ಈತ ಒಂದಲ್ಲ, ಎರಡಲ್ಲ, ಭರ್ತಿ ಹದಿನೆಂಟು ಹಲ್ಲುಜ್ಜುವ ಬ್ರಷ್‌ಗಳನ್ನೇ ತಿಂದಿದ್ದ!

By: Arshad
Subscribe to Boldsky

ಈ ಜಗತ್ತು ಹೊರಗಿನಿಂದ ನೋಡಲು ಎಷ್ಟು ಸುಂದರವೋ, ಒಳಗಿನಿಂದ ಅಷ್ಟೇ ನಿಗೂಢ, ಅಷ್ಟೇ ಕ್ರೂರ. ಮಾನವರಲ್ಲಿಯೂ ಕೆಲವರು ಹೊರಗಿನಿಂದ ಒಂದು ಒಳಗಿನಿಂದ ಇನ್ನೊಂದೇ ಆಗಿರುತ್ತಾರೆ. ಮನದಾಳದ ಭೀಭತ್ಸತೆಯನ್ನು ಪ್ರಕಟಿಸಿ ದೌರ್ಜನ್ಯಗಳನ್ನು ಎಸಗಿದ ಬಳಿಕ ಇದರ ಕುರುಹಾಗಿ ಪ್ರಕಟಗೊಳ್ಳುವ ಚಿತ್ರಗಳು ಮನ ಕಲಕುತ್ತವೆ. ಹಲ್ಲುಜ್ಜುವ ಬ್ರಷ್ ಕೂಡ ಆರೋಗ್ಯಕ್ಕೆ ಮಾರಕವಾಗಬಹುದು!  

ಇಂತಹದ್ದೇ ಒಂದು ವಿಚಿತ್ರ ಚಿತ್ರಗಳು ಲಭ್ಯವಾಗಿದ್ದು ಇದರಲ್ಲಿ ಪುರುಷನೊಬ್ಬ ಒಂದಲ್ಲ ಎರಡಲ್ಲ, ಭರ್ತಿ ಹದಿನೆಂಟು ಹಲ್ಲುಜ್ಜುವ ಬ್ರಷ್‌ಗಳನ್ನೂ ಸಾಲದಕ್ಕೆ ಕೆಲವು ಲೋಹದ ತುಣುಕುಗಳನ್ನೂ ತಿಂದಿರುವುದು ವರದಿಯಾಗಿದೆ. ಈ ಭಯಾನಕ ಘಟನೆ ಏಕಾಯಿತು? ಹೇಗಾಯಿತು? ಈ ವ್ಯಕ್ತಿ ಹೀಗೇಕೆ ಮಾಡಿದ ಎಂಬ ಹಲವಾರು ಪ್ರಶ್ನೆಗಳಿಗೆ ಕೆಳಗಿನ ಮಾಹಿತಿ ಉತ್ತರ ನೀಡಲಿದೆ:

ವಿಶೇಷ ಸೂಚನೆ: ಈ ಲೇಖನ ದುರ್ಬಲ ಹೃದಯಿಗಳಿಗೆ ಖಂಡಿತಾ ಸಲ್ಲದು. ಇದರಲ್ಲಿ ಬಳಸಲಾಗಿರುವ ಚಿತ್ರಗಳು ಇವರ ಚಿತ್ತವನ್ನು ಕಲಕಬಲ್ಲುದು...   

ಈತ ಅಷ್ಟೂ ಬ್ರಷ್‍‌ಗಳನ್ನು ಒಂದೇ ಬಾರಿಗೆ ತಿಂದ!

ಈತ ಅಷ್ಟೂ ಬ್ರಷ್‍‌ಗಳನ್ನು ಒಂದೇ ಬಾರಿಗೆ ತಿಂದ!

ವರದಿಗಳ ಪ್ರಕಾರ ಈತ ಒಂದೊಂದಾಗಿ ಅಲ್ಲ, ಎಲ್ಲವನ್ನೂ ಒಂದೇ ಬಾರಿ ತಿಂದನಂತೆ.

ಇವನ್ನು ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು

ಇವನ್ನು ಹೊರತೆಗೆಯಲು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಬೇಕಾಯಿತು

ಈತ ಬ್ರಷ್‌ಗಳನ್ನು ತಿಂದಿರುವುದು ನಿಜವೋ ಅಲ್ಲವೋ ಎಂಬುದನ್ನು ಕ್ಯಾಮೆರಾ ಒಂದನ್ನು ದೇಹದ ಒಳಕ್ಕಿಳಿಸಿ ಪ್ರತ್ಯಕ್ಷವಾಗಿ ನೋಡಿದ ಬಳಿಕವೇ ವೈದ್ಯರು ಖಚಿತ ಪಡಿಸಿದ್ದಾರೆ. ಈತನ ಹೊಟ್ಟೆಯೊಳಗೆ ಬಣ್ಣಬಣ್ಣದ ಪ್ಲಾಸ್ಟಿಕ್ಕಿನ ಬ್ರಷ್‌ಗಳಿದ್ದುದು ನಿಜ!

