For Quick Alerts
ALLOW NOTIFICATIONS  
For Daily Alerts

ಸರ್ಪ ದೋಷ ಅಂದರೆ ಏನು? ಯಾಕೆ ಬರುತ್ತೆ? ಇದಕ್ಕೆ ಪರಿಹಾರವೇನು?

By Divya Pandith
|

ಸಾವಿಲ್ಲದ ಮನೆಯಿಲ್ಲ ಎನ್ನುವ ಮಾತಿನಂತೆ ಕಷ್ಟವಿಲ್ಲದ ವ್ಯಕ್ತಿಯಿಲ್ಲ. ಪ್ರತಿಯೊಬ್ಬರಿಗೂ ಒಂದೊಂದು ಬಗೆಯ ಕಷ್ಟ ಅಥವಾ ದುಃಖ ಎನ್ನುವುದು ಇದ್ದೇ ಇರುತ್ತದೆ. ಮನುಷ್ಯನ ಕಷ್ಟಗಳು ಅಥವಾ ದುಃಖಗಳು ಅವರವರ ಗ್ರಹಗತಿಗಳು ಹಾಗೂ ಸರ್ಪದೋಷವೇ ಕಾರಣ ಎನ್ನಲಾಗುತ್ತದೆ. ಪುರಾಣ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಸರ್ಪಕ್ಕೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ದೇವರೆಂದು ಆರಾಧಿಸಲಾಗುತ್ತದೆ.

ಹಿಂದೂ ಸಂಪ್ರದಾಯದಲ್ಲಿ ಹಾವನ್ನು ಹೊಡೆಯುವುದು, ಹಿಂಸೆಮಾಡುವುದು ಅಥವಾ ಸಾಯಿಸುವ ಕೃತ್ಯವನ್ನು ಎಸಗಿದರೆ ಅದು ಪಾಪ ಹಾಗೂ ಶಾಪವಾಗಿ ಪರಿಣಮಿಸುತ್ತದೆ ಎನ್ನಲಾಗುತ್ತದೆ. ಸರ್ಪವನ್ನು ಸಾಯಿಸಿದರೆ ಅದರ ಸಂಸ್ಕಾರ ಮಾಡಲೇ ಬೇಕು. ಇಲ್ಲವಾದರೆ ಸರ್ಪ ದೋಷಕ್ಕೆ ಒಳಗಾಗಬೇಕಾಗುವುದು.

ಐದು ತಲೆಗಳ ಶೇಷನಾಗ ಸರ್ಪ! ಭೂಮಿಯಲ್ಲಿ ಕಂಡುಬಂದಿದ್ದು ನಿಜವೇ?

ಈ ದೋಷವು ಕೇವಲ ಒಂದು ಜನ್ಮಕ್ಕಷ್ಟೇ ಮೀಸಲಾಗಿರುವುದಿಲ್ಲ. ಅದು ಜನ್ಮ ಜನ್ಮಾಂತರಕ್ಕೂ ಕಾಡುತ್ತಿರುತ್ತದೆ ಎಂದು ಹೇಳಲಾಗುತ್ತದೆ. ಹಣಕಾಸಿನ ಸಮಸ್ಯೆ, ಸಂಸಾರದಲ್ಲಿ ಕಿರಿಕಿರಿ, ವಿವಾಹ ಮುರಿದು ಬೀಳುವುದು, ವೃತ್ತಿಕ್ಷೇತ್ರದಲ್ಲಿ ಹಿನ್ನಡೆ, ಬಂಧು ಬಾಂಧವರಿಂದ ಮೋಸ, ವಂಚನೆ, ಸಂತಾನ ಹೀನತೆ, ಮಕ್ಕಳ ಭಾಘ್ಯ ಇಲ್ಲದಿರುವುದು ಹೀಗೆ ಅನೇಕ ಸಮಸ್ಯೆಗಳು ಸರ್ಪದೋಷದಿಂದ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಈ ವಿಚಾರದ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ಮುಂದಿನ ವಿವರಣೆಯನ್ನು ಓದಿ...

