For Quick Alerts
ALLOW NOTIFICATIONS  
For Daily Alerts

ಪುರುಷನ ಶಿಶ್ನದ ಬಗ್ಗೆ ನೀವು ತಿಳಿದಿರದ ಮತ್ತು ಆಸಕ್ತಿಕರವಾದ 10 ಮಾಹಿತಿಗಳು

By Arshad
|

ಪುರುಷರ ಜನನಾಂಗದ ಬಗ್ಗೆ ನಿಮಗೆಷ್ಟು ಗೊತ್ತು? ಸಾಮಾನ್ಯವಾಗಿ ಗುಪ್ತವಾಗಿಯೇ ಇರುವ ಕಾರಣ ಈ ಚಿಕ್ಕದಾದರೂ ಪ್ರಮುಖವಾದ ಅಂಗದ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲದಿರುವುದು ಮಾತ್ರ ವಾಸ್ತವ.

ಲೈಂಗಿಕ ಕ್ರೀಡೆ ಮತ್ತು ಸಂತಾನಾಭಿವೃದ್ದಿಯಲ್ಲಿ ಜನನಾಂಗಗಳ ಪಾತ್ರ ಎಷ್ಟು ಮಹತ್ವದ್ದೆಂದು ಎಲ್ಲರಿಗೂ ತಿಳಿದಿದೆ, ಆದರೆ ತಮ್ಮ ಈ ಅಂಗದ ಕ್ಷಮತೆಯ ಬಗ್ಗೆ ಭಾರೀ ಹೆಮ್ಮೆ ಪಟ್ಟುಕೊಳ್ಳುವ ಪುರುಷರೂ ಇದರ ರಚನೆ ಮತ್ತು ಕಾರ್ಯವಿಧಾನಗಳ ಬಗ್ಗೆ ಮಾತ್ರ ತಿಳಿದುಕೊಂಡಿರುವುದು ಅಲ್ಪವೇ ಆಗಿದೆ.

ನಮ್ಮ ದೇಹದಲ್ಲಿರುವ ಅಂಗಗಳಲ್ಲೆಲ್ಲಾ ಅತ್ಯಂತ ಪ್ರಮುಖವಾದವು ಯಾವುದು ಎಂದು ಪ್ರಶ್ನಿಸಿದರೆ ಈ ಪಟ್ಟಿಯಲ್ಲಿ ಜನನಾಂಗಕ್ಕೆ ಪ್ರಮುಖ ಸ್ಥಾನವನ್ನೇ ಹೆಚ್ಚಿನವರು ನೀಡಬಹುದು. ಆದರೆ, ಈ ಅಂಗದ ಬಗ್ಗೆ ಹೆಚ್ಚೇನೂ ತಿಳಿದುಕೊಂಡಿಲ್ಲದಿದ್ದರೆ, ಈ ಬಗೆಗಿನ ಅಜ್ಞಾನವೇ ಅನುಕೂಲಕರವಾಗಿ ಪರಿಣಮಿಸುವಂತೆ ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲವೂ ಹೆಚ್ಚುತ್ತಾ ಹೋಗುತ್ತದೆ.

ಶಿಶ್ನದಲ್ಲಿ ನೋವು ಬರಲು ಕಾರಣವೇನು? ಇದಕ್ಕೆ ಚಿಕಿತ್ಸೆ ಏನು?

ಉದಾಹರಣೆಗೆ, ಕೆಲವು ಪುರುಷರಿಗೆ ತಮ್ಮ ಪೌರುಷವನ್ನು ಸಾಬೀತುಪಡಿಸಲು ಅವರ ಧೂಮಪಾನದ ಅಭ್ಯಾಸವನ್ನೇ ಪ್ರಮುಖವಾಗಿ ಪರಿಗಣಿಸುತ್ತಾರೆ. (ಇದೇ ಕಾರಣಕ್ಕೆ ಸಿಗರೇಟಿನ ಜಾಹೀರಾತಿನಲ್ಲಿ ಖ್ಯಾತ ತಾರೆಯರನ್ನು ಬಳಸುತ್ತಾರೆ), ಆದರೆ ವಾಸ್ತವವೇನೆಂದರೆ ಧೂಮಪಾನದ ಅಭ್ಯಾಸದಿಂದ ಶಿಶ್ನದ ದಪ್ಪವನ್ನು ಸುಮಾರು ಒಂದು ಸೆಂಟಿಮೀಟರ್ ನಷ್ಟು ಕುಗ್ಗಬಹುದು!

