ಕುತೂಹಲದ ರಹಸ್ಯಗಳನ್ನು ಬಿಚ್ಚಿಡುವ 'ಹಸ್ತ ರೇಖೆಗಳು'

By: manu
Subscribe to Boldsky

ಹಸ್ತಸಾಮುದ್ರಿಕೆ ಎಂದರೆ ಹಸ್ತದ ರೇಖೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಜೀವನದಲ್ಲಿ ಹಿಂದೆ ಆಗ ಮತ್ತು ಮುಂದೆ ಜರುಗಲಿರುವ ವಿದ್ಯಮಾನಗಳನ್ನು ತಿಳಿಸುವುದು. ಈ ವಿದ್ಯೆಯನ್ನು ಏಷಿಯಾ ಖಂಡದ ಹಲವಾರು ರಾಷ್ಟ್ರಗಳಲ್ಲಿ ಶತಮಾನಗಳಿಂದ ಅನುಸರಿಸಿಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲ, ಪರ್ಷಿಯಾ, ಪ್ರಾಚೀನ ಇಸ್ರೇಲ್ ಮತ್ತು ಬ್ಯಾಬಿಲೋನಿಯಾದಲ್ಲಿಯೂ ಹಸ್ತಸಾಮುದ್ರಿಕೆ ಬಳಕೆಯಲ್ಲಿತ್ತು. ಮಣಿಕಟ್ಟಿನಲ್ಲಿರುವ ರೇಖೆಗಳು -ಎಷ್ಟಿವೆ? ಏನು ಹೇಳುತ್ತವೆ?

ಹಸ್ತದ ರೇಖೆಗಳು ಹೇಳುವ ಮಾಹಿತಿಗಳನ್ನು ಆಧರಿಸಿ ತಮ್ಮ ಕಾರ್ಯವೈಖರಿಯನ್ನು ತೀರ್ಮಾನಿಸುತ್ತಿದ್ದವರಲ್ಲಿ ಚಕ್ರವರ್ತಿ ಅಲೆಕ್ಸಾಂಡರ್ ದ ಗ್ರೇಟ್ ಮತ್ತು ಅರಿಸ್ಟಾಟಲ್ ಸಹಾ ಸೇರಿದ್ದಾರೆ. ಅರಿಸ್ಟಾಟಲ್‌ರವರು ಹೇಳಿರುವ ಪ್ರಕಾರ ಈ ಗೆರೆಗಳನ್ನು ಯಾವುದೇ ಉದ್ದೇಶವಿಲ್ಲದೇ ಬರೆಯಲಾಗಿಲ್ಲ. ಹಸ್ತದ ಮೇಲಿನ ರೇಖೆಗಳಲ್ಲಿ 'X' ಗುರುತು! ಏನಿದರ ರಹಸ್ಯ?

ಇವು ದೇವರಿಂದ ಬಂದಂತಹದ್ದಾಗಿದ್ದು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ. ಹಸ್ತಸಾಮುದ್ರಿಕೆಯನ್ನು ಕಲಿಯಬಯಸುವವರಿಗೆ ವಿದೇಶಕ್ಕೆ ಹೋಗಬೇಕಾಗಿಯೇನೂ ಇಲ್ಲ. ಬದಲಿಗೆ ಈ ವಿದ್ಯೆಯನ್ನು ಕಲಿಯಲು ಮನಸ್ಸನ್ನು ತೆರೆದು ಕೆಲವು ಮಾಹಿತಿಗಳನ್ನು ಅಭ್ಯಸಿಸಿದರೆ ಸಾಕಾಗುತ್ತದೆ.... 

