ಯಾರೇ ಕೂಗಾಡಲಿ, ಆದರೆ ನಾವು ಮಾತ್ರ ಇರುವುದೇ ಹೀಗೆ!

By: Arshad
Subscribe to Boldsky

"ಕಾನೂನಿನ ಎಳೆಗಳು ಜೇಡರ ಬಲೆಯಂತೆ, ಇಲ್ಲಿ ಚಿಕ್ಕಪುಟ್ಟ ಕೀಟಗಳು ಸಿಕ್ಕಿಕೊಳ್ಳುತ್ತವೆ, ದೊಡ್ಡ ಕೀಟಗಳು ಬಲೆಯನ್ನೇ ಹರಿದು ಹೋಗುತ್ತವೆ" ಎಂಬುದೊಂದು ನಾಣ್ಣುಡಿ. ಭಾರತದಲ್ಲಿಯೂ ಅನ್ವಯವಾದರೂ ಇಲ್ಲಿ ಕೆಲವು ಚಿಕ್ಕ ಪುಟ್ಟ ಕೀಟಗಳೂ ಜೇಡರ ಬಲೆಯನ್ನು ಹರಿದು ಪಾರಾಗುತ್ತವೆ. ಕಾನೂನುಗಳು ಭಾರತದಲ್ಲಿಯೂ ಬಿಗಿಯಾಗಿಯೇ ಇವೆ. ಆದರೆ ಇದನ್ನು ಅನುಷ್ಠಾನಕ್ಕೆ ತರುವವರು ಯಾರು? ಸದ್ಯ ಇಂತಹ ಅಸಹ್ಯ ಕಾನೂನುಗಳು ನಮ್ಮ ದೇಶದಲ್ಲಿಲ್ಲ ಬಚಾವ್!

ಜನರು ಸ್ವಾಭಾವಿಕವಾಗಿ ತಮ್ಮನ್ನಾರಾದರೂ ಗಮನಿಸುತ್ತಿದ್ದಾರೋ ಎಂದು ನೋಡಿ ಯಾರೂ ಇಲ್ಲವೆಂದಾದರೆ ತಕ್ಷಣ ತಮಗೆ ಅನುಕೂಲವಾಗುವಂತೆ ಕಾನೂನನ್ನು ಮುರಿದು ತಮ್ಮ ಕೆಲಸ ಸಾಧಿಸುತ್ತಾರೆ. ಅಪ್ಪಟ ಉದಾಹರಣೆ ಎಂದರೆ ಪಾದಾಚಾರಿಗಳು ದಾಟಬಾರದ ಜಾಗವನ್ನು ರಾಜಾರೋಷವಾಗಿ ದಾಟುವುದು. ಯಾರು ಏನೇ ಹೇಳಲಿ, ನಾವು ಇರೋದೇ ಹೀಗೆ..!

ಇದರಲ್ಲಿ ಅಪಾಯವೂ ಇದೆಯಾದರೂ ಈ ಅಪಾಯವನ್ನು ಎದುರಿಸಿ ತಮ್ಮ ಕೆಲಸ ಪೂರೈಸಿಕೊಂಡು ಸಾರ್ಥಕತೆ ಪಡೆಯುವ ಜನರು ಇಡಿಯ ಭಾರತದಲ್ಲಿದ್ದಾರೆ. ವಾಸ್ತವವಾಗಿ ಕಾನೂನು ಮಾಡಿರುವುದೇ ನಮ್ಮ ಸುರಕ್ಷತೆಗೆ. ಆದರೆ ನೋಡುವವರು ಇಲ್ಲವೆಂದಾಕ್ಷಣ ಕೆಲವರು ಕಾನೂನನ್ನು ಮುರಿಯುತ್ತಾಗ ಅಲ್ಲಿ ಉಪಸ್ಥಿತರಿದ್ದವರು ತಮ್ಮ ಕ್ಯಾಮೆರಾಗಳಲ್ಲಿ ತೆಗೆದ ಚಿತ್ರಗಳನ್ನು ಸಂಗ್ರಹಿಸಿ ನೀಡಲಾಗಿದ್ದು ಇದು ಭಾರತದ ಜನಸಾಮಾನ್ಯರ ಅಪಾಯಕಾರಿ ಕಾನೂನು ಮುರಿಯುವ ಅಭ್ಯಾಸದ ಬಗ್ಗೆ ಮೂಗು ಮುರಿಯುವಂತಾಗುತ್ತದೆ. ಈ ಚಿತ್ರಗಳು ತಮಾಷೆಯಾಗಿ ಕಂಡುಬಂದರೂ ಆ ಕ್ಷಣ ಕ್ವಚಿತ್ತಾಗಿ ತೆಗೆದ ಕಾರಣ ಇವು ಲಭ್ಯವಾಗಿದ್ದು ವಾಸ್ತವದಲ್ಲಿ ಕಾನೂನು ಮುರಿಯುವ ಪ್ರಕರಣಗಳು ಕೋಟ್ಯಂತರವಿರಬಹುದು.... 

