For Quick Alerts
ALLOW NOTIFICATIONS  
For Daily Alerts

ಈ ರಾಶಿಚಕ್ರದವರು ಹುಟ್ಟಿನಿಂದಲೇ ನಾಯಕತ್ವ ಗುಣ ಹೊಂದಿರುತ್ತಾರಂತೆ!

|

ಕೆಲವರು ಜನಸಮೂಹವನ್ನು ಆಕರ್ಷಿಸುವಂತಹ ಗುಣ ಹೊಂದಿರುವರು. ಇವರ ಹಿಂದೆ ಯಾವಾಗಲೂ ಜನರಿರುವರು. ತಮ್ಮದೇ ಆದ ದಾಟಿಯಲ್ಲಿ ಇವರಿಗೆ ಜನರನ್ನು ಹಿಡಿದಿಟ್ಟುಕೊಳ್ಳಲು ತಿಳಿದಿರುವುದು. ಒಂದು ಗುಂಪಿನ ಜನರನ್ನು ಅಥವಾ ತಂಡವನ್ನು ಜತೆಯಾಗಿ ಮುನ್ನಡೆಸುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕೆ ತನ್ನದೇ ಆಗಿರುವಂತಹ ಕೆಲವೊಂದು ಗುಣಗಳು ಬೇಕಾಗಿದೆ.

ಅದು ಸೇನೆಯೇ ಇರಲಿ, ಕ್ರಿಕೆಟ್ ತಂಡವಾಗಿರಲಿ ಅಥವಾ ಕಚೇರಿಯಲ್ಲಿನ ತಂಡವಾಗಿರಲಿ. ನಿಮ್ಮಲ್ಲಿ ನಾಯಕತ್ವದ ಗುಣಗಳು ಇದ್ದರೆ ಆಗ ಅದನ್ನು ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಿರುವುದು. ಪ್ರತಿಯೊಬ್ಬರಿಗೂ ಇದು ಹೇಳಿರುವಂತದಲ್ಲ. ಯಾಕೆಂದರೆ ಇದಕ್ಕೂ ಕೆಲವೊಂದು ಗುಣಗಳು ಇರಬೇಕು. ಆದರೆ ಕೆಲವರಿಗೆ ಹುಟ್ಟುತ್ತಲೇ ಈ ಗುಣಗಳು ಬಂದಿರುತ್ತದೆ. ಕೆಲವೊಂದು ರಾಶಿಗಳಲ್ಲಿ ಇಂತಹ ಗುಣಗಳು ಇರುವುದು. ನಾಯಕತ್ವ ಹೊಂದಿರುವ ರಾಶಿಗಳು ಯಾವುದು ಎಂದು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಮೇಷ

ಮೇಷ

ಅಗ್ನಿಯ ರಾಶಿಯಾಗಿರುವಂತಹ ಮೇಷ ಈ ಪಟ್ಟಿಯಲ್ಲಿ ಖಂಡಿತವಾಗಿಯೂ ಸ್ಥಾನ ಪಡೆಯುವುದು. ಮೇಷ ರಾಶಿಗೆ ಸೂರ್ಯವು ಅಧಿಪತಿಯಾಗಿರುವನು. ಇದರಿಂದಾಗಿ ಅವರು ತುಂಬಾ ಆತ್ಮವಿಶ್ವಾಸ ಮತ್ತು ಗುಂಪನ್ನು ಮುನ್ನಡೆಸುವರು. ಇವರು ಬದಲಾವಣೆಯಲ್ಲಿ ನಂಬಿಕೆಯನ್ನಿಡುವರು ಮತ್ತು ದೊಡ್ಡ ಮಟ್ಟದ ಬದಲಾವಣೆ ತರಬೇಕಿದ್ದರೂ ಅದಕ್ಕಾಗಿ ಎಲ್ಲಾ ರೀತಿಯ ಧೈರ್ಯ ತೋರಿಸುವರು. ಇವರು ಉನ್ನತ ಶಕ್ತಿಯನ್ನು ಹೊಂದಿರುವರು ಮತ್ತು ಭೂಮಿ ಮೇಲಿನ ಅದ್ಭುತ ಚಟುವಟಿಕೆಯ ಜೀವಿಗಳು. ಒಂದು ಸಲ ನಿರ್ಧಾರ ಮಾಡಿದರೆ, ತಮ್ಮ ಯೋಜನೆಯನ್ನು ಯಾವುದೇ ರೀತಿಯಿಂದಾದರೂ ಯಶಸ್ವಿಗೊಳಿಸುವರು.

