Just In
- 1 hr ago
ಆಫ್ರಿಕಾ ಸುಂದರಿ ಮುಡಿಗೇರಿದ 2019 ವಿಶ್ವ ಸುಂದರಿ ಪಟ್ಟ
- 2 hrs ago
ಹೇರ್ ಡೈ ಬಳಸಿದರೆ ಬರುವ 6 ಅಪಾಯಕಾರಿ ಕಾಯಿಲೆಗಳು
- 3 hrs ago
ಪಾರ್ಟಿ ಲುಕ್ಗೆ ಶಿಮ್ಮರಿ ಐ ಮೇಕಪ್ ಹೀಗಿರಲಿ
- 9 hrs ago
ಸೋಮವಾರದ ದಿನ ಭವಿಷ್ಯ (9-12-2019)
Don't Miss
- Sports
ತನ್ನ 400* ದಾಖಲೆ ಮುರಿಯಲು ಈ ಇಬ್ಬರು ಭಾರತೀಯರಿಂದ ಸಾಧ್ಯ; ಬ್ರ್ಯಾನ್ ಲಾರಾ
- News
ಗ್ರಾಹಕರ ಕೂಗಿಗೆ ಸ್ಪಂದಿಸಿದ ಏರ್ ಟೆಲ್, ವೋಡಾಫೋನ್
- Automobiles
ಬರೋಬ್ಬರಿ 10 ತಿಂಗಳ ನಂತರ ಮಾರುತಿ ಸುಜುಕಿ ಕಾರು ಉತ್ಪಾದನೆಯಲ್ಲಿ ಹೆಚ್ಚಳ
- Finance
ಮಾರುಕಟ್ಟೆಯಲ್ಲಿ ಈರುಳ್ಳಿ ಡಬಲ್ ಸೆಂಚುರಿ; ಕೌನ್ ಬನೇಗಾ ಕೋಟ್ಯಧಿಪತಿ?
- Education
ECIL Recruitment 2019: 64 ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ವಾಟ್ಸಪ್ ಚಾಟ್ ಅನ್ನು PDF ಫಾರ್ಮೇಟ್ಗೆ ಕನ್ವರ್ಟ್ ಮಾಡುವುದು ಹೇಗೆ ಗೊತ್ತಾ?
- Movies
28 ದಿನದ ಬಳಿಕ ಆಸ್ಪತ್ರೆಯಿಂದ ಮನೆಗೆ ಮರಳಿದ ಲತಾ ಮಂಗೇಶ್ಕರ್
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಮನೆಯ ವಾಸ್ತು ಸಮಸ್ಯೆಯಿಂದ ಕೂಡ, ಆತ್ಮಹತ್ಯೆ ಆಲೋಚನೆ ಬರುತ್ತದೆಯಂತೆ!!

ವಾಸ್ತು ಎನ್ನುವುದು ಹಿಂದೂ ಶಾಸ್ತ್ರದಲ್ಲಿ ಮಹತ್ತರ ಸ್ಥಾನವನ್ನು ಪಡೆದುಕೊಂಡಿದೆ. ಕಟ್ಟಡಗಳ ನಿರ್ಮಾಣದ ವಿಚಾರದಲ್ಲಿ ವಾಸ್ತು ಎನ್ನುವುದು ಬಹಳ ಪ್ರಮುಖವಾದದ್ದು. ವಾಸ್ತು ದೋಷ ಉಂಟಾದರೆ ಆ ಮನೆಯಲ್ಲಿ ವಾಸಿಸುವ ವ್ಯಕ್ತಿಗಳಿಗೆ ವಿವಿಧ ಸಮಸ್ಯೆಗಳು ಕಾಡಬಹುದು. ಬಹುತೇಕ ಸಂದರ್ಭದಲ್ಲಿ ವ್ಯಕ್ತಿ ಆತ್ಮಹತ್ಯೆಯ ಕೃತ್ಯ ಎಸಗಬಹುದು ಎನ್ನಲಾಗುತ್ತದೆ. ವಾಸ್ತು ದೋಷದ ಪರಿಣಾಮದಿಂದ ವ್ಯಕ್ತಿ ಎರಡು ಬಗೆಯ ಆತ್ಮ ಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಅನುಚಿತವಾದ ವಾಸ್ತುವಿನಿಂದ ವ್ಯಕ್ತಿ ಕ್ಷಣಿಕ ಕೋಪಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳಬಹುದು. ನಿರಂತರ ಮಾನಸಿಕ ಅಶಾಂತಿಯಿಂದ ಜೀವನದಲ್ಲಿ ಬೇಸರಕ್ಕೆ ಒಳಗಾಗಿಯೂ ಆತ್ಮಹತ್ಯೆ ಮಾಡಿಕೊಳ್ಳಬಹುದು. ಇಲ್ಲವೇ ವ್ಯಕ್ತಿಗೆ ನಿರಂತರವಾಗಿ ಮಾನಸಿಕ ಅಶಾಂತಿ, ವೃತ್ತಿ ಜೀವನದಲ್ಲಿ ಕಿರಿಕಿರಿ, ಸಂಬಂಧಗಳಲ್ಲಿ ಬಿರುಕು, ಆರ್ಥಿಕ ಸಮಸ್ಯೆ ಹಾಗೂ ನಿರಂತರವಾದ ಆರೋಗ್ಯ ಸಮಸ್ಯೆಯಿಂದ ಜೀವನದಲ್ಲಿ ಅಂತ್ಯ ಕಾಣುವ ಮನಸ್ಸನ್ನು ಮಾಡುವರು. ವಾಸ್ತು ಸರಿಯಾಗಿ ಇಲ್ಲದೆ ಇದ್ದರೆ ಯಾವೆಲ್ಲಾ ಬಗೆಯ ತೊಂದರೆ ಉಂಟಾಗುವುದು ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆಯನ್ನು ಪರಿಶೀಲಿಸಿ. ವಾಸ್ತುವಿನ ಪ್ರಕಾರ ಅತ್ಮಹತ್ಯೆಗಳಿಗೆ ಸಂಭವನೀಯ ಕಾರಣಗಳೆಂದರೆ ನಂಬಲಾಗದ ಕೆಲವು ವಿಷಯಗಳಿವೆ...