ಬೈಕಿನ ಮೇಲೇ ಸಂತೆ

ಬೈಕಿನ ಮೇಲೇ ಸಂತೆ

ಏನು ಮಾಡುವುದು ಸಂತೆಗೆ ತರಕಾರಿ ಹಾಕಲು ರಿಕ್ಷಾದಲ್ಲಿ ಹೋದರೆ ಐನೂರು ರೂಪಾಯಿ ಕೊಡಬೇಕು. ಐನೂರು ರೂಪಾಯಿ ಉಳಿಸಬೇಕೆಂದರೆ ಕೊಂಚ ರಿಸ್ಕ್ ತೆಗೆದುಕೊಳ್ಳಬೇಕಲ್ಲಾ. ಹಾಗಾಗಿ ಪೋಲೀಸ್ ಇಲ್ಲದ ಹೊತ್ತಿನಲ್ಲಿ ಬೈಕಿನಲ್ಲಿಯೇ ಕೊಂಡು ಹೋದರಾಯಿತು, ಹಿಂದೆ ಕುಳಿತವಳು ಕೊಂಚ ಗಟ್ಟಿ ಹಿಡಿದುಕೊಂಡರೆ ಸಾಕು.

ಅಯ್ಯೋ, ಸಾಕಾಪ್ಪಾ ಎನ್ನುತ್ತಿದೆಯೇ ರೈಲು?

ಅಯ್ಯೋ, ಸಾಕಾಪ್ಪಾ ಎನ್ನುತ್ತಿದೆಯೇ ರೈಲು?

ಒಂದು ಬಸ್ಸಿನಲ್ಲಿ ಎಷ್ಟು ಜನರು ಹತ್ತಬಹುದು? ಬಸ್ಸಿನ ತೂಕ ತಾಳಿಕೊಳ್ಳುವ ಕ್ಷಮತೆ ಹತ್ತು ಟನ್. ಓರ್ವ ವ್ಯಕ್ತಿಯ ಸರಾಸರಿ ತೂಕ ಅರವತ್ತು ಕೇಜಿ ಇದೆ ಎಂದರೂ ನೂರು ಜನರು ಹತ್ತಿದರೂ ಆರು ಟನ್ ಆಗಬಹುದು. ಹಾಗಾದರೆ ರೈಲು? ಇದಕ್ಕೆ ಇಷ್ಟೇ ತೂಕ ಹಾಕಬೇಕೆಂದು ಯಾವುದೇ ಮಾನದಂಡ ಇದ್ದಂತಿಲ್ಲ, ಇದ್ದರೂ ಇದನ್ನು ಹತ್ತುವವರಿಗೆ ಇದರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಒಟ್ಟಾರೆ ರೈಲು ಎಷ್ಟೇ ಭರ್ತಿಯಾಗಿರಲಿ, ನಾನೊಬ್ಬ, ನಾನೊಬ್ಬ ಎಂದು ಎಲ್ಲರೂ ರೈಲು ಹತ್ತುವವರೇ. ಪಾಪ ರೈಲಿನ ಗೋಳನ್ನು ಕೇಳುವವರೇ ಇಲ್ಲ. ಹಾಗಿದ್ದಾಗ ಇಷ್ಟು ಜನರಿಗೆ ಟಿಕೆಟ್ ಏಕೆ ಕೊಟ್ಟರು?

