For Quick Alerts
ALLOW NOTIFICATIONS  
For Daily Alerts

ಭಯಾನಕ ಸತ್ಯ: ದೀಪಾವಳಿಯ ಸಮಯದಲ್ಲಿ ಇಲ್ಲಿ ಮಾಟ ಮಂತ್ರವೂ ನಡೆಯುತ್ತದೆ!!

By Deepu
|

ದೀಪಾವಳಿ ಎಂದರೆ ಸಂಭ್ರಮದ ಹಬ್ಬಕ್ಕೂ ಮಿಗಿಲಾಗಿ ಹಲವು ಕನಸುಗಳು ಕೈಗೂಡುವ, ಹಲವು ನಿರ್ಧಾರಗಳನ್ನು ತಳೆಯುವ, ಪ್ರಮುಖ ಖರೀದಿ ಮೊದಲಾದವುಗಳ ಸಂದರ್ಭವಾಗಿದೆ. ಈ ಹಬ್ಬವನ್ನು ತಾವೆಷ್ಟು ಗಡದ್ದಾಗಿ ಆಚರಿಸುತ್ತಿದ್ದೇವೆ ಎಂದು ಜಿದ್ದಿಗೆ ಬಿದ್ದವರಂತೆ ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ಹಣವನ್ನು ಚೆಲ್ಲುತ್ತವೆ ಎಂಬುದನ್ನು ಹಬ್ಬದ ಎರಡು ಮೂರು ದಿನಗಳಲ್ಲಿ ಸ್ಪಷ್ಟವಾಗಿಯೇ ಕಾಣಬಹುದು.

ಕೇವಲ ದೀವಟಿಗೆಗಳಿಂದ ವಿಜಯಿಯಾಗಿ ಬಂದ ರಾಮನನ್ನು ಸ್ವಾಗತಿಸುವ ಈ ಸರಳ ದೀಪಾವಳಿ ಹಬ್ಬ ಯಾವಾಗ ಆರ್ಭಟದ ರೂಪ ತಳೆಯಿತೋ ಗೊತ್ತಿಲ್ಲ. ಆದರೆ ಈ ಸಂಭ್ರಮದ ಜೊತೆಜೊತೆಗೇ ಕೆಲವಾರು ಮಾಟಮಂತ್ರಗಳೂ ಹಬ್ಬದ ನೆಪದಲ್ಲಿಯೇ ಆಚರಿಸಲ್ಪಡುತ್ತಿದೆ. ಈ ಕ್ರಿಯೆಗಳು ಧಾರ್ಮಿಕರೂಪದಲ್ಲಿದ್ದರೂ ಹೆಚ್ಚಿನವರು ಇವನ್ನು ನಿರ್ಲಕ್ಷಿಸುತ್ತಾರೆ.

ದೀಪಾವಳಿ ಹಬ್ಬದ ದಿನ ನಿಮ್ಮಿಂದ ಈ ತಪ್ಪುಗಳು ಆಗಬಾರದು, ಎಚ್ಚರದಿಂದಿರಿ!

ಎಷ್ಟೋ ಜನರಿಗೆ ದೀಪಾವಳಿಯ ಸಮಯದಲ್ಲಿ ಇಂಥ ಮಾಟ ಮಂತ್ರ ನಡೆಯುತ್ತದೆ ಎಂದೇ ಗೊತ್ತಿಲ್ಲ! ಒಂದು ವೇಳೆ ನಿಮಗೂ ಈ ಬಗ್ಗೆ ಗೊತ್ತೇ ಇಲ್ಲದಿದ್ದರೆ ಕೆಳಗಿನ ಮಾಹಿತಿಗಳು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳಬಹುದು....

