ಹಸ್ತರೇಖೆಗಳು: ಅಡ್ಡ-ದಿಡ್ಡಿಯ ರೇಖೆಯಲ್ಲಿದೆ ಅಂಕು-ಡೊಂಕಿನ ಭವಿಷ್ಯ!

By: manu
Subscribe to Boldsky

ಹಸ್ತಸಾಮುದ್ರಿಕೆ palmistry ಅಥವಾ chiromancy ಎಂಬ ವಿದ್ಯೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಹಸ್ತದ ರೇಖೆಗಳನ್ನು ಗಮನಿಸುವ ಮೂಲಕ ವ್ಯಕ್ತಿಯ ಭವಿಷ್ಯವನ್ನು ಹೇಳಬಹುದಾಗಿದೆ. ಭಾರತೀಯ ಗ್ರಂಥಗಳ ಪ್ರಕಾರ ವ್ಯಕ್ತಿಯ ಅದೃಷ್ಟ ಮತ್ತು ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಮಾಹಿತಿಯನ್ನು ಈ ರೇಖೆಗಳು ಒದಗಿಸುತ್ತವೆ. ಮಣಿಕಟ್ಟಿನ ರೇಖೆಗಳು-ವ್ಯಕ್ತಿಯ ಆಯಸ್ಸು, ಆರೋಗ್ಯದ ರಹಸ್ಯ ಬಿಚ್ಚಿಡುತ್ತದೆ!

ಹಸ್ತದ ಐದು ಸ್ಪಷ್ಟವಾದ ರೇಖೆಗಳಲ್ಲಿರುವ ವಿಶಿಷ್ಟ ಲಕ್ಷಣಗಳನ್ನು ಗಮನಿಸುವ ಮೂಲಕ ವ್ಯಕ್ತಿಯ ಅದೃಷ್ಟವನ್ನು ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಘಟನೆಗಳ ಸಾಧ್ಯತೆಯನ್ನು ಅಂದಾಜಿಸಬಹುದು. ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

ಈ ರೇಖೆಗಳ ಗಾತ್ರ, ಆಳ ಅಥವಾ ಸ್ಪಷ್ಟತೆ ಹಾಗೂ ವಕ್ರತೆಗಳನ್ನು ಗಮನಿಸಿ ವಿವಿಧ ಅಂಶಗಳನ್ನು ಕಂಡುಕೊಳ್ಳಲಾಗುತ್ತದೆ. ಹಸ್ತಸಾಮುದ್ರಿಕರು ಈ ಸೂಕ್ಷ್ಮವಾದ ವಿವರ ಮತ್ತು ವ್ಯತ್ಯಾಸಗಳನ್ನು ಗಮನಿಸಿ ಭವಿಷ್ಯ ಹೇಳಬಲ್ಲವರಾಗಿರುತ್ತಾರೆ. ನಿಮ್ಮ ಹಸ್ತದ ರೇಖೆಗಳು ಏನುನ್ನು ಹೇಳುತ್ತಿವೆ ಎಂಬ ಕುತೂಹಲವಿದ್ದರೆ ಇಂದಿನ ಲೇಖನ ಹೆಚ್ಚಿನ ಮಾಹಿತಿಯನ್ನು ಒದಗಿಸಲಿದೆ.... 

ದೀರ್ಘಾಯಸ್ಸು ಮತ್ತು ಉತ್ತಮ ಆರೋಗ್ಯ

ದೀರ್ಘಾಯಸ್ಸು ಮತ್ತು ಉತ್ತಮ ಆರೋಗ್ಯ

ಹಸ್ತಸಾಮುದ್ರಿಕೆಯ ಪ್ರಕಾರ ಜೀವನ ರೇಖೆ ಉದ್ದ, ಆಳ, ತೆಳು ಮತ್ತು ಸ್ಪಷ್ಟವಾಗಿದ್ದಷ್ಟೂ ವ್ಯಕ್ತಿಗೆ ಒಳ್ಳೆಯದು. ಒಂದು ವೇಳೆ ಈ ರೇಖೆ ನಡುವಿನಲ್ಲಿ ತುಂಡುತುಂಡಾಗಿದ್ದಂತಿದ್ದರೆ ಇದು ಅಪಶಕುನದ ಚಿಹ್ನೆಯಾಗಿದೆ.

