For Quick Alerts
ALLOW NOTIFICATIONS  
For Daily Alerts

ರಕ್ತದ ಗುಂಪು ಮತ್ತು ವ್ಯಕ್ತಿತ್ವಕ್ಕೆ ನಂಟು ಇದೆಯಾ? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್

|

ರಕ್ತದ ಗುಂಪು ಪರೀಕ್ಷೆ ಮಾಡುವುದು ನಮಗೆ ಯಾವಾಗಲಾದರೂ ಅಗತ್ಯ ಬಿದ್ದರೆ ರಕ್ತ ಪೂರೈಕೆ ಮಾಡಬಹುದು ಎನ್ನುವ ಕಾರಣಕ್ಕಾಗಿ. ಆದರೆ ರಕ್ತದ ಗುಂಪು ಮತ್ತು ವ್ಯಕ್ತಿತ್ವಕ್ಕೆ ಸಂಬಂಧವಿದೆಯೆಂದು ನಿಮಗೆ ತಿಳಿದಿದೆಯಾ? ಜಪಾನ್ ನಲ್ಲಿ 60 ವರ್ಷಕ್ಕೂ ದೀರ್ಘ ಸಮಯದಿಂದ ನಡೆಸಿರುವ ಅಧ್ಯಯನದ ಪ್ರಕಾರ ರಕ್ತದ ಗುಂಪು ಮತ್ತು ವ್ಯಕ್ತಿತ್ವಕ್ಕೆ ನೇರ ಸಂಬಂಧವಿದೆ ಎಂದು ಕಂಡುಕೊಳ್ಳಲಾಗಿದೆ. ರಕ್ತದ ಗುಂಪು ನಿಮ್ಮ ಅನನ್ಯತೆ ತಿಳಿಯಲು ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.

ಜಪಾನ್ ನಲ್ಲಿ ಅಧ್ಯಯನ ವರದಿಯು ಹೊರಬಿದ್ದ ಬಳಿಕ ಜನರು ರಕ್ತದ ಗುಂಪು ಕೇಳಿದ ಬಳಿಕ ಉದ್ಯೋಗ ನೀಡಲು ಆರಂಭಿಸಿದರು ಮತ್ತು ಇತರ ಕೆಲವು ಸಂದರ್ಭಗಳಲ್ಲಿಯೂ ರಕ್ತದ ಗುಂಪನ್ನು ಕೇಳಲು ಆರಂಭಿಸಿದರು. ವಿಭಿನ್ನ ರೀತಿಯ ರಕ್ತದ ಗುಂಪು ಮತ್ತು ಅವರ ವ್ಯಕ್ತಿತ್ವ ತಿಳಿಯಿರಿ....

 ಎ ಗುಂಪು(ಎ+, ಎ-)

ಎ ಗುಂಪು(ಎ+, ಎ-)

ಎ ಗುಂಪಿನ ವ್ಯಕ್ತಿಗಳು ತುಂಬಾ ಸಹಕಾರಿಗಳು, ಸೂಕ್ಷ್ಮ, ಜಾಣ, ಮುಂಗೋಪಿ ಮತ್ತು ಚತುರ ವ್ಯಕ್ತಿಗಳಾಗಿರುವರು. ಇನ್ನೊಂದೆಡೆ ಈ ವ್ಯಕ್ತಿಗಳ ಮೇಲೆ ಅತಿಯಾಗಿ ಬೀಳುವ ಒತ್ತಡದಿಂದ ಇವರು ಇತರ ಗುಂಪಿನ ವ್ಯಕ್ತಿಗಳಿಗಿಂತ ಬೇಗನೆ ಪ್ರತಿರೋಧಕ ಶಕ್ತಿ ಕುಗ್ಗಿಸಿಕೊಳ್ಳುವರು. ಇವರಲ್ಲಿ ನಾಯಕತ್ವದ ಗುಣಗಳು ಕೂಡ ಇದೆ. ಆದರೆ ಒತ್ತಡವು ಇವರಿಗೆ ನಿರ್ಧಾರ ತೆಗೆದುಕೊಳ್ಳಲು ಅಡ್ಡಿಯಾಗುವ ಕಾರಣದಿಂದ ನಾಯಕತ್ವ ಸ್ವೀಕರಿಸಲ್ಲ. ಅಲ್ಲದೆ ಈ ಗುಂಪಿನ ರಕ್ತದ ವ್ಯಕ್ತಿಗಳು ತಮ್ಮ ಉದ್ಯೋಗದಲ್ಲಿ ಅತ್ಯಂತ ವಿಶ್ವಾಸಾರ್ಹರಾಗಿರುತ್ತಾರೆ. ಇವರಿಗೆ ಕರ್ತವ್ಯವೇ ದೇವರಾಗಿದ್ದು ಇದಕ್ಕಾಗಿ ತಮ್ಮ ಎಲ್ಲಾ ಸಾಮರ್ಥ್ಯವನ್ನು ಧಾರೆ ಎರೆಯುತ್ತಾರೆ. ಸಾಮಾನ್ಯವಾಗಿ ಇವರು ಕೆಲವನ್ನು ಪೂರ್ಣಗೊಳಿಸಲು ತಮ್ಮ ಸಾಮರ್ಥ, ಸಮಯ ಮತ್ತು ಸೌಲಭ್ಯಗಳ ಮಿತಿಯನ್ನು ಮೀರಿ ಹೋಗುವ ಕಾರಣ ಇವರು ಅತೀವ ದಣಿವನ್ನು ಅನುಭವಿಸುತ್ತಾರೆ ಹಾಗೂ ಈ ಕೆಲಸದಲ್ಲಿ ಅತಿ ಹೆಚ್ಚಿನ ಮಗ್ನತೆ ಇತರರಿಗೆ ಕಿರಿಕಿರಿ ತರಿಸಬಹುದು.