ಕಾಳ ಸರ್ಪ ದೋಷಕ್ಕಿಂತ ಭಿನ್ನವಾದದ್ದು ಸರ್ಪದೋಷ!

ಕಾಳ ಸರ್ಪ ದೋಷಕ್ಕಿಂತ ಭಿನ್ನವಾದದ್ದು ಸರ್ಪದೋಷ!

ಸರ್ಪ ದೋಷವು ವ್ಯಕ್ತಿಯ ಮರಣದ ನಂತರವೂ ಪರಿಣಾಮ ಬೀರುತ್ತದೆ. ಸರ್ಪವನ್ನು ಕೊಂದಾಗ, ಅನಿರೀಕ್ಷಿತ ಘಟನೆಯಿಂದ ಸರ್ಪ ಸಾವನ್ನಪ್ಪಿದರೆ ಅಥವಾ ಇನ್ಯಾವುದೋ ಕಾರಣಕ್ಕೆ ಸರ್ಪ ಮರಣಹೊಂದಿದರೆ ಅಂತಹ ಸಂದರ್ಭದಲ್ಲಿ ಅದರ ಅಂತ್ಯಸಂಸ್ಕಾರವನ್ನು ಕ್ರಮಬದ್ಧವಾಗಿ ಮಾಡಬೇಕು. ಇಲ್ಲವಾದರೆ ದೋಷವಾಗಿ ಪರಿಣಮಿಸುತ್ತದೆ. ಕಾಳಸರ್ಷ ದೋಷ ಎನ್ನುವುದು ಅದು ಆನುವಂಶಿಕವಾಗಿ ಬರುತ್ತದೆ. ಇದರ ಪರಿಣಾಮವು ರಾಹು, ಕೇತು ಮತ್ತಿತರ

ಗ್ರಹಗಳ ಸಂಬಂಧಿಸಿದಂತೆ ತೊಂದರೆಗಳುಂಟಾಗುತ್ತದೆ. ಸರ್ಪದೋಷಕ್ಕೆ ಯಾವುದೇ ಕಾಲಮಿತಿಗಳನ್ನು ಹೊಂದಿರುವುದಿಲ್ಲ. ಕಾಳಸರ್ಪ ದೋಷಕ್ಕೆ ಸರಳ

ಪರಿಹಾರಗಳಿರುತ್ತವೆ. ಜಾತಕಕ್ಕೆ ಅನುಗುಣವಾಗಿ ಇದಕ್ಕೆ ಪರಿಹಾರಗಳನ್ನು ಮಾಡಿಸಿದರಾಯಿತು.

ಸರ್ಪದೋಷದಿಂದ ಉಂಟಾಗುವ ಸಮಸ್ಯೆಗಳು

ಸರ್ಪದೋಷದಿಂದ ಉಂಟಾಗುವ ಸಮಸ್ಯೆಗಳು

ಸರ್ಪದೋಷದಿಂದ ವ್ಯಕ್ತಿ ಅನೇಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ನ್ಯೂನತೆ ಹೊಂದಿರುವ ಮಕ್ಕಳು, ಲೈಂಗಿಕ ಸಮಸ್ಯೆ, ವಿವಾಹಗಳ ವೈಫಲ್ಯ, ಗರ್ಭಪಾತ, ನಿಧಾನಗತಿಯ ಬುದ್ಧಿ ಬೆಳವಣಿಗೆ, ಪದೇ ಪದೇ ದುಃಸ್ವಪ್ನಗಳು ಕಾಣುವುದು, ಕ್ಯಾನ್ಸರ್, ಕಿಡ್ನಿಕಲ್ಲು, ದುರ್ಬಲವಾದ ಯಕೃತ್ ಅಥವಾ ಮೆದೋಜ್ಜೀರಕ ಗ್ರಂಥಿ