ಅಷ್ಟಕ್ಕೂ, ಶಿಶ್ನದ ಗಾತ್ರಕ್ಕೂ ಪೌರುಷದ ಪ್ರಮಾಣಕ್ಕೂ ಯಾವುದೇ ತಾಳಮೇಳವಿಲ್ಲ ಎಂದು ಈಗಾಗಲೇ ವೈಜ್ಞಾನಿಕವಾಗಿ ಸಾಬೀತಾಗಿದೆ. ಸುಮಾರು ಎಪ್ಪತ್ತೊಂದು ಶೇಖಡಾದಷ್ಟು ಪುರುಷರ ಶಿಶ್ನದ ಗಾತ್ರ ಸಾಮಾನ್ಯಕ್ಕಿಂತಲೂ ಕಡಿಮೆಯೇ ಇರುತ್ತದೆ. ಆದರೆ ಉದ್ರೇಕಗೊಂಡ ಬಳಿಕ ಹೆಚ್ಚೂ ಕಡಿಮೆ ಎಲ್ಲರ ಶಿಶ್ನದ ಗಾತ್ರ ಏಕಸಮಾನವಾಗಿರುತ್ತದೆ. (ಆದ್ದರಿಂದ, ಮಹಿಳೆಯರೇ, ನಿಮ್ಮ ಪುರುಷರ ಅನುದ್ರೇಕಿತ ಜನನಾಂಗದ ಗಾತ್ರವನ್ನು ಕಂಡು ಯಾವುದೇ ಅಭಿಪ್ರಾಯಕ್ಕೆ ಬಂದುಬಿಡಬೇಡಿ, ಇದರ ರೂಪ 'ಆ' ಸಂದರ್ಭದಲ್ಲಿ ಬೇರೆಯೇ ಇರುತ್ತದೆ)

ಪುರುಷರ ಸ್ವಾಭಿಮಾನ ಮತ್ತು ಆತ್ಮಗೌರವಕ್ಕೆ ಸಂಬಂಧಿಸಿದಂತೆ ಜನನಾಂಗದ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂದು ಪರಿಗಣಿಸಿದಾಗ ಓರ್ವ ಪುರುಷ ತನ್ನ ಸಂಗಾತಿಯ ಲೈಂಗಿಕ ಬಯಕೆಯನ್ನು ಪೂರೈಸಲು ಎಷ್ಟು ಸಮರ್ಥನಿದ್ದಾನೆ ಎಂಬ ಅಂಶವನ್ನು ತಮ್ಮ ಶಿಶ್ನದ ಗಾತ್ರವನ್ನೇ ಹೆಚ್ಚಿನ ಪುರುಷರು ಅಳತೆಗೋಲಾಗಿ ಪರಿಗಣಿಸುವುದು ಮಾತ್ರ ಸುಳ್ಳಲ್ಲ.

ಶಿಶ್ನದ ಗಾತ್ರಕ್ಕೂ ಲೈಂಗಿಕ ಕ್ಷಮತೆಗೂ ಅನುಪಾತವೆಂಬ ಹೋಲಿಕೆ ಸಾಧ್ಯವಿಲ್ಲ. (ಅಂದರೆ ಶಿಶ್ನದ ಗಾತ್ರ ದೊಡ್ಡದಿದ್ದರೆ ಲೈಂಗಿಕ ಕ್ಷಮತೆ ಹೆಚ್ಚು, ಚಿಕ್ಕದಿದ್ದರೆ ಕಡಿಮೆ ಎಂದೇನೂ ಇಲ್ಲ). ಮಹಿಳೆಗೆ ಕಾಮಪರಾಕಾಷ್ಠೆ ಪಡೆಯಬೇಕಾದರೆ ಹೇಗೆ ಕಾರ್ಯನಿರ್ವಹಿಸಬೇಕೆಂಬ ವಿದ್ಯೆಯನ್ನು ಕಲಿತುಕೊಳ್ಳುವುದು ಶಿಶ್ನದ ಗಾತ್ರಕ್ಕಿಂತ ಹೆಚ್ಚಿನ ಮಹತ್ವ ಪಡೆಯುತ್ತದೆ. ಆದರೆ ಗರ್ಭಾಂಕುರಗೊಳ್ಳಲು ಮಾತ್ರ ಶಿಶ್ನದ ಪ್ರವೇಶ ಅನಿವಾರ್ಯವಾದುದರಿಂದ ಕನಿಷ್ಟ ಗಾತ್ರವನ್ನಾದರೂ ಶಿಶ್ನ ಹೊಂದಿರಲೇಬೇಕಾಗುತ್ತದೆ.

