ಲೈಂಗಿಕತೆಯ ದೃಷ್ಟಿಕೋನ ಹಾಗೂ ಅದರ ವಿಧಗಳು

Subscribe to Boldsky

ಲೈಂಗಿಕತೆಯನ್ನು ವಿವರಿಸುವಾಗ ಸ್ತ್ರೀ ಸಲಿಂಗಕಾಮಿ, ಪುರುಷ ಸಲಿಂಗಕಾಮಿ ಮತ್ತು ದ್ವಿಲಿಂಗಕಾಮಿ ಎಂಬ ಪದಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ನಮ್ಮಲ್ಲಿ ಬಹಳ ಜನರಿಗೆ ಈ ವಿಧಗಳನ್ನು ಬಿಟ್ಟು ಬೇರೆ ರೀತಿಯ ಲಿಂಗಿಗಳು ಮತ್ತು ಅವರ ಗುರುತುಗಳ ಬಗ್ಗೆ ಅಷ್ಟಾಗಿ ತಿಳಿದಿಲ್ಲ.ಈ ಮೂರು ಸಾಮಾನ್ಯ ಪದಗಳು ಮಾತ್ರವೇ ಲೈಂಗಿಕತೆಯನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ.ಈ ಲೇಖನದಲ್ಲಿ ನಾವು ಲೈಂಗಿಕತೆಯ ದೃಷ್ಟಿಕೋನದ ಬಗ್ಗೆ ಮಾತನಾಡೋಣ ಹಾಗೂ ಅದರ ಬಗ್ಗೆ ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳನ್ನು ಅರ್ಥಮಾಡಿಕೊಳ್ಳೋಣ.

ವಿಭಿನ್ನವಾದ ಲೈಂಗಿಕ ಗುರುತುಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ಲೈಂಗಿಕತೆಯನ್ನು ವ್ಯಾಖ್ಯಾನಿಸುವ ಹಲವು ಪದಗಳ ಪಟ್ಟಿ ಇಲ್ಲಿದೆ. ಇದನ್ನು ಡೇವಿಸ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯವು ನಡೆಸಿದ ಸಂಶೋಧನೆಯು ಒದಗಿಸಿದ ಪಟ್ಟಿಯ ಸಹಾಯದಿಂದ ಸಂಗ್ರಹ ಮಾಡಲಾಗಿದೆ .ಈಗ ನಾವು ಸ್ವಲ್ಪ ಮುಂದೆ ಹೋಗಿ ವಿವಿಧ ಲೈಂಗಿಕ ದೃಷ್ಟಿಕೋನಗಳನ್ನು ಮತ್ತು ಮಾನವ ನಡವಳಿಕೆಯ ಆಧಾರದ ಮೇಲೆ ಇರುವ ವಿವಿಧ ರೀತಿಗಳ ಬಗ್ಗೆ ತಿಳಿದುಕೊಳ್ಳೋಣ.

sexual orientation

1.ಬೈ ಸೆಕ್ಷುಯಲ್(ದ್ವಿಲಿಂಗಕಾಮಿ):

'ಬೈ' ಎಂಬ ಪದವು ಎರಡು ಎಂಬ ಅರ್ಥ ಅರ್ಥ ಕೊಡುತ್ತದೆ .ಇದು ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಆಕರ್ಷಿಸುವ ವ್ಯಕ್ತಿಗಳನ್ನು ವ್ಯಾಖ್ಯಾನಿಸಲು ಬಳಸಲಾಗುತ್ತದೆ.

2. ಅಸೆಕ್ಷುಯಲ್ (ಅಲೈಂಗಿಕ):