ಬಿ ಗುಂಪು(ಬಿ+, ಬಿ-)

ಬಿ ಗುಂಪು(ಬಿ+, ಬಿ-)

ವ್ಯಕ್ತಿಗಳು ಬಿ ಗುಂಪಿನ ರಕ್ತವನ್ನು ಹೊಂದಿದ್ದರೆ ಅವರು ಸಮತೋಲನದವರು ಎಂದು ಹೇಳಲಾಗುತ್ತದೆ. ಇವರು ತುಂಬಾ ಪರಾನುಭೂತಿಯುಳ್ಳವರಾಗಿರುವ ಕಾರಣದಿಂದ ಬೇಗನೆ ಬೇರೆಯವರ ಮಾತನ್ನು ಅರ್ಥಮಾಡಿಕೊಳ್ಳುವರು. ಇದರ ಹೊರತಾಗಿ ಇವರು ಬೇಗನೆ ನಿರ್ಧಾರ ತೆಗೆದುಕೊಳ್ಳುವವರು. ಇವರು ಮನಸ್ಸಿನಲ್ಲಿ ಇರುವಂತಹ ವಿಚಾರಗಳ ಕಡೆ ಹೆಚ್ಚಿನ ಗಮನಹರಿಸುವರು. ಗುರಿ ಸಾಧನೆ ಎಷ್ಟೇ ಕಠಿಣವಾಗಿದ್ದರೂ ಇದನ್ನು ಬಿಟ್ಟುಬಿಡಲ್ಲ. ಇವರು ಒಂದು ಗುರಿಯಿಟ್ಟು ಕೆಲಸ ಮಾಡುವರು. ಇವರು ತುಂಬಾ ಶಾಂತ ಹಾಗೂ ಗಂಭೀರ ಸ್ವಭಾವದ ವ್ಯಕ್ತಿಗಳು. ಇನ್ನು ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ಭಾವಾವೇಶ ವುಳ್ಳವರಾಗಿದ್ದು, ಸೃಜನಶೀಲರೂ, ತಮಾಷೆಯನ್ನು ಇಷ್ಟಪಡುವವರೂ, ದೂರದೃಷ್ಟಿಯುಳ್ಳವರೂ, ಆಶಾವಾದಿಗಳೂ, ಸಕ್ರಿಯರೂ ಮತ್ತು ತಮ್ಮ ಭಾವನೆಗಳನ್ನು ಸಮರ್ಥವಾಗಿ ಹತ್ತಿಕ್ಕಿಕೊಳ್ಳುವವರೂ ಆಗಿರುತ್ತಾರೆ. ಇನ್ನೊಂದು ಕಡೆ ಇವರು ಅತೀವ ಸ್ವಾರ್ಥಿಗಳೂ, ಹಠಮಾರಿಗಳೂ, ಬಂಡಾಯಕೋರರೂ, ಸೇಡಿನ ಭಾವನೆಯನ್ನು ಜೀವಮಾನವಿಡೀ ಉಳಿಸಿಕೊಂಡು ಬರುವಂಥವರೂ, ತಮ್ಮ ಜವಾಬ್ದಾರಿಯ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದವೂ ಆಗಿರುತ್ತಾರೆ.