ಜೀವನದ ದೂರದೃಷ್ಟಿ

ಜೀವನದ ದೂರದೃಷ್ಟಿ

ಒಂದು ವೇಳೆ ಮುಖ್ಯ ರೇಖೆ ಮತ್ತು ಜೀವನ ರೇಖೆಗಳೆರಡೂ ಹೆಚ್ಚೂ ಕಡಿಮೆ ಬೆರೆತಂತೆ ಕಂಡರೆ ಅಥವಾ ಇವುಗಳ ನಡುವಣ ಅಂತರ ತುಂಬಾ ಕಡಿಮೆ ಇದ್ದರೆ ಈ ವ್ಯಕ್ತಿಗಳು ತೆರೆದ ಮನಸ್ಸಿನವರಾಗಿದ್ದು ಸ್ವತಂತ್ರವಾದ ಯೋಚನೆಗಳನ್ನು ಹೊಂದಿರುತ್ತಾರೆ.

ತೊಂದರೆಗೆ ಒಳಗಾಗುವ ಸಾಧ್ಯತೆ

ತೊಂದರೆಗೆ ಒಳಗಾಗುವ ಸಾಧ್ಯತೆ

ವೇದಗಳ ಪ್ರಕಾರ ಒಂದು ವೇಳೆ ಜೀವನ ಮತ್ತು ಮುಖ್ಯ ರೇಖೆಯ ನಡುವೆ ಅತಿ ಹೆಚ್ಚು ಅಂತರವಿದ್ದರೆ ಈ ವ್ಯಕ್ತಿಗಳು ಕಾರ್ಯನಿರ್ವಹಿಸುವ ಮುನ್ನ ಯೋಚಿಸದ ಪ್ರವೃತ್ತಿಯವರಾಗಿದ್ದಾರೆ.

ತೊಂದರೆಗೆ ಒಳಗಾಗುವ ಸಾಧ್ಯತೆ

ತೊಂದರೆಗೆ ಒಳಗಾಗುವ ಸಾಧ್ಯತೆ

ಇವರು ಅಜಾಗರೂಕರೂ, ತಮಗೇ ಎಲ್ಲವೂ ಗೊತ್ತಿದೆ ಎಂದು ತಿಳಿದುಕೊಂಡಿರುವವರೂ ಆಗಿದ್ದಾರೆ. ಸಾಮಾನ್ಯವಾಗಿ ಈ ವ್ಯಕ್ತಿಗಳು ಸುಲಭವಾಗಿ ದೊಡ್ಡ ತೊಂದರೆಗೆ ಸಿಲುಕಿಕೊಳ್ಳುತ್ತಾರೆ.

ದೀರ್ಘಕಾಲದ ಅನಾರೋಗ್ಯ ಮತ್ತು ಅಪಘಾತ

ದೀರ್ಘಕಾಲದ ಅನಾರೋಗ್ಯ ಮತ್ತು ಅಪಘಾತ

ಒಂದು ವೇಳೆ ಎರಡೂ ಕೈಗಳ ಜೀವನರೇಖೆಗಳು ಮಧ್ಯದಲ್ಲಿ ನಡುವೆ ತುಂಡಾಗಿದ್ದಂತಿದ್ದರೆ ಈ ವ್ಯಕ್ತಿಗಳು ಅಕಾಲಿಕ ಮರಣ ಅಥವಾ ಭೀಕರ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.

ದೀರ್ಘಕಾಲದ ಅನಾರೋಗ್ಯ ಮತ್ತು ಅಪಘಾತ

ದೀರ್ಘಕಾಲದ ಅನಾರೋಗ್ಯ ಮತ್ತು ಅಪಘಾತ

ಒಂದು ವೇಳೆ ಒಂದೇ ಹಸ್ತದ ಜೀವನರೇಖೆ ಮಾತ್ರ ತುಂಡಾಗಿದ್ದು ಇನ್ನೊಂದು ಹಸ್ತದ ರೇಖೆ ಸರಳವಾಗಿದ್ದರೆ ಈ ವ್ಯಕ್ತಿಗೆ ಜೀವನದ ಯಾವುದೋ ಹಂತದಲ್ಲಿ ಭೀಕರ ಕಾಯಿಲೆಯನ್ನು ಅನುಭವಿಸಬೇಕಾಗಿ ಬರಬಹುದು.ಅಂಗೈಯಲ್ಲಿ 'M' ಅಕ್ಷರದ ಗುರುತು ಇದ್ದವರು ಅದೃಷ್ಟವಂತರು!

