For Quick Alerts
ALLOW NOTIFICATIONS  
For Daily Alerts

ಹನ್ನೆರಡು ರಾಶಿಗಳ ಅಹಂಕಾರ-ಕೋಪ ಹೇಗಿರುತ್ತದೆ ಗೊತ್ತಾ?

By Divya Pandith
|

ವ್ಯಕ್ತಿಗೆ ತನ್ನ ವ್ಯಕ್ತಿತ್ವವನ್ನು ಸಮಾಜದ ಮುಂದೆ ತೋರುವಾಗ ಸಾಕಷ್ಟು ಒಳ್ಳೆಯ ವರ್ತನೆಯನ್ನು ತೋರುತ್ತಾನೆ. ಏಕೆಂದರೆ ಸಮಾಜದಲ್ಲಿ ತಾನು ಉತ್ತಮ ವ್ಯಕ್ತಿಯಾಗಿ ಬಿಂಬಿತನಾಗಬೇಕು ಎಂಬ ಆಸೆ ಇರುತ್ತದೆ. ಆ ನಿಟ್ಟಿನಲ್ಲಿಯೇ ತನ್ನಲ್ಲಿರುವ ಅನೇಕ ಕೆಟ್ಟ ಗುಣಗಳನ್ನು ಅಥವಾ ವರ್ತನೆಗಳನ್ನು ಅಷ್ಟು ಸುಲಭವಾಗಿ ತೋರಿಸಿಕೊಳ್ಳುವುದಿಲ್ಲ. ವ್ಯಕ್ತಿಯಲ್ಲಿ ಹೇಗೆ ಒಳ್ಳೆಯ ಗುಣಗಳು ಇರುತ್ತವೆಯೋ ಹಾಗೆಯೇ ಕೆಟ್ಟಗುಣಗಳು ಸಹ ಇರುತ್ತವೆ. ಆದರೆ ಅವುಗಳ ಪ್ರಮಾಣ ಹೆಚ್ಚು ಕಡಿಮೆ ಇರಬಹುದು. ಕೆಲವರಲ್ಲಿ ಒಳ್ಳೆಯ ಗುಣಗಳು ಹೆಚ್ಚಿದ್ದರೆ, ಕೆಲವರಲ್ಲಿ ಕೆಟ್ಟ ಗುಣಗಳು ಹೆಚ್ಚಾಗಿರಬಹುದು.

ಮನುಷ್ಯ ಯಾವ ವಾತಾವರಣದಲ್ಲಿ ಬೆಳೆಯುತ್ತಾನೆ? ಅವನಿಗೆ ಯಾವ ಸಂಸ್ಕಾರವು ಬೆಳವಣಿಗೆಯ ಅವಧಿಯಲ್ಲಿ ದೊರೆಯುತ್ತದೆ ಎನ್ನುವುದು ಬಹಳ ಮುಖ್ಯವಾದ ಸಂಗತಿ. ಅವುಗಳ ಪ್ರಭಾವವು ವ್ಯಕ್ತಿತ್ವದಲ್ಲಿ ಹೆಚ್ಚು ಬಿಂಬಿತವಾಗುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ಹುಟ್ಟಿದ ಕ್ಷಣದಲ್ಲಿಯೇ ಆತನ ಮೇಲೆ ಗ್ರಹಗತಿಗಳ ಪ್ರಭಾವವು ಬೀರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ವ್ಯಕ್ತಿ ಒಂದೊಂದು ರಾಶಿಚಕ್ರವನ್ನು ಪಡೆದುಕೊಲ್ಳುತ್ತಾರೆ. ಆ ರಾಶಿಚಕ್ರಗಳ ಅಡಿಯಲ್ಲಿ ಅವರ ಒಳ್ಳೆಯ ಹಾಗೂ ಕೆಟ್ಟಗುಣಗಳ ಪ್ರಮಾಣ ನಿರ್ಧರಿತವಾಗುತ್ತದೆ.

