For Quick Alerts
ALLOW NOTIFICATIONS  
For Daily Alerts

ಈ ಹಳ್ಳಿಯಲ್ಲಿ ಬ್ರಹ್ಮಚಾರಿಗಳಿಂದಲೇ ತುಂಬಿಕೊಂಡಿದೆ! ಪುರುಷರಿಗೆ ಇನ್ನೂ ಮದುವೆಯಾಗಿಲ್ಲ!

By Deepu
|

ಒಂದು ಗಂಡು ಮತ್ತು ಹೆಣ್ಣು ಸೇರಿ ಹೊಂದಾಣಿಕೆಯಿಂದ ಜೀವನ ನಡೆಸಿದಾಗ ಸುಂದರ ಸಂಸಾರ ಎನಿಸಿಕೊಳ್ಳುತ್ತದೆ. ಸಂಪ್ರದಾಯ ಬದ್ಧವಾದ ಸಂಸಾರಗಳ ಸಮೂಹದಿಂದಲೇ ಒಂದು ಉತ್ತಮ ಸಮಾಜ ಉದಯಿಸುವುದು. ಉತ್ತಮ ಸಮಾಜ ಎನಿಸಿಕೊಳ್ಳಬೇಕು ಎಂದಾದರೆ ಅಲ್ಲಿ ಕುಟುಂಬ ವ್ಯವಸ್ಥೆಯು ಕ್ರಮಬದ್ಧವಾಗಿ ನಡೆಯಬೇಕು. ಆಗಲೇ ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಯಾಗುವುದು. ಮಾನವ ಸಂಪನ್ಮೂಲವೂ ವೃದ್ಧಿಯಾಗುವುದು.

ಅಂತೆಯೇ ಒಂದು ಮನೆ ಹಾಗೂ ಊರು ಬೆಳಗಬೇಕು ಎಂದರೆ ಅಲ್ಲಿ ಸ್ತ್ರೀ ಎನ್ನುವ ದೇವತೆ ಇರಬೇಕು. ಒಂದು ಮನೆಯಲ್ಲಿ ಲಕ್ಷ್ಮಿ ನೆಲೆಸಲು, ಕುಟುಂಬ ಬೆಳೆಯಲು, ಮನೆ ಮಂದಿಗೆ ಪ್ರೀತಿ ವಾತ್ಸಲ್ಯ ತೋರಲು ತಾಯಿ, ಮಡದಿ, ಮಗಳು, ಸಹೋದರಿ ಎನ್ನುವಂತಹ ಪಾತ್ರಗಳನ್ನು ತುಂಬುವ ಮಹಿಳೆಯರು ಇರಬೇಕು. ಆಗಲೇ ಪುರುಷನ ಜೀವನವು ಸಾರ್ಥಕ ಎನಿಸಿಕೊಳ್ಳುವುದು. ಪುರುಷನ ಜೀವನದಲ್ಲಿ ಸ್ತ್ರೀ ಎನ್ನುವ ಶಕ್ತಿಯ ಪ್ರವೇಶವಾಗಿಲ್ಲವಾದರೆ ಜೀವನ ಬರಿದು ಎನಿಸಿಕೊಳ್ಳುವುದು.

village home

ಹೌದು ಇಂತಹ ಪರಿಸ್ಥಿತಿಯನ್ನು ಇಂದು ಅನೇಕ ಪುರುಷರು ಅನುಭವಿಸುತ್ತಿದ್ದಾರೆ ಎಂದರೆ ಸುಳ್ಳಾಗದು. ಇತ್ತೀಚೆಗೆ ಅನೇಕ ಜಾತಿ ಹಾಗೂ ಜನಾಂದ ಜನರಲ್ಲಿ ಸ್ತ್ರೀಯರ ಸಂಖ್ಯೆ ಇಲ್ಲದೆ ಇರುವುದರಿಂದ ಪುರುಷರು ವಿವಾಹ ಬಂಧನಕ್ಕೆ ಒಳಗಾಗದೆ ಹಾಗೆಯೇ ಉಳಿದುಕೊಂಡಿದ್ದಾರೆ. ಹೌದು ಇಂತಹದ್ದೇ ಒಂದು ಪರಿಸ್ಥಿತಿಯನ್ನು ಗುಜರಾತ್‍ನ ಸಿಯಾನಿ ಎನ್ನುವ ಹಳ್ಳಿಯ ಜನರು ಅನುಭವಿಸುತ್ತಿದ್ದಾರೆ.

