ರಾಷ್ಟ್ರ ಧ್ವಜಗಳ ಕಥನ-ನೀವು ತಿಳಿಯಲೇಬೇಕಾದ ಸಂಗತಿಗಳು

By: manu
Subscribe to Boldsky

ಧ್ವಜವೆಂದರೆ ರಾಷ್ಟ್ರವೊಂದರ ಹೆಮ್ಮೆಯ ಸಂಕೇತ, ಅಸ್ತಿತ್ವದ ಲಕ್ಷಣ. ಈ ವಿಶ್ವದಲ್ಲಿರುವ ಎಲ್ಲಾ ರಾಷ್ಟ್ರಗಳಿಗೂ ತಮ್ಮದೇ ಆದ ಧ್ವಜ, ಲಾಂಛನ, ಗೀತೆಗಳಿವೆ. ಅಂತೆಯೇ ನಮ್ಮೆಲ್ಲರಿಗೂ ಹೆಮ್ಮೆಯನ್ನು ತರುವಂತಹ 'ತ್ರಿವರ್ಣ ಧ್ವಜ' ನಮ್ಮ ಭಾರತದ ರಾಷ್ಟ್ರೀಯ ಧ್ವಜವಾಗಿದೆ.

ಹೌದು, ಭಾರತೀಯರೆಲ್ಲರಿಗೂ ಹೆಮ್ಮೆಯನ್ನು ತರುವಂತಹ ವಿಚಾರಗಳಲ್ಲಿ ನಮ್ಮ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಗಳಿಗೆ ಮಹತ್ವದ ಸ್ಥಾನವನ್ನು ನೀಡಬೇಕಾಗುತ್ತದೆ. ಅದರಲ್ಲೂ ರಾಷ್ಟ್ರ ಧ್ವಜ ನಮ್ಮ ಮುಂದೆ ಅಥವಾ ಕೈಯಲ್ಲಿ ಇದ್ದು, ರಾಷ್ಟ್ರಗೀತೆ ಹಾಡುವಾಗ ಎಂತಹವರ ಎದೆಯಲ್ಲಿಯೂ ರಾಷ್ಟ್ರದ ಕುರಿತಾದ ಹೆಮ್ಮೆ ಉಕ್ಕಿ ಹರಿಯುತ್ತದೆ.  ಭಾರತೀಯ ಸಂಸ್ಕೃತಿ, ಪರಂಪರೆ, ಇಡೀ ವಿಶ್ವಕ್ಕೆ ಮಾದರಿ

ಇನ್ನು ಇದರಲ್ಲಿ ಪ್ರಮುಖವಾಗಿ ಕಾಣುವ ಮೂರು ಬಣ್ಣಗಳಿಂದ ಇದನ್ನು ತ್ರಿವರ್ಣ ಧ್ವಜ ಎನ್ನುತ್ತೇವೆ, ಆದರೆ ವಾಸ್ತವವಾಗಿ ನಡುವಣ ಚಕ್ರ ಕಡುನೀಲಿ ಬಣ್ಣದಾಗಿದ್ದು ಒಟ್ಟು ನಾಲ್ಕು ಬಣ್ಣಗಳಿಂದ ಕೂಡಿದೆ. ಆದರೆ ಈ ಬಣ್ಣಗಳು, ಹಾಗೂ ಧ್ವಜದ ಮಧ್ಯದಲ್ಲಿರುವ ಚಕ್ರ ಏನನ್ನು ಬಿಂಬಿಸುತ್ತವೆ? ಈ ಪ್ರಶ್ನೆಯನ್ನು ಹೀಗೇ ಸ್ನೇಹಿತರ ನಡುವೆ ಕೇಳಿದರೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಬನ್ನಿ, ವಿಶ್ವದ ಪ್ರಮುಖ ಧ್ವಜಗಳ ಬಗ್ಗೆ ಅರಿಯೋಣ ಬನ್ನಿ....  

