ಹೌದು ಸ್ವಾಮಿ! ಹೆಣ್ಣಿನ ಮನಸ್ಸು ಅರ್ಥೈಸಿಕೊಳ್ಳುವುದೇ ಕಷ್ಟ!

By: Deepu
Subscribe to Boldsky

ಓರ್ವ ಮಹಿಳೆಯ ಮನಸ್ಸಿನಲ್ಲೇನು ನಡೆಯುತ್ತಿದೆ ಎಂಬುದನ್ನು ಕಂಡುಕೊಳ್ಳಲು ಬ್ರಹ್ಮನಿಗೂ ಸಾಧ್ಯವಿಲ್ಲವಂತೆ. ಸೃಷ್ಟಿಕರ್ತನೇ ಕೈಚೆಲ್ಲಿದಾಗ ಉಳಿದವರ ಪಾಡೇನು? ಸಾಮಾನ್ಯವಾಗಿ ಮಹಿಳೆಯರು ತೀರಾ ಸಂಕೀರ್ಣರು ಎಂದು ಪುರುಷರು ದೂರು ನೀಡುತ್ತಾರೆ. ಮಹಿಳೆಯರನ್ನು ಅರ್ಥ ಮಾಡಿಕೊಳ್ಳುವುದು, ಅವರ ಮುಂದಿನ ನಡೆಯನ್ನು ಊಹಿಸುವುದು ತುಂಬಾ ಕಷ್ಟ ಎಂದು ಎಲ್ಲರೂ ಒಪ್ಪುತ್ತಾರೆ. ಏನೇ ಹೇಳಿ, ಹೆಣ್ಣಿನ ಮನಸ್ಸು ಮೀನಿನ ಹೆಜ್ಜೆಗೂ ಮೀರಿದ್ದು!

ಆದರೆ ಇವರ ಯೋಚನೆಗಳೇಕೆ ಸಂಕೀರ್ಣವಾಗಿವೆ ಎಂಬ ಬಗ್ಗೆ ಕೆಲವು ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಈ ಮಾಹಿತಿಗಳು ಮನಃಶಾಸ್ತ್ರಜ್ಞರು ತಮ್ಮ ಅನುಭವದಿಂದ ಕಂಡುಕೊಂಡ ಸಾರವಾಗಿದ್ದು ಈ ಸಂಕೀರ್ಣತೆಗೆ ಕಾರಣವೇನಿರಬಹುದೆಂದು ವಿಶ್ಲೇಷಿಸಲಾಗಿದೆ. ಮಹಿಳೆಯರ ಒಳಗುಟ್ಟು, ನಿಮಗೂ ಅಚ್ಚರಿಯಾಗಬಹುದು! 

ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಹಲವು ವಿಧದ ಕೆಲಸವನ್ನು ಮಾಡಬೇಕಾಗಿದ್ದು ತನಗೂ, ಮನೆಯ ಸದಸ್ಯರಿಗೂ ಅಗತ್ಯವಾದ ಕಾಳಜಿ ಮತ್ತು ಆರೈಕೆಯನ್ನು ಒದಗಿಸಬೇಕಾಗುತ್ತದೆ. ಇವೆಲ್ಲದರ ನಡುವೆ ಎದುರಾಗುವ ಅಡಚಣೆ, ಕಿರಿಕಿರಿ, ಮಾನಸಿಕ ತೊಳಲಾಟ, ರಸದೂತಗಳ ಪ್ರಭಾವ ಮೊದಲಾದವು ಆಕೆಯ ಯೋಚನಾ ಲಹರಿಯನ್ನು ಬದಲಿಸುತ್ತವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈಗ ನೋಡೋಣ...  

ಸಾಮಾನ್ಯವಾಗಿ ತಮಗೆ ಹೇಳಿದ ವಿಷಯದ ವಿರುದ್ಧವಾಗಿ ವರ್ತಿಸುತ್ತಾರೆ

ಸಾಮಾನ್ಯವಾಗಿ ತಮಗೆ ಹೇಳಿದ ವಿಷಯದ ವಿರುದ್ಧವಾಗಿ ವರ್ತಿಸುತ್ತಾರೆ

ಒಂದು ವೇಳೆ ಮಹಿಳೆಯರು ತಮಗೆ ನಿರ್ದೇಶನ ನೀಡುವ ವ್ಯಕ್ತಿಗಳನ್ನು ದ್ವೇಶಿಸುತ್ತಿದ್ದರೆ ಆ ದ್ವೇಶವನ್ನು ತಮ್ಮ ಕಾರ್ಯದಲ್ಲಿ ತೋರ್ಪಡಿಸುತ್ತಾರೆ. ಆದ್ದರಿಂದ ಮಹಿಳೆಯರು ಅವರಿಗೆ ವಿವರಿಸಿದ್ದಕ್ಕೆ ವಿರುದ್ದವಾಗಿ ವರ್ತಿಸಿದರೆ ಈ ಸೂಚನೆಗಳನ್ನು ನೀಡಿದ ವ್ಯಕ್ತಿಯನ್ನು ಅವರು ದ್ವೇಷಿಸುತ್ತಾರೆ ಎಂದರ್ಥ.