ಈ ಗುಂಪಿಗೆ ಬರುವ ವ್ಯಕ್ತಿಗಳು ತಮ್ಮ ಸಂಗಾತಿಯ ಬಗ್ಗೆ ಪ್ರಣಯದ ಮತ್ತು ಭಾವನಾತ್ಮಕ ಆಕರ್ಷಣೆಯನ್ನು ಅನುಭವಿಸುತ್ತಾರೆಯಾದರೂ ಅವರಿಗೆ ಕೆಲವೊಮ್ಮೆ ಯಾವುದೇ ಲೈಂಗಿಕ ಆಕರ್ಷಣೆ ಇಲ್ಲದೇ ಇರುವ ಹಾಗೆ ಕೂಡ ಆಗುತ್ತದೆ. ಮತ್ತೊಂದೆಡೆ ಇವರು ಲೈಂಗಿಕ ಆಕರ್ಷಣೆಗೆ ಒಳಗಾಗದೇ ಇದ್ದರೂ ಅವರ ಸಂಗಾತಿಯ ಜೊತೆಗೆ ಯಶಸ್ವಿ ಮತ್ತು ಅರ್ಥಪೂರ್ಣವಾದ ಸಂಬಂಧಗಳನ್ನು ಹೊಂದಿರುತ್ತಾರೆ.

3.ಪ್ಯಾನ್ಸೆಕ್ಸ್ವಲ್ :

'ಪ್ಯಾನ್ಸೆಕ್ಸ್ವಲ್' ಅನ್ನು 'ಪ್ಯಾನ್' ಎಂಬ ಪದವನ್ನು ಪೂರ್ವಭಾವಿಯಾಗಿಟ್ಟುಕೊಂಡು ಪಡೆಯಲಾಗಿದೆ, ಈ ಪದವೇ ಎಲ್ಲವನ್ನೂ ತಿಳಿಸುತ್ತದೆ! ಈ ವಿಧವು ಲೈಂಗಿಕ ಮತ್ತು ಭಾವನಾತ್ಮಕ ಭಾವನೆಗಳನ್ನು ಹೊಂದಿರುವ ವ್ಯಕ್ತಿಗಳನ್ನು ವರ್ಣಿಸುತ್ತದೆ, ಇವರು ಎಲ್ಲಾ ವಿಧದ ಲಿಂಗಗಳನ್ನು ಪ್ರೀತಿಸುವ ವ್ಯಕ್ತಿಗಳಾಗಿರುತ್ತಾರೆ .

4.ಸಿಸ್ಜೆಂಡರ್ :

ಇದು ಟ್ರಾನ್ಸ್ಜೆಂಡರ್ನ ವಿರುದ್ಧವಾದ ವಿಧ .ಇದು ಜನನಕ್ಕೆ ಅನುಗುಣವಾದ ಅಂಗರಚನಾಶಾಸ್ತ್ರದ ಲಿಂಗವನ್ನು ಹೊಂದಿದ ವ್ಯಕ್ತಿಗಳನ್ನು ವಿವರಿಸಲು ಬಳಸಲಾಗುತ್ತದೆ.

5.ಕ್ವೀರ್:

ಈ ವಿಧವು ಭಿನ್ನಲಿಂಗೀಯವಲ್ಲದ ವ್ಯಕ್ತಿಗಳನ್ನು ಸೂಚಿಸುತ್ತದೆ. LGBTQA + ಸಮುದಾಯದ ಕೆಲವರು ಇದನ್ನು ಮರುಪಡೆದುಕೊಂಡಿದ್ದಾರೆ, ಆದರೆ ಇದನ್ನು ಇನ್ನೂ ಸಾರ್ವತ್ರಿಕವಾಗಿ ಅಂಗೀಕರಿಸಲಾಗಿಲ್ಲ.

6.ಇಂಕೆಲ್:

ಈ ವಿಧದಲ್ಲಿ ಬರುವ ವ್ಯಕ್ತಿಗಳು ಪ್ರಣಯದ ಭಾವನೆಗಳು ಮತ್ತು ಬಯಕೆಗಳು ಇದ್ದರೂ ಪ್ರಣಯ ಅಥವಾ ಲೈಂಗಿಕ ಪಾಲುದಾರಿಕೆಯನ್ನು ಹೊಂದುವ ಸಂಗಾತಿಯನ್ನು ಕಂಡುಹಿಡಿಯಲು ಸಾಧ್ಯವಾಗದ ಸ್ಥಿತಿಯಲ್ಲಿ ಇರುತ್ತಾರೆ. ಇದನ್ನು ಇಂಕೆಲ್ಡಮ್ ಎಂದು ಕರೆಯುತ್ತಾರೆ ,ಜನ ಸಾಮಾನ್ಯರ ಭಾಷೆಯಲ್ಲಿ ಹೇಳುವುದಾದರೆ ಈ ವ್ಯಕ್ತಿಗಳು ತಾವು ಏಕಾಂಗಿಗಳೆಂದು ಭಾವಿಸುತ್ತಾರೆ ಮತ್ತು ಸಂಗಾತಿಯನ್ನು ಬಯಸುತ್ತಾರೆ.

