For Quick Alerts
ALLOW NOTIFICATIONS  
For Daily Alerts

ಅಸ್ವಸ್ಥತೆ ಮೀರಿನಿಂತು ಮಾಡೆಲ್ ಆದ ಬಾಲಕಿ

By Hemanth
|

ಅಂಗವೈಕಲ್ಯತೆ, ದೊಡ್ಡ ಕಾಯಿಲೆಗಳನ್ನು ಮೀರಿನಿಂತು ಸಾಧನೆ ಮಾಡಿರುವ ಪಟ್ಟಿ ತುಂಬಾ ದೊಡ್ಡದಿದೆ. ಈಗ ಇದಕ್ಕೆ ಹೊಸ ಸೇರ್ಪಡೆ ಏಳರ ಹರೆಯದ ಬಾಲಕಿ. ಹುಟ್ಟುವಾಗಲೇ ಅನುವಂಶೀಯ ಅಸ್ವಸ್ಥತೆ ಸಮಸ್ಯೆಯನ್ನು ಎದುರಿಸುತ್ತಿದ್ದ ಬಾಲಕಿಯು ಈಗ ಮಕ್ಕಳ ಮಾಡೆಲಿಂಗ್ ಲೋಕದಲ್ಲಿ ಹೊಸ ಮಿಂಚು ಹರಿಸಿದ್ದಾಳೆ. ವಾರ್ಟನ್ ಚೇಶೇರ್ ನಿಂದ ಬಂದಿರುವ ಗ್ರೇಸ್ ಇಸಾಬೆಲ್ಲಾ ಎಂಬ ಬಾಲಕಿಯೇ ಕಳೆದ ವರ್ಷ ಏಜೆನ್ಸಿಯೊಂದರ ಜತೆಗೆ ಒಪ್ಪಂದ ಮಾಡಿಕೊಂಡು ಈಗಾಗಲೇ ಡಿಸ್ನಿ, ಸಿಬೀ ಸಹಿತ ಹಲವಾರು ಮಾಡೆಲಿಂಗ್ ಗಳಲ್ಲಿ ಭಾಗಿಯಾಗಿರುವಳು.

ಈ ಬಾಲಕಿಯು ಬಿಹೈಂಡ್ ದ ಸ್ಕಾರ್ಸ್'ಎನ್ನುವ ವಿಭಿನ್ನವಾದ ಅಭಿಯಾನ ಕೂಡ ಆರಂಭಿಸಿದ್ದು, ಇನ್ ಸ್ಟಾ ಗ್ರಾಂನಲ್ಲಿ ಈಕೆಗೆ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ಡೌನ್ ಸಿಂಡ್ರೋಮ್(ಅನುವಂಶೀಯ ಅಸ್ವಸ್ಥತೆ)ನಿಂದ ಬಳಲುತ್ತಿರುವ ಬಾಲಕಿಯು ತನ್ನ ಪೋಷಕರಾದ ಶೆರಿಲ್ ಮತ್ತು ಜಾನ್ ವಾರ್ಟನ್ ನಿಂದ ಎಲ್ಲಾ ರೀತಿಯ ಪ್ರೋತ್ಸಾಹ ಪಡೆಯುತ್ತಿದ್ದಾಳೆ.

7-Year-Old Model With Down Syndrome

ಕ್ಯಾಮೆರಾ ಮುಂದೆ ಗ್ರೇಸ್ ತುಂಬಾ ಮುದ್ದಾಗಿ ಕಾಣುವಳು. ಕ್ಯಾಮೆರಾ ಮುಂದೆ ಕ್ಯಾಟ್ ವಾಕ್ ಮಾಡುವಾಗ ಆಕೆ ತುಂಬಾ ಸುಂದರ ಹಾಗೂ ಮುದ್ದಾಗಿ ಕಾಣುವಳು ಎಂದು ಪ್ರತಿಯೊಬ್ಬರು ಹೇಳುತ್ತಾರೆ ಎಂದು ಗ್ರೇಸ್ ತಾಯಿ ಶೆರಿಲ್ ತಿಳಿಸುತ್ತಾರೆ. ಕ್ಯಾಮೆರಾ ಮುಂದೆ ಮಗಳು ತುಂಬಾ ಖುಷಿ ಪಡುವುದನ್ನು ನೋಡಿದ ಶೆರಿಲ್ ಇದರ ಬಳಿಕ ಹಿಂತಿರುಗಿ ನೋಡಲಿಲ್ಲ. ಆಕೆಯನ್ನು ಮಾಡೆಲ್ ಆಗಿಸಿದರು.

ಕ್ಯಾಮೆರಾ ಮುಂದೆ ಬಂದಾಗ ಆಕೆ ತುಂಬಾ ಆತ್ಮವಿಶ್ವಾಸದಿಂದ ಯಾವಾಗಲೂ ನಗುತ್ತಿರುವಳು ಎನ್ನುತ್ತಾರೆ ಶೆರಿಲ್. ಇದರ ಹೊರತಾಗಿ ಗ್ರೇಸ್ ತನ್ನ ಶಾಲೆಯಲ್ಲೂ ಒಳ್ಳೆಯ ವಿದ್ಯಾರ್ಥಿನಿಯಾಗಿದ್ದು, ಈಕೆಗೆ ಸ್ನೇಹಿತರ ದಂಡೇ ಇದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.

English summary

7-Year-Old Model With Down Syndrome Takes To The Catwalk

Grace Isabella Wharton is a seven-year-old girl from Cheshire who signed with an agency last year. She has Down syndrome and has worked with CBeebies and Disney. Cheryl Wharton, 48, revealed how her daughter's modelling career began. She gained a legion of Instagram followers and starred in a diversity campaign.
X
Desktop Bottom Promotion