For Quick Alerts
ALLOW NOTIFICATIONS  
For Daily Alerts

ರಾಶಿಚಕ್ರದ ಆಧಾರದ ಮೇಲೆ ಮೇಲಾಧಿಕಾರಿಗಳನ್ನು ನಿಭಾಯಿಸುವ ಪರಿ

By Deepu
|

ನಮ್ಮ ವ್ಯಕ್ತಿತ್ವ ಹಾಗೂ ಅಭಿರುಚಿಗಳು ಸಾಮಾನ್ಯವಾಗಿ ನಾವು ಬೆಳೆದು ಬಂದ ಪರಿಸರ ಹಾಗೂ ಸುತ್ತ-ಮುತ್ತಲಿನ ಜನರನ್ನು ಅವಲಂಬಿಸಿರುತ್ತದೆ ಎನ್ನಲಾಗುವುದು. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಮ್ಮ ಭಾವನೆಗಳು ಹಾಗೂ ವ್ಯಕ್ತಿತ್ವ ಎಲ್ಲವೂ ರಾಶಿಚಕ್ರದ ಪ್ರಭಾವಕ್ಕೆ ಒಳಗಾಗಿರುತ್ತದೆ. ಗ್ರಹಗತಿಗಳ ಬದಲಾವಣೆ ಹಾಗೂ ನಕ್ಷತ್ರಗಳ ಪ್ರಭಾವದಿಂದ ಭವಿಷ್ಯ ನಿರ್ಧಾರವಾಗುತ್ತದೆ ಎನ್ನಲಾಗುವುದು.

ಹೌದು, ಪ್ರತಿಯೊಂದು ರಾಶಿಚಕ್ರವು ಭೂಮಿ, ನೀರು, ಬೆಂಕಿ, ವಾಯು ಗಳಿಗೆ ಅನುಗುಣವಾಗಿ ಒಂದು ಚಿಹ್ನೆಯನ್ನು ಹೊಂದಿರುತ್ತವೆ. ಅವುಗಳ ಆಧಾರದ ಮೇಲೆಯೇ ವ್ಯಕ್ತಿಯ ವ್ಯಕ್ತಿತ್ವ ಸ್ವಭಾವಗಳು ಇರುತ್ತವೆ ಎಂದು ಹೇಳಲಾಗುವುದು. ಅದರಲ್ಲೂ ಕೆಲಸ ಮಾಡುವ ಸ್ಥಳದಲ್ಲಿ ಇವರು ಮೇಲಾಧಿಕಾರಿಗಳೊಂದಿಗೆ ಹಾಗೂ ಸಹೋದ್ಯೋಗಿಗಳೊಂದಿಗೆ ಹೇಗೆ ವರ್ತಿಸುತ್ತಾರೆ ಎನ್ನುವುದು ಸಹ ರಾಶಿಚಕ್ರವೇ ನಿರ್ಧರಿಸುತ್ತದೆ ಎಂದು ಹೇಳಲಾಗುತ್ತದೆ.

ಮೇಷ

ಮೇಷ

ಈ ರಾಶಿಯ ವ್ಯಕ್ತಿಗಳು ಏಕಾಂಗಿಯಾಗಿ ವೈಯಕ್ತಿಕವಾಗಿ ಚಾತುರ್ಯತೆಯನ್ನು ಹೊಂದಿರುತ್ತಾರೆ. ಇವರು ಎಲ್ಲಾ ಕೆಲಸದಲ್ಲೂ ಅರ್ಹರಾಗಿರುತ್ತಾರೆ. ಇವರು ಕಡಿಮೆ ಮೆಚ್ಚುಗೆಯನ್ನು ಪಡೆದುಕೊಂಡಿದ್ದರೂ ಯಾವುದೇ ಚಿಂತನೆಯನ್ನು ನಡೆಸುವುದಿಲ್ಲ. ಬದಲಿಗೆ ಕೈಯಲ್ಲಿದ್ದ ಕೆಲಸದ ಬಗ್ಗೆ ಹೆಚ್ಚು ಗಮನ ಕೇಂದ್ರಿಕರಿಸುತ್ತಾರೆ. ಇನ್ನು ಈ ರಾಶಿಯವರು ಉತ್ತಮ ಮಾತುಗಾರಿಕೆಯನ್ನು ಹೊಂದಿರುತ್ತಾರೆ. ಇವರಲ್ಲಿ ಮಾತಿನ ಕಲೆ, ಆತ್ಮವಿಶ್ವಾಸ ಮತ್ತು ಹಠಾತ್ ಆಗಿ ನಿರ್ಧಾರಕ್ಕೆ ಬರುವ ಇವರಿಗೆ ಸರಿಯಾಗಿ ಹೊಂದಿಕೊಳ್ಳುವ ಕೆಲಸವೆಂದರೆ ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗ, ಕಾಮಗಾರಿ ವೃತ್ತಿ, ಹೊಟೇಲ್ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಉದ್ಯೋಗವು ಸೂಕ್ತವಾಗಿರುವುದು.

