ಆಯಸ್ಸು ಮುಗಿಯುತ್ತಾ ಬಂದಿದ್ದರೆ, ಹೀಗೆಲ್ಲಾ ನಡೆಯುತ್ತವೆಯಂತೆ!

By: Arshad
Subscribe to Boldsky

ಪುರಾಣ, ವೇದ ಅಥವಾ ಶಾಸ್ತ್ರಗಳ ಪ್ರಕಾರ ಎಲ್ಲಾ ಮಾನವರಿಗೆ ಅರಿವಿನ ಹಸಿವು ಸದಾ ತಣಿಯುತ್ತಲೇ ಇರಬೇಕು. ಕರ್ಮ, ಧರ್ಮ ಅಥವಾ ಇನ್ನಾವುದೇ ಶಾಸ್ತ್ರದ ಪ್ರಕಾರ ನಮ್ಮ ಸುತ್ತ ಮುತ್ತ ಜರುಗುತ್ತಿರುವ ಹಲವಾರು ವಿಷಯಗಳು ನಮ್ಮ ಜೀವನದ ಮೇಲೆ ನೇರವಾದ ಪ್ರಭಾವ ಹೊಂದಿರುತ್ತವೆ. ಮನುಷ್ಯರು ಸತ್ತ ನಂತರ ದೆವ್ವಗಳಾಗಿ ನಮ್ಮನ್ನು ಏಕೆ ಕಾಡುತ್ತಾರೆ?

ಪುರಾಣಗಳ ಪ್ರಕಾರ ಕೆಲವು ಸೂಚನೆಗಳು ನಿಮ್ಮ ಆಯಸ್ಸು ಮುಗಿಯುತ್ತಾ ಬಂದಿರುವ ಸೂಚನೆಗಳನ್ನು ನೀಡುತ್ತವೆ. ಈ ಸೂಚನೆಗಳ ಬಗ್ಗೆ ಕೆಲವು ಮಾಹಿತಿಗಳನ್ನು ಇಂದು ನೀಡಲಾಗಿದ್ದು ಇವುಗಳ ಬಗ್ಗೆ ಅರಿತುಕೊಂಡಿರುವುದು ಅಗತ್ಯವಾಗಿದೆ. ಈ ಸೂಚನೆಗಳನ್ನು ಅರಿತರೆ ಈ ಬಗ್ಗೆ ಜಾಗರೂಕಗಾಗಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ನೆರವಾಗಬಹುದು. ಇದು ಸಾವಿನ ನಂತರ ನಡೆಯುವ ಕಥೆ! ಹೀಗೂ ಉಂಟೇ?

ವಿಶೇಷ ಸೂಚನೆ: ಈ ಸೂಚನೆಗಳು ಗ್ರಂಥಗಳಲ್ಲಿ ಕಂಡುಬಂದ ವಿಷಯಗಳನ್ನು ಆಧರಿಸಿದ್ದೇ ಹೊರತು ಯಾವುದೇ ವ್ಯಕ್ತಿಯ ವೈಯಕ್ತಿಕ ಅನುಭವದಿಂದಲ್ಲ...  

ಸೂಚನೆ #1

ಸೂಚನೆ #1

ಪವಿತ್ರ ಗ್ರಂಥಗಳಲ್ಲಿ ತಿಳಿಸಿರುವ ಪ್ರಕಾರ ಯಾವ ವ್ಯಕ್ತಿ ಧ್ರುವ ನಕ್ಷತ್ರವನ್ನು ನೋಡಲು ಅಸಮರ್ಥನಾಗುತ್ತಾನೋ, ಆ ವ್ಯಕ್ತಿಗೆ ಮುಂದಿನ ವರ್ಷದೊಳಗೆ ಮೃತ್ಯುವಿಗೆ ಸಮೀಪನಾಗುತ್ತಾನೆ/ಳೆ.

ಸೂಚನೆ #2

ಸೂಚನೆ #2

ಒಂದು ವೇಳೆ ಸೂರ್ಯನ ಆಕಾರ ವಿರೂಪಗೊಂಡಂತೆ ವ್ಯಕ್ತಿಗೆ ಕಂಡರೆ ಆ ವ್ಯಕ್ತಿಯ ಸಾವು ಸಮೀಪದಲ್ಲಿಯೇ ಇದೆ ಎಂದು ಅರ್ಥ. ಧರ್ಮಗ್ರಂಥಗಳ ಪ್ರಕಾರ ಆ ವ್ಯಕ್ತಿಯ ಮರಣ ಮುಂದಿನ ಹನ್ನೊಂದು ತಿಂಗಳ ಒಳಗಾಗಿ ಸಂಭವಿಸುತ್ತದೆ.