ಇಲ್ಲಿದ್ದುದು ಬರೆಯ ಬ್ರಷ್‌ಗಳು ಮಾತ್ರವಲ್ಲ

ಇಲ್ಲಿದ್ದುದು ಬರೆಯ ಬ್ರಷ್‌ಗಳು ಮಾತ್ರವಲ್ಲ

ಈ ಶಸ್ತ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಿಸಿದ್ದು ಕೆಳಗಿನ ಕೊಂಡಿಯಲ್ಲಿ ನೀಡಿರುವ ವೀಡಿಯೋದಲ್ಲಿ ಈತನ ಹೊಟ್ಟೆಯೊಳಗೆ ಬರೆಯ ಬ್ರಷ್‌ಗಳು ಮಾತ್ರವಲ್ಲ, ಚಿಕ್ಕ ಚಿಕ್ಕ ಹಸಿರು ತಂತಿಯಂತಹ ವಸ್ತುಗಳೂ ಕಾಣಸಿಗುತ್ತವೆ. ಇವು ಹೆಚ್ಚಾಗಿ ಪೆನ್ಸಿಲ್ ಅಥವಾ ಸ್ಕ್ರೂ ನಂತೆ ಅಥವಾ ಚಿಕ್ಕ ಲೋಹದ ತುಣುಕುಗಳಂತೆ ಕಾಣಿಸುತ್ತವೆ. ಇವೆಲ್ಲವನ್ನೂ ಹೊಟ್ಟೆಯಿಂದ ಹೊರತೆಗೆಯಲಾಯಿತು.

ಇಷ್ಟು ಬ್ರಷ್‌ಗಳನ್ನು ಒಮ್ಮೆಲೇ ತಿನ್ನಲು ಸಾಧ್ಯವೇ ಇಲ್ಲವೆಂದ ವೈದ್ಯರು!

ಇಷ್ಟು ಬ್ರಷ್‌ಗಳನ್ನು ಒಮ್ಮೆಲೇ ತಿನ್ನಲು ಸಾಧ್ಯವೇ ಇಲ್ಲವೆಂದ ವೈದ್ಯರು!

ವೈದ್ಯರ ಪ್ರಕಾರ ಅಷ್ಟೂ ಬ್ರಷ್‌ಗಳನ್ನು ಮನುಷ್ಯಮಾತ್ರದವರಿಗೆ ಒಮ್ಮೆಲೇ ತಿನ್ನಲು ಸಾಧ್ಯವೇ ಇಲ್ಲ. ಈತ ಹದಿನೆಂಟನ್ನು ನುಂಗಿದ್ದ. ಅಂದರೆ ಅಷ್ಟೂ ಬ್ರಷ್‌ಗಳನ್ನು ಒಮ್ಮೆಲೇ ಗಂಟಲಿನಿಂದ ಇಳಿಸಲು ಗಂಟಲು ಅಗಲಗೊಳ್ಳಬೇಕು. ನಮ್ಮ ಗಂಟಲು ಹೀಗೆ ಹಿಗ್ಗಲು ಅಸಮರ್ಥವದುದರಿಂದ ಇವೆಲ್ಲವೂ ಒಂದೇ ಬಾರಿ ಹೋಗಿರುವ ಸಾಧ್ಯತೆಯೇ ಇಲ್ಲ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ಆದರೂ ಪ್ಲಾಸ್ಟಿಕ್ಕನ್ನು ತಿನ್ನಬೇಕಾದರೆ ಆತನ ಮನಸ್ಸು ಸ್ಥಿಮಿತದಲ್ಲಿರಲು ಸಾಧ್ಯವಿಲ್ಲ ಎನ್ನುತ್ತಾರೆ.

ವೀಡಿಯೋ ನೋಡುವ ಧೈರ್ಯವಿದೆಯೇ?

ವೀಡಿಯೋ ನೋಡುವ ಧೈರ್ಯವಿದೆಯೇ?

ಈ ಭಯಾನಕ ದೃಶ್ಯದ ವಿಡಿಯೋ ಈಗ ಲಭ್ಯವಿದ್ದು ಇದನ್ನು ನೋಡಲು ಹೆಚ್ಚಿನವರು ಇಷ್ಟಪಡಲಾರರು. ಆದರೆ ಕುತೂಹಲವಿದ್ದರೆ ಹಾಗೂ ಎದೆಗುಂಡಿಗೆ ಗಟ್ಟಿಯಿದ್ದವರ ಸ್ಥೈರ್ಯವನ್ನು ಪರೀಕ್ಷಿಸಬೇಕೆಂದರೆ ಮುಂದುವರೆಯಬಹುದು.

ವೈಜ್ಞಾನಿಕ ವಾಸ್ತವಾಂಶ

ವೈಜ್ಞಾನಿಕ ವಾಸ್ತವಾಂಶ

ಸಾಮಾನ್ಯವಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವವರು ಹೀಗೆ ಆಹಾರವಸ್ತುಗಳಲ್ಲದ ವಸ್ತುಗಳನ್ನು ತಿನ್ನುವುದು ಸಾಮಾನ್ಯ. ಈ ಸ್ಥಿತಿಗೆ bulimia ಎಂದು ಕರೆಯುತ್ತಾರೆ. ಕೆಲವರು ವಾಂತಿ ಮಾಡಬೇಕೆಂದೇ ಬಲವಂತವಾಗಿ ಇಲ್ಲಸಲ್ಲದ ವಸ್ತುಗಳನ್ನು ಗಂಟಲಿನಲ್ಲಿ ತುರುಕಿಕೊಳ್ಳುತ್ತಾರೆ ಹಾಗೂ ಅಕಸ್ಮಿಕವಾಗಿ ಕೆಲವು ವಸ್ತುಗಳು ಹೊಟ್ಟೆ ಸೇರುತ್ತವೆ.

 

 
English summary

He Ate 18 Toothbrushes & Metal Pieces??

This case is truly insane, as it shows the video of a live operation where a man is being operated for consuming 18 TOOTHBRUSHES! Check out this bizarre story.
Please Wait while comments are loading...
Subscribe Newsletter