ವೃಷಭ

ವೃಷಭ

ಇವರು ಹೆಚ್ಚು ಹೊಂದಾಣಿಕೆಯ ಪ್ರವೃತ್ತಿಯವರಾಗಿದ್ದಾರೆ. ಭಿನ್ನಾಭಿಪ್ರಾಯದ ಸಮಸಯದಲ್ಲಿ ವಿಷಯವನ್ನು ಪರಿಶೀಲಿಸುವುದು ಮುಖ್ಯವೆಂದು ಭಾವಿಸುತ್ತಾರೆ. ಇವರು ಕೆಲಸದಲ್ಲಿ ಅಥವಾ ಅಲ್ಲಿಯ ಪರಿಸರದಲ್ಲಿರುವ ಕೆಲಸದ ಒತ್ತಡವನ್ನು ಅಂತ್ಯಗೊಳಿಸಲು ಪ್ರಯತ್ನಿಸುತ್ತಾರೆ. ವಿಷಯಗಳನ್ನು ಸೂಕ್ತ ರೀತಿಯಲ್ಲಿ ಮಾತನಾಡುವುದರಿಂದ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇವರು ತುಂಬಾ ವಿಶ್ವಾಸಾರ್ಹ, ಪ್ರಾಯೋಗಿಕ ಮತ್ತು ಪ್ರಾಮಾಣಿಕ ವ್ಯಕ್ತಿಗಳಾಗಿರುತ್ತಾರೆ. ಅತಿರಂಜಿತ ಜೀವನಶೈಲಿ ಅಥವಾ ಆಧ್ಯಾತ್ಮಿಕತೆಯ ಸೊಬಗು ಇರುವಂತಹ ಉದ್ಯೋಗವನ್ನು ಇವರು ಇಷ್ಟಪಡುತ್ತಾರೆ.

ಮಿಥುನ

ಮಿಥುನ

ಇವರು ಬುದ್ಧಿವಂತಿಕೆಯಿಂದ ವಾದಿಸುತ್ತಾರೆ. ಇದರಿಂದಲೇ ತಮ್ಮ ಕೌಶಲ್ಯವನ್ನು ಬೆಳಕಿಗೆ ತರುತ್ತಾರೆ. ಆದರೆ ಇವರು ತಮ್ಮ ಮುಖ್ಯಸ್ಥರೊಂದಿಗೆ ಆದಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇವರು ಹೆಚ್ಚು ವಿಶ್ವಾಸಾರ್ಹ ಹಾಗೂ ತೆರೆದ ಮನಸ್ಸಿನವರಾಗಿರುತ್ತಾರೆ. ಈ ರಾಶಿಯವರು ತುಂಬಾ ನುರಿತ ಸಂವಹನಕಾರರಾಗಿರುತ್ತಾರೆ. ಚರ್ಚೆ ಮತ್ತು ಆಲೋಚನೆಗಳನ್ನು ಹಂಚಿಕೊಳ್ಳುವುದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಹುರಿದುಂಬಿಸುವ ಹಾಗೂ ಆಸಕ್ತಿ ಹುಟ್ಟಿಸುವಂತಹ ವೃತ್ತಿ ಅವರಿಗೆ ಬೇಕಾಗಿದೆ. ಈ ರಾಶಿಯವರಿಗೆ ಹೊಂದಿಕೊಳ್ಳುವ ವೃತ್ತಿಗಳೆಂದರೆ ಕಲೆ, ವಿನ್ಯಾಸ, ವಾಸ್ತುಶಿಲ್ಪ, ನರ್ಸಿಂಗ್, ಮಾರಾಟ, ಕಾನೂನು ಜಾರಿ ಮತ್ತು ಅಗ್ನಿಶಾಮಕದಲ್ಲಿ ಕೆಲಸಗಳು.

