For Quick Alerts
ALLOW NOTIFICATIONS  
For Daily Alerts

ಈ 5 ರಾಶಿಯವರು ಆಹಾರವನ್ನು ತುಂಬಾನೇ ಪ್ರೀತಿಸುತ್ತಾರೆ-ಹೊಟ್ಟೆ ತುಂಬಾ ತಿನ್ನುತ್ತಾರೆ!

|

ಬದುಕುವುದಕ್ಕಾಗಿ ತಿನ್ನಬೇಕು...ತಿನ್ನುದಕ್ಕೆ ಬದುಕುವುದಲ್ಲ ಎಂದು ಹಿರಿಯರು ಹೇಳಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ಪ್ರತಿಯೊಂದು ಬೀದಿಯಲ್ಲಿ ನಾಲ್ಕೈದು ಹೊಟೇಲ್ ಗಳನ್ನು ನೋಡಿದಾಗ ಹಿರಿಯರು ಹೇಳಿದ ಮಾತಿಗೆ ತದ್ವಿರುದ್ಧ ಎನ್ನುವಂತೆ ಭಾಸವಾಗುತ್ತಿದೆ. ಆಹಾರವೆನ್ನುವು ಪ್ರತಿಯೊಬ್ಬರು ಇಷ್ಟಪಡುವರು. ಅದರಲ್ಲೂ ಕೆಲವರು ಇದನ್ನು ಅತಿಯಾಗಿಯೇ ಬಯಸುವರು.

ಇದಕ್ಕಾಗಿ ಅವರು ಹೊರಗಡೆ ಹೋಗಿ ಹೊಟ್ಟೆ ತುಂಬಾ ತಿಂದು ಬರುವರು. ಕೆಲವರಿಗೆ ಹಸಿವು ಆಗದೆ ಇದ್ದರೂ ತಿನ್ನುವುದನ್ನು ಮಾತ್ರ ಬಿಡಲ್ಲ. ಆದರೆ ಹೀಗೆ ತಿನ್ನುವವರ ಮೇಲೆ ಅವರ ರಾಶಿಚಕ್ರವು ಪರಿಣಾಮ ಬೀರಿದೆ ಎಂದು ನಿಮಗೆ ತಿಳಿದಿದೆಯಾ? ಇಲ್ಲ ತಾನೇ? ಹಾಗಾದರೆ ಈ ಲೇಖನ ನೀವು ಓದಿಕೊಳ್ಳಿ. ಯಾಕೆಂದರೆ ಇಲ್ಲಿ ನೀಡಿರುವಂತಹ ಐದು ರಾಶಿಯವರು ಆಹಾರವನ್ನು ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವರು. ಇದರ ಬಗ್ಗೆ ಓದುತ್ತಾ ಸಾಗಿ...

ಮೇಷ: ಮಾ.21-ಎ.20

ಮೇಷ: ಮಾ.21-ಎ.20

ಮೇಷ ರಾಶಿಯವರಿಗೆ ತುಂಬಾ ಕೋಪ ಬಂದಾಗ ಅವರು ಆಹಾರ ಇಷ್ಟಪಡುವರು. ಅದೇ ರೀತಿಯ ಅವರಿಗೆ ಸಂತೋಷವಾದಾಗಲು ಅವರು ಆಹಾರ ಬಯಸುವರು. ತುಂಬಾ ಸಿಟ್ಟಿನಲ್ಲಿದ್ದಾಗ ಅವರು ಅತಿ ಮತ್ತು ವೇಗವಾಗಿ ತಿನ್ನುವುದನ್ನು ನೀವು ನೋಡಬಹುದು. ಇವರು ಅತಿಯಾಗಿ ತಿನ್ನುವುದಿಲ್ಲವಾದರೂ ಭಾವನೆಗಳನ್ನು ನಿಯಂತ್ರಿಸಲು ಇವರು ಆಹಾರದ ಮೊರೆ ಹೋಗುವರು. ಇವರಿಗೆ ಯಾರನ್ನಾದರೂ ಕೊಲ್ಲಬೇಕೆಂದು ಮನಸ್ಸಾದಾಗ, ಅವರು ನೇರವಾಗಿ ಹೋಗಿ ಆಹಾರ ತಿನ್ನುವರು ಮತ್ತು ತೃಪ್ತಿ ಹೊಂದುವರು. ಇವರು ಹೊಸ ಹೊಸ ಆಹಾರವನ್ನು ಬಯಸುವರು. ಹೊಸ ಆಹಾರ ಮತ್ತು ರೆಸ್ಟೋರೆಂಟ್ ಗಾಗಿ ಇವರು ಹುಡುಕಾಟ ಮಾಡುವರು.