ಸಾಮಾನ್ಯವಾಗಿ ನಾವು ಪುರುಷರ ಜನನಾಂಗದ ಗಾತ್ರದ ಕುರಿತಾಗಿ ಚರ್ಚಿಸುತ್ತಾ ಇದು ಎಷ್ಟು ಮಟ್ಟಿಗೆ ಮಹತ್ವವುಳ್ಳದ್ದಾಗಿದೆ ಹಾಗೂ ಸಂತಾನಾಭಿವೃದ್ದಿಯ ಜೊತೆಗೇ ನೈಸರ್ಗಿಕ ಲೈಂಗಿಕ ಬಯಕೆಯನ್ನೂ ಪಡೆದುಕೊಳ್ಳುವ ನಿಸರ್ಗ ನಿಯಮವನ್ನೂ ಪೂರೈಸಿದಂತಾಗುತ್ತದೆ ಎಂಬ ವಿಷಯಗಳನ್ನು ಪ್ರಸ್ತಾಪಿಸಿದಾಗ ಹಲವಾರು ಪ್ರಮುಖ ವಿಷಯಗಳು ಯಾರಿಗೂ ತಿಳಿದಿಲ್ಲದಿರುವುದು ಆಶ್ಚರ್ಯವಾಗುತ್ತದೆ. ವಾಸ್ತವವೆಂದರೆ ಪುರುಷರ ಜನನಾಂಗದ ಕುರಿತು ಮಹಿಳೆಯರಿಗೆ ಬಿಡಿ, ಸ್ವತಃ ಪುರುಷರಿಗೇ ಹಲವಾರು ವಿಷಯಗಳು ಗೊತ್ತಿರುವುದಿಲ್ಲ! ಬನ್ನಿ, ಈ ಕೊರತೆಯನ್ನು ಇಂದು ನೀಗಿಸೋಣ...

1. ಶಿಶ್ನದ ಅಳತೆಯನ್ನು ಕಂಡುಕೊಳ್ಳಲೊಂದು ವಿಧಾನವಿದೆ (ದಯವಿಟ್ಟು ಹುಸಿ ನುಡಿಯಬಾರದು)

1. ಶಿಶ್ನದ ಅಳತೆಯನ್ನು ಕಂಡುಕೊಳ್ಳಲೊಂದು ವಿಧಾನವಿದೆ (ದಯವಿಟ್ಟು ಹುಸಿ ನುಡಿಯಬಾರದು)

ಶಿಶ್ನದ ಅಳತೆಯನ್ನು ಕಂಡುಕೊಳ್ಳಲು ಅಗತ್ಯವಿರುವ ಸಾಧನವೆಂದರೆ ಒಂದು ಸರಳ ಅಳತೆಪಟ್ಟಿ, ಮರದ ಅಥವಾ ಪ್ಲಾಸ್ಟಿಕ್ಕಿನ, ಇಂಚಿನಲ್ಲಿ ಮಾಪಕದ ಗೆರೆಗಳಿದ್ದರೆ ಸಾಕು. ಉದ್ರೇಕಿತ ಶಿಶ್ನದ ಬುಡದಿಂದ ಅಂದರೆ ಶಿಶ್ನದ ಬುಡದಲ್ಲಿ, ಹೊಕ್ಕಳಿನ ಕೆಳಗೆ, ಶಿಶ್ನಕ್ಕೆ ತಾಕುವಂತೆ ಅಳತೆಪಟ್ಟಿಯ ಸೊನ್ನೆ ಬರುವಂತಿರಿಸಿ ತುದಿ ಎಷ್ಟು ಇಂಚಿನಲ್ಲಿದೆ ಎಂದು ಬರೆದುಕೊಂಡರೆ ಸಾಕು, (ಉದ್ದವನ್ನು ಹೆಚ್ಚಿಸಲು ಅಳತೆಪಟ್ಟಿಯನ್ನು ಒತ್ತಬಾರದು) ಇದೇ ನಿಮ್ಮ ಶಿಶ್ನದ ಅಳತೆ.

