For Quick Alerts
ALLOW NOTIFICATIONS  
For Daily Alerts

ಅಚ್ಚರಿ ಜಗತ್ತು: ಮುಂಜಾನೆಯ 3 ಗಂಟೆ 'ದೆವ್ವ' ಗಳು ಓಡಾಡುವ ಸಮಯವಂತೆ!

|
ಮುಂಜಾನೆ 3 ಗಂಟೆ ದೆವ್ವಗಳ ಸಮಯ ಎಂದು ಹೇಳಲು ಕಾರಣವೇನು?

ವ್ಯಕ್ತಿ ಸತ್ತಾಗ, ಅವನ ಶವ ಸಂಸ್ಕಾರವನ್ನು ಸೂಕ್ತ ರೀತಿಯಲ್ಲಿ ನಡೆಸದೆ ಇದ್ದರೆ ಆತ್ಮಕ್ಕೆ ಮುಕ್ತಿ ದೊರೆಯದು. ಬದಲಿಗೆ ಅಂತರ್ ಪಿಶಾಚಿಯಂತೆ ಅಲೆದಾಡುತ್ತಿರುತ್ತದೆ. ಜೊತೆಗೆ ಮನುಷ್ಯರಿಗೆ ತೊಂದರೆ ನೀಡುತ್ತದೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲದೆ ವ್ಯಕ್ತಿಗೆ ಮೋಸ ಎಸಗಿ ಕೊಲೆ ಮಾಡುವುದು, ಬಹಳ ಚಿಕ್ಕ ವಯಸ್ಸಿನಲ್ಲೇ ಅವಘಡದಿಂದ ಸಾವನ್ನಪ್ಪುವುದು ಹಾಗೂ ಅನಿರೀಕ್ಷಿತವಾದ ಸಾವಿನಿಂದ ಆತ್ಮಕ್ಕೆ ಸದ್ಗತಿ ದೊರೆಯದೆ ಇದ್ದಾಗ ದೆವ್ವ/ಪಿಶಾಚಿಗಳ ಸಂಖ್ಯೆ ಹೆಚ್ಚುವುದು. ಅವು ನಮ್ಮ ಸುತ್ತಲಲ್ಲೇ ಅಲೆದಾಡುತ್ತಿರುತ್ತವೆ ಎಂದು ಸಹ ನಂಬಲಾಗುವುದು.

ಈ ಆತ್ಮಗಳು ಸಾಮಾನ್ಯವಾಗಿ ಪರಿಸರದಲ್ಲಿ ಶಾಂತಿ ನೆಲೆಸಿದ ಮೇಲೆ ಅಂದರೆ ಮುಂಜಾನೆ 3 ಗಂಟೆಯ ಸಮಯದಲ್ಲಿ ಚಟುವಟಿಕಾ ಶೀಲರಾಗುತ್ತಾರೆ. ಹಾಗಾಗಿ ಈ ಸಮಯದಲ್ಲಿ ಮನೆಯಿಂದ ಆಚೆ ಹೋಗಬಾರದು. ಈ ಸಮಯದಲ್ಲಿ ಅನಗತ್ಯವಾಗಿ ಅನುಚಿತವಾದ ಸ್ಥಳಗಳಿಗೆ ಹೋಗಬಾರದು ಎಂದು ಹೇಳಲಾಗುವುದು. ಅಲ್ಲದೆ ಆತ್ಮಗಳು ಯಾವ ವಿಚಾರದಿಂದ ಅತೃಪ್ತವಾಗಿದೆಯೋ ಅಂತಹ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಪ್ರದೇಶಗಳಲ್ಲಿ ಓಡಾಡುತ್ತಲೆ ಇರುತ್ತವೆ ಎನ್ನಲಾಗುವುದು. ದೆವ್ವ ಅಥವಾ ಪಿಶಾಚಿಗಳು ಏಕೆ ನಿಗಧಿತವಾಗಿ ಮುಂಜಾನೆಯ 3 ಗಂಟೆಗೆ ಹೆಚ್ಚು ಕಾರ್ಯ ಚಕಿತರಾಗಿರುತ್ತಾರೆ? ಎನ್ನುವುದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಮುಂದೆ ನೀಡಿರುವ ವಿವರಣೆಯನ್ನು ಪರಿಶೀಲಿಸಿ...