ಕಾಡುಪ್ರಾಣಿಗಳಿಗೆ ಹೆಚ್ಚುವ ಬೇಡಿಕೆ

ಕಾಡುಪ್ರಾಣಿಗಳಿಗೆ ಹೆಚ್ಚುವ ಬೇಡಿಕೆ

ದೀಪಾವಳಿ ಹತ್ತಿರಾಗುತ್ತಿದ್ದಂತೆಯೇ ಕೆಲವು ಪ್ರಾಣಿ ಮತ್ತು ಪಕ್ಷಿಗಳಿಗೆ ಬೇಡಿಕೆ ವಿಪರೀತವಾಗುತ್ತದೆ. ವಿಶೇಷವಾಗಿ ಕೆಂಪು ಮಂಡಲ ಹಾವು (red sand boa), ಗೂಬೆ, ಇಪ್ಪತ್ತು ಉಗುರುಗಳಿರುವ ಆಮೆ ಮೊದಲಾದವುಗಳನ್ನು ಮಾಟಮಂತ್ರಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಈ ಪ್ರಾಣಿಗಳನ್ನು ಬಳಸಿ ನಡೆಸುವ ತಂತ್ರವಿದ್ಯೆಯ ಫಲಿತಾಂಶವಾಗಿ ಇವನ್ನು ನಡೆಸುವವರಿಗೆ ಭಾರೀ ಲಾಭ ಬರುತ್ತದೆ ಎಂದು ಹೇಳಲಾಗುತ್ತದೆ.

ಅರಣ್ಯ ಇಲಾಖೆಯಿಂದ ನಿಷೇಧ

ಅರಣ್ಯ ಇಲಾಖೆಯಿಂದ ನಿಷೇಧ

ಹೆಚ್ಚಿನ ಜನರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲದೇ ಇದ್ದರೂ ಭಾರತದ ಹಲವು ರಾಜ್ಯಗಳ ಅರಣ್ಯ ಇಲಾಖೆಗೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಇದೆ. ಏಕೆಂದರೆ ಈ ಜೀವಿಗಳು ಅಳಿವಿನ ಅಂಚಿಗೆ ದಾಟುವ ಸಾಧ್ಯತೆ ಇರುವ ಕಾರಣ ಈ ಪ್ರಾಣಿ ಪಕ್ಷಿಗಳನ್ನು ಹಿಡಿಯುವಲ್ಲಿ ನಿಷೇಧಾಜ್ಞೆ ಹೇರಿದೆ. ಈ ಪ್ರಾಣಿಗಳನ್ನು ಹಿಡಿಯುವುವುದು ಶಿಕ್ಷಾರ್ಹ ಅಪರಾಧವಾಗಿದ್ದು ಈ ಬಗ್ಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಪ್ರಾಣಿಗಳನ್ನು ಹಿಡಿಯದಂತೆ ಗಸ್ತು ಹೆಚ್ಚಿಸಲಾಗುತ್ತದೆ ಹಾಗೂ ಈ ಸಮಯದಲ್ಲಿ ಹೆಚ್ಚಿನ ಅವಧಿಗೆ ಕೆಲಸ ಮಾಡುವ ಕಾಡುಗಳ್ಳರನ್ನು ಹಿಡಿಯಲು ಅರಣ್ಯ ಇಲಾಖೆಯ ಸಿಬ್ಬಂದಿಗೂ ಹೆಚ್ಚಿನ ಕಾಲ ಅರಣ್ಯದಲ್ಲಿ ಗಸ್ತು ತಿರುಗಬೇಕಾಗುತ್ತದೆ.

ಅಧಿಕಾರಿಗಳ ಸ್ಪಷ್ಟನೆ

ಅಧಿಕಾರಿಗಳ ಸ್ಪಷ್ಟನೆ

ಈ ಬಗ್ಗೆ ಕಾಳಜಿ ವಹಿಸುತ್ತಿರುವ ಒಂದು ಸರ್ಕಾರೇತರ ಸಂಸ್ಥೆಯಾದ wildlife NGO Endangered Flora and Fauna on Earth Conservation Team (EFFECT) ಸಂಸ್ಥೆಯ ನಿರ್ದೇಶಕರಾದ ಡಾ. ಅಭಿಶೇಕ್ ಸಿಂಗ್ ರವರು ನೀಡುವ ಮಾಹಿತಿಯ ಪ್ರಕಾರ ದೀಪಾವಳಿಯ ಸಂದರ್ಭದಲ್ಲಿ ಕೆಲವು ತಾಂತ್ರಿಕರು ಹಾಗೂ ಮಾಟಗಾರರು ತಮ್ಮ ತಂತ್ರವಿದ್ಯೆಯನ್ನು ಸಾಧಿಸಲು ಈ ಪ್ರಾಣಿಗಳನ್ನು ಬಳಸಿಕೊಳ್ಳುವ ಕಾರಣ ದೀಪಾವಳಿಗೂ ಕೆಲವು ದಿನ ಮುನ್ನ ಈ ಪ್ರಾಣಿಗಳಿಗೆ ಭಾರೀ ಬೇಡಿಕೆ ಬರುತ್ತದೆ. ವಿಶೇಷವಾಗಿ ದೀಪಾವಳಿಯ ರಾತ್ರಿ ಗೂಬೆಯನ್ನು ಬಲಿ ಕೊಡುವುದು ಈ ತಾಂತ್ರಿಕರು ಅನುಸರಿಸುವ ಸಾಮಾನ್ಯ ವಿದ್ಯೆಯಾಗಿದೆ. ಇನ್ನೂ ಕೆಲವರು ಕೇವಲ ಗೂಬೆಯನ್ನು ತೋರಿಸಿ ಇದರಿಂದ ನಿಮಗೆ ಧನಲಾಭವಾಗುತ್ತದೆ ಎಂದು ಮುಗ್ಧ ಜನರನ್ನು ನಂಬಿಸಿ ಮೋಸ ಮಾಡುವುದೂ ಕಂಡುಬರುತ್ತದೆ.