2. ಸಾಮಾನ್ಯವಾಗಿ ಪುರುಷರು ಶಿಶ್ನದ ಉದ್ದವನ್ನು ನೋಟಿನಿಂದ ಅಳೆಯುತ್ತಾರೆ.

2. ಸಾಮಾನ್ಯವಾಗಿ ಪುರುಷರು ಶಿಶ್ನದ ಉದ್ದವನ್ನು ನೋಟಿನಿಂದ ಅಳೆಯುತ್ತಾರೆ.

ಹೆಚ್ಚಿನ ಸಂದರ್ಭದಲ್ಲಿ ಅಳತೆ ಮಾಡುವ ಇಚ್ಛೆಯಾದಾಗ ಅಳತೆಪಟ್ಟಿ ಕೈಗೆಟಕುವಂತಿರುವುದಿಲ್ಲ. ಹಾಗಾಗಿ ಹೆಚ್ಚಿನವರು ಆ ಸಮಯದಲ್ಲಿ ತಮ್ಮ ಬಳಿ ಇರುವ ಡಾಲರು ನೋಟೊಂದನ್ನು ಉಪಯೋಗಿಸಿ ಉದ್ದವನ್ನು ಅಳೆಯುತ್ತಾರೆ. ಒಂದು ಡಾಲರ್ ನ ಉದ್ದ 6 1/8 ಇಂಚಿನಷ್ಟಿರುತ್ತದೆ. ಇದಕ್ಕೆ ಸಮನಾಗಿದ್ದರೆ ಆರಿಂಚೆಂದೂ, ಒಂದು ಎಂದು ಬರೆದಿರುವಷ್ಟಿದ್ದರೆ ಐದಿಂಚು ಎಂದೂ ಅಮೇರಿಕಾ ಎಂದು ಬರೆದಿರುವಲ್ಲಿ 'ಎ' ಅಕ್ಷರದಷ್ಟಿದ್ದರೆ ನಾಲ್ಕಿಂಚು ಎಂದೂ ಲೆಕ್ಕ ಹಾಕುತ್ತರೆ.

3. ಹೆಚ್ಚಿನವರು ಅಂದಾಜಿಸಿದಷ್ಟು ಜನರ ಜನನಾಂಗ ದೊಡ್ಡದಿರುವುದಿಲ್ಲ.

3. ಹೆಚ್ಚಿನವರು ಅಂದಾಜಿಸಿದಷ್ಟು ಜನರ ಜನನಾಂಗ ದೊಡ್ಡದಿರುವುದಿಲ್ಲ.

ವಿವಾಹಕ್ಕಾಗಿ ಜೋಡಿಯನ್ನು ಆಯ್ದುಕೊಳ್ಳುವವರು ವಧೂ ವರರ ಜಾತಕ, ಗುಣಗಳನ್ನು ಪರಿಗಣಿಸುತ್ತಾರೆಯೇ ವಿನಃ ಜನನಾಂಗದ ಉದ್ದ ಅಳತೆಗಳನ್ನಲ್ಲ! ಅಂದರೆ ಈ ಗಾತ್ರಕ್ಕೆ ಅಂತಹ ದೊಡ್ಡ ಮನ್ನಣೆ ಇಲ್ಲ. ಆದರೂ, ಹೆಚ್ಚಿನ ಪುರುಷರು ಈ ಅಂಗದ ಗಾತ್ರದ ಬಗ್ಗೆ ಭಾರೀ ಕುತೂಹಲ ಹೊಂದಿರುತ್ತಾರೆ ಎಂದು Journal of Sexual Medicine ಎಂದು ಪ್ರಕಟಿಸಿದೆ. ಈ ವರದಿಯ ಪ್ರಕಾರ ಸರಾಸರಿ ಪುರುಷರ ಶಿಶ್ನದ ಉದ್ದ 5.6 ಇಂಚು ಮತ್ತು 4.8 ಇಂಚಿನಷ್ಟು ಸುತ್ತಳತೆ ಹೊಂದಿರುತ್ತದೆ.