ಸರ್ಪದೋಷದಿಂದ ಉಂಟಾಗುವ ಸಮಸ್ಯೆಗಳು

ಸರ್ಪದೋಷದಿಂದ ಉಂಟಾಗುವ ಸಮಸ್ಯೆಗಳು

ಲೈಂಗಿಕವಾಗಿ ಹರಡುವ ರೋಗಗಳು, ಸಹೋದರರೊಂದಿಗೆ ಪೈಪೋಟಿ, ತಂದೆ ಮರಣಕ್ಕೆ ಕಾಯುತ್ತಿರುವ ಮಕ್ಕಳು ಹಣಕ್ಕಾಗಿ ಆಪ್ತರನ್ನು ಕೊಲ್ಲುವುದು ಹೀಗೆ ಅನೇಕ ತೊಂದರೆ ಹಾಗೂ ಹೀನ ಕೃತ್ಯಗಳು ನಮ್ಮಿಂದ ನಡೆಯುತ್ತದೆ. ಸರ್ಪದೋಷದ ಪರಿಣಾಮ ಬೀರಲು ರಾಹು ಮತ್ತು ಕೇತುಗಳು ಸಹಕಾರ ನೀಡುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಜಾತಕದಲ್ಲಿ ಸರ್ಪದೋಷಮತ್ತು ನಾಗದೋಷಕ್ಕೆ ಕಾರಣ

ಜಾತಕದಲ್ಲಿ ಸರ್ಪದೋಷಮತ್ತು ನಾಗದೋಷಕ್ಕೆ ಕಾರಣ

ಜಾತಕದಲ್ಲಿ ಸರ್ಪದೋಷವು ರೂಪುಗೊಳ್ಳಲು ಜ್ಯೋತಿಷ್ಯ ಶಾಸ್ತ್ರವು ಅನೇಕ ಕಾರಣವನ್ನು ನೀಡುತ್ತದೆ. ಪೂರ್ವಜರು ಮತ್ತು ಸ್ವಯಂ ಮಾಡಿದ ತಪ್ಪುಗಳಿಂದ ದೋಷ ಉಂಟಾಗುತ್ತದೆ. ಸರ್ಪದೋಷ ಅಥವಾ ನಾಗ ದೋಷ ಎನ್ನುವುದು ಕೇವಲ ಹಾವು ಅಥವಾ ಸರೀಸೃಪಗಳನ್ನು ಸಾಯಿಸುವುದರಿಂದ

ಉಂಟಾಗುವುದಿಲ್ಲ. ಹೊಟ್ಟೆಯಲ್ಲಿರುವ ಮಗುವನ್ನು ತೆಗೆಸುವುದು ಅಥವಾ ಗರ್ಭಪಾತ ಮಾಡಿಸುವುದರಿಂದಲೂ ಉಂಟಾಗುತ್ತದೆ. ವೀರ್ಯವು ಹಾವಿನಂತೆ

ಪರಿಣಾಮ ಬೀರುತ್ತದೆ. ಈ ಮೇಲೆ ಹೇಳಿರುವ ರೋಗ ಲಕ್ಷಣಗಳಿದ್ದರೆ ಸರ್ಪದೋಷ ಇದೆ ಎನ್ನುವುದನ್ನು ಅರಿಯಬಹುದು. ಸೂಕ್ತರೀತಿಯ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕು.