ಕೆಲವು ರಾಶಿಚಕ್ರದವರಲ್ಲಿ ಸೊಕ್ಕಿನ ಪ್ರವೃತ್ತಿ ಬಹುತೇಕ ಮಟ್ಟದಲ್ಲಿಯೇ ಇರುತ್ತದೆ. ಅವರ ವರ್ತನೆ ಇತರರಿಗೆ ಬಹಳಷ್ಟು ನೋವುಂಟುಮಾಡಬಹುದು. ಕೆಲವೊಮ್ಮೆ ಅವರ ಜೀವನಕ್ಕೇ ಹಾನಿಯನ್ನೂ ತಂದೊಡ್ಡಬಹುದು. ಯಾರಲ್ಲಿ ಅತಿಯಾದ ಸೊಕ್ಕಿನ ಪ್ರವೃತ್ತಿ ಇರುತ್ತದೆ ಎನ್ನುವುದನ್ನು ಒಂದು ಪಟ್ಟಿ ಮಾಡುವುದರ ಮೂಲಕ ಬೋಲ್ಡ್ ಸ್ಕೈ ನಿಮಗೆ ಪರಿಚಯಿಸಿಕೊಟ್ಟಿದೆ...

ಸಿಂಹ

ಸಿಂಹ

ಈ ರಾಶಿಯ ವ್ಯಕ್ತಿಗಳು ಸೊಕ್ಕಿನ ಪ್ರವೃತ್ತಿಯಲ್ಲಿರುವ ಪಟ್ಟಿಯಲ್ಲಿ ಮೊದಲ ಸ್ಥಾನದವರು. ಇವರಿಗೆ ಅಹಂ ಅಧಿಕವಾಗಿದೆ ಎಂದು ಹೇಳಬಹುದು. ಸದಾ ತಾವೇ ಉನ್ನತ ಸ್ಥಾನದಲ್ಲಿರುವವರು ಎನ್ನುವಂತೆ ತೋರಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇವರಲ್ಲಿ ಸರಳ ಚಿಂತೆನಗಳು ಇವೆಯಾದರೂ ಅದನ್ನು ಅವರು ಅಷ್ಟಾಗಿ ತೋರಿಸಿಕೊಳ್ಳುವುದಿಲ್ಲ. ತಾವೆಲ್ಲವನ್ನು ಬಲ್ಲೆವೂ ಹಾಗೂ ಎಲ್ಲರಿಗೂ ತಮ್ಮ ಅಗತ್ಯವಿದೆ ಎಂದು ಭಾವಿಸುತ್ತಾರೆ. ಅಂತೆಯೇ ಸೊಕ್ಕಿನ ವರ್ತನೆಯನ್ನು ತೋರುವರು.ಇನ್ನು ಈ ರಾಶಿಯವರು ತಮ್ಮ ಮಾತನ್ನು ಯಾರಾದರೂ ಕೇಳುತ್ತಿಲ್ಲ ಎಂದಾದರೆ ತಕ್ಷಣವೇ ಕೋಪಗೊಳ್ಳುತ್ತಾರೆ. ಇವರು ತಕ್ಷಣಕ್ಕೆ ನಿರಾಶೆಯ ಭಾವ ಮತ್ತು ಆಶ್ಚರ್ಯಕರ ಪ್ರವೃತ್ತಿಗೆ ಒಳಗಾಗುತ್ತಾರೆ. ಇವರು ಒಂದು ರೀತಿಯ ಕಿರಿಕಿರಿಗೆ ಒಳಗಾದರೆ ಬಹಳ ಬೇಸರ ಹಾಗೂ ಅಸಮಧಾನಕ್ಕೆ ಒಳಗಾಗುತ್ತಾರೆ. ತಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎನ್ನುವುದನ್ನು ಅವರು ಭಾವಿಸಿದರೆ ಸಿಟ್ಟಿಗೆ ಒಳಗಾಗುವರು. ಕೆಲವು ವಿಚಾರಗಳನ್ನು ಇವರೇ ನಿರ್ಲಕ್ಷಿಸುತ್ತಿದ್ದರೆ ಮಾನಸಿಕವಾಗಿ ಸಮಾಧಾನದಲ್ಲಿ ಇರುತ್ತಾರೆ.

