ತೀರ್ಪಿನ ಬಳಿಕ ನ್ಯಾಯಾಧೀಶರು ಪೆನ್ನಿನ ನಿಬ್ಬನ್ನು ಮುರಿಯುವುದೇಕೆ?

By: manu
Subscribe to Boldsky

ಚಲನಚಿತ್ರಗಳಲ್ಲಿ ಅಥವಾ ನ್ಯಾಯಾಲಯದ ನಿಜವಾದ ವ್ಯಾಜ್ಯೆಯ ತೀರ್ಪು ನೀಡುವ ಸಮಯದಲ್ಲಿ ನ್ಯಾಯಾಧೀಶರು ಮರಣ ದಂಡನೆ ವಿಧಿಸಿದ ಬಳಿಕ ಈ ಆಜ್ಞೆಗೆ ತಮ್ಮ ಸಹಿ ಹಾಕಿದ ಬಳಿಕ ಆ ಪೆನ್ನು ಮತ್ತೊಮ್ಮೆ ಬರೆಯಲಾರದಂತೆ ಒತ್ತಡದಿಂದ ಒತ್ತಿ ನಿಬ್ಬನ್ನು ಮುರಿಯುವುದೇಕೆ ಗೊತ್ತೇ?   ಸದ್ಯ ಇಂತಹ ಅಸಹ್ಯ ಕಾನೂನುಗಳು ನಮ್ಮ ದೇಶದಲ್ಲಿಲ್ಲ ಬಚಾವ್!

ಚಲನಚಿತ್ರಗಳಲ್ಲಂತೂ ನಿಬ್ಬು ಮುರಿಯುವುದನ್ನು ವ್ಯಕ್ತಿಯ ಸಾವಿಗೆ ಸರಿಸಮನಾಗಿ ತೋರಿಸಲಾಗುತ್ತದೆ. ಅಂದರೆ ನಿಬ್ಬು (ಬರೆಯುವ ಮುಳ್ಳು) ಮುರಿದರೆ ಮರಣದಂಡನೆ ಹಿಂದಿರುಗಿ ಪಡೆಯುವುದಿಲ್ಲ, ಅಥವಾ ತಮ್ಮ ತೀರ್ಮಾನಕ್ಕೆ ತಾವು ಬದ್ಧ ಎಂದು ನ್ಯಾಯಾಧೀಶರು ಪ್ರಕಟಿಸುತ್ತಿದ್ದಾರೆಯೇ? ಒಟ್ಟಾರೆ ಏನಿದರ ರಹಸ್ಯ? ತಿಳಿದುಕೊಳ್ಳೋಣ ಬನ್ನಿ.....   

ಇದೊಂದು ಸಾಂಕೇತಿಕ ಕ್ರಿಯೆಯಾಗಿದೆ

ಇದೊಂದು ಸಾಂಕೇತಿಕ ಕ್ರಿಯೆಯಾಗಿದೆ

ನ್ಯಾಯಾಂಗದಲ್ಲಿ ಎಲ್ಲರೂ ಒಪ್ಪಿಕೊಂಡಿರುವಂತೆ ಇದೊಂದು ಸಾಂಕೇತಿಕ ಕ್ರಿಯೆಯಾಗಿದೆ. ಅಂದರೆ ಮರಣದಂಡನೆಗೆ ಗುರಿಯಾಗುವಂತಹ ಅಪರಾಧವನ್ನು ಆರೋಪಿ ಮಾಡಿದ್ದುದ್ದು ಸಾಬೀತಾಗಿದ್ದು ಇಂತಹ ಕೃತ್ಯವನ್ನು ಬೇರೆ ಯಾರೂ ನಡೆಸಬಾರದು ಎಂದು ಸಾಂಕೇತಿಕವಾಗಿ ಸೂಚಿಸುವ ಕ್ರಿಯೆಯಾಗಿದೆ. ಅಲ್ಲದೇ ಈ ಪೆನ್ನನ್ನು ಮತ್ತೆ ಬಳಸಲು ಸಾಧ್ಯವಾಗಬಾರದು, ಅಂದರೆ ಈ ಕೃತ್ಯ ಮತ್ತೊಮ್ಮೆ ನಡೆಯಬಾರದು ಎಂಬುದೇ ಈ ಸಂಕೇತವಾಗಿದೆ.

ಈ ಪೆನ್ನು

ಈ ಪೆನ್ನು "ಕಳಂಕಿತ"

ಮರಣದಂಡನೆಯ ತೀರ್ಪು ನೀಡುವ ಕಾಗದಪತ್ರಗಳಿಗೆ ಸಹಿ ಹಾಕುವ ಈ ಪೆನ್ನು ಒಂದು ಜೀವವನ್ನು ಕೊನೆಗೊಳಿಸುವ ಅತಿ ಸೂಕ್ಷ್ಮ ಮತ್ತು ಅನಿವಾರ್ಯವಾದ ಕಾನೂನಿನ ಪಾಲನೆಯ ಪ್ರತ್ಯಕ್ಷ ಪಾಲುದಾರನಾಗಿದ್ದು ಓರ್ವ ವ್ಯಕ್ತಿಯ ಜೀವವನ್ನು ಕಳೆಯುವ 'ಕಳಂಕ' ಹೊತ್ತಿರುತ್ತದೆ.

