ನಿಮಗೆ ಗೊತ್ತಾ? ಸಮಯ ಹೇಳುವುದು ನಿಮ್ಮ ವ್ಯಕ್ತಿತ್ವ!

By: manu
Subscribe to Boldsky

ಜೋತಿಷ್ಯಾಸ್ತ್ರ ಹಾಗೂ ವೇದಗಳ ಅಧ್ಯಯನದ ಪ್ರಕಾರ ವ್ಯಕ್ತಿಯ ಜನ್ಮದಿನಾಂಕ ಮತ್ತು ಸಮಯ ತುಂಬಾ ಮುಖ್ಯವಾಗಿದ್ದು ಆ ವ್ಯಕ್ತಿಯ ಜೀವನದ ಮೇಲೆ ಅಪಾರವಾದ ಪ್ರಭಾವ ಬೀರುತ್ತದೆ. ಹಗಲಿನ ವೇಳೆಯಲ್ಲಿ ಜನಿಸಿದ ಮಕ್ಕಳಿಗೂ ರಾತ್ರಿಯ ವೇಳೆ ಜನಿಸಿದ ಮಕ್ಕಳಿಗೂ ಭವಿಷ್ಯದಲ್ಲಿ ಭಿನ್ನವಾದ ವ್ಯಕ್ತಿತ್ವವಿರುತ್ತದೆ.  ಜನ್ಮದಿನಾಂಕದ ರಹಸ್ಯ: ಸಂಖ್ಯೆ ಹೇಳಿ, ಭವಿಷ್ಯ ಕೇಳಿ...!

ಇಂದಿನ ಲೇಖನದಲ್ಲಿ ರಾತ್ರಿಯ ವೇಳೆ ಜನಿಸಿದ ಮಕ್ಕಳು ದೊಡ್ಡವರಾದ ಬಳಿಕ ಹೊಂದುವ ವ್ಯಕ್ತಿತ್ವದ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ಒದಗಿಸಲಾಗಿದೆ. ಇವುಗಳಲ್ಲಿ ಪ್ರಮುಖವಾಗಿ ರಾತ್ರಿಯ ವೇಳೆ ಜನಿಸಿದ ಮಕ್ಕಳು ದೊಡ್ಡವರಾದ ಬಳಿಕ ತಮ್ಮ ತಾಯಿಯ ಬಗ್ಗೆ ಹೆಚ್ಚಿನ ಅಕ್ಕರೆ ಹಾಗೂ ಕ್ರಿಯಾತ್ಮಕ ವ್ಯಕ್ತಿತ್ವ ಹೊಂದಿರುತ್ತಾರೆ....  

ಮಾಹಿತಿ #1

ಮಾಹಿತಿ #1

ಸೂರ್ಯಾಸ್ತದ ಬಳಿಕ ಆದರೆ ಚಂದ್ರೋದಯಕ್ಕೂ ಮುನ್ನ ಜನಿಸಿದ ವ್ಯಕ್ತಿಗಳು ಅತ್ಯುತ್ತಮ ಚಿಂತಕರೂ ದೂರದೃಷ್ಟಿಯುಳ್ಳವರೂ ಆಗಿರುತ್ತಾರೆ. ಇವರಿಗೆ ಕಲೆ ಮತ್ತು ಸಂಗೀತದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ.

ಮಾಹಿತಿ #2

ಮಾಹಿತಿ #2

ರಾತ್ರಿ ವೇಳೆ ಜನಿಸಿದ ಮಕ್ಕಳು ದೊಡ್ಡವರಾದ ಬಳಿಕ ತಮ್ಮ ತಾಯಿಯ ಪ್ರತಿ ಉಳಿದವರಿಗಿಂತಲೂ ಹೆಚ್ಚಿನ ಅಕ್ಕರೆ ಹೊಂದಿರುತ್ತಾರೆ. ಇವರು ತಮ್ಮ ಪ್ರತಿಯೊಂದು ವಿಷಯವನ್ನೂ ಸೂಕ್ಷ್ಮವಾಗಿ ಅವಲೋಕಿಸುವ ಗುಣದವರಾಗಿದ್ದು, ವಿಶೇಷವಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರೆ.