ಕರ್ಕ

ಕರ್ಕ

ಇವರು ತಮ್ಮ ಅಗತ್ಯಕ್ಕೆ ತಕ್ಕಂತೆ ವರ್ತಿಸುತ್ತಾರೆ. ಕೆಲವೊಮ್ಮೆ ಕೆಲವು ವಿಚಾರಗಳಿಗೆ ಬಹಳ ಭಯಭೀತರಾಗುವ ಸಾಧ್ಯತೆಗಳಿರುತ್ತವೆ. ಅವರು ಅದರ ಬಗ್ಗೆ ಹೆಚ್ಚು ಗಮನ ನೀಡಬೇಕಾಗುವುದು ಅಗತ್ಯ. ಮೇಲಾಧಿಕಾರಿಗಳು ನಮ್ಮ ಮನಸ್ಸನ್ನು ಓದುವ ಚಾತುರ್ಯವನ್ನು ಹೊಂದಿರುವುದಿಲ್ಲ ಎನ್ನುವುದನ್ನು ತಿಳಿದಿಕೊಳ್ಳಬೇಕು. ಇನ್ನು ಈ ರಾಶಿಯವರು ಕರಣಾಮಯಿಗಳು, ಕಲಾತ್ಮಕತೆ ಹಾಗೂ ರಕ್ಷಣಾತ್ಮಕವಾಗಿರುವ ವ್ಯಕ್ತಿಗಳಾಗಿರುತ್ತಾರೆ. ಇವರು ಚರ್ಚೆ ಹಾಗೂ ಆಲೋಚನೆಗಳನ್ನು ಹಂಚಿಕೊಳ್ಳುವಲ್ಲಿ ನೈಪುಣ್ಯರು. ಇವರಿಗೆ ಹೊಂದಿಕೆಯಾಗುವ ವೃತ್ತಿಗಳೆಂದರೆ ಸರ್ಕಾರಿ ಕೆಲಸ, ಕಾನೂನು ಸೇವೆ, ಜಾಹೀರಾತು, ಉನ್ನತ ಶಿಕ್ಷಣ, ಯಂತ್ರಗಳ ನಿರ್ವಹಣೆ, ಸಾರಿಗೆ ಮತ್ತು ಸೇನೆ.

ಸಿಂಹ

ಸಿಂಹ

ಇವರು ಆದಷ್ಟು ಶಾಂತ ರೀತಿಯಲ್ಲಿ ಇರುವುದನ್ನು ಕಲಿಯಬೇಕು. ಏಕೆಂದರೆ ಇವರು ಕೆಲವೊಮ್ಮೆ ಭಾವೋದ್ರಿಕ್ತರಾಗಿ ಏನು ಮಾಡುತ್ತಾರೆ ಎನ್ನುವುದು ಅವರಿಗೇ ತಿಳಿದಿರುವುದಿಲ್ಲ. ಇವರ ಸ್ವಭಾವವು ನಿಷ್ಕ್ರಿಯ ಆಕ್ರಮಣಕಾರಿ ನಡವಳಿಕೆಯಿಂದ ಕೂಡಿರುತ್ತದೆ. ಬಹಳ ಬುದ್ಧಿವಂತಿಕೆಯಿಂದ ಮೇಲಾಧಿಕಾರಿಗಳೊಂದಿಗೆ ವ್ಯವಹರಿಸುತ್ತಾರೆ. ಅಧಿಕಾರ ಹಾಗೂ ನಾಯಕತ್ವದ ನಿಜವಾದ ಅಭಿಲಾಷೆ ಇವರಲ್ಲಿ ಇರುತ್ತದೆ. ಇವರು ತುಂಬಾ ಆತ್ಮವಿಶ್ವಾಸ, ಆಶಾವಾದಿ, ವರ್ಚಸ್ವಿ ಮತ್ತು ಹುಟ್ಟು ಮನೋರಂಜಕರಾಗಿರುತ್ತಾರೆ.