ಅಂತೆಯೇ ಈ ಪೆನ್ನಿಗೆ 'ಕಳಂಕಿತ' ಅಥವಾ "Tainted" ಎಂದು ಕರೆಯುತ್ತಾರೆ. ಇನ್ನೊಂದು ಅರ್ಥದಲ್ಲಿ ಕಳಂಕಿತ ವ್ಯಕ್ತಿಗೆ ಕಳಂಕಿತ ಪೆನ್ನಿನಿಂದ ಶಿಕ್ಷೆ ನೀಡಿ ಈ ಕಳಂಕಗಳನ್ನು ನಿವಾರಿಸುವ ಮೂಲಕ ನ್ಯಾಯಾಧೀಶರು ತಮ್ಮ ಪಾಲಿನ ತೀರ್ಪನ್ನು ಒದಗಿಸುವ ಸಂಕೇತವೂ ಆಗಿದೆ.

ಈ ತೀರ್ಪನ್ನು ಬದಲಿಸಲು ಸಾಧ್ಯವಿಲ್ಲ

ಈ ತೀರ್ಪನ್ನು ಬದಲಿಸಲು ಸಾಧ್ಯವಿಲ್ಲ

ಮರಣದಂಡನೆಯಂತಹ ತೀರ್ಪನ್ನು ನೀಡಲು ನ್ಯಾಯಾಧೀಶರು ಎಲ್ಲಾ ಸಾಕ್ಷ್ಹಿಗಳನ್ನು, ವಿವರಗಳನ್ನು, ಆಧಾರಗಳನ್ನು ಅತಿ ಸೂಕ್ಷ್ಮವಾಗಿ ಪರಿಶೀಲಿಸಿ ನ್ಯಾಯಾಂಗದ ಕಾಯ್ದೆಗಳನ್ನು ಸೂಕ್ತವಾಗಿ ಒರೆಹಚ್ಚಿ ಅಂತಿಮವಾಗಿ ತಮ್ಮ ತೀರ್ಮಾನವನ್ನು ಮಂಡಿಸಿರುತ್ತಾರೆ. ಈ ತೀರ್ಮಾನವನ್ನು ನೀಡಿದ ಬಳಿಕ ಬೇರೆ ಯಾರೂ ಇದನ್ನು ಬದಲಿಸದಂತೆ, ಸ್ವತಃ ತೀರ್ಪು ನೀಡಿದ ನ್ಯಾಯಾಧೀಶರೇ ಬದಲಿಸದಂತೆ ತೀರ್ಪಿಗೆ ಸಹಿ ಹಾಕಿದ ಪೆನ್ನಿನ ನಿಬ್ಬನ್ನು ಮುರಿಯಲಾಗುತ್ತದೆ.

 ಈ ಕೃತ್ಯ ಮತ್ತೊಮ್ಮೆ ಯಾರೂ ಮಾಡದಿರುವಂತೆ ನೀಡುವ ಸೂಚನೆ

ಈ ಕೃತ್ಯ ಮತ್ತೊಮ್ಮೆ ಯಾರೂ ಮಾಡದಿರುವಂತೆ ನೀಡುವ ಸೂಚನೆ

ಮರಣದಂಡನೆಯಂತಹ ಶಿಕ್ಷೆ ಪಡೆದಿರಬೇಕಾದರೆ ಆರೋಪಿ ನಡೆಸಿದ ಕೃತ್ಯ ಅಕ್ಷಮ್ಯವಾಗಿದ್ದು ಇದನ್ನು ಇನ್ನಾರೂ ಮತ್ತೊಮ್ಮೆ ನಡೆಸದಂತೆ ಸೂಚಿಸಲು ನಿಬ್ಬನ್ನು ಮುರಿಯಲಾಗುತ್ತದೆ. ಅಂದರೆ ಈ ಕೃತ್ಯ ಮುಂದೆಂದೂ ಯಾರಿಂದಲೂ ನಡೆಯಬಾರದು ಎಂಬುದೇ ನ್ಯಾಯಾಧೀಶರ ಆಶಯವಾಗಿದೆ.

ಒಂದು ಹಳೆಯ ನಾಣ್ಣುಡಿಯಂತೆ

ಒಂದು ಹಳೆಯ ನಾಣ್ಣುಡಿಯಂತೆ

ಇಸ್ರೇಲ್ ದೇಶದ ನಾಣ್ಣುಡಿಯ ಪ್ರಕಾರ ‘A court that puts a man to death once in seventy years' ಅಂದರೆ ಎಪ್ಪತ್ತು ವರ್ಷಗಳಿಗೊಮ್ಮೆಯಾದರೂ ನ್ಯಾಯಾಲಯ ವ್ಯಕ್ತಿಯೋರ್ವನನ್ನು ಮರಣಕ್ಕೆ ದೂಡುತ್ತದೆ. ಮರಣದಂಡನೆ ವಿಧಿಸುವುದು ನ್ಯಾಯಾಲಯಕ್ಕೂ ಇಷ್ಟವಿಲ್ಲದ, ಆದರೆ ಕಾನೂನಿಗೆ ತಲೆಬಾಗಬೇಕಾದಾಗಅನಿವಾರ್ಯತೆಯ ದುಃಖಕರ ವಿಷಯವಾಗಿದ್ದು ಪೆನ್ನಿನ ನಿಬ್ಬನ್ನು ಮುರಿಯುವ ಮೂಲಕ ಈ ದುಃಖವನ್ನು ತೋರ್ಪಡಿಸುವ ಕ್ರಮವೂ ಆಗಿದೆ.

 
English summary

Why Do Judges Break The Nib After Signing A Death Sentence?

Ever wondered why do judges break the pen nib after passing a death sentence? Is it necessary that the pen nib should be broken, or is there a reason behind breaking of the pen nib? Find out the reasons below.
Please Wait while comments are loading...
Subscribe Newsletter