7. ಅಲೋಸೆಕ್ಸ್ಯುಯಲ್ :

ಈ ಲೈಂಗಿಕ ದೃಷ್ಟಿಕೋನದಲ್ಲಿರುವ ವ್ಯಕ್ತಿಗಳು ಸಾಮಾನ್ಯವಾಗಿ ಲೈಂಗಿಕ ಆಕರ್ಷಣೆಯನ್ನು ಬಯಸುವವರು ಅಥವಾ ಪಾಲುದಾರಿಕೆಯ ಲೈಂಗಿಕತೆಗೆ ಅಪೇಕ್ಷೆ ಹೊಂದಿರುವ ಭಾವನೆವುಳ್ಳವರಾಗಿರುತ್ತಾರೆ.

8. ಮೊನೊಸೆಕ್ಸ್ಯುಯಲ್(ಏಕಲಿಂಗಿ):

ಯಾವುದೇ ಒಂದು ನಿರ್ದಿಷ್ಟ ಲಿಂಗದ ಬಗ್ಗೆ ಪ್ರಣಯ,ಲೈಂಗಿಕತೆ ಅಥವಾ ಪ್ರೀತಿಯ ಬಯಕೆ ಹೊಂದಿರುವ ವ್ಯಕ್ತಿಗಳು ಏಕಲಿಂಗಿಗಳು ಎಂದು ಕರೆಸಿಕೊಳ್ಳುತ್ತಾರೆ. ಭಿನ್ನಲಿಂಗೀಯತೆ ಮತ್ತು ಸಲಿಂಗಕಾಮವು ಸಾಮಾನ್ಯವಾಗಿ ಏಕಲಿಂಗತೆಯ ವರ್ಗಕ್ಕೆ ಸೇರುತ್ತವೆ.

9.ಡೆಮಿಸೆಕ್ಸ್ಯುಯಲ್:

ಡೆಮಿಸೆಕ್ಸ್ಯುಯಲ್ ಎನ್ನುವುದು ಒಂದು ರೀತಿಯ ಲೈಂಗಿಕ ದೃಷ್ಟಿಕೋನವಾಗಿದ್ದು,ಇದರಲ್ಲಿ ವ್ಯಕ್ತಿಗಳು ತಮ್ಮೊಂದಿಗೆ ಭಾವನಾತ್ಮಕ ಹೊಂದಿರುವ ವ್ಯಕ್ತಿಯೊಂದಿಗೆ ಮಾತ್ರ ಲೈಂಗಿಕ ಆಕರ್ಷಣೆಗೆ ಒಳಗಾಗುತ್ತಾರೆ. ಇನ್ನೂ ಹೆಚ್ಚು ಆಸಕ್ತಿದಾಯಕ ವಿಷಯವನ್ನು ಓದಲು ಬಯಸುವಿರಾ? ಹಾಗಾದರೆ ನಮ್ಮ "ಲೈಫ್ " ವಿಭಾಗವನ್ನು ಪರಿಶೀಲಿಸಿ.ನಾವು ನಿಮಗಾಗಿ ಪ್ರಪಂಚದಾದ್ಯಂತ ಇರುವ ಹೆಚ್ಚು ಆಸಕ್ತಿದಾಯಕ ಸಂಗತಿಗಳನ್ನು ತರುತ್ತಿದ್ದೇವೆ.

For Quick Alerts
ALLOW NOTIFICATIONS
For Daily Alerts

    English summary

    A List Of Genders & Sexualities And Their Definition

    Do you know that there are many different ways in which a person can feel sexually attracted to others of the same gender? Alternatively, even to others of the different gender or to both? People can even be attracted to themselves! Well, according to science, there are as many as sixteen types of sexual orientations yet identified.
    Story first published: Saturday, August 25, 2018, 23:20 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more