ಧನು

ಧನು

ಇವರು ಪ್ರಪಂಚವನ್ನು ಸುತ್ತಲು ಬಯಸುತ್ತಾರೆ. ಉತ್ಸಾಹ ಭರಿತರು, ಆಶಾವಾದಿಗಳು ಹಾಗೂ ಇತರರನ್ನು ಸಂತೋಷದಲ್ಲಿ ಇಡಲು ಬಯಸುವ ವ್ಯಕ್ತಿಗಳು. ಇವರು ಎಲ್ಲರೂ ತಮ್ಮನ್ನು ಉದಾಹರಣೆಯನ್ನಾಗಿ ಸ್ವೀಕರಿಸಬೇಕೆಂದು ಬಯಸುತ್ತಾರೆ. ಇವರು ವ್ಯಕ್ತಿಯಿಂದ ದೂರವಾಗಬೇಕಾದರೆ ಯಾವುದೇ ಚಿಂತೆಗೆ ಒಳಗಾಗುವುದಿಲ್ಲ. ಪ್ರತಿಯೊಬ್ಬರು ತಮ್ಮೆಡೆಗೆ ಆಕರ್ಷಿತರಾಗುವಂತೆ ವರ್ತಿಸುತ್ತಾರೆ. ಕೆಲವೊಮ್ಮೆ ತಾವೇ ಎಲ್ಲಾ ಎಂದು ತೋರಿಸುವ ಇವರ ಸೊಕ್ಕಿನ ಪ್ರವೃತ್ತಿ ಇತರರಿಗೆ ನೋವುಂಟು ಮಾಡುವುದು. ಇನ್ನು ಬೆಂಕಿಯ ಚಿಹ್ನೆಯನ್ನು ಹೊಂದಿರುವ ಇವರು. ಕೋಪವನ್ನು ಹೆಚ್ಚಾಗಿಯೇ ತೋರುತ್ತಾರೆ. ಪ್ರಾಮಾಣಿಕತೆಯನ್ನು ಹೊಂದಿರುವ ಇವರು ನಂಬಿಕೆ ದ್ರೋಹವನ್ನು ಸಹಿಸುವುದಿಲ್ಲ. ಇವರು ಸಿಟ್ಟಿಗೆ ಕಾರಣವಾದ ವಿಷಯವನ್ನು ವಿಶ್ಲೇಷಿಸಿ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಯತ್ನಿಸುತ್ತಾರೆ.

ವೃಷಭ

ವೃಷಭ

ಇವರು ಯಾರೊಂದಿಗೂ ರಾಜಿಮಾಡಿಕೊಳ್ಳಲು ಬಯಸುವುದಿಲ್ಲ. ಇವರು ಯಾವಾಗಲು ಸರಿಯಾಗಿಯೇ ಇರುತ್ತೇವೆ ಎಂದು ಭಾವಿಸುತ್ತಾರೆ. ಸ್ವಾರ್ಥ ಭಾವನೆಯನ್ನು ಹೊಂದಿರುವ ಇವರು ಎಲ್ಲರು ಸದಾ ತಮ್ಮನ್ನು ಆರಾಧಿಸಲಿ ಎಂದು ಬಯಸುತ್ತಾರೆ. ಅದಕ್ಕಾಗಿಯೇ ಶ್ರಮಿಸುತ್ತಾರೆ ಸಹ. ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಲು ಬಯಸುವ ವ್ಯಕ್ತಿಗಳು ಇವರು. ಸ್ವಯಂ ಕೇಂದ್ರೀಕೃತ ಗುಣವನ್ನು ಹೊಂದಿರುವ ಇವರು ಸಾಕಷ್ಟು ವರ್ತನೆಯನ್ನು ಸೊಕ್ಕಿನ ರೂಪದಲ್ಲಿ ತೋರುತ್ತಾರೆ. ಇನ್ನು ಇವರಿಗೆ ಅಷ್ಟಾಗಿ ಬೇಗ ಕೋಪ ಬರದು. ಇವರನ್ನು ನಿಷ್ಕ್ರಿಯ ಆಕ್ರಮಣಕಾರಿ ಸ್ವಭಾವದವರು ಎನ್ನಬಹುದು. ಇವರಿಗೆ ನೋವುಂಟು ಮಾಡಿದ ವ್ಯಕ್ತಿಯನ್ನು ಕ್ಷಮಿಸುವುದು ಅಥವಾ ಅಷ್ಟು ಸುಲಭವಾಗಿ ಮರೆಯುವುದಿಲ್ಲ. ಕೋಪಗೊಂಡಾಗ ಇವರ ಮನಸ್ಸಿನಲ್ಲಿರುವುದೆಲ್ಲವನ್ನೂ ಹೇಳಿ ಬಿಡುತ್ತಾರೆ. ಪರಿಣಾಮ ಏನು ಎನ್ನುವುದನ್ನು ಆನಂತರ ಯೋಚಿಸುತ್ತಾರೆ.