ಸರ್ಪದೋಷದ ಪರಿಹಾರೋಪಾಯಗಳು

ಸರ್ಪದೋಷದ ಪರಿಹಾರೋಪಾಯಗಳು

ರಾಹು ಅಥವಾ ಕೇತು ಲಗ್ನಾಧಿಪತಿ 2ನೇ, 5ನೇ, 7ನೇ ಅಥವಾ 8ನೇ ಮನೆಯಲ್ಲಿದ್ದರೆ ಅದನ್ನು ಸಾಮಾನ್ಯವಾಗಿ ಸರ್ಪದೋಷ ಎಂದು ಕರೆಯುತ್ತಾರೆ. ಲಗ್ನದಲ್ಲಿ ಕೇತುವಿದ್ದರೆ ಅದನ್ನು ಮಾಂಗಲ್ಯಾ ಸರ್ಪ ದೋಷ ಎಂದು ಕರೆಯುತ್ತಾರೆ. ಆಗ ಮದುವೆ ವಿಳಂಬವಾಗುತ್ತದೆ. ಕೇತು 2ನೇ ಮನೆಯಲ್ಲಿದ್ದರೆ ಆಯೂರ್ಭವ ಎಂದು ಹೇಳುತ್ತಾರೆ. ಆಗ ವ್ಯಕ್ತಿ ದೀರ್ಘಾಯುಷ್ಯ ಸಮಸ್ಯೆಯನ್ನು ಹೊಂದಿದ್ದಾನೆ ಎಂದು ಅರಿಯಬಹುದು. ಕೇತು 11ನೇ ಮನೆಯಲ್ಲಿದ್ದರೆ ಅದನ್ನು ಪುತ್ರಭವ ಎಂದು ಕರೆಯುತ್ತಾರೆ. ಆಗ ವ್ಯಕ್ತಿಗೆ ತುರ್ತು ಸ್ಥಿತಿಗೆ ಸಂಬಂಧಿಸಿದ ಸಮಸ್ಯೆ ಸೃಷ್ಟಿಯಾಗುತ್ತದೆ.

ಸರ್ಪದೋಷದ ಪರಿಹಾರೋಪಾಯಗಳು

ಸರ್ಪದೋಷದ ಪರಿಹಾರೋಪಾಯಗಳು

ನಾಗ ಪಂಚಮಿ ವ್ರತವನ್ನು ಮಾಡುವುದರಿಂದ ಮಕ್ಕಳಿಲ್ಲದ ದಂಪತಿಗಳು ಮಕ್ಕಳನ್ನು ಪಡೆಯಬಹುದು ಎಂಬ ನಂಬಿಕೆಯಿದೆ. ಸರ್ಪ ಯಾಗ ಕಥೆಯನ್ನು ಓದುವುದರಿಂದಲೂ ದೋಷ ಮುಕ್ತರಾಗಬಹುದು. ಅಲ್ಲದೆ ಸರ್ಪ ದೋಷಕ್ಕೆ ಸೂಕ್ತ ರೀತಿಯ ದೋಷ ಮುಕ್ತ ಕೆಲಸಗಳನ್ನು ಮಾಡಬೇಕು. ಇಲ್ಲವಾದರೆ

ವಿಚ್ಛೇದನ, ಮರಣ ಅಥವಾ ಅನಿರೀಕ್ಷಿತ ಅಪಘಾತಗಳು ಹೀಗೆ ಅನೇಕ ತೊಂದರೆಗೆ ಒಳಗಾಗಬೇಕಾಗುತ್ತದೆ.

ದೋಷ ನಿವಾರಣ ಮಂತ್ರ

ದೋಷ ನಿವಾರಣ ಮಂತ್ರ

ಸರ್ಪ ದೋಷ ಇದ್ದವರು ನಿತ್ಯವೂ ಈ ಕೆಳಗಿನ ಶ್ಲೋಕವನ್ನು 108 ಬಾರಿ ಹೇಳಬೇಕು. ಆಗ ದೋಷ ಮುಕ್ತರಾಗಬಹುದು.

"ಅಂತಾವೋ ವಾಸುಕೀ ಸೇಷಾಃ ಪದ್ಮನಾಭ ಅಸ್ಕಾ ಕಂಬಲಃ

ಸಂಖಾಪಾಲೋ ದಾರಾರಾಯಸ್ತ್ರಾಃ ತಕ್ಷಕ ಕಾಲೀಯಾಸ್ತಥಾಃ

ಯೇತಾನೀ ನವನಾಮಾನಿ ನಾಗಾನಾಮ್ಕ ಮಹಾತ್ಮನಾಮ್

ಸಾಯಂಕಾಲೇ ಪಾಥೆಟ್ ನಿತ್ಯಂ ಪ್ರಾತಕ್ಕಾಲೇ ವಿಶೇಷಿತಃ

ತಸ್ಯ ವಿಶಾಭಯಂ ನಾಸ್ತಿ ಸರ್ವತ್ರ ವಿಜಯ ಭವೇತ್"

ಸುಬ್ರಹ್ಮಣ್ಯ ದೇವಾಲಕ್ಕೆ ಭೇಟಿ ನೀಡಿ...