ಮಾಹಿತಿ #3

ಮಾಹಿತಿ #3

ಈ ವ್ಯಕ್ತಿಗಳು ಹೆಚ್ಚು ಆತ್ಮವಿಶ್ವಾಸಿಗಳಾಗಿರುತ್ತಾರೆ. ಇವರು ಯಾವುದೇ ಪ್ರಲೋಭನೆಗೂ ತಮ್ಮ ಆತ್ಮಸಮ್ಮಾನವನ್ನು ಬಲಿಕೊಡಲಾರರು. ಇವರಿಂದ ಹೆಚ್ಚಿನ ಫಲವನ್ನು ನಿರೀಕ್ಷಿಸಬಹುದು ಹಾಗೂ ಸಾಮಾನ್ಯವಾಗಿ ಇವರು ದಿನದ ಕಾರ್ಯಕ್ರಮಗಳಿಗಿಂತ ಸೂರ್ಯಾಸ್ತದ ಬಳಿಕ ಪ್ರಾರಂಭವಾಗುವ ಕಾರ್ಯಕ್ರಮಗಳಿಗೇ ಹೆಚ್ಚಿನ ಆದ್ಯತೆ ನೀಡುವವರಾಗಿರುತ್ತಾರೆ.

ಮಾಹಿತಿ #4

ಮಾಹಿತಿ #4

ಇವರು ಹೆಚ್ಚು ಚೈತನ್ಯಶೀಲರೂ ಹೆಚ್ಚು ಹೆಚ್ಚು ಬಯಸುವವರೂ ಆಗಿರುತ್ತಾರೆ. ಇವರಿಗೆ ಅತಿ ಹೆಚ್ಚಿನ ಕಲ್ಪನಾ ಶಕ್ತಿ ಇದ್ದು ಈ ಶಕ್ತಿಯೇ ಇವರನ್ನು ಹೆಚ್ಚು ಕ್ರಿಯಾತ್ಮಕವಾಗಿಸುತ್ತದೆ.

ಮಾಹಿತಿ #5

ಮಾಹಿತಿ #5

ಇವರು ಸೂಕ್ಷ್ಮಮತಿಗಳಾಗಿದ್ದು ಯಾವುದೇ ವಿಷಯವನ್ನು ಧನಾತ್ಮಕವಾಗಿ ವಿಮರ್ಶಿಸಬಲ್ಲವರಾಗಿರುತ್ತಾರೆ. ಇವರು ಸದಾ ತಮ್ಮ ಸುತ್ತ ಮುತ್ತಲ ಸುದ್ದಿಗಳನ್ನು ಪಡೆದು ಜಾಗೃತರಾಗಿರುತ್ತಾರೆ. ಇವರಿಗೆ ಉತ್ತಮ ಸ್ನೇಹಿತರ ವೃಂದವೂ ಇರುತ್ತದೆ. ಒಂದು ವೇಳೆ ನೀವೂ ಈ ವರ್ಗಕ್ಕೆ ಸೇರಿದವರಾಗಿದ್ದರೆ ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನಮಗೆ ಖಂಡಿತಾ ಒದಗಿಸಿ, ಇದಕ್ಕಾಗಿ ಕೆಳಗಿನ ಕಮೆಂಟ್ಸ್ ಭಾಗವನ್ನು ಉಪಯೋಗಿಸಿ.

 
English summary

Were You Born At Night? Then These Personality Traits Can Define You

According to the Vedic knowledge and astrology,the time of birth of a person is really important, as it hugely impacts and influences the life of a person. It is said that people who are born during the day time have a totally different personality when compared to the people born during the night time.
Please Wait while comments are loading...
Subscribe Newsletter