ಮೇಷ

ಮೇಷ

ಇವರು ಇತರ ವ್ಯಕ್ತಿಗಳನ್ನು ಅಷ್ಟಾಗಿ ಪರಿಗಣನೆಗೆ ತೆಗೆದುಕೊಳ್ಳುವುದು ಕಷ್ಟ. ಹಾಗಂತ ಇವರಿಗೆ ಕಾಳಜಿಯಿಲ್ಲ ಎಂದಲ್ಲ. ಭಾವನೆ ಮತ್ತು ವಿಚಾರಗಳನ್ನು ತುಂಬಾ ತುಲನಾತ್ಮಕವಾಗಿ ಸ್ವೀಕರಿಸುತ್ತಾರೆ. ಇತರರಿಗೆ ಸಹಾಯ ಮಾಡಲು ಹಾಗೂ ಕಾಳಜಿ ವಹಿಸಲು ಸದಾ ಮುಂದಿರುತ್ತಾರೆ. ಆದರೂ ಕೆಲವೊಮ್ಮೆ ತಮ್ಮ ಸಾಮಥ್ರ್ಯವನ್ನು ತೋರಿಸಿಕೊಳ್ಳುವಾಗ ಸೊಕ್ಕಿನಿಂದ ಕೂಡಿದ ವ್ಯಕ್ತಿಗಳಂತೆ ವರ್ತಿಸುತ್ತಾರೆ. ಇನ್ನು ಇವರಿಗೆ ಚಿಕ್ಕ ವಿಚಾರಗಳಿಗೂ ಕೆಂಡದಂತಹ ಕೋಪ ಬರುತ್ತದೆ. ಇವರು ಜೀವನದಲ್ಲಿ ಸದಾ ಉತ್ಸಾಹದಲ್ಲಿ ಇರುತ್ತಾರೆ. ಇವರ ಸಿಟ್ಟು ಸನ್ನಿವೇಶವನ್ನು ಅವಲಂಭಿಸಿರುತ್ತದೆ. ಇವರಿಗೆ ಕೋಪ ಬಹುಬೇಗ ಬರಬಹುದು. ಅಷ್ಟೇ ಬೇಗ ತಣ್ಣಗಾಗುತ್ತದೆ. ಜೊತೆಗೆ ಕೋಪ ಮಾಡಿಕೊಂಡಿರುವುದನ್ನು ಮರೆತು ಬಿಡುತ್ತಾರೆ.

ಕುಂಭ

ಕುಂಭ

ಇತರರ ಭಾವನೆಗೆ ಅಷ್ಟಾಗಿ ಕಾಳಜಿ ವಹಿಸದ ಇವರು ಸದಾ ಮೇಲ್ಮಟ್ಟದಲ್ಲಿ ಇರಲು ಬಯಸುತ್ತಾರೆ. ಉತ್ತಮ ಶ್ರೋತೃಗಳು ಹಾಗೂ ಕ್ರಿಯಾಶೀಲ ವ್ಯಕ್ತಿಗಳು ಆಗಿರುವ ಇವರಿಗೆ ತಮ್ಮದೇ ಆದ ಚಿಂತನೆಗಳು ಇರುತ್ತವೆ. ಆ ಚಿಂತನೆಗಳ ಅಡಿಯಲ್ಲಿಯೇ ವ್ಯವಹರಿಸುತ್ತಿರುತ್ತಾರೆ. ಇದರ ಪರಿಣಾಮವಾಗಿಯೇ ಇವರಲ್ಲಿ ಸೊಕ್ಕಿನ ವರ್ತನೆಗಳು ಬಹಿರಂಗವಾಗುತ್ತಿರುತ್ತವೆ. ಇನ್ನು ಈ ರಾಶಿಯವರು ಇವರು ಒಳ್ಳೆಯ ಚರ್ಚೆ ಮತ್ತು ಚಿಂತನೆಗಳನ್ನು ಇಷ್ಟಪಡುತ್ತಾರೆ. ಇವರು ವಾದವನ್ನು ಇಷ್ಟ ಪಡುವುದಿಲ್ಲ. ಅದನ್ನು ಇವರಿಂದ ನಿರೀಕ್ಷಿಸುವಂತಿಲ್ಲ. ಇವರು ತಮ್ಮ ಭಾವನೆಯನ್ನು ಇತರರಿಗೆ ತೋರಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಕೋಪ ಪದೇ ಪದೇ ಬರದಿದ್ದರೂ ಕೆಲವು ಸನ್ನಿವೇಶಗಳಿಗೆ ಅನುಗುಣವಾಗಿ ಅಧಿಕ ಕೋಪಕ್ಕೆ ಒಳಗಾಗುತ್ತಾರೆ.