ಈ ಐದು ರಾಶಿಯವರು ಒಳ್ಳೆಯ ತಮಾಷೆಯ ಸ್ವಭಾವ ಹೊಂದಿರುವ ವ್ಯಕ್ತಿಗಳು!

ತುಲಾ: ಸೆ.24-ಅ.23

ತುಲಾ: ಸೆ.24-ಅ.23

ಇವರನ್ನು ಮಧ್ಯರಾತ್ರಿ ಆಹಾರ ಸೇವಿಸುವವರು ಎಂದರೆ ತಪ್ಪಾಗಲಾರದು. ಕೆಲವು ತುಲಾ ರಾಶಿಯವರು ರಾತ್ರಿ ವೇಳೆ ತುಂಬಾ ಹಸಿವಾಗುವರು ಮತ್ತು ಇವರಿಗೆ ಮಧ್ಯರಾತ್ರಿ ಎಚ್ಚರವಾದರೆ ಆಗ ಖಂಡಿತವಾಗಿಯೂ ಏನಾದರೂ ತಿನ್ನುವರು. ಇವರು ಸಿಹಿ ಹಾಗೂ ಖಾರದ ಆಹಾರವನ್ನು ಸಮಾನವಾಗಿ ಇಷ್ಟಪಡುವರು. ಆಹಾರದ ವಿಷಯಕ್ಕೆ ಬಂದರೆ ತುಲಾ ರಾಶಿಯವರದ್ದು ವ್ಯವಸ್ಥಿತ ಆತ್ಮ. ಇವರಿಗೆ ಸಮಯವೆನ್ನುವುದು ಇರಲ್ಲ. ರಾತ್ರಿಯ ಊಟದ ಹಸಿವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದಿದ್ದರೂ ಇವರು ತಿಂಡಿ ತಿನ್ನುವರು.

ವೃಷಭ: ಎಪ್ರಿಲ್ 21- ಮೇ 21

ವೃಷಭ: ಎಪ್ರಿಲ್ 21- ಮೇ 21

ಬಯಸಿದೆಲ್ಲವನ್ನೂ ನೀವು ತೆಗೆದುಕೊಡುವುದಿಲ್ಲವೆಂದು ತಿಳಿದರೆ ಆಗ ವೃಷಭ ರಾಶಿಯವರು ನಿಮ್ಮೊಂದಿಗೆ ಊಟಕ್ಕೆ ಹೊರಗಡೆ ಬರುವುದಿಲ್ಲ. ಮನೆಯಲ್ಲಿ ಇವರು ಯಾವಾಗಲೂ ತಮ್ಮ ತಾಯಿ ಅಥವಾ ಪತ್ನಿಯಿಂದ ಹೆಚ್ಚು ಖಾರವಾಗಿರುವಂತಹ ಒಳ್ಳೆಯ ಆಹಾರವನ್ನು ತಯಾರಿಸುವಂತೆ ಬೇಡಿಕೆಯನ್ನಿಡುವರು. ವೃಷಭ ರಾಶಿಯವರ ಮನೆಯಲ್ಲಿ ಅಡುಗೆ ಭಟ್ಟರು ಇದ್ದರೆ ಅವರು ಖಂಡಿತವಾಗಿಯೂ ಬಿಟ್ಟು ಹೋಗುವರು. ಯಾಕೆಂದರೆ ಇವರಿಗೆ ತೃಪ್ತಿ ಎನ್ನುವುದೇ ಇರಲ್ಲ. ಇವರು ಹೇಳಿರುವಂತಹ ಆಹಾರವು ಒಳ್ಳೆಯದಾಗಿ ಇರದೇ ಇದ್ದರೆ ಆಗ ಇವರು ತುಂಬಾ ಬೇಸರಗೊಂಡು, ಆಹಾರ ವ್ಯರ್ಥವಾಯಿತೆಂದು ಅಂದುಕೊಳ್ಳುವರು..

