ರಾಕ್ಷಸನಂತೆ ವರ್ತಿಸಿದ ಪತಿ, ಸಾಲದಕ್ಕೆ ಸಹೋದರನೂ ಸಾಥ್ ನೀಡಿದ!

By: Hemanth
Subscribe to Boldsky

ಯಾವುದೇ ಪತ್ರಿಕೆ ಅಥವಾ ನ್ಯೂಸ್ ಚಾನೆಲ್‌ಗಳನ್ನು ನೋಡಿದರೂ ಅದರಲ್ಲಿ ಒಂದು ಸುದ್ದಿ ಅತ್ಯಾಚಾರದ್ದಾಗಿರುತ್ತದೆ. ಅತ್ಯಾಚಾರದಂತಹ ಸುದ್ದಿಯನ್ನು ಕೇಳಿದರೆ ಮನಸ್ಸು ರೊಚ್ಚಿಗೇಳುತ್ತದೆ. ಇಂತಹ ಹೇಯ ಕೃತ್ಯವನ್ನು ಮಾಡುವವರು ಸಮಾಜದಲ್ಲಿ ಹಲವಾರು ಇದ್ದಾರೆ.

ಅತ್ಯಾಚಾರದಂತಹ ಕೃತ್ಯಗಳಿಗೆ ಯಾವತ್ತೂ ಬೆಂಬಲವಾಗಿ ನಿಲ್ಲಬಾರದು. ಇದು ಮಹಿಳೆಯ ಜೀವನದಲ್ಲಿ ನಡೆಯುವಂತಹ ಅತ್ಯಂತ ಹೇಯ ಕೃತ್ಯವಾಗಿದೆ. ಮಹಿಳೆಯ ಜೀವನವೇ ಇಂತಹ ಕೃತ್ಯಗಳಿಂದಾಗಿ ಬದಲಾಗಿ ಹೋಗುತ್ತದೆ. ಪ್ರತಿ ಕ್ಷಣವೂ ಆಕೆಗೆ ಈ ಕೃತ್ಯದ ಕಹಿ ನೆನಪು ಕೆಟ್ಟ ಕನಸಾಗಿ ಕಾಡುತ್ತಾ ಇರುತ್ತದೆ.  ಹೆಂಡತಿ ಮೇಲೇ ಅತ್ಯಾಚಾರ ಮಾಡಲು ಸ್ನೇಹಿತನಿಗೆ ಸಹಕರಿಸಿದ ಪಾಪಿ ಪತಿ!

ಆದರೆ ಮದುವೆಯಾಗಿ ಹಲವಾರು ಕನಸುಗಳನ್ನು ಕಟ್ಟಿಕೊಂಡು ಮೊದಲ ರಾತ್ರಿಯ ತಯಾರಿಯಲ್ಲಿರುವ ಮಹಿಳೆಯೊಬ್ಬಳು ಗಂಡನಿಂದಲೇ ಅತ್ಯಾಚಾರಕ್ಕೊಳಗಾದರೆ ಆಗ ಪರಿಸ್ಥಿತಿ ಇನ್ನಷ್ಟು ಕೆಟ್ಟದಾಗಿರುತ್ತದೆ. ಆಕೆಯ ಮನಸ್ಸು ಒಡೆದು ಚೂರು ಚೂರಾಗಿರುತ್ತದೆ. ಮುಟ್ಟಾಗಿದ್ದ ಮಹಿಳೆಯೊಬ್ಬಳನ್ನು ಮೊದಲ ರಾತ್ರಿ ದಿನವೇ ಪತಿ ಅತ್ಯಾಚಾರಕ್ಕೆ ಒಳಪಡಿಸಿದ ನಿಜ ಘಟನೆಯಿದು....

ಆಕೆ ಇನ್ನೂ ಮದುಮಗಳ ಧಿರಿಸಿನಲ್ಲಿದ್ದಳು!

ಆಕೆ ಇನ್ನೂ ಮದುಮಗಳ ಧಿರಿಸಿನಲ್ಲಿದ್ದಳು!

ಮದರಂಗಿಯ ಕಂಪು ಇನ್ನೂ ಆಕೆಯ ಕೈಯಿಂದ ಮಾಸಿರಲಿಲ್ಲ. ಮುಖದಲ್ಲಿನ ಅಲ್ಪಸ್ವಲ್ಪ ಮೇಕಪ್ ನಡುವೆ ಕಣ್ಣೀರು ದಾರಿ ಮಾಡುತ್ತಾ ಬರುತ್ತಿತ್ತು. ಆಸ್ಪತ್ರೆಯಲ್ಲಿ ಆಕೆ ತನ್ನ ಮೇಲಿನ ಹೇಯ ಕೃತ್ಯದಿಂದ ಆದ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಾ ಇದ್ದಳು.