ಕನ್ಯಾ

ಕನ್ಯಾ

ಇವರೊಬ್ಬ ವಿಸ್ಮಯಕಾರಿ ವ್ಯಕ್ತಿಗಳಾಗಿರುತ್ತಾರೆ. ಅದ್ಭುತ ಸೃಜನ ಶೀಲತೆ, ಸಹಾಯದ ಗುಣ, ಶಾಂತ ಸ್ವಭಾವದವರೂ ಹೌದು. ಆದರೆ ತಮ್ಮ ತನವನ್ನು ಹಾಗೂ ಆಕರ್ಷಣೆಯನ್ನು ಹೆಚ್ಚಿಸಿಕೊಳ್ಳುವ ಗೋಜಿನಲ್ಲಿ ಸೊಕ್ಕಿನ ಪ್ರವೃತ್ತಿಯನ್ನು ತೋರುವುದುಂಟು. ಸಾಕಷ್ಟು ವಿಚಾರದಲ್ಲಿ ಪರಿಪೂರ್ಣತೆಯನ್ನು ಇವರು ಹೊಂದಿರುವುದಿಲ್ಲ. ಆದರೂ ಪರಿಪೂರ್ಣರಂತೆ ವರ್ತಿಸುತ್ತಾರೆ. ಇದು ಅವರಿಗೆ ಸಮಸ್ಯೆಯನ್ನು ಉಂಟುಮಾಡಬಹುದು. ಸಾಮಾನ್ಯವಾಗಿ ಈ ರಾಶಿಯವರು ತುಂಬಾ ಸಹನೆಯನ್ನು ಹೊಂದಿರುತ್ತಾರೆ. ಆದರೂ ಕೆಲವು ಸಂದರ್ಭದಲ್ಲಿ ಸಿಟ್ಟಿಗೆ ಒಳಗಾಗುವರು. ತಮ್ಮ ಸಿಟ್ಟನ್ನು ನಿಭಾಯಿಸುವ ಸಾಮರ್ಥ್ಯ ಇರುತ್ತದೆ. ಇವರನ್ನು ನಿರ್ಲಕ್ಷಿಸುವುದನ್ನು ಇಷ್ಟಪಡುವುದಿಲ್ಲ. ಇವರ ನಿರೀಕ್ಷಿಸಿದಂತೆ ನಡೆಯಬೇಕು ಎಂದು ಬಯಸುತ್ತಾರೆ. ಇವರ ಸಿಟ್ಟು ದೀರ್ಘಕಾಲ ಇರುವುದು.

ವೃಶ್ಚಿಕ

ವೃಶ್ಚಿಕ

ಈ ರಾಶಿಯ ವ್ಯಕ್ತಿಗಳು ಸದಾ ಸ್ವಯಂ ಕೇಂದ್ರೀಕೃತ ವ್ಯಕ್ತಿಗಳಾಗಿರುತ್ತಾರೆ. ಸ್ವಲ್ಪ ಮಟ್ಟಿಗೆ ದ್ರೋಹವನ್ನು ಇವರು ಅನುಭವಿಸಿರುತ್ತಾರೆ. ಇದರಿಂದಾಗಿ ಅವರ ಪ್ರಚೋದನೆಗಳು ಆ ಪರಿಯಲ್ಲಿಯೇ ಇರುತ್ತದೆ. ಬೇರೆಯವರು ಏನು ಹೇಳುತ್ತಾರೆ ಅಥವಾ ಏನು ಯೋಚಿಸುತ್ತಾರೆ ಎನ್ನುವುದರ ಬಗ್ಗ ಹೆಚ್ಚಿನ ಚಿಂತನೆಯನ್ನು ನಡೆಸುವುದಿಲ್ಲ. ಹಾಗಾಗಿ ಇವರ ವರ್ತನೆಗಳು ಸೊಕ್ಕಿನ ವರ್ತನೆಗಳಂತೆಯೇ ತೋರ್ಪಡುತ್ತದೆ. ಇನ್ನು ಇವರು ಸಿಟ್ಟಿಗೆ ಒಳಗಾಗಿರುವಾಗ ದೈಹಿಕ ಚಲನವಲನಗಳು ಅಧಿಕಗೊಳ್ಳುತ್ತದೆ. ಕಣ್ಣುಗಳು ಅರಳುವುದು, ಮುಖದ ಭಾವನೆ ಬದಲಾಗುವುದು, ಏರು ಧ್ವನಿ ಸೇರಿದಂತೆ ಪರಿಣಾಮಕಾರಿಯ ರೀತಿಯಲ್ಲಿಯೇ ಸಿಟ್ಟನ್ನು ಪ್ರದರ್ಶಿಸುತ್ತಾರೆ. ಇಂತಹ ಸಮಯದಲ್ಲಿ ಅವರನ್ನು ಸಮಾಧಾನಗೊಳ್ಳಲು ಅವರನ್ನು ಅವರ ಪಾಡಿಗೆ ಬಿಟ್ಟುಬಿಡಬೇಕು. ಆಗ ಬಹುಬೇಗ ಶಾಂತವಾಗುತ್ತಾರೆ.