ಸುಬ್ರಹ್ಮಣ್ಯ ದೇವಾಲಕ್ಕೆ ಭೇಟಿ ನೀಡಿ...

ಇದಲ್ಲದೇ ಭಾರತದಲ್ಲಿರುವ ಕೆಲವು ಸುಬ್ರಹ್ಮಣ್ಯ ದೇವಾಲಯವಾದ ಕರ್ನಾಟಕದಲ್ಲಿರುವ ಕುಕ್ಕೇ ಸುಬ್ರಹ್ಮಣ್ಯ, ಆಂಧ್ರಪ್ರದೇಶದ ಮೋಪಿದೇವಿ ಮತ್ತು ಶ್ರೀಶೈಲಂ ಇಲ್ಲಿ ಸರ್ಪ ದೋಷಕ್ಕೆ ಸಂಬಂಧಿಸಿದಂತೆ ವಿಶೇಷ ಬಗೆಯ ನಿವಾರಣಾ ಆಚರಣೆಯನ್ನು ಮಾಡಿಕೊಡುತ್ತಾರೆ.

ಸೂಕ್ತ ಪರಿಹಾರಗಳು

ಸೂಕ್ತ ಪರಿಹಾರಗಳು

ಸರ್ಪ ದೋಷ ನಿವಾರಣೆಗೆ ಸೂಕ್ತ ಪರಿಹಾರ ಕ್ರಮವೆಂದರೆ ಸರ್ಪಶಾಂತಿಯನ್ನು ಮಾಡಿಸುವುದು. ಕರ್ನಾಟಕದಲ್ಲಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸರ್ಪದೋಷಕ್ಕೆ ಸಂಬಂಧಿಸಿದ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗ ದೇವರ ಪ್ರತಿಷ್ಠಾಪನಾ ಕೆಲಸ ಸೇರಿದಂತೆ ಎಲ್ಲಾ ಬಗೆಯ ಪರಿಹಾರೋಪಾಯಗಳನ್ನು ಮಾಡಿಕೊಡುತ್ತಾರೆ. ನಾಗದೇವರ ಪ್ರತಿಷ್ಠಾನವನ್ನು ಪವಿತ್ರ ನಾಗ/ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಿರ್ವಹಿಸಬಹುದು. ಅದಕ್ಕಾಗಿ ಅಲ್ಲಿರುವ ಅರ್ಚಕರು ಹೇಳುವ

ಮಾರ್ಗವನ್ನು ಅನುಸರಿಸಬೇಕಷ್ಟೆ. ಕರ್ನಾಟಕ ರಾಜ್ಯದಲ್ಲಿರುವ ಘಾಟಿ ಸುಬ್ರಹ್ಮಣ್ಯದಲ್ಲೂ ಸರ್ಪದೋಷಕ್ಕೆ ಸಂಬಂಧಿಸಿದ ಪರಿಹಾರ ಕಾರ್ಯಗಳನ್ನು ಮಾಡಿಸಿಕೊಡುತ್ತಾರೆ. ಅಲ್ಲಿ ಸುಬ್ರಹ್ಮಣ್ಯ ದೇವರಿಗೆ ಪೂಜೆ ಹಾಗೂ ವಿಶೇಷ ಹರಕೆಯನ್ನು ನಡೆಸಿಕೊಡಬಹುದು.

ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿ

ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿ

ಸುಬ್ರಹ್ಮಣ್ಯ(ಕಾರ್ತಿಕೇಯ ಅಥವಾ ಮುರುಗನ್ ಎಂದು ಕರೆಯಲಾಗುತ್ತದೆ) ದೇವರನ್ನು ಪೂಜಿಸಬೇಕು. ಸುಬ್ರಹ್ಮಣ್ಯ ದೇವರನ್ನು ಸರ್ಪದೋಷ ನಿವಾರಕನೆಂದು ನಂಬಲಾಗಿದೆ. ನಾಗದೇವರ ಅಧಿಪತಿಯಾಗಿರುವ ಸುಬ್ರಹ್ಮಣ್ಯನನ್ನು ಭಕ್ತಿಯಿಂದ ಪೂಜಿಸಿಕೊಂಡು ಹೋದರೆ ಸರ್ಪದೋಷ ನಿವಾರಣೆಯಾಗುವುದು ಖಚಿತ.