ಸಹೋದರನೇ ವಿಲನ್!!

ಸಹೋದರನೇ ವಿಲನ್!!

ಸಹೋದರ ತನ್ನ ಜತೆಗಿದ್ದರೆ ಆಗ ಸಹೋದರಿಗೆ ವಿಶ್ವವನ್ನು ಗೆಲ್ಲಬಹುದೆಂಬ ನಂಬಿಕೆ ಇರುತ್ತದೆ. ಆದರೆ ಇಲ್ಲಿ ಆಕೆ ಜೋರಾಗಿ ಅಳುತ್ತಿರುವುದಕ್ಕೆ ಸಹೋದರ ಆಕೆಯನ್ನೇ ಬೈಯುತ್ತಲಿದ್ದ. ಮೊದಲ ರಾತ್ರಿಯಂದು ಪತಿ ಆಕೆಯನ್ನು ಹೀನಾಯವಾಗಿ ಬೈಯ್ದಿದ್ದ.

ಸಹೋದರ ಕುಪಿತನಾಗಿದ್ದ

ಸಹೋದರ ಕುಪಿತನಾಗಿದ್ದ

ಮುಟ್ಟಾಗಿದ್ದರೂ ಮೊದಲ ರಾತ್ರಿಯಂದು ಪತಿಗೆ ಲೈಂಗಿಕ ಕ್ರಿಯೆ ನಡೆಸಲು ಅವಕಾಶ ನೀಡದ ತನ್ನ ಸಹೋದರಿ ವಿರುದ್ಧ ಆತ ಕುಪಿತನಾಗಿದ್ದ. ಪತಿಯ ಲೈಂಗಿಕ ಆಸೆಯನ್ನು ತೀರಿಸುವುದು ಆಕೆಯ ಕರ್ತವ್ಯ. ಆಕೆಯನ್ನು ಮದುವೆಯಾಗಿರುವ ಕಾರಣ ಆತನಿಗೆ ಇದರ ಹಕ್ಕಿದೆ ಎಂದು ಆತ ಹೇಳುತ್ತಲಿದ್ದ.

ಅನ್ಯಾಯ ಮಾಡಿದವರ ಪರವಾಗಿ ಆತ ಮಾತನಾಡುತ್ತಲಿದ್ದ

ಅನ್ಯಾಯ ಮಾಡಿದವರ ಪರವಾಗಿ ಆತ ಮಾತನಾಡುತ್ತಲಿದ್ದ

ಈ ಆಧುನಿಕ ಯುಗದಲ್ಲೂ ನಾವು ಇಂತವರನ್ನು ಕಾಣುತ್ತಲಿದ್ದೇವೆ. ತನ್ನ ತಂಗಿಯ ಪರವಾಗಿ ನಿಲ್ಲುವ ಬದಲು ಆಕೆಗೆ ಅನ್ಯಾಯ ಮಾಡಿದವರ ಪರವಾಗಿ ಆತ ಮಾತನಾಡುತ್ತಲಿದ್ದ.

ತೊಂದರೆಯಲ್ಲಿ ಸಿಲುಕಿದಳು

ತೊಂದರೆಯಲ್ಲಿ ಸಿಲುಕಿದಳು

ಆಕೆ ತನಗಾದ ದೈಹಿಕ ಹಾಗೂ ಮಾನಸಿಕ ಗಾಯದಿಂದ ನೋವಿನಿಂದ ಅಳುತ್ತಾ ಇದ್ದರೆ ಸಹೋದರ ಮಾತ್ರ ಆಕೆ ಹೊಂದಾಣಿಕೆ ಮಾಡಿಕೊಳ್ಳಬೇಕಿತ್ತು ಎಂದು ಕಿರುಚುತ್ತಾ ಇದ್ದ. ಮಹಿಳೆಯರಿಗೆ ನಮ್ಮ ಸಮಾಜದಲ್ಲಿ ನಡೆಯುತ್ತಿರುವ ಕೃತ್ಯ ಇದಾಗಿದೆ. ಆಕೆ ಮಾನಸಿಕ ಅಥವಾ ದೈಹಿಕ ನೋವಿನಿಂದ ಬಳಲುತ್ತಿದ್ದರೂ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು.

 
English summary

Women's Day Special: She Was Raped On Her First Night

Check out the harrowing story of the woman who was beaten by her husband and left to suffer from a broken collar bone, and all this because she refused to have sex with him on their first night!
Story first published: Monday, March 6, 2017, 23:31 [IST]
Please Wait while comments are loading...
Subscribe Newsletter