ಭಾರತ

ಭಾರತ

ತಿರಂಗ ಎಂದೇ ಪ್ರಸಿದ್ಧವಾಗಿರುವ ನಮ್ಮ ಧ್ವಜ ವಾಸ್ತವದಲ್ಲಿ ನಾಲ್ಕು ಬಣ್ಣಗಳನ್ನು ಹೊಂದಿದೆ. 1931ರಲ್ಲಿ ಇದು ಭಾರತದ ಎರಡು ಮುಖ್ಯ ಬಣಗಳಾದ ಹಿಂದೂ (ಕೇಸರಿ) ಮತ್ತು ಮುಸ್ಲಿಂ (ಹಸಿರು) ಬಣ್ಣಗಳನ್ನು ಹೊಂದಿತ್ತು. ಇವೆರಡೂ ಬಣಗಳ ನಡುವೆ ಶಾಂತಿಯನ್ನು ಬಯಸಲೆಂದು ಎರಡೂ ಬಣ್ಣಗಳ ನಡುವೆ ಶಾಂತಿಯ ಸಂಕೇತವಾದ ಬಿಳಿಯ ಪಟ್ಟಿಯನ್ನು ಅಳವಡಿಸಲಾಯಿತು. ನಡುವಣ ಅಶೋಕ ಚಕ್ರ ಗಾಢನೀಲಿ ಬಣ್ಣದಾಗಿದ್ದಿ ಇಪ್ಪತ್ತನಾಲ್ಕು ಗೆರೆಗಳನ್ನು ಹೊಂದಿದೆ. ಈ ಗೆರೆಗಳು ಇಪ್ಪತ್ತನ್ನಾಲ್ಕು ಗಂಟೆಗಳನ್ನು ಪ್ರತಿನಿಧಿಸಿದ್ದು ಸಕಲರ ನಡುವೆ ಸದಾ ಶಾಂತಿ ಇರಲಿ ಎಂಬ ಸಂಕೇತವನ್ನು ನೀಡುತ್ತಿದೆ.

ಅಮೇರಿಕಾ ಸಂಯುಕ್ತ ಸಂಸ್ಥಾನಗಳು

ಅಮೇರಿಕಾ ಸಂಯುಕ್ತ ಸಂಸ್ಥಾನಗಳು

ನಕ್ಷತ್ರಗಳು ಮತ್ತು ಪಟ್ಟೆಗಳು ("Stars and Stripes") ಎಂದೇ ಪ್ರಸಿದ್ಧವಾಗಿರುವ ಈ ಧ್ವಜಕ್ಕೆ "Old Glory" ಎಂಬ ಇನ್ನೊಂದು ಹೆಸರೂ ಇದೆ. ಧ್ವಜದಲ್ಲಿ ಸರಿಯಾಗಿ ಹದಿಮೂರು ಪಟ್ಟೆಗಳಿದ್ದು ಹದಿಮೂರು ಮೂಲಪ್ರಾಂತಗಳನ್ನು ಪ್ರತಿನಿಧಿಸುತ್ತದೆ. ಉಳಿದಂತೆ ಇದರಲ್ಲಿರುವ ಐವತ್ತು ನಕ್ಷತ್ರಗಳು ಒಟ್ಟು ಐವತ್ತು ಸಂಸ್ಥಾನಗಳ ಒಕ್ಕೂಟವನ್ನು ಪ್ರತಿನಿಧಿಸುತ್ತದೆ.