ವೃಷಭ

ವೃಷಭ

ಹಠಮಾರಿ ಮತ್ತು ಕರಾರುವಕ್ಕಾಗಿರುವ ವೃಷಭ ರಾಶಿಯವರು ತಾವು ಆಲೋಚಿಸುವಂತಹ ವಿಚಾರಗಳು ಉತ್ತಮವಾಗಿದೆ ಎಂದು ತಿಳಿದಿರುವಾಗ ನೀವು ಆಲೋಚನೆ ಮಾಡುವುದನ್ನು ಇಷ್ಟಪಡಲ್ಲ. ಇದರಿಂದಾಗಿ ಅವರು ತುಂಬಾ ಶಿಸ್ತಿನ ಬಾಸ್ ಆಗಿರುವರು ಮತ್ತು ಅವರ ಬಗ್ಗೆ ಹೆದರಿಕೆ ಇರುವುದು. ಅವರ ಮೇಲೆ ನಂಬಿಕೆಯನ್ನು ಇಡುವ ನಿಮ್ಮ ನಿರ್ಧಾರವು ತಪ್ಪಾಗಲಾರದು. ಯಾಕೆಂದರೆ ನಿಮ್ಮ ನಂಬಿಕೆಯು ಅವರಿಗೆ ಪ್ರೇರಣೆಯಾಗುವುದು. ಕೆಲವೊಂದು ಸಂದರ್ಭದಲ್ಲಿ ಸಾಮಾಜಿಕ ಗುರುತಿಸುವಿಕೆಯಿಂದಾಗಿ ಅವರು ಶ್ರೇಷ್ಠ ನಾಯಕರೆಂದು ತೋರಿಸಿಕೊಳ್ಳುವರು. ಒಳ್ಳೆಯ ಕೆಲಸಕ್ಕೆ ಪ್ರೇರಣೆ ಮತ್ತು ಪ್ರಶಂಸೆ ಸಿಕ್ಕಿದಾಗ ಅವರು ಯಾವಾಗಲು ಮುಂದಿರುವರು ಮತ್ತು ತಮ್ಮ ತಂಡದ ಸದಸ್ಯರ ಹೃದಯವನ್ನು ಸುಲಭವಾಗಿ ಗೆಲ್ಲುವರು.

ಸಿಂಹ

ಸಿಂಹ

ನಾಯಕತ್ವದ ವಿಚಾರದಲ್ಲಿ ಸಿಂಹ ರಾಶಿಯವರನ್ನು ಮರೆಯಲು ಹೇಗೆ ಸಾಧ್ಯ? ಜನ್ಮತಃ ಅಧಿಕಾರದ ಗುಣ ಹೊಂದಿರುವಂತಹ ಸಿಂಹ ರಾಶಿಯವರಲ್ಲಿ ತುಂಬಾ ಬಲಿಷ್ಠವಾಗಿರುವಂತಹ ವ್ಯಕ್ತಿತ್ವವಿರುವುದು. ಬೇರೆಯವರು ತಮ್ಮ ಮೇಲೆ ಪ್ರಾಬಲ್ಯ ಸಾಧಿಸುವುದು ಅಥವಾ ನಿಯಂತ್ರಣ ಹೇರುವುದನ್ನು ಇವರು ಯಾವತ್ತೂ ಇಷ್ಟಪಡುವುದಿಲ್ಲ. ಇದರಿಂದಾಗಿಯೇ ಇವರು ತುಂಬಾ ಕಟ್ಟನಿಟ್ಟಾಗಿದ್ದರೂ ಕೆಲವೊಂದು ಸಲ ತುಂಬಾ ಬೇಜವಾಬ್ದಾರಿಯಾಗಿರುವರು. ಇವರ ದೃಢ ಸ್ವಭಾವ ಮತ್ತು ಬಲವಾದ ಆತ್ಮವಿಶ್ವಾಸವು ನಾಯಕತ್ವಕ್ಕೆ ಸರಿಯಾದ ಆಯ್ಕೆಯಾಗಿದೆ. ಇವರ ಹಾದಿಯಲ್ಲಿ ಹೆಚ್ಚು ಸಮಸ್ಯೆಗಳು ಬಂದರೆ ಆಗ ಮತ್ತಷ್ಟು ಬಲಿಷ್ಠರಾಗುವರು ಮತ್ತು ಇವರನ್ನು ಭೇದಿಸಲು ಕಷ್ಟವಾಗುವುದು.