ಗೂಬೆಗೆ ಬಂದ ಬೇಡಿಕೆ

ಗೂಬೆಗೆ ಬಂದ ಬೇಡಿಕೆ

ದೀಪಾವಳಿಯ ಸಮಯದಲ್ಲಿ ಗೂಬೆಗೆ ಇನ್ನಿಲ್ಲದ ಬೇಡಿಕೆ ಬರುತ್ತದೆ. ಸಾಮಾನ್ಯವಾಗಿ ಒಂದು ವಯಸ್ಕ ಗೂಬೆ ಎರಡೂವರೆ ಕೇಜಿ ತೂಗುತ್ತದೆ. ಇವುಗಳ ಕೆಂಪು ಕಣ್ಣು ಮತ್ತು ಕಿವಿಗಳು, ಮುಂಬಾಗಿರುವ ಕೊಕ್ಕು, ಬೂದು ಬಣ್ಣ ಮೊದಲಾದವು ಸಾಮಾನ್ಯ ಭಾರತೀಯ ಗೂಬೆಯ ಲಕ್ಷಣವಾಗಿವೆ. ಅಪರೂಪಕ್ಕೆ ಹದ್ದಿನಾಕೃತಿಯಲ್ಲಿರುವ ಕಂದು ಬಣ್ಣದ ಗೂಬೆಯೂ ಕಂಡುಬರುತ್ತದೆ. ಈ ಗೂಬೆಗೆ ಭಾರೀ ದುಬಾರಿ ಬೆಲೆ ಇದೆ.

ಗೂಬೆಗೆ ಬಂದ ಬೇಡಿಕೆ

ಗೂಬೆಗೆ ಬಂದ ಬೇಡಿಕೆ

ಕೆಲವು ಜನರಂತೂ ರಾಷ್ಟ್ರೀಯ ಉದ್ಯಾನವನಗಳ ಅಧಿಕಾರಿಗಳಿಗೆ ಕರೆ ಮಾಡಿ ತಮಗೆ ದೀಪಾವಳಿಯ ಒಂದೆರಡು ದಿನದ ಮಟ್ಟಿಗೆ ಗೂಬೆಯೊಂದನ್ನು ಕೊಡಿ, ದೀಪಾವಳಿ ಮುಗಿದ ತಕ್ಷಣ ಸುರಕ್ಷಿತವಾಗಿ ತಂದು ಒಪ್ಪಿಸುತ್ತೇವೆ ಎಂದು ದುಂಬಾಲು ಬೀಳುತ್ತಾರೆ. ಈ ವ್ಯಕ್ತಿಗಳು ಗೂಬೆಯ ನೋಟದಿಂದ ಹೆಚ್ಚಿನ ಜನಪ್ರಿಯತೆ ದೊರಕುತ್ತದೆ ಎಂದು ನಂಬುತ್ತಾರೆ. ಈ ಬಗ್ಗೆ ನಿಮಗೇನಿನಿಸಿತು? ಈ ವಿಧಿಯನ್ನು ನಿಷೇಧಿಸಬೇಕೇ? ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ತಿಳಿಸಿ.

English summary

when black magic is practiced around diwali time

There are many things that happen on Diwali, it is the time of the year when people gift each other, crackers are burst and there are many parties that people throw to celebrate this grand festival. Amidst this, do you know that there are certain rituals and practices that happen around which most people ignore? We are discussing about the black magic practice that happens around during the Diwali time!
X
Desktop Bottom Promotion