ಮಿಥುನ

ಮಿಥುನ

ಬಹಳಷ್ಟು ಸಂಗತಿಗಳಿಗೆ ಈ ರಾಶಿಯ ವ್ಯಕ್ತಿಗಳು ಸ್ವಾರ್ಥಿಗಳು ಹಾಗೂ ಸ್ವಯಂ ಕೇಂದ್ರೀಕೃತ ವ್ಯಕ್ತಿಗಳಾಗಿ ತೋರುತ್ತಾರೆ. ಇವರ ಸೊಕ್ಕಿನ ಹಾಗೂ ಸ್ವಾರ್ಥದ ಗುಣವು ಸಂಭಾಷಣೆಯಲ್ಲಿಯೇ ವ್ಯಕ್ತವಾಗುತ್ತದೆ. ಜನರು ತಮ್ಮ ಬಗ್ಗೆ ಧನಾತ್ಮಕವಾಗಿಯೇ ಅರ್ಥೈಸಿಕೊಳ್ಳಬೇಕು ಎಂದು ಭಾವಿಸುತ್ತಾರೆ. ತಮ್ಮ ಬಗ್ಗೆ ಹಾಸ್ಯದ ಭಾವನೆಯನ್ನು ಹೊಂದಿರುವ ಇವರು ಜೋಕ್ ಮಾಡುವುದರ ಮೂಲಕವೇ ಇತರರಿಗೆ ನೋವನ್ನುಂಟುಮಾಡುತ್ತಾರೆ.

ತುಲಾ

ತುಲಾ

ಈ ರಾಶಿಯವರು ಯಾವಾಗಲು ಸ್ವಯಂ ಕೇಂದ್ರೀಕೃತರಾಗಿರುತ್ತಾರೆ. ಇವರಲ್ಲಿ ಕೆಲವೊಂದಿಷ್ಟು ಪ್ರಶಂಸನೀಯ ಗುಣಗಳಿವೆ ಎಂದು ಹೇಳಬಹುದು. ನಿರ್ಣಯಗಳನ್ನು ತೆಗೆದುಕೊಳ್ಳುವಾಗ ನ್ಯಾಯಯುತವಾಗಿಯೇ ಇರುತ್ತದೆ. ಸಮಸ್ಯೆಗಳನ್ನು ಬಲು ಸುಲಭವಾಗಿ ನಿವಾರಿಸಬಹುದಾದ ಸಾಮಥ್ರ್ಯವನ್ನು ಇವರು ಹೊಂದಿರುತ್ತಾರೆ. ಸ್ವಯಂ ರಕ್ಷಣೆಯ ವಿಚಾರದಲ್ಲಿ ಅಥವಾ ಇನ್ನಿತರ ವೈಯಕ್ತಿಕ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವಾಗ ಸೊಕ್ಕಿನ ಪ್ರವೃತ್ತಿ ತೋರುವರು. ಇವರಿಗೆ ಸಿಟ್ಟು ಅಧಿಕವಾಗಿರುತ್ತದೆ. ಜೊತೆಗೆ ಸಿಟ್ಟು ಬಂದಾಗ ಏನು ಮಾಡುತ್ತಾರೆ ಎನ್ನುವುದನ್ನು ಅವರಿಗೇ ಅರಿವಿರುವುದಿಲ್ಲ. ಸ್ವಾಭಿಮಾನವನ್ನು ಹೊಂದಿರುವ ಇವರಿಗೆ ತಾವು ಮಾಡಿದ ತಪ್ಪಿನ ಅರಿವಿರುತ್ತದೆ. ಸಿಟ್ಟಿನಲ್ಲಿ ಮಾಡಿದ ಕೃತ್ಯದ ಬಗ್ಗೆ ಕ್ಷಮೆಯಾಚಿಸುತ್ತಾರೆ.