ಎಬಿ ಗುಂಪು (ಎಬಿ+, ಎಬಿ-)

ಎಬಿ ಗುಂಪು (ಎಬಿ+, ಎಬಿ-)

ಎಬಿ ರಕ್ತದ ಗುಂಪು ಹೊಂದಿರುವಂತಹ ವ್ಯಕ್ತಿಗಳು ತುಂಬಾ ಆಕರ್ಷಣೀಯ ಮತ್ತು ಫ್ಯಾಶನ್ ಇಷ್ಟಪಡುವ ವ್ಯಕ್ತಿಗಳು. ಜನರ ಗುಂಪಿನ ಮಧ್ಯೆ ಎಬಿ ಗುಂಪಿನವರು ತುಂಬಾ ಜನಪ್ರಿಯ ವಾಗಿರುವರು. ಇವರು ಸಣ್ಣ ವಿಚಾರಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಆಧ್ಯಾತ್ಮಿಕವಾಗಿರುವರು. ಜನಸಂಖ್ಯೆಯ ಶೇ.2ರಿಂದ 5ರಷ್ಟು ಜನರು ಮಾತ್ರ ಈ ರಕ್ತದ ಗುಂಪು ಹೊಂದಿರುವರು. ಇವರ ಜೀವನದಲ್ಲಿ ಬೇಸರವೆನ್ನುವುದು ಇರಲ್ಲ.ಈ ಗುಂಪಿನ ರಕ್ತದ ವ್ಯಕ್ತಿಗಳು ಸಾಮಾನ್ಯವಾಗಿ ಸ್ನೇಹಪರರು, ದೂರದೃಷ್ಟಿಯುಳ್ಳವರು, ಅಪಾರ ಬುದ್ಧಿವಂತರು, ಯಾರೊಂದಿಗೂ ಬೆರೆಯಬಲ್ಲವರು, ಕುತೂಹಲಕಾರಿ ವ್ಯಕ್ತಿತ್ವವುಳ್ಳವರು ಮತ್ತು ತತ್ವಜ್ಞಾನಿಗಳೂ ಆಗಿರುತ್ತಾರೆ. ಕೆಲವೊಮ್ಮೆ ಇವರನ್ನು ಅಳೆಯುವುದು ಅಸಂಭವವಾಗುತ್ತದೆ. ಕೆಲವೊಮ್ಮೆ ಇವರು ಅತೀವ ಭಾವಾವೇಶ ಮತ್ತು ಚಿತ್ತವೃತ್ತಿಯನ್ನೂ ತೋರುತ್ತಾರೆ. ಇವರು ಅತೀವ ಸ್ನೇಹಪರರಾಗಿರುವ ಕಾರಣ ತಮ್ಮ ಸ್ನೇಹಿತರಿಗಾಗಿ ಏನನ್ನೂ ಮಾಡಲು ಸಿದ್ಧರಿರುತ್ತಾರೆ. ಇವರ ನಡವಳಿಕೆ ಇತರರಿಗೆ ಹೆಚ್ಚಿನ ಕುತೂಹಲ ಮೂಡಿಸುತ್ತದೆ. ಇವರು ತಮಾಷೆಯನ್ನು ಇಷ್ಟಪಡುವವರೂ ತಮ್ಮ ಸುತ್ತಮುತ್ತಲಿನವರನ್ನು ನಗಿಸುತ್ತಾ ಇರುವವರೂ ಆಗಿದ್ದಾರೆ.

ಒ ಗುಂಪು (ಒ+, ಒ-)

ಒ ಗುಂಪು (ಒ+, ಒ-)