ಸ್ಮಶಾನದ ಬಳಿ ಮನೆಮಾಡಬೇಡಿ...
*ನಿಮ್ಮ ಮನೆಯ ಸ್ಥಳವು ಸ್ಮಶಾನದ ಬಳಿ ಇರಬಾರದು. ಅಲ್ಲದೆ ರೈಲ್ವೆ ಸೇತುವೆಗಳ ಬಳಿಯೂ ಮನೆ ಇರಬಾರದು.
*ವಿದ್ಯುತ್ ಟವರ್ ಹಾಗೂ ವಿದ್ಯುತ್ ಮನೆಯ ಬಳಿಯೂ ಜಾಗ ಖರೀದಿ ಅಥವಾ ಮನೆ ನಿರ್ಮಾಣ ಮಾಡಬಾರದು.
*ಅಥಿಕ ಮರಗಳಿರುವ ಸ್ಥಳಗಳು ಸಹ ಖರೀದಿಗೆ ಸೂಕ್ತವಾದ ಸ್ಥಳಗಳಲ್ಲ ಎಂದು ಹೇಳಲಾಗುವುದು.
*ಬೆಕ್ಕು, ಗೂಬೆ, ಪಾರಿವಾಳ ಮತ್ತು ಬಾವಲಿಗಳಿರುವ ಮನೆಗಳಲ್ಲಿ ನಕಾರಾತ್ಮಕ ಶಕ್ತಿಗಳಿಂದ ಆಕ್ರಮಿಸಲ್ಪಡುತ್ತವೆ ಎಂದು ಹೇಳಲಾಗುತ್ತದೆ.
*ಮನೆಯ ಗೋಡೆಗಳಲ್ಲಿ ಬಿರುಕು ಉಂಟಾಗಬಾರದು ಎಂದು ಹೇಳಲಾಗುತ್ತದೆ.

ಕ್ಷಣಿಕ ಕೋಪದಿಂದ ಆತ್ಮಹತ್ಯೆ!
ಮನೆಯ ದಕ್ಷಿಣ ದಿಕ್ಕಿಗೆ ನಾವು ಭಾರೀ ಯಂತ್ರೋಪಕರಣಗಳನ್ನು ಇಡಬಾರದು. ದಕ್ಷಿಣ ದಿಕ್ಕಿನಲ್ಲಿ ಭಾರವಾದ ಕಬ್ಬಿಣ ವಸ್ತುಗಳು ಅಥವಾ ತುಕ್ಕು ಹಿಡಿದಿರುವ ಲೋಹಗಳನ್ನು ಇಡಬಾರದು. ಅಲ್ಲದೆ ಜಾನುವಾರುಗಳ ಕೊಟ್ಟಿಗೆ ಅಥವಾ ಶೇಡ್ಗಳನ್ನು ಇಡಬಾರದು. ಪಶ್ಚಿಮ ದಿಕ್ಕಿನಲ್ಲಿ ಅಡುಗೆ ಮಾಡುವ ಸ್ಥಳ ಅಥವಾ ಇತರ ಶಾಖ ಉತ್ಪಾದನೆಯ ಕೆಲಸವನ್ನು ಕೈಗೊಳ್ಳಬಾರದು. ಈ ರೀತಿಯ ದೋಷಗಳು ಹೊಂದಿದ್ದರೆ ಆ ಮನೆಯಲ್ಲಿ ಇರುವ ಸದಸ್ಯರು ಕ್ಷಣಿಕ ಕೋಪಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ.
Most Read: ವೃಷಭ ರಾಶಿಯವರು ಎದುರಿಸುವಂತಹ ಸಮಸ್ಯೆಗಳು ಇಲ್ಲಿದೆ ನೋಡಿ...