ಪುರುಷರೇ, ಶಿಶ್ನದ ಬಗ್ಗೆ ನಿಮಗೆ ತಿಳಿದಿರದ 12 ಸಮಸ್ಯೆಗಳು

4. ಹೆಚ್ಚಿನ ಪುರುಷರು ಈ ಬಗ್ಗೆ ಸುಳ್ಳು ಸುಳ್ಳೇ ಹೇಳುತ್ತಾರೆ

4. ಹೆಚ್ಚಿನ ಪುರುಷರು ಈ ಬಗ್ಗೆ ಸುಳ್ಳು ಸುಳ್ಳೇ ಹೇಳುತ್ತಾರೆ

ಈ ಜಗತ್ತಿನಲ್ಲಿ ಕೇವಲ 15ಶೇಖಡಾ ಪುರುಷರ ಶಿಶ್ನ ಏಳಿಂಚಿನಷ್ಟು ದೊಡ್ಡದಿರುತ್ತದೆ ಹಾಗೂ ಕೇವಲ ಮೂರು ಶೇಖಡಾದಷ್ಟು ಪುರುಷರಿಗೆ ಎಂಟಿಂಚಿನ ಶಿಶ್ನವಿರುತ್ತದೆ. ಆದರೆ ಈ ಗಾತ್ರ ದೊಡ್ಡದಿದ್ದಷ್ಟೂ ಮಹಿಳೆಯರಿಗೆ ಅನಾನುಕೂಲಕರವಾಗಿಯೇ ಪರಿಣಮಿಸುವುದು ಮಾತ್ರ ಖಚಿತ. ಈ ಅಂಕಿ ಅಂಶಗಳ ಪ್ರಕಾರ ದೊಡ್ಡ ಗಾತ್ರದ ಶಿಶ್ನ ಇರುವ ವ್ಯಕ್ತಿಗಳು ಈ ಜಗತ್ತಿನಲ್ಲಿದ್ದಾರೆ.

5. ವಿಶ್ವದ ಅತಿದೊಡ್ಡ ಮತ್ತು ಅತಿಚಿಕ್ಕ ಶಿಶ್ನ: ಈ ಅಂಕಿ ಅಂಶಗಳು ಕುತೂಹಲಕರವಾಗಿವೆ

5. ವಿಶ್ವದ ಅತಿದೊಡ್ಡ ಮತ್ತು ಅತಿಚಿಕ್ಕ ಶಿಶ್ನ: ಈ ಅಂಕಿ ಅಂಶಗಳು ಕುತೂಹಲಕರವಾಗಿವೆ

ಇದುವರೆಗೆ ದಾಖಲಾಗಿರುವ ಅತಿಚಿಕ್ಕ ಶಿಶ್ನವೆಂದರೆ 5/8ಇಂಚು ಹಾಗೂ ಅತಿದೊಡ್ಡ ಶಿಶ್ನದ ಗಾತ್ರ 13.5 ಇಂಚು. (ನೀಲಿ ತಿಮಿಂಗಿಲದ ಜನನಾಂಗ ಎಷ್ಟು ದೊಡ್ಡದಿರಬಹುದು? ಸುಮಾರು ಎಂಟರಿಂದ ಹತ್ತು ಅಡಿ ಉದ್ದ ಮತ್ತು ಒಂದು ಅಡಿಯ ಸುತ್ತಳತೆ ಹೊಂದಿರುತ್ತದೆ). ಆ ಅನುಪಾತದಲ್ಲಿ ಜಸ್ಟಿನ್ ಬೀಬರ್ ರವರ ಶಿಶ್ನ ಎಷ್ಟು ದೊಡ್ಡದಿರಬಹುದೆಂದು ಕೆಲವರು ಈಗಾಗಲೇ ಲೆಕ್ಕಾಚಾರ ಹಾಕುತ್ತಿದ್ದರಬಹುದು!

6. ಚಿಕ್ಕ ಗಾತ್ರದ ಶಿಶ್ನವನ್ನು ದೊಡ್ಡದಾಗಿಸಲು ಸಾಧ್ಯವಿಲ್ಲ, ಕ್ಷಮಿಸಿ.

6. ಚಿಕ್ಕ ಗಾತ್ರದ ಶಿಶ್ನವನ್ನು ದೊಡ್ಡದಾಗಿಸಲು ಸಾಧ್ಯವಿಲ್ಲ, ಕ್ಷಮಿಸಿ.