ಒ ಗುಂಪಿನ ರಕ್ತ ಹೊಂದಿರುವ ವ್ಯಕ್ತಿಗಳು ಸಾಮಾನ್ಯವಾಗಿ ಏಕಾಂಗಿಯಾಗಿರುವರು. ಇವರು ಅರ್ಥಗರ್ಭಿತ, ಕೇಂದ್ರತ, ಸ್ವಅವಲಂಬಿತ ಮತ್ತು ಧೈರ್ಯಶಾಲಿ ನಾಯಕರು ಎಂದು ನಂಬಲಾಗಿದೆ. ಇವರು ಬೇಗನೆ ಬಿಟ್ಟುಕೊಡುವ ಕಾರಣದಿಂದಾಗಿ ಕೆಲವೊಮ್ಮೆ ಬೇರೆಯವರನ್ನು ಅವಲಂಬಿಸಬೇಕಾಗುತ್ತದೆ. ಈ ವ್ಯಕ್ತಿಗಳು ಬೇರೆ ರಕ್ತದ ಗುಂಪಿನ ವ್ಯಕ್ತಿಗಳಿಗಿಂತ ಚೆನ್ನಾಗಿ ಒತ್ತಡ ನಿಭಾಯಿಸಬಲ್ಲರು ಮತ್ತು ಪ್ರತಿರೋಧಕ ಶಕ್ತಿಯು ಬಲಿಷ್ಠವಾಗಿರುವುದು. ಈ ಗುಂಪಿನ ವ್ಯಕ್ತಿಗಳು ಸ್ನೇಹಪರರೂ, ತಮ್ಮ ಕರ್ತ್ಯವ್ಯವನ್ನು ಎಷ್ಟೇ ತೊಡಕುಗಳಿದ್ದರೂ ನಿರ್ವಹಿಸುವವರೂ, ದೃಢಸಂಕಲ್ಪವುಳ್ಳವರೂ, ಅತ್ಯಂತ ಪ್ರಾಮಾಣಿಕರು, ಕುತೂಹಲ ವ್ಯಕ್ತಪಡಿಸುವ ವ್ಯಕ್ತಿತ್ವದವರೂ ದಯಾಪರರೂ ಆಗಿದ್ದಾರೆ. ಆದರೆ ಇವರ ಋಣಾತ್ಮಕ ಅಂಶಗಳೆಂದರೆ ಇವರು ತಮ್ಮ ವಸ್ತುಗಳ ಬಗ್ಗೆ ಅತಿಹೆಚ್ಚಿನ ಒಲವು ಉಳ್ಳವರಾಗಿದ್ದು ಇತರರು ಇದನ್ನು ಉಪಯೋಗಿಸಲು ಇಚ್ಛಿಸುವುದಿಲ್ಲ. ಕೆಲವೊಮ್ಮೆ ಅಹಂಕಾರಿಗಳೂ, ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವವರೂ ಮತ್ತು ಹೊಸ ಆಕರ್ಷಣೆಗೆ ಸುಲಭವಾಗಿ ಒಳಗಾಗುವವರೂ ಆಗಿರುತ್ತಾರೆ. ತಮ್ಮ ಉದ್ದೇಶಗಳಿಗೆ ವಿರೋಧ ಒಡ್ಡುವವರನ್ನು ಇವರು ಪ್ರತಿರೋಧಿಸಿ ಜಗಳಕಾಯಲೂ ಸಿದ್ಧರಿರುತ್ತಾರೆ.

ಇದನ್ನು ಹೊರತುಪಡಿಸಿ, ಹೊಂದಿಕೊಳ್ಳುವಂತಹ ಕೆಲವು ರಕ್ತದ ಗುಂಪುಗಳು

ಇದನ್ನು ಹೊರತುಪಡಿಸಿ, ಹೊಂದಿಕೊಳ್ಳುವಂತಹ ಕೆಲವು ರಕ್ತದ ಗುಂಪುಗಳು

*ಎ ರಕ್ತದ ಗುಂಪಿಗೆ ಎ ಮತ್ತು ಎಬಿ ರಕ್ತದ ಗುಂಪು ಹೊಂದಿಕೊಳ್ಳುವುದು.

*ಬಿ ರಕ್ತದ ಗುಂಪು ಬಿ ಮತ್ತು ಎಬಿಗೆ ಹೊಂದಾಣಿಕೆಯಾಗುವುದು.

*ಎಬಿ ಗುಂಪು ಎಬಿ, ಬಿ, ಎ ಮತ್ತು ಒ ಗುಂಪಿಗೆ ಹೊಂದಾಣಿಕೆಯಾಗುವುದು.

*ಒ ಗುಂಪು ಒ ಮತ್ತು ಎಬಿ ಗುಂಪಿಗೆ ಹೊಂದಿಕೊಳ್ಳುತ್ತದೆ.

English summary

Blood Type And Your Personality Defined

According to a research done in Japan, it has been revealed that your blood group plays a vital role in analysing your personality. People in Japan assess the nature of people based on their blood groups for various things like job candidates, dating services for potential love matches, etc. It is believed that blood groups define the personality of individuals.
X
Desktop Bottom Promotion