ದುರ್ಬಲವಾದ ದೇಹಸ್ಥಿತಿ

ದುರ್ಬಲವಾದ ದೇಹಸ್ಥಿತಿ

ವೇದಗಳ ಪ್ರಕಾರ ಒಂದು ವೇಳೆ ಜೀವನರೇಖೆ ಹಲವು ಕಡೆಗಳಲ್ಲಿ ತುಂಡುತುಂಡಾಗಿದ್ದರೆ ಅಥವಾ ಸರದಂತೆ ಕಂಡುಬಂದರೆ ಈ ವ್ಯಕ್ತಿಗಳು ದುರ್ಬಲ ಆರೋಗ್ಯ ಹೊಂದಿದ್ದು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಅನಾರೋಗ್ಯದಿಂದ ಜೀವಮಾನವಿಡೀ ಬಳಲುತ್ತಿರುತ್ತಾರೆ.

 ವೃತ್ತಿಜೀವನದ ರಹಸ್ಯ

ವೃತ್ತಿಜೀವನದ ರಹಸ್ಯ

ವೇದಗಳ ಪ್ರಕಾರ ಜೀವನರೇಖೆ ಕವಲಾಗಿ ಒಡೆದಿದ್ದು ಗುರುವಿನ ಸ್ಥಾನದಲ್ಲಿ ಪ್ರವೇಶ ಪಡೆದು ಮತ್ತೆ ಮುಂದುವರೆದಿದ್ದರೆ ಈ ವ್ಯಕ್ತಿಗಳು ತಮ್ಮ ವೃತ್ತಿಯಲ್ಲಿ ಯಶಸ್ವಿಯಾಗಿರುತ್ತಾರೆ. ಇವರು ವೃತ್ತಿಜೀವನದಲ್ಲಿ ಉತ್ತಮ ಸಾಧನೆಯನ್ನು ಸಾಧಿಸುವವರಾಗಿರುತ್ತಾರೆ.

ತೊಂದರೆಗಳ ನಿಜವಾದ ಮೂಲ

ತೊಂದರೆಗಳ ನಿಜವಾದ ಮೂಲ

ವೇದಗಳ ಪ್ರಕಾರ ಜೀವನ ರೇಖೆ, ಹೃದಯ ರೇಖೆ ಮತ್ತು ಮುಖ್ಯ ರೇಖೆಗಳು ಪ್ರಾರಂಭದಲ್ಲಿ ಜೊತೆಗೂಡಿದ್ದರೆ ಈ ವ್ಯಕ್ತಿಗಳು ದುರಾದೃಷ್ಟವಂತರು, ದುರ್ಬಲರು ಮತ್ತು ಜೀವನದಲ್ಲಿ ಸದಾ ತೊಂದರೆಗಳಿಂದಲೇ ಸುತ್ತುವರೆದಿರುವವರೂ ಆಗಿರುತ್ತಾರೆ.

ಅದೃಷ್ಟವಂತರೋ ದುರಾದೃಷ್ಟವಂತರೋ?

ಅದೃಷ್ಟವಂತರೋ ದುರಾದೃಷ್ಟವಂತರೋ?

ವೇದಗಳ ಪ್ರಕಾರ ಜೀವನ ರೇಖೆಯನ್ನು ಚಿಕ್ಕರೇಖೆಗಳು ತುಂಡರಿಸಿದ್ದರೆ ಅಥವಾ ಈ ರೇಖೆ ಕವಲಾಗಿ ಒಡೆದು ಕೆಳಮುಖವಾಗಿ ಮುಂದುವರೆದಿದ್ದರೆ ಈ ವ್ಯಕ್ತಿಗಳ ಜೀವನದಲ್ಲಿ ಬಹಳಷ್ಟು ತೊಂದರೆ ಎದುರಾಗಬಹುದು. ಅದೇ ಈ ರೇಖೆಗಳು ಮೇಲ್ಮುಖವಾಗಿ ತುಂಡಾದಂತೆ ಕಂಡುಬಂದರೆ ಈ ವ್ಯಕ್ತಿ ಅದೃಷ್ಟವಂತನೆಂದು ತಿಳಿಸುತ್ತವೆ.ಹಸ್ತದ ಮೇಲಿನ ರೇಖೆಗಳಲ್ಲಿ 'X' ಗುರುತು! ಏನಿದರ ರಹಸ್ಯ?

 
English summary

Palm Lines Reveal The Deepest Secrets!

According to the Indian scriptures, the lines present on the palm can reveal a lot about the person and their luck. It is said that there are five basic lines that can be found in one's hand and each of these lines has been characterized differently pertaining to one's future.
Subscribe Newsletter