For Quick Alerts
ALLOW NOTIFICATIONS  
For Daily Alerts

ವ್ಯಕ್ತಿ ಕುಡಿಯುವ ಚಹಾದಿಂದ ಕೂಡ ಆತನ ವ್ಯಕ್ತಿತ್ವ ತಿಳಿಯಬಹುದಂತೆ!!

|

ವ್ಯಕ್ತಿತ್ವ ತಿಳಿಯಲು ಹಲವಾರು ವಿಧಾನಗಳು ಇವೆ. ಇದರಲ್ಲಿ ಕೆಲವೊಂದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ನೀವು ಧರಿಸುವ ಬಟ್ಟೆ, ನಡೆಯುವ ರೀತಿ, ಮಾತನಾಡುವ ರೀತಿ ಇತ್ಯಾದಿಗಳಿಂದಲೂ ವ್ಯಕ್ತಿತ್ವ ತಿಳಿಯಬಹುದು. ಆದರೆ ಕುಡಿಯುವ ಚಾದಿಂದ ವ್ಯಕ್ತಿತ್ವ ತಿಳಿಯಬಹುದು ಎಂದು ನಿಮಗೆ ಯಾವತ್ತಾದರೂ ಹೊಳೆದಿದೆಯಾ?

ಹೌದು, ನೀವು ಕುಡಿಯುವ ಚಾವನ್ನು ಆಧರಿಸಿಕೊಂಡು ನಿಮ್ಮ ವ್ಯಕ್ತಿತ್ವ ಹೇಗೆ ಎಂದು ತಿಳಿಯಬಹುದಂತೆ. ಇದಕ್ಕೆ ಇರಬೇಕು ನಾವು ಹೋದ ಕಡೆ ಚಾ ಕುಡಿಯಿರಿ ಎಂದು ಹೇಳುವುದು! ಅದೇನೇ ಇರಲಿ, ಈ ಲೇಖನದಲ್ಲಿ ನೀವು ಯಾವ ರೀತಿಯ ಚಾ ಕುಡಿಯುತ್ತೀರಿ ಎನ್ನುವುದನ್ನು ಆಧರಿಸಿಕೊಂಡು ವ್ಯಕ್ತಿತ್ವವನ್ನು ಹೇಳಲಾಗುವುದು. ಇದನ್ನು ತಿಳಿಯಲು ಸಜ್ಜಾಗಿರಿ...

ಮೂಲ ಚಹಾ

ಮೂಲ ಚಹಾ

ಇದು ನಿಮ್ಮ ಆಯ್ಕೆಯಾಗಿದ್ದರೆ ಆಗ ನೀವು ಪ್ರೀತಿಪಾತ್ರರಿಗೆ ಮಿತಿ ಗೊತ್ತಿಲ್ಲದ ವ್ಯಕ್ತಿ. ವೈಯಕ್ತಿಕವಾಗಿ ನೀವು ಇತರರೊಂದಿಗೆ ಚಾ ಹಂಚಿಕೊಳ್ಳುವುದರಲ್ಲಿ ಸ್ವಾರ್ಥಿಗಳಾಗಿರುವಿರಿ. ನಿಮ್ಮ ವ್ಯಕ್ತಿತ್ವವು ಗೌಪ್ಯವಾಗಿರುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧದ ಬಗ್ಗೆ ಹೇಳಿಕೊಳ್ಳಲ್ಲ.