ಹಾವುಗಳಿಗೆ ಹಾಲುಣಿಸಬಹುದು...

ಹಾವುಗಳಿಗೆ ಹಾಲುಣಿಸಬಹುದು...

ಇಲ್ಲವೆಂದಾದರೆ ದೇವಾಲಯಗಳಿಗೆ ಹೋಗಿ ಶಿವಲಿಂಗವನ್ನು ಸುತ್ತಿಕೊಂಡಿರುವ ಹಾವುಗಳಿಗೆ ಹಾಲಿನ ಅಭಿಷೇಕ ಮಾಡಬಹುದು. ಶಿವ ಹಾಗೂ ಶನಿ ದೇವರನ್ನು ಪೂಜಿಸಿದರೂ ಸರ್ಪದೋಷ ನಿವಾರಣೆ ಸಾಧ್ಯ. ಇದನ್ನು ಹೊರತುಪಡಿಸಿ ಈ ಮಂತ್ರವನ್ನು ಜಪಿಸಿದರೆ ಸರ್ಪದೋಷ ನಿವಾರಣೆಯಾಗುವುದು.

ಸರ್ಪದೋಷ ನಿವಾರಣೆಯ ಮಂತ್ರ

ಸರ್ಪದೋಷ ನಿವಾರಣೆಯ ಮಂತ್ರ

ಪ್ರತೀದಿನ ನಿಮ್ಮ ಇಷ್ಟದೇವರ ಮುಂದೆ ಕುಳಿತು 27ರಿಂದ 54 ಸಲ ಈ ಮಂತ್ರಗಳನ್ನು ಜಪಿಸಿ. ಕಾತ್ಯಾಯನಿ ಮಹಾಮಾಯಾಯೆ ಮಹಾ ಯೋಗಿನ್ಯದೀಶ್ವರೆ ನಂದಗೋಪಾಸ್ತು ದೇವಿ ಪತಿಮೇಯ ಕುರು ತೇಯ ನಮಃ

ಶಿವ ಹಾಗೂ ಶನಿ ದೇವರ ಪೂಜೆ

ಶಿವ ಹಾಗೂ ಶನಿ ದೇವರ ಪೂಜೆ

ಶಿವ ಹಾಗೂ ಶನಿ ದೇವರನ್ನು ಪೂಜಿಸುವುದರಿಂದ ಸರ್ಪದೋಷ ನಿವಾರಣೆ ಮಾಡಬಹುದು. ಈ ದೋಷಗಳ ನಿವಾರಣೆ ಮಾಡಲು ಆಧ್ಯಾತ್ಮಿಕ ಪರಿಹಾರದೊಂದಿಗೆಈ ಮಂತ್ರವನ್ನು ಪಠಿಸಿ.

ಕಾತ್ಯಾಯನಿ ಮಹಾಮಾಯೆ ಮಹಾ ಯೋಗಿನ್ಯದೀಶ್ವರೇ ನಂದಗೋಪಸ್ತು ದೇವಿ ಪತಿಮೆಯ ಕುರು ತೆಯ ನಮಃ ಈ ಮಂತ್ರವನ್ನು ನಿಮ್ಮ ಇಷ್ಟದೇವರ ಮುಂದೆ ಪ್ರತೀ ದಿನ 27ರಿಂದ 54 ಸಲ ಪಠಿಸಬೇಕು.

English summary

sarpa dosha causes effects remedies

This Sarpa Dosha effects a person even after his death. Improper or no cremation, death through accident, murder, suicide, poisoning, body tearing into pieces in a bomb blast, cremating without complete body parts (main parts not found), cremations done very late by strangers but not blood relatives etc.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more