ಎರಡೂ ಕೈಗಳ ರೇಖೆಗಳು ಭಿನ್ನವಾಗಿದ್ದರೆ

ಎರಡೂ ಕೈಗಳ ರೇಖೆಗಳು ಭಿನ್ನವಾಗಿದ್ದರೆ

ಮೊದಲಿಗೆ ಎರಡೂ ಹಸ್ತಗಳನ್ನು ಅಗಲಿಸಿ ಬೆರಳುಗಳನ್ನು ಸಾಧ್ಯವಾದಷ್ಟೂ ಸೆಳೆದು ರೇಖೆಗಳು ಸ್ಪಷ್ಟವಾಗಿ ಕಾಣುವಂತೆ ಮಾಡಿಕೊಳ್ಳಬೇಕು. ಒಂದು ವೇಳೆ ಎರಡೂ ಕೈಗಳ ರೇಖೆಗಳು ಭಿನ್ನವಾಗಿದ್ದರೆ ನಿಮ್ಮ ಇಂದಿನ ಸ್ಥಿತಿಗೆ ಬರಲು ನೀವು ಬಹಳಷ್ಟು ಕಷ್ಟಪಟ್ಟಿರಬೇಕು ಎಂಬುವುದು ಸ್ಪಷ್ಟವಾಗುತ್ತದೆ. ಅಚ್ಚರಿ, ಕುತೂಹಲ ಕೆರಳಿಸುವ ಎಡಗೈ ಹಸ್ತದಲ್ಲಿ ಮೂಡುವ ರೇಖೆ!

ಎರಡೂ ಕೈಗಳ ರೇಖೆಗಳು ಭಿನ್ನವಾಗಿದ್ದರೆ

ಎರಡೂ ಕೈಗಳ ರೇಖೆಗಳು ಭಿನ್ನವಾಗಿದ್ದರೆ

ಹಸ್ತಸಾಮುದ್ರಿಕೆಯಲ್ಲಿ ಪ್ರಮುಖ ಹಸ್ತ ಅಥವಾ ನೀವು ಬರವಣಿಗೆ ಮತ್ತು ಇತರ ಪ್ರಮುಖ ಕೆಲಸಗಳಿಗೆ ಬಳಸುವ ಹಸ್ತಕ್ಕೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಹೃದಯದ ರೇಖೆ

ಹೃದಯದ ರೇಖೆ

ಈ ರೇಖೆ ಹೃದಯ ಅಥವಾ ಆತ್ಮೀಯ ಸಂಗತಿಗಳನ್ನು ಪ್ರತಿನಿಧಿಸುತ್ತದೆ. ಈ ರೇಖೆ ಆಳವಾಗಿದ್ದಷ್ಟೂ ಹೃದಯದಿಂದ ಯೋಚಿಸುವ ಗುಣ ನಿಮ್ಮಲ್ಲಿ ಹೆಚ್ಚಾಗಿದ್ದು ನೀವು ಆತ್ಮೀಯತೆಗೆ ಹೆಚ್ಚಿನ ಮಹತ್ವ ನೀಡುವ ವ್ಯಕ್ತಿ ಎಂದು ಸೂಚಿಸುತ್ತದೆ. ಒಂದು ವೇಳೆ ಈ ರೇಖೆ ತುದಿಯಲ್ಲಿ ಕವಲೊಡೆದಿದ್ದರೆ ಈ ವ್ಯಕ್ತಿ ಒಂದೇ ನಿಟ್ಟಿನಲ್ಲಿ ಯೋಚಿಸದೇ ಎರಡು ಬಗೆಯಲ್ಲಿ ಯೋಚಿಸುತ್ತಿದ್ದಾರೆಂದು ಅರ್ಥ.

ಶಿರದ ರೇಖೆ

ಶಿರದ ರೇಖೆ

ಇವು ಒಂದಕ್ಕಿಂತ ಹೆಚ್ಚಿದ್ದು ಹೆಚ್ಚಿನ ವ್ಯಕ್ತಿಗಳು ಎರಡು ರೇಖೆಗಳನ್ನು ಹೊಂದಿರುತ್ತಾರೆ. ಇವು ಶಿರದ ಅಥವಾ ಮೆದುಳಿನಿಂದ ಯೋಚಿಸುವ ವಿಷಯಗಳಿಗೆ ಸಂಬಂಧಪಟ್ಟಿವೆ. ಈ ರೇಖೆ ಉದ್ದವಾಗಿದ್ದಷ್ಟೂ ವ್ಯಕ್ತಿ ಹೆಚ್ಚಿನ ವಿಷಯಗಳಲ್ಲಿ ಆಸಕ್ತಿ ಹೊಂದಿರುವುದನ್ನು ಸೂಚಿಸುತ್ತದೆ.