ಗ್ರೀನ್ ಟೀ (ಹಸಿರು ಚಹಾ)

ಗ್ರೀನ್ ಟೀ (ಹಸಿರು ಚಹಾ)

ಗ್ರೀನ್ ಟೀ ನೀವು ಕುಡಿಯುವುದಾದರೆ ಆಗ ನೀವು ತುಂಬಾ ಧನಾತ್ಮಕತೆ ಹೊಂದಿರುವ ವ್ಯಕ್ತಿ. ನೀವು ತುಂಬಾ ಉತ್ಸಾಹಿ ವ್ಯಕ್ತಿ ಮತ್ತು ಹಾನಿಕಾರಕವಾಗುವ ವಿಚಾರದಿಂದ ದೂರ ಉಳಿಯುವಿರಿ. ನೀವು ಫಿಟ್ನೆಸ್ ಬಗ್ಗೆ ಕಾಳಜಿ ಹೊಂದಿರುವಿರಿ. ವ್ಯಾಯಾಮ ಅಥವಾ ಯೋಗದ ಬಳಿಕ ನೀವು ಗ್ರೀನ್ ಟೀ ಕುಡಿಯುವಾಗ ಮಾತ್ರ ವಿಶ್ರಾಂತಿ ಮಾಡುವಿರಿ.

ನೀಲಿ ಚಹಾ

ನೀಲಿ ಚಹಾ

ಈ ಚಹಾದ ಬಗ್ಗೆ ಹೆಚ್ಚಿನವರಿಗೆ ಪರಿಚಯವಿಲ್ಲ. ಆದರೆ ಇದು ನಿಧಾನವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಲಿದೆ. ಇದು ನಿಮ್ಮ ಫೇವರೆಟ್ ಚಾ ಆಗಿದ್ದರೆ, ನಿಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಜಾಗೃತೆ ವಹಿಸುವಂತಹ ವ್ಯಕ್ತಿ. ಆಡಂಬರವನ್ನು ನೀವು ಗೌರವವೆಂದು ಭಾವಿಸುವಿರಿ. ದೇಹದಲ್ಲಿ ಸಣ್ಣ ತರುಚಿದ ಗಾಯವಾದರೂ ಅದರಿಂದ ನಿಮ್ಮ ಆತ್ಮವಿಶ್ವಾಸ ಕುಂದುವುದು. ಸೌಂದರ್ಯ ಮತ್ತು ಯೌವನಯುತವಾಗಿ ಕಾಣಲು ನೀವು ಏನು ಬೇಕಾದರೂ ಮಾಡುವಿರಿ.

 ಮಸಾಲೆ ಚಹಾ

ಮಸಾಲೆ ಚಹಾ

ಬಹಿರ್ಮುಖತೆ ಮತ್ತು ಮನರಂಜನೆಕಾರರು ಮಸಾಲೆ ಚಾವನ್ನು ಹೆಚ್ಚಾಗಿ ಇಷ್ಟಪಡುವರು. ಈ ವ್ಯಕ್ತಿಗಳು ಪಾರ್ಟಿಗೆ ಮಸಾಲೆಯ ಕಿಚ್ಚು ಹಚ್ಚುವರು. ಇವರು ತುಂಬಾ ನಾಟಕರಾಣಿಯಂತೆ ಮತ್ತು ಸಣ್ಣ ವಿಚಾರಗಳಿಗೂ ಪ್ರತಿಕ್ರಿಯಿಸುವುದನ್ನು ನೋಡಬಹುದು. ಆದರೆ ಇವರು ಮಸಾಲೆ ಇಷ್ಟಪಡುವ ಕಾರಣದಿಂದಾಗಿ ಇವರು ಯಾವಾಗಲೂ ಖುಷಿಯಾಗಿರುವರು.

ಪುದೀನಾ ಚಹಾ

ಪುದೀನಾ ಚಹಾ

ಈ ವೈವಿಧ್ಯಮಯ ಚಾ ಕುಡಿಯುವಂತಹ ವ್ಯಕ್ತಿಗಳು ತುಂಬಾ ವಿನಮ್ರ ಮತ್ತು ಶಾಂತವಾಗಿರುವಂತಹ ವ್ಯಕ್ತಿಗಳು. ಇವರು ತಮ್ಮದೇ ಆಗಿರುವ ಲೋಕದಲ್ಲಿ ವಿಹರಿಸುತ್ತಾ ಇರುವರು. ಸುತ್ತಲು ಏನು ಆಗುತ್ತಿದೆ ಎನ್ನುವ ಬಗ್ಗೆ ಇವರಿಗೆ ಯಾವುದೇ ಚಿಂತೆಯಿಲ್ಲ. ಎಷ್ಟೇ ಒತ್ತಡದಲ್ಲಿದ್ದರೂ ಇವರು ತುಂಬಾ ತಾಳ್ಮೆ ಹಾಗೂ ಸಮಚಿತ್ತದಿಂದ ಇರುವರು.