ಮೀನ

ಮೀನ

ಇವರು ಬಹಳ ಸ್ವಯಂ ಕೇಂದ್ರೀಕೃತ ವ್ಯಕ್ತಿಗಳು ಎನ್ನಬಹುದು. ವಾಸ್ತವದಲ್ಲಿ ತಮ್ಮ ರಕ್ಷಣೆಗಾಗಿ ಅಥವಾ ತಮ್ಮ ಸ್ವ ಇಚ್ಛೆಗಾಗಿ ಬಹಳ ಸ್ವಾರ್ಥ ವರ್ತನೆಯನ್ನು ತೋರುವರು. ಇತರರಿಂದ ಬಹಳ ಬೇಗ ಪ್ರಭಾವಿತರಾಗುವ ಇವರು ಬಹುಬೇಗ ಕ್ಷಮಿಸುವ ಗುಣವನ್ನು ಹೊಂದಿರುತ್ತಾರೆ. ಇವರು ಬಹಳ ಅರ್ಥ ಗರ್ಭಿತ ರಾಗಿರುತ್ತಾರೆ. ದಯೆ ಸಹಾನುಭೂತಿಯನ್ನು ತೋರುವ ಇವರು ತಮ್ಮ ಮಾತೇ ನಡೆಯಬೇಕೆಂಬ ಭಾವನೆಯನ್ನು ಹೊಂದಿರುವರು. ಅದು ಸೊಕ್ಕಿನ ವರ್ತನೆಯಾಗಿ ಹೊರಹೊಮ್ಮುವುದು. ನೀರಿನ ಚಿಹ್ನೆಯನ್ನು ಹೊಂದಿರುವ ಈ ರಾಶಿಯವರು ತಮ್ಮ ಮನಸ್ಸಿನಲ್ಲೇ ಅನೇಕ ವಿಚಾರವನ್ನು ಇಟ್ಟುಕೊಳ್ಳುತ್ತಾರೆ. ಆಗಾಗ ಸಿಟ್ಟಿಗೆ ಒಳಗಾಗುತ್ತಾರೆಯಾದರೂ ತಮ್ಮ ನಿಯಂತ್ರಣದಲ್ಲಿ ಇರಿಸಿಕೊಳ್ಳುತ್ತಾರೆ. ತಮ್ಮ ಭಾವನೆಯನ್ನು ಕಿರುಚುವುದು ಅಥವಾ ಅಳುವುದರ ಮೂಲಕ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ.

ಮಕರ

ಮಕರ

ಇವರು ಅತ್ಯಂತ ಬುದ್ಧಿವಂತರು ಹಾಗೂ ಪ್ರಾಯೋಗಿಕ ವ್ಯಕ್ತಿಗಳಾಗಿ ತೋರುವರು. ಪ್ರಪಂಚವು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಅರ್ಥ ಮಾಡಿ ಕೊಳ್ಳುತ್ತಾರೆ. ಇವರ ಅಗತ್ಯತೆಗಳು ಇತರ ವಿಷಯಗಳಿಗಿಂತ ಪ್ರಮುಖವಾದದ್ದು ಎಂದು ಭಾವಿಸುವುದಿಲ್ಲ. ಕೆಲಸ ಮತ್ತು ಗುರಿಯ ಕಡೆಗೆ ಹೆಚ್ಚು ಗಮನವನ್ನು ಕೇಂದ್ರೀಕರಿಸುತ್ತಾರೆ. ಆದರೆ ಇವರು ಎಲ್ಲರೂ ತಮ್ಮಿಂದಲೇ ಪ್ರಯೋಜನ ಪಡೆದುಕೊಳ್ಳಬೇಕೆಂಬ ಸೊಕ್ಕಿನ ವರ್ತನೆಯನ್ನು ತೋರುವರು. ಇವರು ಭೂಮಿಕಯ ಚಿಹ್ನೆಯನ್ನು ಹೊಂದಿದವರು. ಇವರು ಶಾಂತಿಯ ಸ್ವಭಾವದವರು ಎನ್ನಬಹುದು. ಇವರು ಸಿಟ್ಟಿನಲ್ಲಿ ಶಕ್ತಿಯನ್ನು ವ್ಯರ್ಥಮಾಡುವ ಬದಲು ಶಾಂತವಾಗಿರಲು ಇಷ್ಟಪಡುತ್ತಾರೆ. ಇವರಿಗೆ ತಮ್ಮ ಭಾವನೆಯನ್ನು ಹೇಗೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎನ್ನುವುದರ ಅರಿವಿರುತ್ತದೆ. ಎಂತಹ ಕಾರಣಕ್ಕೆ ಸಿಟ್ಟು ಬಂದಿದ್ದರೂ ಬಹು ಶಾಂತರೀತಿಯಲ್ಲಿ ಇರುತ್ತಾರೆ.