ಮಹಿಳೆಯರಿಗೆ ನಿಜವಾಗಿ ಏನು ಬೇಕು?

ಮಹಿಳೆಯರಿಗೆ ನಿಜವಾಗಿ ಏನು ಬೇಕು?

ಮಹಿಳೆಯರು ತಮ್ಮ ಜೀವನಸಂಗಾತಿ ಹಾಗೂ ಆಪ್ತರಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾರೆ. ತಮ್ಮ ಸಂಗಾತಿ ಜಾಣ, ಪ್ರೀತಿಸುವವ, ಕಾಳಜಿ ತೋರುವವ, ಯಶಸ್ವೀ, ಆಕರ್ಷಕ, ವಿಧೇಯನಾಗಿರುವುದರ ಜೊತೆಗೇ ಇನ್ನೂ ಹಲವಾರು ಗುಣಗಳನ್ನು ಅಪೇಕ್ಷಿಸುತ್ತಾಳೆ. ಒಂದು ವೇಳೆ ಇವುಗಳಲ್ಲಿ ಒಂದಾದರೂ ಗುಣ ಇಲ್ಲದೇ ಹೋದರೆ ಉಳಿದ ಗುಣಗಳೆಲ್ಲಾ ಗೌಣವಾಗಿಬಿಡುತ್ತವೆ. ಇದು ಕ್ಲಿಷ್ಟತೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ.

ಓರ್ವ ಪುರುಷ ಇಷ್ಟವಾದರೆ ಆ ಗುಣಗಳನ್ನು ಸಂಗಾತಿಯಲ್ಲಿಯೂ ನಿರೀಕ್ಷಿಸುತ್ತಾರೆ

ಓರ್ವ ಪುರುಷ ಇಷ್ಟವಾದರೆ ಆ ಗುಣಗಳನ್ನು ಸಂಗಾತಿಯಲ್ಲಿಯೂ ನಿರೀಕ್ಷಿಸುತ್ತಾರೆ

ಮಹಿಳೆಯರು ತಾವು ಚಿಕ್ಕಂದಿನಲ್ಲಿ ಅಥವಾ ಹದಿಹರೆಯದಲ್ಲಿದ್ದಾಗ ಓರ್ವ ಪುರುಷನ ಯಾವುದೋ ಒಂದು ಗುಣವನ್ನು ತುಂಬಾ ಇಷ್ಟಪಟ್ಟಿರುತ್ತಾರೆ. ಸಾಮಾನ್ಯವಾಗಿ ಉತ್ಪ್ರೇಕ್ಷಿತ ಕೆಟ್ಟ ಗುಣಗಳೇ ಇವರಿಗೆ ಹೆಚ್ಚು ಇಷ್ಟವಾಗಿರುತ್ತದೆ. ಈ ಗುಣವನ್ನು ಇವರು ತಮ್ಮ ಸಂಗಾತಿಯಲ್ಲಿಯೂ ಅಪೇಕ್ಷಿಸುತ್ತಾರೆ ಹಾಗೂ ಇದನ್ನು ನೀಡಲಾಗದ ಸಂಗಾತಿಯ ಬಗ್ಗೆ ಅಪ್ರಯೋಜಕನೆಂಬ ಭಾವನೆ ಬೆಳೆಸಿಕೊಳ್ಳುತ್ತಾರೆ.

ಆಕರ್ಷಣೆ ಕುರುಡು

ಆಕರ್ಷಣೆ ಕುರುಡು

ಹದಿಹರೆಯದಲ್ಲಿ ಯುವತಿಯರು ವ್ಯಕ್ತಿಯ ಬಾಹ್ಯ ಆಕರ್ಷಣೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇವರು ಆಕರ್ಷಕ ಯುವಕರ ಗಮನ ಸೆಳೆಯಲು ಹಲವು ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವು ಅಭ್ಯಾಸಗಳೇ ಆಗಿ ಹೋಗಿ ಅಪ್ರಯತ್ನವಾಗಿಯೂ ಇರುತ್ತವೆ. ಈ ಚಾಳಿ ವಯಸ್ಸಾದ ಬಳಿಕವೂ ಮುಂದುವರೆದು ಇದರಿಂದ ಇವರಿಗೆ ಅರಿವೇ ಇಲ್ಲದೇ ಇವರ ಸಂಗಾತಿಗೆ ತಪ್ಪು ಕಲ್ಪಿಸಲು ಕಾರಣವಾಗುತ್ತದೆ. ಈ ತಪ್ಪು ಕಲ್ಪನೆ ಸಂಬಂಧವನ್ನು ಕದಡಲು ಕಾರಣವಾಗಬಹುದು.

 
English summary

Why Are Women So Complicated?

It is difficult to understand what goes on in a woman's mind. Men complain that women are complicated and we do agree that yes, women are complicated to understand. Here, in this article, we are about to share on what makes a woman so complicated. These are the things that define the actual meaning of complications
Please Wait while comments are loading...
Subscribe Newsletter