ದೆವ್ವದ ಸಮಯ!

ದೆವ್ವದ ಸಮಯ!

ಸಾಮಾನ್ಯವಾಗಿ ಮನುಷ್ಯರು ಸೇರಿದಂತೆ ಬಹುತೇಕ ಪ್ರಾಣಿ-ಪಕ್ಷಿಗಳು ರಾತ್ರಿ 12 ಗಂಟೆಯ ನಂತರ ಗಾಢವಾದ ನಿದ್ರೆಯಲ್ಲಿ ಜಾರಿರುತ್ತಾರೆ. ಅಂತಹ ಸಮಯದಲ್ಲಿ ದುಷ್ಟ ಶಕ್ತಿಗಳನ್ನು ನಿಯಂತ್ರಿಸುವಂತಹ ಯಾವುದೇ ಕಾರ್ಯಗಳು ನೆರವೇರುವುದಿಲ್ಲ. ಹಾಗಾಗಿ ಆತ್ಮಗಳು ಅಥವಾ ದೆವ್ವಗಳು ಮುಂಜಾನೆಯ 3 ಗಂಟೆಯಿಂದ 4 ಗಂಟೆಯ ಸಮಯದಲ್ಲಿ ಹೆಚ್ಚು ಕ್ರಿಯಾಶೀಲವಾಗಿರುತ್ತವೆ ಎಂದು ಹೇಳಲಾಗುವುದು.

ಇದು ದುರಾದೃಷ್ಟದ ಸಮಯ

ಇದು ದುರಾದೃಷ್ಟದ ಸಮಯ

ಕ್ರಿಶ್ಚಿಯನ್ ಅವರ ನಂಬಿಕೆಯ ಪ್ರಕಾರ ಮುಂಜಾನೆಯ 3 ಗಂಟೆಯ ವೇಳೆಯಲ್ಲಿ ಜೀಸಸ್‍ಅನ್ನು ಶಿಲುಬೆಗೆ ಏರಿಸಲಾಯಿತು ಎಂದು ಹೇಳಲಾಗುತ್ತದೆ. ನಿಶ್ಯಬ್ದದಿಂದ ಕೂಡಿರುವಂತಹ ರಾತ್ರಿ 12 ಗಂಟೆಯ ನಂತರ ಮುಂಜಾನೆ 3 ಗಂಟೆಯ ಸಮಯವನ್ನು ದುರಾದೃಷ್ಟಕರವಾದ ಸಮಯ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ದೆವ್ವಗಳು ಹೆಚ್ಚು ಓಡಾಡುತ್ತವೆ. ಆಧ್ಯಾತ್ಮದಲ್ಲಿ ಮುಂಜಾನೆಯ 3 ಗಂಟೆಯ ಸಮಯವನ್ನು ದುರ್ಬಲವಾದ ಸಮಯ ಎಂದು ಪರಿಗಣಿಸಲಾಗುವುದು.

ಆಚರಣೆಗಳು

ಆಚರಣೆಗಳು

ಧಾರ್ಮಿಕ ನಂಬಿಕೆಯ ಪ್ರಕಾರ ಈ ಸಮಯವನ್ನು ತ್ಯಾಗದ ಸಮಯ ಹಾಗೂ ಋಣಾತ್ಮಕ ಶಕ್ತಿಯ ಸಮಯ ಎಂದು ಹೇಳಲಾಗುವುದು. ಈ ಸಮಯದಲ್ಲಿ ಸಾಮಾನ್ಯವಾಗಿ ಯಾವುದೇ ಧಾರ್ಮಿಕ ಆಚರಣೆಯನ್ನು ಕೈಗೊಳ್ಳುವುದಿಲ್ಲ ಎಂದು ಹೇಳಲಾಗುವುದು. ಈ ಸಮಯವು ಹೆಚ್ಚು ಶಕ್ತಿಯುತವಾದ ಸಮಯವಲ್ಲ ಎಂದು ಪರಿಗಣಿಸಲಾಗಿದೆ.