ಇಂಗ್ಲೆಂಡ್ (United Kingdom)

ಇಂಗ್ಲೆಂಡ್ (United Kingdom)

ಇಂದಿಗೂ ಅಸ್ತಿತ್ವದಲ್ಲಿರುವ ವಿಶ್ವದ ಹಳೆಯ ಧ್ವಜಗಳಲ್ಲಿ ಒಂದು ಇಂಗ್ಲೆಂಡಿಗೆ ಸೇರಿದ್ದು 1801ರಲ್ಲಿ ಪ್ರಥಮವಾಗಿ ಅಸ್ತಿತ್ವಕ್ಕೆ ಬಂದಿತ್ತು. ಔಪಚಾರಿಕವಾಗಿ ಈ ಧ್ವಜವನ್ನು ಯೂನಿಯನ್ ಫ್ಲಾಗ್ ಅಥವಾ ಒಕ್ಕೂಟದ ಧ್ವಜ ಎಂದೂ ಕರೆಯಲಾಗುತ್ತದೆ. ಈ ಧ್ವಜವನ್ನು ಮೂರು ಧ್ವಜಗಳ ಸಂಯೋಜನೆಯ ಮೂಲಕ ಅನುಷ್ಠಾನಕ್ಕೆ ತರಲಾಗಿದೆ. ಈ ಮೂರು ಧ್ವಜಗಳು ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಉತ್ತರ ಐರ್ಲೆಂಡ್ ಪ್ರಾಂತಗಳ ಪೋಷಕನಾಗಿರುವ ಸಂಕೇತವನ್ನು ನೀಡುತ್ತಿದೆ.

ನೈಜೀರಿಯಾ

ನೈಜೀರಿಯಾ

ಜಪಾನ್ ಬಿಟ್ಟರೆ ಅತಿ ಸರಳವಾದ ಧ್ವಜ ಹೊಂದಿರುವ ದೇಶವೆಂದರೆ ನೈಜೀರಿಯಾ. ಇದರಲ್ಲಿ ಮೇಲಿನಿಂದ ಕೆಳಕ್ಕೆ ಎರಡು ಹಸಿರು ಪಟ್ಟಿ, ನಡುವೆ ಒಂದು ಬಿಳಿಪಟ್ಟಿ ಇವೆ ಅಷ್ಟೇ. ಹಸಿರು ಬಣ್ಣ ದೇಶದ ಹಸಿರು ಕ್ರಾಂತಿಯನ್ನೂ, ಬಿಳಿಯ ಬಣ್ಣ ಶಾಂತಿಯ ಸಂಕೇತವನ್ನೂ ನೀಡುತ್ತಿದೆ.

ಡೆನ್ಮಾರ್ಕ್

ಡೆನ್ಮಾರ್ಕ್

ರೆಡ್ ಕ್ರಾಸ್‌ನ ನಡುವಣ ಪ್ಲಸ್ ಚಿಹ್ನೆಯನ್ನು ಕೊಂಚ ಎಡಕ್ಕೆ ಜರುಗಿಸಿದಂತೆ ಕಾಣುವ ಈ ಸರಳ ಧ್ವಜದ ಬಿಳಿಯಭಾಗ ಶಿಲುಬೆಯ ಅಥವಾ ಕ್ರೈಸ್ತಮತದ ಸಂಕೇತವಾಗಿದೆ. ಈ ಧ್ವಜವೂ ವಿಶ್ವದ ಒಂದು ಹಳೆಯ ಧ್ವಜವಾಗಿದ್ದು ಜೂನ್ 15, 1219 ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಈ ದಿನ ಕಿಂಗ್ ವಾಲ್ಡೆಮಾರ್ II ರವರು ಯುದ್ದದಲ್ಲಿ ಎಸ್ತೋನಿಯರನ್ನು ಸೋಲಿಸಿದ ದಿನವಾಗಿದ್ದು ಅಂದಿನಿಂದಲೂ ಈ ಧ್ವಜ ಬದಲಾಗಿಲ್ಲ.

 
English summary

What Do National Flags Signify?

From religious symbolism to communist leagues, the flags have various things combined to it that gives it a meaning which defines the nation. Check them out...
Story first published: Monday, January 9, 2017, 23:14 [IST]
Please Wait while comments are loading...
Subscribe Newsletter