ಅನುದ್ರೇಕಿತ ಸ್ಥಿತಿಯಲ್ಲಿ ಒಂದೂವರೆ ಇಂಚು ಮತ್ತು ಉದ್ರೇಕಿತ ಸ್ಥಿತಿಯಲ್ಲಿ ಮೂರಿಂಚಿಗೂ ಕಡಿಮೆ ಗಾತ್ರ ಇರುವ ಶಿಶ್ನಗಳನ್ನು ವೈದ್ಯಕೀಯ ಅಂಕಿ ಅಂಶಗಳ ಪ್ರಕಾರ ಚಿಕ್ಕ ಶಿಶ್ನ ("micropenises") ಎಂದು ಪರಿಗಣಿಸಲಾಗುತ್ತದೆ. ಈ ಗಾತ್ರವನ್ನು ದೊಡ್ದದಾಗಿಸಲು ಕೆಲವು ಶಸ್ತ್ರಚಿಕಿತ್ಸೆಗಳು ಲಭ್ಯವಿದ್ದರೂ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಕೆ ನೋವಿನಿಂದ ಕೂಡಿರುತ್ತದೆ.

7. ತೃತೀಯ ಪುರುಷರ ಜನನಾಂಗ ಇನ್ನೂ ದೊಡ್ಡದು!

7. ತೃತೀಯ ಪುರುಷರ ಜನನಾಂಗ ಇನ್ನೂ ದೊಡ್ಡದು!

ತೃತೀಯ ಪುರುಷರು ಅಥವಾ ಶಿಖಂಡಿಗಳ ದೇಹ ಹೆಣ್ಣಿನದ್ದಾಗಿದ್ದರೂ ಜನನಾಂಗ ಪುರುಷರದ್ದಾಗಿರುತ್ತದೆ ಹಾಗೂ ಸಾಮಾನ್ಯರಿಗಿಂತ ಕೊಂಚ ದೊಡ್ಡದೇ ಇರುತ್ತದೆ. ಸಾಮಾನ್ಯವಾಗಿ ಪುರುಷರ ಬಾಯಿಯ ಗಾತ್ರ ಅವರ ಬುದ್ದಿಮತ್ತೆಗೆ ಅನುಗುಣವಾಗಿ ಮಹಿಳೆಯರಿಗಿಂತಲೂ ದೊಡ್ಡದಿರುತ್ತದೆ ಎಂದು ಹೇಳಲಾಗುತ್ತದೆ.

8. ಶಿಶ್ನದ ಉದ್ದ ಹೆಚ್ಚಿರುವಂತೆ ಕಾಣಿಸಲು ಒಂದು ವಿಧಾನವಿದೆ

8. ಶಿಶ್ನದ ಉದ್ದ ಹೆಚ್ಚಿರುವಂತೆ ಕಾಣಿಸಲು ಒಂದು ವಿಧಾನವಿದೆ

ಶಿಶ್ನದ ಉದ್ದ ಹೆಚ್ಚಲು ಅಥವಾ ಹೆಚ್ಚಿದಂತೆ ಕಾಣಲು ಒಂದು ಪರೋಕ್ಷ ವಿಧಾನವಿದೆ, ಅದೆಂದರೆ ಸೊಂಟದ ಕೊಬ್ಬನ್ನು ಕರಗಿಸುವುದು. ಅಂದರೆ ಶಿಶ್ನದ ಬುಡದ ಭಾಗದಲ್ಲಿ ತುಂಬಿಕೊಂಡಿದ್ದ ಕೊಬ್ಬು ಚರ್ಮವನ್ನು ಮೇಲೆಬ್ಬಿಸಿ ಕೊಂಚ ಭಾಗ ಶಿಶ್ನವನ್ನು ಸಹಾ ಆವರಿಸಿರುತ್ತದೆ. ಈ ಕೊಬ್ಬು ಇಲ್ಲವಾದರೆ ನಿಜವಾದ ಬುಡದಿಂದ ಪ್ರಾರಂಭವಾಗಿರುವುದು ಕಾಣುತ್ತದೆ!

9. ಶಿಶ್ನ ಎಷ್ಟು ದೊಡ್ಡದಿದೆ ಎಂಬುದನ್ನು ಕಂಡುಕೊಳ್ಳಲು ಬೆರಳುಗಳೇ ಸಾಕು!

9. ಶಿಶ್ನ ಎಷ್ಟು ದೊಡ್ಡದಿದೆ ಎಂಬುದನ್ನು ಕಂಡುಕೊಳ್ಳಲು ಬೆರಳುಗಳೇ ಸಾಕು!