ಕನ್ಯಾ

ಕನ್ಯಾ

ಇವರು ಕೆಲಸ ಮಾಡುವ ಜಾಗದಲ್ಲಿ ಆದಷ್ಟು ಮುಕ್ತರಾಗಿರಬೇಕು ಎನ್ನುವುದನ್ನು ಅರಿಯಬೇಕಿದೆ. ಹೆಚ್ಚು ಭಾವನಾತ್ಮಕವಾಗಿ ಇರುತ್ತಾರೆ. ಶೇ. 100ರಷ್ಟು ಪರಿಪೂರ್ಣರು ಎಂದು ಭಾವಿಸುತ್ತಾರೆ. ಜೊತೆಗೆ ಮೇಲಾಧಿಕಾರಿಗಳೊಂದಿಗೂ ಹಾಗೆಯೇ ವರ್ತಿಸುತ್ತಾರೆ. ಇದು ಅವರ ಮಾರ್ಗಕ್ಕೆ ಅಷ್ಟು ಉತ್ತಮವಾದ ಫಲಿತಾಂಶ ನೀಡದು. ಇವರು ಜ್ಞಾನ ಮತ್ತು ಅರ್ಥದ ಕಡೆ ಆಕರ್ಷಿತರಾಗುವಂತಹ ವ್ಯಕ್ತಿಗಳಾಗಿರುತ್ತಾರೆ. ನಿಖರತೆ, ವಿವರ ಮತ್ತು ಸಂಶೋಧನೆ ಎನ್ನುವುದು ಇವರ ವ್ಯಕ್ತಿತ್ವದಲ್ಲೇ ಇರುತ್ತದೆ. ಇವರಿಗೆ ಹೊಂದಿಕೆಯಾಗುವಂತಹ ಕೆಲಸಗಳೆಂದರೆ ಸಮಾಜ ಸೇವೆ, ಮಾರಾಟ, ಸಂಕಲನ, ಬರಹ ಮತ್ತು ಅಡುಗೆಯಲ್ಲಿ ತೊಡಗಿಕೊಳ್ಳಬಹುದು.

ತುಲಾ

ತುಲಾ

ಈ ವ್ಯಕ್ತಿಗಳು ಸಮಸ್ಯೆಗಳ ವಿಚಾರದಲ್ಲಿ ತುಲನಾತ್ಮಕವಾಗಿ ಇರುತ್ತಾರೆ. ಎಲ್ಲದರಲ್ಲೂ ರಾಜತಾಂತ್ರಿಕತೆಯನ್ನು ಇವರು ಹೊಂದಿರುತ್ತಾರೆ ಎಂದು ಹೇಳಲಾಗುವುದು. ಇವರು ಆಪಾದನೆ ಮಾಡುವ ಬದಲು ವಿವಾದಕ್ಕೆ ಕಾರಣವೇನು ಎನ್ನುವುದನ್ನು ಅರಿಯಲು ಪ್ರಯತ್ನಿಸುತ್ತಾರೆ. ತಮ್ಮ ಕೆಲಸದಲ್ಲಿ ಶ್ರದ್ಧೆ ಹಾಗೂ ನಿಷ್ಠೆಯನ್ನು ತೋರುವುದರಿಂದ ಎಲ್ಲರ ಮೆಚ್ಚುಗೆ ಪಡೆದುಕೊಳ್ಳುವರು. ಈ ರಾಶಿಯವರು ರಾಜತಾಂತ್ರಿಕ ಮತ್ತು ಸ್ನೇಹಪರರಾಗಿರುತ್ತಾರೆ. ವೃತ್ತಿಯಲ್ಲಿ ಇವರಿಗೆ ಸಂತೋಷ ಸಿಗಬೇಕಾದರೆ ಮನುಷ್ಯರೊಂದಿಗೆ ಸಂವಾದ ಮಾಡುತ್ತಾ ಇರಬೇಕು. ಇವರು ತುಂಬಾ ಸಹಕಾರಿಗಳು ಮತ್ತು ಹೊಂದಾಣಿಕೆಯ ಸ್ವಭಾವದವರು. ಇವರಲ್ಲಿ ನ್ಯಾಯ ಹಾಗೂ ನಿಷ್ಠೆಯಿರುತ್ತದೆ.

ವೃಶ್ಚಿಕ

ವೃಶ್ಚಿಕ

ಇವರು ಮೇಲಾಧಿಕಾರಿಗಳೊಂದಿಗೆ ಒಮ್ಮತಕ್ಕೆ ಬರಲು ಗಮನಹರಿಸಬೇಕು ಇವರು ಕೆಲವೊಮ್ಮೆ ಬಲಿಪಶುಗಳಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಆದಷ್ಟು ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕು. ಅವರು ಮಾಡಬೇಕಾದುದ್ದೆಲ್ಲವನ್ನೂ ಚಿಂತನೆಯ ಮಾರ್ಗದಲ್ಲಿ ಮನವೊಲಿಸುವ ಕೆಲಸ ಮಾಡಬೇಕು.