ಉಗಿಯಬೇಡಿ ಎಂದಿರುವಲ್ಲೇ ಉಗಿಯುವುದು ನಮ್ಮ ಜಾಯಮಾನ

ಉಗಿಯಬೇಡಿ ಎಂದಿರುವಲ್ಲೇ ಉಗಿಯುವುದು ನಮ್ಮ ಜಾಯಮಾನ

ಉತ್ತರ ಭಾರತದ ರೈಲ್ವೇಸ್ಟೇಷನ್‌ಗಳಲ್ಲಿ ಯಾವುದೇ ಮೂಲೆ ನೋಡಬೇಡಿ ಎಂದು ಅಲ್ಲಿಂದ ಬಂದವರು ತಿಳಿಸುತ್ತಾರೆ. ಏಕೆಂದರೆ ಭಾರತೀಯರ ನೆಚ್ಚಿನ ಪಾನ್ ಜಗಿದ ಬಳಿಕ ಇದನ್ನು ಉಗಿಯಲು ಮೂಲೆಗಳೇ ಶ್ರೇಷ್ಠ ಸ್ಥಳ. ಇಲ್ಲಿ ಉಗಿಯಬೇಡಿ ಎಂದು ಬರೆದಿದ್ದರೂ ಅಲ್ಲಿಯೇ ಉಗಿಯುವುದು ಭಾರತೀಯರ ಭಂಡಧೈರ್ಯದ ಸ್ಪಷ್ಟ ನಿದರ್ಶನವಾಗಿದೆ.

ಸಿಲಿಂಡರ್ ಮ್ಯಾನ್!

ಸಿಲಿಂಡರ್ ಮ್ಯಾನ್!

ಗ್ಯಾಸ್ ಸಿಲಿಂಡರುಗಳನ್ನು ನೇರವಾಗಿಯೇ ಇರಿಸಬೇಕು, ನಿಗದಿತ ವಾಹನಗಳಲ್ಲೇ ಸಾಗಿಸಬೇಕು ಎಂದೆಲ್ಲಾ ಭಾರತದಲ್ಲಿ ಕಾನೂನಿದೆ. ಆದರೆ ಇದಕ್ಕೆಲ್ಲಾ ತುಂಬಾ ಖರ್ಚಾಗುತ್ತದಲ್ಲಾ? ಹಾಗಿದ್ದಾಗ ಹಣ ಉಳಿಸಬೇಕೆಂದರೆ ಅಡ್ಡಾದಿಡ್ಡಿಯಾಗಿ ಸಿಲಿಂಡರುಗಳನ್ನು ಹಳೆಯ ಬಜಾಜ್ ಸ್ಕೂಟರಿನ ಮೇಲೆ ರಾಜಾ ರೋಷವಾಗಿ ಕೊಂಡೊಯ್ಯುತ್ತಿರುವುದನ್ನು ಕಂಡಾಗ ಈತನನ್ನು ಸಿಲಿಂಡರ್ ಮ್ಯಾನ್ ಎಂದು ಕರೆಯದೇ ಇರಲಾಗುವುದಿಲ್ಲ. ಅಂದ ಹಾಗೆ ಸಿಲಿಂಡರ್ ಬ್ಲಾಸ್ಟ್ ಆದರೆ ಈತ ತೊಟ್ಟ ಹೆಲ್ಮೆಟ್ ಜೀವ ರಕ್ಷಿಸುತ್ತದೆಯೇ?

ಫುಟ್ ಪಾತ್‌ಗಳಲ್ಲಿ ಬೈಕುಗಳಿಗೇನು ಕೆಲಸ?

ಫುಟ್ ಪಾತ್‌ಗಳಲ್ಲಿ ಬೈಕುಗಳಿಗೇನು ಕೆಲಸ?

