For Quick Alerts
ALLOW NOTIFICATIONS  
For Daily Alerts

ಮಹಿಳೆಯ ಕಿವಿಯೊಳಗೆ ಜೇಡದ ವಾಸ...ಜೇಡ ಹೊರತೆಗೆದ ವೈದ್ಯರು!

By Sushma Charhra
|

ಭಾರತದಲ್ಲಿ ಮಹಿಳೆಯೊಬ್ಬಳು ತಲೆಯಲ್ಲಿ ಝುಮ್ ಎನ್ನುವ ಶಬ್ದವಾಗುತ್ತೆ. ಇದು ತಲೆನೋವಿಗಾಗಿ ಆಗುತ್ತಿರುವುದು ಎಂದು ಭಾವಿಸಿದ್ದಾಳೆ. ಮೊದಮೊದಲು ಸಾಮಾನ್ಯ ತಲೆನೋವು ಎಂದು ಭಾವಿಸಿ ಸುಮ್ಮನಿದ್ದ ಆಕೆಗೆ ದಿನದಿಂದ ದಿನಕ್ಕೆ ಹೆಚ್ಚೆಚ್ಚು ನೋವು ಕಾಣಿಸಲಾರಂಭಿಸಿದೆ. ಪರಿಹಾರ ಕಾಣದೆ,ವೈದ್ಯರ ಬಳಿ ಹೋದ ಮಹಿಳೆಗೆ ಅಲ್ಲೋಂದು ಆಶ್ಚರ್ಯಕಾದಿತ್ತು. ಅದೇನೆಂದರೆ, ಜೇಡವೊಂದು ಆಕೆಯ ಕಿವಿಯಲ್ಲಿ ಗುಂಯ್ ಗುಡುತ್ತಿದ್ದು ಅಲ್ಲಿಯೇ ವಾಸವಾಗಿತ್ತು!

ಇದು ನಡೆದದ್ದು ಭಾರತದಲ್ಲಿ

ಭಾರತದಲ್ಲಿ ಮಹಿಳೆಯೊಬ್ಬರಿಗೆ ತಲೆಯಲ್ಲಿ ಅಸಾಧ್ಯ ನೋವು, ಕಿರಿಕಿರಿ ಕಾಣಿಸಿಕೊಳ್ಳಲು ಆರಂಭವಾಗಿದ್ದು ಕುಳಿತರೂ ಸಮಸ್ಯೆ, ನಿಂತರೂ ಸಮಸ್ಯೆ ಎಂಬಂತಾಗಿತ್ತು. ಮೊದಮೊದಲು ನಿರ್ಲಕ್ಷ್ಯ ತೋರಿದ ಮಹಿಳೆಗೆ ನಂತರ ಸಮಸ್ಯೆ ಗಂಭೀರಗೊಳ್ಳಲು ಆರಂಭವಾಗಿ. ಕಿವಿಯಲ್ಲಿ ಏನೋ ಗುಂಯ್ ಎಂಬ ಶಬ್ದ ಕೇಳಿಸಿ ತಲೆಯಲ್ಲಿ ಅಸಾಧ್ಯ ನೋವು ಕಂಡುಬಂದಿತ್ತು.

spider calmly crawls out of a womans ear

ಬೆಳಿಗ್ಗೆ ಕಿವಿ ಮುಚ್ಚಿ ಹೋದ ಅನುಭವ

ಒಂದಿನ ಬೆಳಿಗ್ಗೆ ಏಳುವಾಗ ಆಕೆಗೆ ತನ್ನ ಕಿವಿಯಲ್ಲಿ ಏನೋ ಸರಿಯಿಲ್ಲ ಎಂದು ಅನ್ನಿಸಲು ಆರಂಭವಾಗಿದೆ. ತನ್ನ ಬಲಕಿವಿ ಮುಚ್ಚಿಹೋಗಿರುವಂತೆ ಭಾಸವಾಗುತ್ತಿತ್ತು. ಸ್ವಲ್ಪ ಹೊತ್ತು ಅದನ್ನು ನಿರ್ಲಕ್ಷಿಸಿದ್ದಾರೆ. ಆದರೆ ನೋವು ಕ್ಷಣದಿಂದ ಕ್ಷಣಕ್ಕೆ ಅಧಿಕಗೊಂಡಿದೆ. ಆಕೆಯ ತಲೆಗೆ ಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ! ಒಂದು ಜೇಡದಿಂದ ಇಷ್ಟೆಲ್ಲ ಸಮಸ್ಯೆ ಆಕೆಗೆ ಆಗುತ್ತಿದೆ ಅನ್ನುವ ಸಣ್ಣ ಅನುಮಾನ ಕೂಡ ಆಕೆಗೆ ಬಂದಿಲ್ಲ.