ಧನು

ಧನು

ಇವರು ಏಕಾ ಏಕಿ ಕೆಲಸಕ್ಕೆ ಧುಮುಕುವುದು, ಒರಟಾದ ರೀತಿಯಲ್ಲಿ ವರ್ತಿಸುವುದು ಮಾಡುತ್ತಾರೆ. ಕೆಲಸದ ಕ್ಷೇತ್ರದಲ್ಲಿ ಸಂಘರ್ಷಕ್ಕೆ ಒಳಗಾದರೆ ಅದರಿಂದ ಹೊರಬರಲು ಪ್ರಯತ್ನಿಸುತ್ತಾರೆ. ಏಕೆಂದರೆ ಇವರಿಗೆ ಸಹೋದ್ಯೋಗಿಗಳು ಹಾಗೂ ಮೇಲಾಧಿಕಾರಿಗಳು ಹೆಚ್ಚು ಸಂತೋಷದಿಂದ ಇರುವುದನ್ನು ಬಯಸುತ್ತಾರೆ.

ಮಕರ

ಮಕರ

ಇವರು ವೃತ್ತಿ ಕ್ಷೇತ್ರದಲ್ಲಿ ಪರಿಪೂರ್ಣತೆಯನ್ನು ತೋರಲು ಬಯಸುತ್ತಾರೆ. ಇವರು ಯಾವುದೆ ಸಮಸ್ಯೆಗಳಿಗೆ ಸಿಲುಕಿಕೊಂಡರೆ ಅದರಿಂದ ಹೊರ ಬರಲು ತಿಳಿದಿರುತ್ತಾರೆ. ಜೊತೆಗೆ ಮೇಲಾಧಿಕಾರಿಯೊಂದಿಗೆ ಹೇಗೆ ಮಾತನಾಡಬೇಕು? ಹೇಗೆ ವರ್ತಿಸಬೇಕು ಎನ್ನುವುದು ತಿಳಿದಿರುವುದರಿಂದ ಬಹಳ ಮೃದುವಾದ ವರ್ತನೆಯನ್ನು ತೋರುತ್ತಾರೆ.

ಕುಂಭ

ಕುಂಭ

ಈ ವ್ಯಕ್ತಿಗಳು ತಮ್ಮ ಭಿನ್ನಾಭಿಪ್ರಾಯವನ್ನು ವೈಯಕ್ತಿಕವಾಗಿ ಇಟ್ಟುಕೊಳ್ಳುವುದನ್ನು ಅರಿತಿರಬೇಕು. ನಾಟಕೀಯ ಪ್ರವೃತ್ತಿಯಿಂದ ಹೊರಬರಬೇಕು. ಸಹೋದ್ಯೋಗಿಗಳ ಕುರಿತು ದೂರು ಸಲ್ಲಿಸುವುದನ್ನು ನಿಲ್ಲಿಸಬೇಕು. ಸಮಂಜಸವಾಗಿ ಮಾತನಾಡುವುದನ್ನು ತಿಳಿಯಬೇಕಿದೆ.

ಮೀನ

ಮೀನ

ಈ ವ್ಯಕ್ತಿಗಳು ಹೆಚ್ಚು ಸ್ವತಂತ್ರರಾಗಿರಲು ಬಯಸುತ್ತಾರೆ. ಇತರರು ಇವರನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಾರೆ. ಇದು ಅವರಿಗೆ ತಿಳಿದಾಗ ಸ್ನೇಹಪರರಂತೆ ವರ್ತಿಸುವರು. ಇವರ ಸ್ನೇಹದ ವರ್ತನೆ ಹಾಗೂ ಗುಣದಿಂದಲೇ ಎಲ್ಲರಲ್ಲೂ ಒಳ್ಳೆಯ ಭಾವನೆ ಮೂಡುವಂತೆ ಮಾಡುವರು. ತಾವು ಮಾಡುವ ಉದ್ಯೋಗದ ಕ್ಷೇತ್ರದಲ್ಲೂ ಅದೇ ವರ್ತನೆಯನ್ನು ತೋರುವರು.

English summary

How To Handle Disagreement With Boss

Here, in this article, we are revealing to you about the facts on how each of the zodiac signs would handle disagreement, especially at their work space with their boss! While some stay naive, there are those too who simply storm out! Here, we are revealing about all the 12 sun signs. Check out on how your sign would react.
X
Desktop Bottom Promotion