ನಿಜ ಘಟನೆ: ಇಯರ್ ಫೋನ್ ಸಿಡಿದು, ಅದೃಷ್ಟವಶಾತ್ ಪಾರಾದ ಮಹಿಳೆ

By: Deepu
Subscribe to Boldsky

ಆಸ್ಟ್ರೇಲಿಯಾದಲ್ಲಿ ವಿಮಾನ ಪ್ರಯಾಣಿಕರೊಬ್ಬರು ಕಿವಿಗೆ ಇಯರ್ ಫೋನುಗಳನ್ನು ಹಾಕಿಕೊಂಡು ಕೇಳುತ್ತಿದ್ದಾಗ ಈ ಇಯರ್ ಫೋನುಗಳು ಸಿಡಿದ ಸತ್ಯಘಟನೆ ವರದಿಯಾಗಿದೆ. ಈ ಸಿಡಿತ ಎಷ್ಟು ಪ್ರಬಲ ಎಂದರೆ ಇದು ಕಿವಿಯನ್ನು ಘಾಸಿಗೊಳಿಸುವುದು ಮಾತ್ರವಲ್ಲ, ಸಾವಿಗೂ ಕಾರಣವಾಗಬಹುದು.

ಸಾವಿನಿಂದ ಅಲ್ಪದರಲ್ಲಿಯೇ ಪಾರಾದ ಈ ಮಹಿಳೆಯ ಹೇಳಿಕೆಯ ಪ್ರಕಾರ ಇಯರ್ ಫೋನುಗಳನ್ನು ಕಿವಿಯಲ್ಲಿರಿಸಿಕೊಂಡೇ ನಿದ್ದೆ ಹೋಗಿದ್ದ ಆಕೆಗೆ ಕಿವಿಯಲ್ಲಿ ಏನೋ ದೊಡ್ಡ ಶಬ್ದ ಕೇಳಿದಂತೆ, ತಕ್ಷಣ ಕಿವಿಯೊಳಗೆ ಬೆಂಕಿ ಉರಿದಂತಹ ಅನುಭವವಾಗಿದೆ. ಇಯರ್ ಫೋನ್ ಸಿಡಿದ ಬಳಿಕ ಈ ಮಹಿಳೆಗೆ ಯಾವ ಅನುಭವವಾಯಿತು ಎಂಬ ಭಯಾನಕ ಕಥೆಯನ್ನು ಈಗ ಓದೋಣ....  

ದೊಡ್ಡ ಸ್ಫೋಟದ ಸದ್ದು ಈಕೆಯನ್ನು ನಿದ್ದೆಯಿಂದ ಬೆಚ್ಚಿ ಎಬ್ಬಿಸಿತು

ದೊಡ್ಡ ಸ್ಫೋಟದ ಸದ್ದು ಈಕೆಯನ್ನು ನಿದ್ದೆಯಿಂದ ಬೆಚ್ಚಿ ಎಬ್ಬಿಸಿತು

ಈ ಪ್ರಯಾಣಿಕರ ಹೇಳಿಕೆಯ ಪ್ರಕಾರ ದೊಡ್ಡ ಸ್ಫೋಟದ ಸದ್ದು ಈಕೆಯನ್ನು ನಿದ್ದೆಯಿಂದ ಬೆಚ್ಚಿ ಎಬ್ಬಿಸಿತ್ತು. ತಕ್ಷಣವೇ ಕಿವಿಯೊಳಗೆ ಏನೋ ಬಿಸಿಯಾಗಿದ್ದು ಹರಿದಂತೆ ಅನ್ನಿಸಿ ಅಸಾಧ್ಯ ಉರಿ ಪ್ರಾರಂಭವಾಯಿತು. ತಕ್ಷಣವೇ ಆಕೆ ಕಿವಿಯಿಂದ ಎರಡೂ ಇಯರ್ ಫೋನುಗಳನ್ನು ಕಿತ್ತು ನೆಲಕ್ಕೆಸೆದಿದ್ದಾರೆ. ನೆಲಕ್ಕೆಸೆಯುವಾಗ ಈ ಭಾಗದಲ್ಲಿ ಚಿಕ್ಕ ಉರಿ ಮತ್ತು ಕಿಡಿಗಳನ್ನು ಕಂಡ ಆಕೆ ಕಾಲಿನಿಂದ ಅಪ್ಪಚ್ಚಿಯಾಗಿಸಿದ್ದಾರೆ. ಕೂಡಲೇ ಕಾರ್ಯತತ್ಪರರಾದ ವಿಮಾನದ ಗಗನಸಖಿಯರು ಒಂದು ಬಕೆಟ್ ನೀರನ್ನು ಇದರ ಮೇಲೆ ಹೊಯ್ದು ಬೆಂಕಿಯನ್ನು ಆರಿಸಿದ್ದಾರೆ

ಇದಕ್ಕೆಲ್ಲಾ ಬ್ಯಾಟರಿಯೇ ಕಾರಣ!