ಸೂಚನೆ #3

ಸೂಚನೆ #3

ಒಂದು ವೇಳೆ ವ್ಯಕ್ತಿಯ ಪಾದದ ಗುರುತುಗಳು ಮರಳಿನ ಮೇಲೆ ಪೂರ್ಣವಾಗಿ ಮೂಡದೇ ಅರ್ಧಂಬರ್ಧ ಮಾತ್ರ ಮೂಡಿದರೆ ಆ ವ್ಯಕ್ತಿಯ ಮರಣ ಮುಂದಿನ ಏಳು ತಿಂಗಳ ಒಳಗಾಗಿ ಸಂಭವಿಸುತ್ತದೆಯಂತೆ!

ಸೂಚನೆ #4

ಸೂಚನೆ #4

ಒಂದು ವೇಳೆ ಹದ್ದು ಅಥವಾ ಕಾಗೆಯೊಂದು ವ್ಯಕ್ತಿಯ ತಲೆಯ ಮೇಲೆ ಕುಳಿತರೆ ಇದು ಸೂತಕದ ಸ್ಪಷ್ಟ ಸಂಕೇತವಾಗಿದೆ. ಆ ವ್ಯಕ್ತಿ ಮುಂದಿನ ಆರು ತಿಂಗಳ ಒಳಗಾಗಿ ಸಾವಿನ ಅತಿಥಿಯಾಗುತ್ತಾನೆ.

ಸೂಚನೆ #5

ಸೂಚನೆ #5

ಪುರಾಣಗಳಲ್ಲಿ ತಿಳಿಸಿರುವಂತೆ ಒಂದು ವೇಳೆ ವ್ಯಕ್ತಿ ತನ್ನನ್ನು ತಾನೇ ಕನ್ನಡಿಯಲ್ಲಿ ನೋಡಿಕೊಂಡಾಗ ಆತನ ಪ್ರತಿಬಿಂಬ ವಿರೂಪಗೊಂಡಂತೆ ಕಂಡುಬಂದರೆ ಅಥವಾ ಆತನ ಸುತ್ತ ಧೂಳಿನ ಮೋಡವೊಂದು ಕವಿದಿರುವಂತೆ ಕಂಡುಬಂದರೆ ಆತನ ಆಯಸ್ಸು ಇನ್ನು ಕೇವಲ ನಾಲ್ಕರಿಂದ ಐದು ತಿಂಗಳು ಮಾತ್ರ ಉಳಿದಿದೆ.

ಸೂಚನೆ #6

ಸೂಚನೆ #6

ಒಂದು ವೇಳೆ ಯಾವುದೇ ಮೋಡ ಅಥವಾ ಮಳೆ ಇಲ್ಲದ ಸಮಯದಲ್ಲಿ ಮಿಂಚನ್ನು ಸ್ಪಷ್ಟವಾಗಿ ಕಂಡರೆ ಆತನ ಆಯಸ್ಸು ಇನ್ನು ಕೇವಲ ಎರಡರಿಂದ ಮೂರು ತಿಂಗಳು ಮಾತ್ರ ಉಳಿದಿದೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ.

ಸೂಚನೆ #7

ಸೂಚನೆ #7

ಒಂದು ವೇಳೆ ಸ್ನಾನದ ಬಳಿಕ ಕೆಲವೇ ಕ್ಷಣಗಳಲ್ಲಿ ಸ್ನಾನ ಮಾಡೇ ಇರಲಿಲ್ಲವೆನ್ನುವಷ್ಟು ಒಣಗಿಬಿಟ್ಟರೆ ಆತ ಮುಂದಿನ ಹತ್ತು ದಿನಗಳ ಒಳಗಾಗಿ ಸಾವಿಗೆ ಶರಣಾಗುವ ಸಾಧ್ಯತೆ ಇದೆ.

ಸೂಚನೆ #8

ಸೂಚನೆ #8

ಒಂದು ವೇಳೆ ದೀಪದ ಜ್ವಾಲೆ ನಂದಿದ ಬಳಿಕ ಸುಟ್ಟ ಅಥವಾ ಹೊಗೆಯ ಪರಿಮಳವನ್ನು ಪಡೆಯಲು ಸಾಧ್ಯವಾಗದೇ ಇದ್ದರೆ ಆತನ ಆಯಸ್ಸು ಇನ್ನು ಕೆಲವೇ ದಿನಗಳಿವೆ ಎಂದು ಧರ್ಮಗ್ರಂಥಗಳಲ್ಲಿ ತಿಳಿಸಲಾಗಿದೆ.

 
English summary

Signs That Can Predict An Early Death

Check out on the signs that could define an early death of a person and one can take this as a warning sign of an end coming near.
Subscribe Newsletter