ವೃತ್ತಿ ಸಮಸ್ಯೆಯಿಂದ ಆತ್ಮಹತ್ಯೆ
ಮನೆಯ ಪಶ್ಚಿಮ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಅಥವಾ ಬಾವಿ ಇರಬಾರದು. ಉತ್ತರ ದಿಕ್ಕಿನಲ್ಲಿ ಬೇಡದ ವಸ್ತುಗಳ ಸಂಗ್ರಹದ ಕೋಣೆ ಇಡಬಾರದು. ಇವು ವ್ಯಕ್ತಿಯ ವೃತ್ತಿ ಜೀವನದ ಮೇಲೆ ಋಣಾತ್ಮಕಪರಿಣಾಮ ಬೀರುವುದು. ಅಲ್ಲದೆ ನಿರಂತರ ಮಾನಸಿಕ ಅಶಾಂತಿಗೆ ಒಳಗಾಗುವುದರ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳಿರುತ್ತವೆ.

ಸಂಬಂಧಗಳ ಕಾರಣದಿಂದ ಆತ್ಮಹತ್ಯೆ
ಪಶ್ಚಿಮ ದಿಕ್ಕಿನಲ್ಲಿ ದೇವಸ್ಥಾನ ಅಥವಾ ಪೂಜೆಯ ಸ್ಥಳ ಇರಬಾರದು. ಆಗ್ನೇಯ ಮೂಲೆಗಳಲ್ಲಿ ಗ್ರಂಥಾಲಯ ಅಥವಾ ಅಧ್ಯಯನ ಕೋಣೆ ಕೂಡ ಇಡಬಾರದು. ಉತ್ತರ ಮತ್ತು ದಕ್ಷಿಣ ದಿಕ್ಕು ದೇವತೆಗಳಿಗೆ ಮೀಸಲಾದ ದಿಕ್ಕುಗಳು. ಪಶ್ಚಿಮ ದಿಕ್ಕಿನಲ್ಲಿ ಇವು ಇದ್ದರೆ ಅಶುಭ. ಅಲಂಕಾರಿಕ ಕೋಣೆ ಮತ್ತು ಡ್ರೆಸ್ಸಿಂಗ್ ಟೇಬಲ್ ಇದ್ದರೂ ಸಹ ಸಂಬಂಧದಲ್ಲಿ ಅಸಮಧಾನ ಹಾಗೂ ಆತ್ಮಹತ್ಯೆಗೆ ಕಾರಣವಾಗುವುದು.
Most Read: 'ಬಿ' ಅಕ್ಷರದಿಂದ ಹೆಸರು ಶುರುವಾಗುವ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ನೋಡಿ...

ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ
ಹಣವನ್ನು ಅಥವಾ ಹಣವನ್ನು ಇಡುವಂತಹ ಕಪಾಟುಗಳನ್ನು ಉತ್ತರ ದಿಕ್ಕಿನಲ್ಲಿ ಇಡಬಾರದು. ಹೀಗೆ ಮಾಡಿದರೆ ಮನೆಯ ಒಡೆಯ ಅಥವಾ ಸದಸ್ಯರು ಆರ್ಥಿಕ ತೊಂದರೆಗೆ ಗುರಿಯಾಗುವರು. ದೇವರಿಗೆ ಮೀಸಲಾದ ಸ್ಥಳಗಳಲ್ಲಿ ಏನನ್ನೂ ಇಡಬಾರದು ಎಂದು ಹೇಳಲಾಗುವುದು. ಹೀಗೆ ಮಾಡಿದಲ್ಲಿ ಆರ್ಥಿಕ ಸಮಸ್ಯೆ ಎದುರಾಗುವುದರ ಮೂಲಕ ಆತ್ಮಹತ್ಯೆಗೆ ಮುಂದಾಗುವರು.

ಆರೋಗ್ಯ ಸಮಸ್ಯೆಯಿಂದ ಆತ್ಮತ್ಯೆ
ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ವ್ಯಕ್ತಿ ಬಹುಬೇಗ ಚಿಂತೆ ಅಥವಾ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವನು. ದಕ್ಷಿಣ ಮುಖವಾಗಿ ಮನೆಯನ್ನು ನಿರ್ಮಿಸಬಾರದು. ಇಂತಹ ಮನೆಯಲ್ಲಿ ವಾಸಿಸುವುದರಿಂದ ಗಂಭೀರವಾದ ಆರೋಗ್ಯ ಸಮಸ್ಯೆಯಿಂದ ಬಳಲುವರು. ಜೊತೆಗೆ ನೆಮ್ಮದಿಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಮುಂದಾಗುವರು, ಪೂರ್ವ ದಿಕ್ಕಿನ ಬಾಗಿಲು ಉತ್ತಮ ಆರೋಗ್ಯವನ್ನು ಕಲ್ಪಿಸುವುದು.