ಲಘು ಸಿಹಿ ಚಹಾ

ಲಘು ಸಿಹಿ ಚಹಾ

ಲಘು ಸಿಹಿಯಾಗಿರುವಂತಹ ಚಾವನ್ನು ನೀವು ಇಷ್ಟಪಡುವಿರಾದರೆ ಆಗ ನೀವು ಎಲ್ಲಾ ಕೆಲಸಗಳು ಪರಿಪೂರ್ಣವಾಗಿರಬೇಕೆಂದು ಬಯಸುವವರು. ಎರಡು ತಂಡಗಳಿಗೆ ನೀವು ಮಧ್ಯಸ್ಥಿಕೆ ವಹಿಸಬಹುದು. ನೀವು ರಾಜಿಯಾಗಲು ಎಂದಿಗೂ ಇಷ್ಟಪಡಲ್ಲ.

ಸಕ್ಕರೆ ರಹಿತ ಚಹಾ

ಸಕ್ಕರೆ ರಹಿತ ಚಹಾ

ನೀವು ಸಕ್ಕರೆ ರಹಿತವಾಗಿರುವಂತಹ ಚಾ ಸೇವನೆ ಮಾಡುತ್ತಲಿದ್ದರೆ, ನಿಮ್ಮ ಗುರಿಯು ಕೈಯಲ್ಲಿಯೇ ಇದೆ ಎಂದು ಭಾವಿಸುವವರು. ಪರಿಸ್ಥಿತಿಯನ್ನು ಬಂದಂತೆ ಸ್ವೀಕರಿಸುವವರು ಮತ್ತು ಯಾವುದೇ ಸಂಕಷ್ಟ ಬಂದರೂ ಇದು ನಮ್ಮ ಪಾಲಿಗೆ ಬಂದಿರುವುದು ಎಂದು ಭಾವಿಸುವವರು.

ಕಪ್ಪು ಚಹಾ (ಬ್ಲ್ಯಾಕ್ ಟೀ)

ಕಪ್ಪು ಚಹಾ (ಬ್ಲ್ಯಾಕ್ ಟೀ)

ಬ್ಲ್ಯಾಕ್ ಟೀಯನ್ನು ಇಷ್ಟಪಡುವಂತಹ ವ್ಯಕ್ತಿಗಳು ಯಾವಾಗಲೂ ತುಂಬಾ ಚಟುವಟಿಕೆಯಿಂದ ಇರುವವರು ಮತ್ತು ಶಕ್ತಿ ತುಂಬಿರುವ ವ್ಯಕ್ತಿಗಳು. ಇವರು ಯಾವತ್ತೂ ಕುಳಿತುಕೊಂಡು ಇರಲ್ಲ. ಯಾವುದಾದರೂ ಒಂದು ಕೆಲಸ ಮಾಡಲು ಇವರು ಹಾತೊರೆಯುತ್ತಲೇ ಇರುವರು. ಇವರು ತುಂಬಾ ಕುತೂಹಲಿಗರಾಗಿರುವರು.

English summary

Find Out What Kinda Chai Personality You Have

With every one of the flavours to fill your mug, chai lovers are perceived based on what they like and don't care for. The reality of the situation is the thing that you search for in a chai can say a great deal about you. So be picky with your chai. You can find out what kind of personality you have based on your choice of chai.
Story first published: Monday, August 20, 2018, 16:49 [IST]
X
Desktop Bottom Promotion