ಕರ್ಕ

ಕರ್ಕ

ಇವರು ಭಾವನಾತ್ಮಕ ವ್ಯಕ್ತಿಗಳು. ಆದರೆ ತಮ್ಮ ಭಾವನೆಗಳೇ ಎಲ್ಲಕ್ಕಿಂತ ಹೆಚ್ಚೆಂದು ಭಾವಿಸುವುದಿಲ್ಲ. ಈ ರಾಶಿಯ ವ್ಯಕ್ತಿಗಳು ಬಹಳ ಪ್ರೀತಿಯ ಮತ್ತು ರಕ್ಷಣಾತ್ಮಕ ವ್ಯಕ್ತಿಗಳು ಎಂದು ಹೇಳಾಗುವುದು. ಇತರರ ಒಳ್ಳೆಯದಕ್ಕಾಗಿ ಸದಾ ಸಿದ್ಧರಾಗಿರುತ್ತಾರೆ. ಇತರರ ಸಹಾಯಕ್ಕೆ ಪ್ರಶಂಸೆಗೆ ಸದಾ ಮುಂದಾಗಿರುತ್ತಾರೆ. ಇವರ ಸ್ವಯಂ ವಿಚಾರಕ್ಕೆ ಬಂದಾಗ ಸ್ವಲ್ಪ ಸ್ವಾರ್ಥ ಹಾಗೂ ಸೊಕ್ಕಿನ ಗುಣಗಳು ವ್ಯಕ್ತವಾಗಬಹುದು ಎಂದು ಹೇಳಲಾಗುವುದು. ಇವರು ಇವರು ಸಹಾನುಭೂತಿ ಹೊಂದಿರುವ ವ್ಯಕ್ತಿಗಳು. ಇವರಿಗೆ ಸಿಟ್ಟು ಬಂದಾಗ ಆಕ್ರಮಣ ಶೀಲ ಪ್ರವೃತ್ತಿಯನ್ನು ತಳೆಯುತ್ತಾರೆ. ಜೊತೆಗೆ ಹತ್ತಿರ ಇರುವ ವಸ್ತುಗಳನ್ನು ಹಾನಿ ಗೊಳಿಸಬಹುದು. ಚಿಕ್ಕ ಪುಟ್ಟ ತಪ್ಪು ಅಥವಾ ವಿಷಯಗಳನ್ನು ಇವರು ಗಂಭೀರವಾಗಿ ಪರಿಗಣಿಸುತ್ತಾರೆ. ತಮ್ಮ ಪ್ರೀತಿ ಪಾತ್ರರಿಗಾದರೆ ಕ್ಷಮೆಯನ್ನು ನೀಡುತ್ತಾರೆ. ಜೊತೆಗೆ ತಪ್ಪನ್ನು ಒಪ್ಪಿ ಕೊಳ್ಳುತ್ತಾರೆ.

English summary

According To Astrology these are most Arrogant Zodiac Signs

when it comes to being completely self-centered, some zodiac signs are more self-absorbed than others. Loving yourself, cherishing your strengths, and celebrating your victories are all good things, but don’t do them to the exclusion of others. Everyone is worthy of attention and being allowed to shine. If you’re always the sun, you’ll forever shut out someone else’s shine.
X
Desktop Bottom Promotion