ಬ್ರಹ್ಮಚಾರಿಗಳ ಹಳ್ಳಿಯಿದು...

ಈ ಹಳ್ಳಿಯಲ್ಲಿ ಇರುವ ಪುರುಷರು ನಿತ್ಯ ಮನೆಯ ಕೆಲಸದಿಂದ ಹಿಡಿದು ಹೊರಗಿನ ಕೆಲಸವನ್ನು ತಾವೇ ನಿರ್ವಹಿಸುತ್ತಾರೆ. ಸ್ತ್ರೀಯರು ಮಾಡುವ ಕೆಲಸಗಳನ್ನು ಸಹ ಇವರೇ ಮಾಡಿಕೊಳ್ಳುತ್ತಾರೆ. ಬಟ್ಟೆ ಒಗೆಯುವುದು, ತಮ್ಮ ಊಟ-ತಿಂಡಿಗೆ ಸಿದ್ಧಪಡಿಸುವುದು, ಮನೆಯನ್ನು ಸ್ವಚ್ಛಗೊಳಿಸುವುದು ಹೀಗೆ ಎಲ್ಲಾ ಕೆಲಸವನ್ನು ಇವರೇ ಮಾಡುತ್ತಾರೆ. ಇವರ ಸಹಾಯಕ್ಕೆ ಎಂದು ಯಾವುದೇ ಮಹಿಳೆಯಿಲ್ಲ. ಇವರು ತಮ್ಮ ಜೀವನದಲ್ಲಿ ವಿವಾಹವಾಗಿ, ಮಡದಿ-ಮಕ್ಕಳನ್ನು ಹೊಂದಬೇಕು. ಸಂಸಾರ ಎನ್ನುವ ಒಂದು ಪುಟ್ಟ ಕುಟುಂಬ ವ್ಯವಸ್ಥೆಯನ್ನು ಪಡೆದು ಕೊಳ್ಳಬೇಕು ಎನ್ನುವ ಕನಸು ಕಂಡರೂ ಅದು ನೆರವೇರದು. ಏಕೆಂದರೆ ಗುಜರಾತ್‍ನ ಸಿಯಾನಿ ಎನ್ನುವ ಈ ಗ್ರಾಮದಲ್ಲಿ ಮಹಿಳೆಯರ ಸಂಖ್ಯೆ ಬಹಳ ಕಡಿಮೆಯಿದೆ.

ವಿವಾಹವಾಗದಿರಲು ಕಾರಣಗಳು...

ಈ ಹಳ್ಳಿಯಲ್ಲಿ ಶೇ.70ರಷ್ಟು ಪುರುಷರು ವಿವಾಹವಾಗದೆ ಹಾಗೆಯೇ ಉಳಿದು ಕೊಂಡಿದ್ದಾರೆ. ಇಲ್ಲಿ ಶೇ. 35ರಷ್ಟು ವಿವಾಹಿತರು ತಮ್ಮ ವಯಸ್ಸಿಗೆ ಮುಂಚೆಯೇ ವಿವಾಹವಾಗಿದ್ದಾರೆ ಎಂದು ಹೇಳಲಾಗುತ್ತದೆ. ವಿವಾಹವಾಗದೆ ಉಳಿದ ಪುರುಷರ ವಯೋಮಿತಿ 20ನೇ ವರ್ಷದಿಂದ ಹಿಡಿದು 45 ವರ್ಷದ ವರೆಗಿನ ವ್ಯಕ್ತಿಗಳು ಇದ್ದಾರೆ ಎಂದು ಅಂದಾಜಿಸಲಾಗಿದೆ. ಇವರ ವಿವಾಹವಾಗದೆ ಇರಲು ಅನೇಕ ಕಾರಣಗಳಿವೆ. ಜಾತಿ, ಧರ್ಮ, ಜನಾಂಗ ಹಾಗೂ ಬಹುಮುಖ್ಯವಾಗಿ ಹೆಣ್ಣಿನ ಸಂಖ್ಯೆ ಎಂದು ಹೇಳಲಾಗುತ್ತಿದೆ. ಮಹಿಳೆಯರ ಸಂಖ್ಯೆ ಅತಿ ಕಡಿಮೆಯಾಗಿರುವುದರಿಂದ ಸಾಕಷ್ಟು ಪುರುಷರು ಬ್ರಹ್ಮಚಾರಿಗಳಾಗಿಯೇ ಉಳಿದಿದ್ದಾರೆ.