ಚಲನ ಚಿತ್ರಗಳಲ್ಲೂ ಈ ಸಮಯ ಭಯಾನಕವಾದದ್ದು!

ಚಲನ ಚಿತ್ರಗಳಲ್ಲೂ ಈ ಸಮಯ ಭಯಾನಕವಾದದ್ದು!

ಭಯಾನಕ ಅಥವಾ ದೆವ್ವದ ಸಿನಿಮಾಗಳಲ್ಲಿ 3ಗಂಟೆಯು ಅಪವಿತ್ರವಾದ ಸಮಯ ಎಂದು ತೋರಿಸಲಾಗುತ್ತದೆ. ಕಂಜ್ಯೂರಿಂಗ್, ದಿಎಕ್ಸಾರ್ಸಿಸಮ್ ಆಫ್ ಎಮಿಲಿ ರೋಸ್, ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ 3ಗಂಟೆಯು ಭಯಾನಕವಾದದ್ದು ಎಂದು ತೋರಿಸಲಾಗಿದೆ. ಮುಂಜಾನೆಯ 3 ಗಂಟೆಯಲ್ಲಿ ದೆವ್ವಗಳು ಎದ್ದೇಳುತ್ತವೆ ಎಂದು ಹೇಳಲಾಗುವುದು.

ಅಷ್ಟಕ್ಕೂ ಇದೆಲ್ಲಾ ನಿಜವೇ?

ಅಷ್ಟಕ್ಕೂ ಇದೆಲ್ಲಾ ನಿಜವೇ?

ವಾಸ್ತವ ಜೀವನದಲ್ಲಿ ಈ ಸಮಯವು ದೆವ್ವಕ್ಕೆ ಸೀಮಿತವಾದದ್ದು ಎಂದು ಸಾಬೀತು ಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಈ ಸಮಯ ದೆವ್ವಕ್ಕೆ ಮೀಸಲಾಗಿದ್ದು ಎಂದು ಹೇಳುವುದಕ್ಕೆ ವೈಜ್ಞಾನಿಕ ಸಿದ್ಧಾಂತಗಳಿಲ್ಲದೆ ಇರುವುದರಿಂದ ಇಂದಿಗೂ ಈ ವಿಚಾರ ಚರ್ಚೆಯಲ್ಲಿರುವುದನ್ನು ನಾವು ಗಮನಿಸಬಹುದು.

ವಿಜ್ಞಾನದ ಪ್ರಕಾರ

ವಿಜ್ಞಾನದ ಪ್ರಕಾರ

ವಿಜ್ಞಾನದ ಪ್ರಕಾರ ರಾತ್ರಿಯ ಸಮಯದಲ್ಲಿ ಅಂದರೆ 12 ಗಂಟೆಯ ನಂತರದ ವೇಳೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ನಿದ್ರೆಯಲ್ಲಿ ಇರುತ್ತಾರೆ. ಅದರಲ್ಲೂ 3 ಗಂಟೆಯ ವೇಳೆಗೆ ಹೃದಯ ಬಡಿತ, ಹೃದಯದ ಒತ್ತಡ, ನಾಡಿ ಸೇರಿದಂತೆ ದೇಹವು ಸಂಪೂರ್ಣವಾಗಿ ಶಾಂತವಾಗಿರುತ್ತದೆ. ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಎಚ್ಚರವಾದರೆ ವಿಲಕ್ಷಣ ಅಥವಾ ಅಸಹಜ ಅನುಭವವನ್ನು ಹೊಂದಿದ ಅನುಭವ ಆಗುವುದು ಎಂದು ಹೇಳಲಾಗುವುದು.

English summary

Have You Wondered Why Is Called The Devil's Hour?

Have you ever wondered why 3 am is known as the devil's hour? It is believed that the evil spirits which lead hell are known to be most active at this hour of the day. Here in this article, we will also reveal to you the details about the reasons as to why 3 am is known to be the devil's hour!
Story first published: Friday, July 20, 2018, 17:20 [IST]
X
Desktop Bottom Promotion