Most Read: ಮನೆಯಲ್ಲಿ ಶಿವಲಿಂಗಕ್ಕೆ ಪೂಜೆ ಮಾಡುವಾಗ ಅಪ್ಪಿತಪ್ಪಿಯೂ ಇಂತಹ ತಪ್ಪುಗಳನ್ನು ಮಾಡಬೇಡಿ

ಮೀನ: ಫೆ.20-ಮಾ.20

ಮೀನ: ಫೆ.20-ಮಾ.20

ಮೀನ ರಾಶಿಯವರು ಸಾರ್ವಜನಿಕವಾಗಿ ಆಹಾರದ ಮೇಲಿನ ಪ್ರೀತಿಯನ್ನು ತೋರಿಸಲ್ಲ. ಇವರಿಗೆ ತೃಪ್ತಿ ನೀಡಬಲ್ಲಂತಹ ಆಹಾರಗಳ ದೊಡ್ಡ ಪಟ್ಟಿಯೇ ಇವರಲ್ಲಿರುವುದು. ಇವರಿಗೆ ಆಹಾರವೆನ್ನುವುದು ಜೀವನದ ಮೇಲಿನ ಪ್ರೀತಿಯಿದ್ದಂತೆ. ರಾತ್ರಿ ಊಟಕ್ಕೆ ಹೊಸ ಬಗೆಯ ಆಹಾರವನ್ನು ಇವರು ಇಷ್ಟಪಡುವರು. ಆದರೆ ಬೀದಿಬದಿಯ ಆಹಾರವು ಇವರಿಗೆ ತುಂಬಾ ಪ್ರಿಯವಾಗಿರುವುದು. ವೈವಿಧ್ಯಮ ತಿಂಡಿಗಳು, ಅದರಲ್ಲೂ ಇವರಿಗೆ ಜಂಕ್ ಫುಡ್ ತುಂಬಾ ಇಷ್ಟವಾಗುವುದು.

ಸಿಂಹ: ಜುಲೈ 23-ಆ.21

ಸಿಂಹ: ಜುಲೈ 23-ಆ.21

ಅತ್ಯುತ್ತಮವಾಗಿರುವ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸುವಂತಹ ಆಹಾರವು ಸಿಂಹ ರಾಶಿಯವರಿಗೆ ತುಂಬಾ ಇಷ್ಟವಾಗುವುದು. ಇವರಿಗೆ ಆಹಾರವನ್ನು ಹಂಚಿಕೊಳ್ಳಲು ಜತೆಗಾರರು ಬೇಕು ಮತ್ತು ತುಂಬಾ ದುಬಾರಿ ಆಹಾರವನ್ನು ಇಷ್ಟಪಡುವರು. ಇವರು ಯಾವಾಗಲೂ ಅಡುಗೆ ಮಾಡದೆ ಇದ್ದರೂ ಕುಟುಂಬ ಮತ್ತು ಸ್ನೇಹಿತರಿಗಾಗಿ ಅಡುಗೆ ಮಾಡುವುದನ್ನು ಇವರು ತುಂಬಾ ಇಷ್ಟಪಡುವರು.

Most Read: ಪ್ರತಿ ಮಹಿಳೆಯೂ ತನ್ನ ಪುರುಷನ ಬಗ್ಗೆ ಖಂಡಿತವಾಗಿಯೂ ತಿಳಿದಿರಬೇಕಾದ 5 ಸೆಕ್ಸ್ ರಹಸ್ಯಗಳು

English summary

5 Zodiac Signs That Love Food The Most

While most of the people would be interested in who they are going out with, there are some others who bother more about what they will eat when they go out. There are some people who like eating, other who are foodies and yet others who cross that limit too. Well, all this is linked to one's zodiac. There are astrology-based reasons which say the positioning of planets as the explanation behind such habits and choices of every person. Astrology can tell more than what we can imagine about us. Based on it, we have brought you a list of the zodiac signs who love the food the most.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more