ಕೊರಿಯಾದ ಗ್ಯಾಕಾನ್ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ ಪುರುಷನ ಉಂಗುರಬೆರಳಿನ ಉದ್ದ ಮತ್ತು ಕಿರುಬೆರಳಿನ ಉದ್ದದ ವ್ಯತ್ಯಾಸವೇ ಶಿಶ್ನದ ಉದ್ದಕ್ಕೆ ಸಮನಾಗಿರುತ್ತದೆ. ಅಂದರೆ ಕಿರುಬೆರಳು ಎಷ್ಟು ಚಿಕ್ಕದಾಗಿರುತ್ತದೆಯೋ ಅಷ್ಟೂ ಶಿಶ್ನ ಉದ್ದವಾಗಿರುತ್ತದೆ!

10. ಶಿಶ್ನವನ್ನು ನೋಡದೇ ವ್ಯಕ್ತಿಯ ಶಿಶ್ನದ ಬಗ್ಗೆ ಅರಿಯಲು ವಿಜ್ಞಾನಿಗಳು ಭಾರೀ ಸಮಯ ವ್ಯಯಿಸಿದ್ದಾರೆ

10. ಶಿಶ್ನವನ್ನು ನೋಡದೇ ವ್ಯಕ್ತಿಯ ಶಿಶ್ನದ ಬಗ್ಗೆ ಅರಿಯಲು ವಿಜ್ಞಾನಿಗಳು ಭಾರೀ ಸಮಯ ವ್ಯಯಿಸಿದ್ದಾರೆ

ಪುರುಷನ ಶಿಶ್ನದ ಗಾತ್ರಕ್ಕೂ ಅತನ ಪಾದ, ಮೂಗು, ಹೆಬ್ಬೆರಳು, ಹೊರಕಿವಿಯ ಉದ್ದ ಮೊದಲಾದ ಅಂಗಗಳ ಅಳತೆಗಳಿಗೆ ಯಾವ ಸಾಮ್ಯವಿದೆ ಎಂಬುದನ್ನು ಹಲವಾರು ಅಂಕಿಅಂಶಗಳ ಮೂಲಕ ಕಂಡುಕೊಳ್ಳಲು ವಿಜ್ಞಾನಿಗಳು ಶ್ರಮಿಸುತ್ತಲೇ ಇದ್ದಾರೆ. ಒಂದು ಅಂಕಿ ಅಂಶದ ಪ್ರಕಾರ ನಿತಂಬ ಚಪ್ಪಟೆಯಾಗಿದ್ದರೆ ಶಿಶ್ನ ಉದ್ದವಾಗಿರುತ್ತದೆ ಎಂಬ ಅಚ್ಚರಿಯ ಮಾಹಿತಿ ಪ್ರಕಟಗೊಂಡಿತು (ನೈಜೀರಿಯಾದಲ್ಲಿ ನಡೆಸಿದ ಸಂಶೋಧನೆಯನ್ನು ಈ ವರದಿ ಆಧರಿಸಿತ್ತು. ಆದರೆ ಬಳಿಕ ವಿಶ್ವದ ಇತರ ಕಡೆಗಳಲ್ಲಿ ನಡೆಸಿದ ಸಮೀಕ್ಷೆಗಳಲ್ಲಿ ಇದಕ್ಕೆ ವಿರುದ್ದವಾದ ಮಾಹಿತಿ ಕಂಡುಬಂದಿತ್ತು)

ಸಾಮಾನ್ಯವಾಗಿ ಬಿಗಿಯಾದ ಕೆಳ ಉಡುಪುಗಳನ್ನು ಪುರುಷರು ಧರಿಸುವುದಿಲ್ಲ, ಏಕೆಂದರೆ ಇದು ಜನನಾಂಗದ ಸುಲಭ ಚಲನೆಗೆ ಅಡ್ಡಿಯಾಗುತ್ತದೆ.

ಶಿಶ್ನದ ಬಗ್ಗೆ ನೀವು ತಿಳಿದಿರದ ಕೆಲವೊಂದು ಆಸಕ್ತಿಕರ ಸಂಗತಿಗಳು

English summary

10 Hard And Fascinating Facts About Your Man's Penis

How much do we really know about the penis? As much as we all take pride in this (sometimes) little package, we don't really know all that much about it. Most people understand what the penis’s role during sex is, but for all the praise and attention that men seek when it comes to declaring that their penis is better than any other on the planet, they know shockingly little about their own anatomies.
Story first published: Thursday, September 13, 2018, 10:00 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more