂದಿಗೆ ಅಂಟಿಕೊಂಡಿರುತ್ತದೆ.

ಮಕರ

ಮಕರ

ನೀರಿನ ಮೇಕೆಯ ಚಿಹ್ನೆಯನ್ನು ಹೊಂದಿರುವ ಈ ರಾಶಿಚಕ್ರದ ಜನರು ಮಹತ್ವಾಕಾಂಕ್ಷೆಗಳನ್ನು ಹೊಂದಿರುತ್ತಾರೆ ಎನ್ನಲಾಗುವುದು. ಸ್ಥಿರವಾದ ಚಿತ್ತದಿಂದ ಸದಾ ಮೇಲೆ ಬರುವ ಪ್ರಯತ್ನವನ್ನು ತೋರುತ್ತಿರುತ್ತಾರೆ. ಬಹಳ ಉತ್ಸಾಹಿಗಳು ಹಾಗೂ ಶ್ರಮಜೀವಿಗಳಾಗಿ ಕೆಲಸದಲ್ಲಿ ಪಾಲ್ಗೊಳ್ಳುವರು. ಸೂಕ್ತ ಗುರಿಯನ್ನು ಹೊಂದಿರುವಾಗ ಯಾವುದೇ ಅಡಚಣೆಗೆ ಒಳಗಾಗದೆ ಮುಂದೆ ಸಾಗುವವರು.

ಕುಂಭ

ಕುಂಭ

ನೀರು ತುಂಬಿದ ಬಿಂದಿಗೆಯ ಚಿಹ್ನೆಯನ್ನು ಒಳಗೊಂಡಿರುವ ಈ ರಾಶಿಯ ವ್ಯಕ್ತಿಗಳು ಶುದ್ಧತೆಯನ್ನು ಹೆಚ್ಚು ಬಯಸುವರು. ಬಹಳಷ್ಟು ಮಾನವೀಯತೆಯನ್ನು ಹೊಂದಿರುವ ಈ ವ್ಯಕ್ತಿಗಳು ಜನರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ. ಇವರು ಸಾಕಷ್ಟು ಭಾವನಾತ್ಮಕ ಜೀವಿಗಳು. ಪ್ರತಿಯೊಂದು ವಿಚಾರದಲ್ಲಿಯೂ ಭಾವನಾತ್ಮಕವಾಗಿ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ಆಧ್ಯಾತ್ಮಿಕ ದೃಷ್ಟಿಯನ್ನು ಪಡೆದುಕೊಳ್ಳಲು ಹಂಬಲಿಸುವರು.

ಮೀನ

ಮೀನ

ಎರಡು ಮೀನು ಪರಸ್ಪರ ಎದುರಿಸುತ್ತಿರುವ ಚಿಹ್ನೆಯನ್ನು ಈ ರಾಶಿಯವರು ಪಡೆದುಕೊಂಡಿರುತ್ತಾರೆ. ಇವರು ಸಾಕಷ್ಟು ಕಷ್ಟ ಹಾಗೂ ಎದುರಾಳಿಗಳನ್ನು ಎದುರಿಸುತ್ತಾರೆ ಎನ್ನಲಾಗುವುದು. ಸಾಕಷ್ಟು ಕನಸನ್ನು ಕಾಣುವ ಇವರು ನಿಗೂಢ ಮನಃಸ್ಥಿತಿಯನ್ನು ಹೊಂದಿರುತ್ತಾರೆ ಎನ್ನಲಾಗುವುದು. ತಮ್ಮವರಿಗಾಗಿ ಬಹಳಷ್ಟು ಕಾಳಜಿ ಹಾಗೂ ಸಹಾಯ ಮಾಡಲು ಸದಾ ಮುಂದಿರುತ್ತಾರೆ. ಇತರರನ್ನು ಸಂತೋಷಪಡಿಸಲು ಸಾಕಷ್ಟು ಸಾಹಸ ಮಾಡಬಲ್ಲರು.

English summary

Know about All Zodiac Signs & their Nature

Astrology is a very powerful tool to understand the cosmic movements of various objects and their effect on our life. Believe it or not, Astrology does affect your daily life in a positive or negative way. Now, it’s up to you to put on some changes in your life to turn the negative effects of cosmic movements into positive through the proven ways suggested by Astrology. Before we discuss the Do’s & Don’ts of Astrology to turn the negative cosmic effect into a positive one in our later articles, let’s first see the Zodiac Signs & Symbols with the nature of the person of that sign
Story first published: Thursday, September 6, 2018, 17:46 [IST]
X
Desktop Bottom Promotion