For Quick Alerts
ALLOW NOTIFICATIONS  
For Daily Alerts

ಕೇರಳ ಪ್ರವಾಹ: ನದಿ ನೀರಿನಲ್ಲಿ ಸಿಲುಕಿದ ಆನೆ! ವಿಡಿಯೋ ನೋಡಿ...

By Hemanth
|

ಕೇರಳದಲ್ಲಿ ಭಾರೀ ಮಳೆಯಿಂದಾಗಿ ಜನರು ಮಾತ್ರವಲ್ಲದೆ ಪ್ರಾಣಿಗಳು ಕೂಡ ಪರದಾಡುವಂತಾಗಿದೆ. ಇಲ್ಲಿರುವ ವಿಡಿಯೋವೊಂದರಲ್ಲಿ ಆನೆಯೊಂದು ಕಲ್ಲಿನ ನೆರವಿನಲ್ಲಿ ನಿಂತಿದ್ದರೂ ಪ್ರತೀ ಕ್ಷಣವೂ ನೀರಿನ ಮಟ್ಟವು ಹೆಚ್ಚಾಗುತ್ತಲೇ ಇದೆ. ಆದರೆ ಕೊನೇ ಕ್ಷಣದಲ್ಲಿ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಆನೆಯನ್ನು ಕಾಪಾಡಿದ್ದಾರೆ.

ನದಿಯಲ್ಲಿ ನೀರಿನ ಮಟ್ಟ ಏರತೊಡಗಿತ್ತು

ನದಿಯಲ್ಲಿ ನೀರಿನ ಮಟ್ಟ ಏರತೊಡಗಿತ್ತು

ಅಧಿಕಾರಿಗಳು ಪೆರಿಂಗಲ್ಕುಥು ಅಣೆಕಟ್ಟಿನ ಬಾಗಿಲು ತೆರೆದಾಗ ಚಾಲಕುಡಿ ನದಿಯಲ್ಲಿ ನೀರಿನ ಮಟ್ಟವು ಏರಿಕೆಯಾಗಲು ಆರಂಭವಾಯಿತು.

ಆನೆಗೆ ನೀರಿನ ರಭಸಕ್ಕೆ ಮುಂದೆ ಸಾಗುವುದಕ್ಕೆ ಸಾಧ್ಯವಾಗಲೇ ಇಲ್ಲ

ಆನೆಗೆ ನೀರಿನ ರಭಸಕ್ಕೆ ಮುಂದೆ ಸಾಗುವುದಕ್ಕೆ ಸಾಧ್ಯವಾಗಲೇ ಇಲ್ಲ

ಆನೆಯು ಇದನ್ನು ತಿಳಿದು ನದಿ ದಾಟಲು ಆರಂಭಿಸಿತು. ಆದರೆ ನದಿ ಮಧ್ಯಕ್ಕೆ ಬಂದಾಗ ಆನೆಗೆ ನೀರಿನ ರಭಸಕ್ಕೆ ಮುಂದೆ ಸಾಗುವುದಕ್ಕೆ ಸಾಧ್ಯವಾಗಲೇ ಇಲ್ಲ.

ಬಂಡೆಯ ಮೇಲೆ ಸಾಗಿ ಅದು ಪ್ರಾಣ ಉಳಿಸಿಕೊಂಡಿತು

ಬಂಡೆಯ ಮೇಲೆ ಸಾಗಿ ಅದು ಪ್ರಾಣ ಉಳಿಸಿಕೊಂಡಿತು

ಕೊನೆಗೊಂದು ಬಂಡೆಯ ಮೇಲೆ ಸಾಗಿ ಅದು ಪ್ರಾಣ ಉಳಿಸಿಕೊಂಡಿತು. ಆನೆ ನದಿ ಮಧ್ಯೆ ಸಿಲುಕಿರುವುದನ್ನು ಕಂಡು ಅರಣ್ಯ ಅಧಿಕಾರಿಗಳು ಅಣೆಕಟ್ಟಿನ ಬಾಗಿಲು ಮುಚ್ಚಿ ಆನೆಗೆ ನದಿ ದಾಟಲು ನೆರವಾಗುವಂತೆ ಅಣೆಕಟ್ಟಿನ ಅಧಿಕಾರಿಗಳಲ್ಲಿ ಕೇಳಿಕೊಂಡರು.

ತಕ್ಷಣ ನೀರನ್ನು ನಿಲ್ಲಿಸಿದ ಅಧಿಕಾರಗಳು

ತಕ್ಷಣ ನೀರನ್ನು ನಿಲ್ಲಿಸಿದ ಅಧಿಕಾರಗಳು

ಇದಕ್ಕೆ ಸ್ಪಂದಿಸಿದ ಅಧಿಕಾರಿಗಳು ತಕ್ಷಣ ನೀರನ್ನು ನಿಲ್ಲಿಸಿ ಆನೆ ನದಿ ದಾಟಲು ನೆರವಾದರು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಇದನ್ನು ಕಮೆಂಟ್ ಬಾಕ್ಸ್ ನಲ್ಲಿ ನಮಗೆ ತಿಳಿಸಿ....

English summary

Elephant Stranded In Overflowing River

A video has been doing the rounds which shows an elephant stranded on a rock amidst a waterway with the water level rising each moment. Luckily, authorities reacted fast and saved the elephant. This incident happened in the Indian territory of Kerala, which is reeling under surges and avalanches, that have been caused by substantial downpours.
X
Desktop Bottom Promotion