ಇದಕ್ಕೆಲ್ಲಾ ಬ್ಯಾಟರಿಯೇ ಕಾರಣ!

ಇಯರ್ ಫೋನುಗಳಲ್ಲಿ ಕಿಡಿ ಹತ್ತಿಕೊಳ್ಳಲು ಬ್ಯಾಟರಿ ಕಾರಣವೆಂದು ಬಳಿಕ ತಿಳಿದುಬಂದಿದೆ. ಸಹಪ್ರಯಾಣಿಕರ ಹೇಳಿಕೆಯ ಪ್ರಕಾರ ವೈರುಗಳು, ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಕೂದಲು ಸುಟ್ಟ ವಾಸನೆ ಆ ಭಾಗದಲ್ಲಿ ವ್ಯಾಪಿಸಿತ್ತು ಹಾಗೂ ಈ ವಾಸನೆ ಕೆಲವರಿಗೆ ವಾಕರಿಕೆ ಬರಿಸುತ್ತಿತ್ತು.

ಸುರಕ್ಷತೆಗೆ ನಿಯಮಪಾಲನೆ ಅಗತ್ಯ

ಸುರಕ್ಷತೆಗೆ ನಿಯಮಪಾಲನೆ ಅಗತ್ಯ

ವಿಮಾನದ ನಿಯಮಗಳ ಪ್ರಕಾರ ಬ್ಯಾಟರಿ ಚಾಲಿತ ಇಯರ್ ಫೋನುಗಳನ್ನು ಬಳಸುವಾಗ ಈ ಬ್ಯಾಟರಿಗಳನ್ನು ಅನುಮೋದಿತ ಬ್ಯಾಟರಿ ರಕ್ಷಣಾಕವಚ ಅಥವಾ ಪೆಟ್ಟಿಗೆಗಳಲ್ಲಿಯೇ ಇರಿಸಿರಬೇಕು. ಅಲ್ಲದೇ ಹೆಚ್ಚುವರಿ ಬ್ಯಾಟರಿಗಳನ್ನು ಕೊಂಡೊಯ್ಯುವುದಿದ್ದರೆ ಇವುಗಳನ್ನು ಇನ್ನೊಂದು ಪ್ರತ್ಯೇಕ ಚೀಲದಲ್ಲಿ ಕೊಂಡೊಯ್ಯಬೇಕು.

ಹೆಚ್ಚಿನ ಮಾಹಿತಿಗಾಗಿ

ಹೆಚ್ಚಿನ ಮಾಹಿತಿಗಾಗಿ

ವಿಮಾನ ಪ್ರಯಾಣಿಕರು ಅನುಸರಿಸಬೇಕಾದ ನಿಯಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ವೀಡಿಯೋ ಕೊಂಡಿಯನ್ನು ಕ್ಲಿಕ್ ಮಾಡುವ ಮೂಲಕ ಪಡೆಯಬಹುದು. ವಿಶೇಷವಾಗಿ ಕಿವಿಯೊಳಗೆ ತೂರಿಸಿಕೊಳ್ಳುವ ಇಯರ್ ಫೋನುಗಳು ಬ್ಯಾಟರಿಯಿಂದ ನಡೆಯುವಂತಹದ್ದಾಗಿದ್ದರೆ ಹೆಚ್ಚಿನ ಕಾಳಜಿ ಅಗತ್ಯ ಹಾಗೂ ಈ ಬಗೆಯ ಅಪಘಾತಗಳಾಗುವುದನ್ನು ತಪ್ಪಿಸಬಹುದು.

All Images Courtesy

 
English summary

Her Earphones Exploded On A Flight!

This is a true incident that happened on a flight (in Australia) where a woman's earphones exploded and it is something that most of us need to be aware of, as sometimes the results of earphone explosion can also lead to accidental death!It is said that the woman was napping while listening to music on the flight and she suddenly heard a loud noise, after which she started feeling the burning sensation. Find out more about this scary incident where the woman got injured when her earphones exploded...
Please Wait while comments are loading...
Subscribe Newsletter