ಫುಟ್ ಪಾತ್‌ ಅಥವಾ ಪಾದಾಚಾರಿಗಳ ರಸ್ತೆ ಕೇವಲ ಪಾದಾಚಾರಿಗಳಿಗೆ ಮಾತ್ರ ಎಂದು ಯಾರು ಹೇಳಿದರು? ಯಾರೂ ನೋಡುತ್ತಿಲ್ಲವೆಂದರೆ ನಮ್ಮ ಬೈಕುಸವಾರರು ಕೆಲವೊಮ್ಮೆ ದೂಡಿಕೊಂಡು, ಕೆಲವೊಮ್ಮೆ ಸವಾರಿ ಮಾಡಿಕೊಂಡು ರಾಜಾರೋಷವಾಗಿ ಕಾನೂನು ಮುರಿಯುತ್ತಾರೆ.

ಟ್ರಾಫಿಕ್ ಜಾಂ? ಇದೆಲ್ಲಾ ನಿಮಗೆ, ನಮಗಲ್ಲ!

ಟ್ರಾಫಿಕ್ ಜಾಂ? ಇದೆಲ್ಲಾ ನಿಮಗೆ, ನಮಗಲ್ಲ!

ರಸ್ತೆಯ ಇನ್ನೊಂದು ಬದಿ ಬಳಸಿ ಬರಬೇಕೆಂದರೆ ಮುಂದಿನ ಸಿಗ್ನಲ್ ವರೆಗೆ ಹೋಗಿ ಹಸಿರು ದೀಪವಾದ ಬಳಿಕ ಬಳಸಿ ಬರಬೇಕು. ಒಂದು ವೇಳೆ ಅಲ್ಲಿ ಟ್ರಾಫಿಕ್ ಜಾಂ ಆಗಿದ್ದರೆ? ರಸ್ತೆ ಪಕ್ಕಕ್ಕೆ ಮಾತ್ರ ಬರಬೇಕಲ್ಲವೇ? ಇದನ್ನು ತಡೆಯಲೇನಿದೆ? ಎರಡಡಿ ಎತ್ತರದ ಮೋಟು ಗೋಡೆಯಲ್ಲವೇ? ರಸ್ತೆ ದಾಟಬಾರದೆಂದು ಕಾನೂನಿದೆ. ಈ ಗೋಡೆ ದಾಟಬಾರದೆಂದು ಕಾನೂನು ಎಲ್ಲಿದೆ? ಹೀಗೆ ಯೋಚಿಸಿದ ವ್ಯಕ್ತಿ ತನ್ನ ಬೈಕನ್ನು ಹೇಗೆ ಗೋಡೆ ದಾಟಿಸಿ ಕಾನೂನು ಮುರಿಯುತ್ತಿದ್ದಾನೆ ನೋಡಿ.

ಪುರುಷರು ಎಂದಿಗೂ ಪುರುಷರೇ?

ಪುರುಷರು ಎಂದಿಗೂ ಪುರುಷರೇ?

ಮಹಿಳೆಯರಿಗೆ ಮೀಸಲಾದ ಆಸನಗಳು ಮಹಿಳೆಯರಿಗೆ ಮಾತ್ರ ಎಂದು ಕಾನೂನಿದೆ. ಆದರೆ ಮಹಿಳೆಯರು ಇಲ್ಲದಿದ್ದಾಗ ಕುಳಿತುಕೊಳ್ಳಬಾರದು ಎಂದು ಎಲ್ಲಿ ಬರೆದಿದೆ? ಈ ವಾದವನ್ನು ಮುಂದಿಟ್ಟು ಪುರುಷರು ಮಹಿಳೆಯರಿಗೆ ಮೀಸಲಾದ ಬಸ್ಸುಗಳಲ್ಲಿ, ಮಹಿಳೆಯರಿಗೆ ಮೀಸಲಾದ ಸೀಟುಗಳಲ್ಲಿಯೇ ರಾಜಾರೋಶವಾಗಿ ಕುಳಿತು ಪಯಣಿಸುತ್ತಿದ್ದಾರೆ. ಎಷ್ಟೆಂದರೂ ಪುರುಷರು ಪುರುಷರೇ!

 
English summary

Pics Of Indians Which Prove We Are Born To Break Rules!

These are some of the pictures which prove that Indians are born to break rules and that's how we live, and some of them can be really proud of it! The best part about the whole story is that you can get away even after breaking the rule! Check out the ways as to how people have broken the rules in some of the most hilarious manner through these pictures!
Please Wait while comments are loading...
Subscribe Newsletter