ಪರೀಕ್ಷಿಸಿದ ವೈದ್ಯರಿಗೆ ಶಾಕ್ ಆಗಿತ್ತು!

ತಲೆನೋವೆಂದು ಬಂದ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರಿಗೆ ಆಶ್ಚರ್ಯವಾಗಿತ್ತು. ಜೇಡವೊಂದು ಆಕೆಯ ಕಿವಿಯಲ್ಲಿದ್ದುದ್ದನ್ನು ಕಂಡು ಅವರೂ ಕೂಡ ಬೆಚ್ಚಿಬಿದ್ದಿದ್ರು. ತನ್ನ ನೋವಿಗೆ ಕಾರಣ ತಿಳಿದಾಗ ಆಕೆಗೂ ಕೂಡ ಶಾಕ್ ಆಗಿತ್ತು. ಆಕೆಯ ಕಿವಿಯಲ್ಲಿ ಜೇಡವಿದೆ ಎಂದು ತಿಳಿದರೆ ಭಯವಾಗದೇ ಇರುತ್ತಾ. ತಲೆನೋವಿಗೆ ಕಾರಣವಾಗಿದ್ದು ಜೇಡ ಎಂದು ತಿಳಿದಾಗ ಮಹಿಳೆಗೆ ಮಾತೇ ಹೊರಡಲಿಲ್ಲ. ಡಾಕ್ಟರ್ ಕೂಡ ಆಕೆಯ ಕಿವಿಯಿಂದ ಜೇಡವನ್ನು ತೆಗೆಯಲು ಹರಸಾಹಸ ಪಡಬೇಕಾಯ್ತು. ಮನುಷ್ಯನ ದೇಹದೊಳಗೆ ಅಷ್ಟು ಸುಲಭದಲ್ಲಿ ಎಂಟ್ರಿ ಕೊಡುವ ಜೀವಿಯಲ್ಲ ಜೇಡ. ಆದರೆ ಅದ್ಹೇಗೆ ಆಕೆಯ ಕಿವಿಯಲ್ಲಿ ಸೇರಿತೋ ಗೊತ್ತಿಲ್ಲ.

ಜೇಡ ಹೊರತೆಗೆದ ವೈದ್ಯರು

ಮಹಿಳೆಯನ್ನು ಮಲಗಿಸಿ, ಆಕೆಯ ಕಿವಿಗೆ ಸ್ಯಾಲಿನ್ ವಾಟರ್ ನ್ನು ಹಾಕಲಾಗಿದೆ. ಕೂಡಲೇ ಜೇಡ ಆಕೆಯ ಕಿವಿಯಿಂದ ಹೊರಬರುವಂತೆ ಮಾಡಲಾಗಿದೆ. ಜೇಡ ಕಿವಿಯಿಂದ ಹೊರಬಂದ ಕೂಡಲೇ ಮಹಿಳೆಗಿದ್ದ ತಲೆನೋವು, ಕಿವಿಯ ಬಾಧೆ ಕಡಿಮೆಯಾಗಿದೆ. ಆರೋಗ್ಯವಾಗಿ ಆಕೆ ಮನೆ ಸೇರಿದ್ದಾಳೆ ಮತ್ತು ನಾರ್ಮಲ್ ಆಗಿದ್ದಾಳೆ.

ಕಿವಿಯೊಳಗೆ ಕೀಟಗಳು ಹೋಗದಂತೆ ತಡೆಯುವುದು ಹೇಗೆ?

ಸಣ್ಣಸಣ್ಣ ಕೀಟಗಳಾದ ಇರುವೆ,ತಿಗಣೆಗಳು ಮನುಷ್ಯನ ಕಿವಿಯೊಳಗೆ ಹೋಗೋದು ಸಾಮಾನ್ಯ. ಅದನ್ನು ತಡೆಗಟ್ಟಲು ಇರುವುದು ಒಂದೇ ಮಾರ್ಗ. ಸ್ವಚ್ಛವಿಲ್ಲದ ಕೋಣೆಯಲ್ಲಿ ಯಾವತ್ತೂ ಮಲಗಬಾರದು. ಕೋಣೆ ಸ್ವಚ್ಛವಿಲ್ಲದೆ ಇದ್ದಾಗ ಸಾಮಾನ್ಯ ಕ್ರಿಮಿಕೀಟಗಳು ವಾಸ್ತವ್ಯ ಹೂಡುತ್ತವೆ.

English summary

doctor-s-revealed-that-a-spider-was-living-in-her-ear

This is the strange moment a spider calmly crawls out of a woman's ear hours after it snuck in while she slept.
Story first published: Wednesday, May 9, 2018, 12:59 [IST]
X
Desktop Bottom Promotion