ಶಿರದ ರೇಖೆ

ಶಿರದ ರೇಖೆ

ಇವು ಒಂದಕ್ಕಿಂತ ಹೆಚ್ಚಿದ್ದು ಹೆಚ್ಚಿನ ವ್ಯಕ್ತಿಗಳು ಎರಡು ರೇಖೆಗಳನ್ನು ಹೊಂದಿರುತ್ತಾರೆ. ಇವು ಶಿರದ ಅಥವಾ ಮೆದುಳಿನಿಂದ ಯೋಚಿಸುವ ವಿಷಯಗಳಿಗೆ ಸಂಬಂಧಪಟ್ಟಿವೆ. ಈ ರೇಖೆ ಉದ್ದವಾಗಿದ್ದಷ್ಟೂ ವ್ಯಕ್ತಿ ಹೆಚ್ಚಿನ ವಿಷಯಗಳಲ್ಲಿ ಆಸಕ್ತಿ ಹೊಂದಿರುವುದನ್ನು ಸೂಚಿಸುತ್ತದೆ.

ಜೀವನದ ರೇಖೆ

ಜೀವನದ ರೇಖೆ

ಈ ರೇಖೆ ಉದ್ದವಾಗಿದ್ದಷ್ಟೂ ಆಯಸ್ಸೂ ಹೆಚ್ಚು ಎಂದು ತಿಳಿದುಕೊಳ್ಳಬಹುದು. ಒಂದು ವೇಳೆ ಈ ರೇಖೆ ನಡುವೆ ತುಂಡಾಗಿದ್ದಂತೆ ಕಂಡುಬಂದರೆ ಜೀವನದಲ್ಲಿ ಎಲ್ಲೋ ಒಂದು ಕಡೆಯಲ್ಲಿ ಅಪಘಾತ ಅಥವಾ ಮಾರಕ ಕಾಯಿಲೆ ಎದುರಾಗಬಹುದು ಎಂದು ಸೂಚಿಸುತ್ತದೆ.

ವಿಧಿಯ ರೇಖೆ

ವಿಧಿಯ ರೇಖೆ

ಈ ರೇಖೆಯನ್ನು ಅದೃಷ್ಟದ ರೇಖೆ ಎಂದೂ ಕರೆಯಲಾಗುತ್ತದೆ. ಇದರ ಮೂಲಕ ವ್ಯಕ್ತಿಯ ನಿಯಂತ್ರಣಕ್ಕೆ ಮೀರಿದ ವಿಷಯಗಳು ಆತನ ವ್ಯಕ್ತಿತ್ವ ಹಾಗೂ ಜೀವನದ ಮೇಲೆ ಎಷ್ಟು ಪ್ರಭಾವಶಾಲಿಯಾಗಿದೆ ಎಂದು ತಿಳಿಸುತ್ತದೆ.

ಸೂರ್ಯನ ರೇಖೆ (ಅಪೋಲೋ)

ಸೂರ್ಯನ ರೇಖೆ (ಅಪೋಲೋ)

ಈ ರೇಖೆ ವ್ಯಕ್ತಿಯ ಅದೃಷ್ಟ, ಜನಪ್ರಿಯತೆ, ಶ್ರೀಮಂತಿಕೆ ಹಾಗೂ ಕಳಂಕವನ್ನೂ ಸೂಚಿಸುತ್ತದೆ. ಈ ರೇಖೆ ಆಳವಾಗಿದ್ದಷ್ಟೂ ಜನಪ್ರಿಯತೆ ಮತ್ತು ಐಶ್ವರ್ಯ ಹೆಚ್ಚುತ್ತದೆ. ಈ ರೇಖೆ ಎಷ್ಟು ಉದ್ದವಿರುತ್ತದೆಯೋ ಅಷ್ಟೂ ಈ ಐಶ್ವರ್ಯ ಹಾಗೂ ಜನಪ್ರಿಯತೆ ಉಳಿದುಕೊಳ್ಳುವ ಕಾಲಾವಧಿಯನ್ನು ಸೂಚಿಸುತ್ತದೆ.

 
English summary

Lines On Your Palm That Reveal The Secrets Of Your Life

Check out the things that the lines on the palm reveal about a person's personality and his secrets, which sometimes even the person may not be aware of!
Please Wait while comments are loading...
Subscribe Newsletter