ಇವರಲ್ಲಿ ಆತ್ಮೀಯತೆ ಇದೆ...

ಈ ಪುರುಷರು ಅವಿವಾಹಿತರಾಗಿದ್ದರೂ ಪುರುಷರಲ್ಲಿಯೇ ಪರಸ್ಪರ ಸ್ನೇಹಪರ ಗುಣವನ್ನು ಹೊಂದಿದ್ದಾರೆ. ಇವರದ್ದು ಬ್ರಹ್ಮಚಾರಿಗಳ ಗುಂಪಾಗಿದ್ದರೂ ಒಂದೇ ಎಲೆಯಲ್ಲಿ ಊಟಮಾಡುವುದು, ಜೊತೆಯಲ್ಲಿ ಮಲಗುವುದು ಹಾಗೂ ಎಲ್ಲಾ ಕೆಲಸದಲ್ಲೂ ಪರಸ್ಪರ ಸಹಕಾರ ಹಾಗೂ ಸಂತೋಷದಿಂದ ನಿರ್ವಹಿಸುವ ಗುಣವನ್ನು ಹೊಂದಿದ್ದಾರೆ.

ಅಂಕಿ ಅಂಶಗಳ ಅವಲೋಕನ...

ಭಾರತದ ಜನಗಣತಿಯ ಅಂಕಿ ಅಂಶವನ್ನು ಪರಿಗಣಿಸುವುದಾದರೆ 2001ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ 933 ಪುರುಷರಿಗೆ 914 ಮಹಿಳೆಯರಿದ್ದರು ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ 10 ವರ್ಷದ ನಂತರ ನಡೆಸಿದ ಸಮೀಕ್ಷೆಯ ಪ್ರಕಾರ ಹೆಣ್ಣು ಬ್ರೂಣವನ್ನು ತೆಗೆಸುವುದು ಹಾಗೂ ಮಕ್ಕಳ ನಿಯಂತ್ರಣ ಕ್ರಮದಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಗಣನೀಯವಾದ ಇಳಿಮುಖವನ್ನು ಕಾಣಬಹುದಾಗಿದೆ. ಇದೀಗ 1000 ಹುಡುಗರಿಗೆ ಕೇವಲ 775 ಹುಡುಗಿಯರಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಂದಿನ ಸಮಾಜಕ್ಕೆ ಸೂಕ್ತ ಚಿಂತನೆ...

ಪ್ರಪಂಚದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡಿರುವ ನಮ್ಮ ದೇಶದಲ್ಲಿ ಸ್ತ್ರೀಯರ ಸಂಖ್ಯೆ ಹೀಗೆ ಇಳಿಮುಖವಾಗಿ ಸಾಗುತ್ತಿದ್ದರೆ ಮುಂದಿನ ಸಮಾಜದ ಭವಿಷ್ಯವೇನು? ಎನ್ನುವುದು ಚಿಂತನೆ ನಡೆಸಬೇಕಾದ ಪ್ರಶ್ನೆಯಾಗುವುದು. ದೇಶದ ವಿವಿಧೆಡೆ ಈಗಾಗಲೇ ಅನೇಕ ಪುರುಷರು ವಿವಾಹವಾಗದೆ ಬ್ರಹ್ಮಚಾರಿಗಳಾಗಿಯೇ ಉಳಿದಿದ್ದಾರೆ. ಈಗ ಬೆರಳೆಣಿಕೆಯಂತಿರುವ ಹಳ್ಳಿ ಪ್ರದೇಶಗಳು ಮುಂದಿನ ದಿನದಲ್ಲಿ ಬಹುತೇಕ ಸಂಖ್ಯೆಗಳಲ್ಲಿ ತುಂಬಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಾಗಿ ಆದಷ್ಟು ಹಣ್ಣು ಮಗುವಿನ ಭ್ರೂಣ ಹತ್ಯೆಯನ್ನು ತಡೆಗಟ್ಟುವುದರ ಬಗ್ಗೆ ಚಿಂತನೆ ನಡೆಸಬೇಕು.

English summary

Interesting Stories- A village full of bachelors!

A village by the name of siyani near gujarath has been tagged as a village full of bachelor men...hear no one get married till now! have a look
Story first published: Thursday, July 12, 2018, 17:22 [IST]
X
Desktop Bottom Promotion