ತುಲಾ

ತುಲಾ

ರಾಶಿ ಚಕ್ರಗಳಲ್ಲಿ ತುಂಬಾ ಸಂಯೋಜಿತ ರಾಶಿಯಾಗಿರುವಂತಹ ತುಲಾ ರಾಶಿಯವರು ಖಂಡಿತವಾಗಿಯೂ ಒಂದು ಗುಂಪಿನ ಶ್ರೇಷ್ಠ ನಾಯಕರಾಗುವರು. ಇವರು ತುಂಬಾ ಪರಿಪೂರ್ಣತೆ ಹೊಂದಿರುವವರು. ಇದರಿಂದ ಒಂದು ವಿಚಾರದ ಬಗ್ಗೆ ಹಲವಾರು ರೀತಿಯ ಅಭಿಪ್ರಾಯವನ್ನು ನೀವು ನಿರೀಕ್ಷಿಸಬಾರದು. ಆದರೆ ಇವರು ಪ್ರತೀ ಸಲ ಮಾತನಾಡುವಾಗ ಒಂದು ಅಂಶವು ಅವರಲ್ಲಿರುವುದು. ಇವರು ಜೀವನದಲ್ಲಿ ತುಂಬಾ ಶಾಂತ ಹಾಗೂ ನ್ಯಾಯಯುತವಾಗಿರುವರು. ಉದ್ಯೋಗದ ಜಾಗದಲ್ಲಿ ಇವರು ಪ್ರತಿಯೊಬ್ಬರನ್ನೂ ಆರಾಮವಾಗಿರುವಂತೆ ನೋಡಿಕೊಳ್ಳುವರು. ಅವರ ದೂರದೃಷ್ಟಿಯು ಯಾವಾಗಲೂ ಸ್ಪಷ್ಟವಾಗಿರುವುದು. ಇವರು ಶ್ರೇಷ್ಠ ನಾಯಕನ ಗುಣವನ್ನು ಹೊಂದಿರುವರು.

ವೃಶ್ಚಿಕ

ವೃಶ್ಚಿಕ

ವೃಶ್ಚಿಕ ರಾಶಿಯವರು ನೇರನಡೆನುಡಿಯ ವ್ಯಕ್ತಿಗಳು. ಇವರಿಗೆ ಕೆಲಸವೆಂದರೆ ಪಂಚಪ್ರಾಣ. ಇದರಿಂದಾಗಿ ಇವರನ್ನು ಯಾವಾಗಲೂ ಕಾರ್ಯವ್ಯಸನಿ ಎಂದು ಕರೆಯಲಾಗುತ್ತದೆ. ಒಳ್ಳೆಯ ಕೆಲಸವನ್ನು ಇವರು ಪ್ರೀತಿಸುವರು ಮತ್ತು ಒಳ್ಳೆಯ ಫಲಿತಾಂಶ ಪಡೆಯುವ ನಿರೀಕ್ಷೆಯಲ್ಲಿ ಇವರು ದೀರ್ಘವಾಗಿ ಕೆಲಸ ಮಾಡುವರು. ಸಮಾಜದಲ್ಲಿ ತಮಗೆ ಪ್ರಶಂಸೆ ಸಿಗಬೇಕೆಂದು ವೃಶ್ಚಿಕ ರಾಶಿಯವರು ಬಯಸುವರು ಮತ್ತು ಇದರಿಂದಾಗಿ ಇವರು ಜವಾಬ್ದಾರಿಯುತ ನಾಯಕರಾಗಿ ಕೆಲಸ ಮಾಡುವರು. ಇದೇ ಕಾರಣದಿಂದ ತಂಡದಲ್ಲಿ ಇವರು ಯಾವಾಗಲೂ ಒಳ್ಳೆಯ ನಾಯಕನಾಗಿ ಹೊರಹೊಮ್ಮುವರು.

English summary

Born Leaders As Per The Zodiac Sign

Ever wondered how well you would perform if you were the leader of an army of soldiers? Or that of your own team at office or how great a leader you are when it comes to handling some function at home or hosting the guests? Well, all these questions actually point towards your leadership qualities. Why some people are just so much like born leaders whereas others think it's not their cup of tea and do not like bothering that excessively about things.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more