For Quick Alerts
ALLOW NOTIFICATIONS  
For Daily Alerts

ದೀಪಾವಳಿ ಹಬ್ಬದ ಆಚರಣೆ ಹೀಗಿರಲಿ-ಯಾವುದೂ ಮಿಸ್ ಆಗದಿರಲಿ..

By Arshad
|

ದೀಪಾವಳಿ ಐದು ದಿನಗಳ ಆಚರಿಸಲಾಗುವ ಹಬ್ಬವಾದರೂ ಪ್ರಥಮ ದಿನಕ್ಕೂ ಕೆಲದಿನಗಳ ಹಿಂದೆಯೇ ಈ ದಿನಗಳಿಗಾಗಿ ಕೆಲವಾರು ತಯಾರಿಗಳನ್ನು ಮಾಡಬೇಕಾಗುತ್ತದೆ. ಎಷ್ಟೋ ಸಲ, ಯಾರಾದರೂ ನೆನಪಿಸದ ಹೊರತು ಮುಖ್ಯವಾದ ಕೆಲಸವನ್ನು ನಾವು ಮರೆತೇ ಬಿಡುತ್ತೇವೆ. ಮದುವೆಗೆ ಎಲ್ಲಾ ತಯಾರಿ ಮಾಡಿ ಪಂಡಿತರನ್ನು ಕರೆಯುವುದನ್ನೇ ಮರೆತಂತೆ!

ಈ ವರ್ಷ ಹೀಗಾಗಬಾರದು ಎಂದು ಬೋಲ್ಡ್ ಸ್ಕೈ ತಂಡ ದೀಪಾವಳಿಗಾಗಿ ಸಿದ್ಧಪಡಿಸಬೇಕಾದ ಕೆಲಸಗಳನ್ನು ಪಟ್ಟಿ ಮಾಡಿ ಈ ಲೇಖನವನ್ನು ತಯಾರಿಸಿದೆ. ಬನ್ನಿ, ಈ ಪಟ್ಟಿಯನ್ನು ಪರಿಶೀಲಿಸಿ ವಾಸ್ತು ಪ್ರಕಾರ ಇವೆಲ್ಲವನ್ನೂ ನೀವು ಸರಿಯಾದ ಕ್ರಮದಲ್ಲಿ ಕೈಗೊಂಡಿದ್ದೀರೋ ಎಂದು ಪರಿಶೀಲಿಸಿ ಮರೆತು ಹೋಗಬಹುದಾಗಿದ್ದ ಯಾವುದನ್ನೂ ಮರೆಯದೇ ಈ ವರ್ಷದ ಹಬ್ಬವನ್ನು ಸಂಪೂರ್ಣವಾಗಿ ಸಂಭ್ರಮದಿಂದ ಆಚರಿಸಿ.

 ಮನೆ ಅತ್ಯಂತ ಸ್ವಚ್ಛವಾಗಿರಬೇಕು

ಮನೆ ಅತ್ಯಂತ ಸ್ವಚ್ಛವಾಗಿರಬೇಕು

ದೀಪಾವಳಿ ಹಬ್ಬಕ್ಕೂ ಮುನ್ನ ಮನೆಯನ್ನು ಸ್ವಚ್ಛಗೊಳಿಸುವುದು ಯಾವುದೇ ಮನೆಗೆ ಅಗತ್ಯವಾದ ಕ್ರಮವಾಗಿದ್ದು ಮನೆಯನ್ನು ಕಸರಹಿತವಾಗಿಸುವುದು ಮೊದಲ ಕೆಲಸವಾಗಿದೆ. ಧನದೇವತೆಯಾದ ಲಕ್ಷ್ಮಿ ನಿಮ್ಮ ಮನೆಗೆ ಭೇಟಿ ನೀಡಲು ಬಂದಾಗ ಮನೆ ಸ್ವಚ್ಛವಾಗಿಲ್ಲದಿದ್ದರೆ ನಿಮ್ಮ ಮನೆಯೊಳಗೆ ಬರದೇ ಹಾಗೇ ಹೋಗುವ ಭಯವಿರುವ ಕಾರಣ ಮನೆಯನ್ನು ಒಂದಿನಿತೂ ಕಸವಿಲ್ಲದಂತೆ ಸ್ವಚ್ಛಗೊಳಿಸುವುದು ಅನಿವಾರ್ಯವಾಗಿದ್. ಸ್ವಚ್ಛತೆ ಎಂದರೆ ಕಣ್ಣಿಗೆ ಕಾಣಿಸುವ ಕಸವನ್ನು ಮಾತ್ರ ಹೊರಹಾಕಿ ಕಣ್ಣಿಗೆ ಕಾಣುವ ವಸ್ತುಗಳನ್ನು ಒಪ್ಪ ಓರಣವಾಗಿಸಿದರೆ ಸಾಲದು. ಮನೆಯ ಒಂದೂ ಮೂಲೆಯನ್ನೂ ಬಿಡದೇ, ಜೇಡಲ ಬಲೆ, ಕಸ, ಧೂಳು, ಗೋಡೆಗ ಅಂಟಿರುವ ಕೊಳೆ ಎಲ್ಲವನ್ನೂ ಸ್ವಚ್ಛಗೊಳಿಸಬೇಕಾಗುತ್ತದೆ. ಅಲ್ಲದೇ ಹಬ್ಬದ ಸಮಯದಲ್ಲಿ ಮನೆಯ ಎಲ್ಲಾ ಕಡೆ ಬೆಳಕಿರುವಂತೆ

ನೋಡಿಕೊಳ್ಳಬೇಕು. ಒಂದು ಮೂಲೆಯೂ ಬೆಳಕಿಲ್ಲದೇ ಇರಬಾರದು. ದೀಪಾವಳಿಯ ಎಲ್ಲಾ ದಿನಗಳಂದು ಮನೆಯೊಳಗೆ ಬೆಳಕು ಸದಾ ಇರುವಂತೆ ನೋಡಿಕೊಳ್ಳಿ.

ಸ್ವಸ್ತಿಕವನ್ನು ಮನೆಬಾಗಿಲ ಮುಂದೆ ಸ್ಥಾಪಿಸಿ

ಸ್ವಸ್ತಿಕವನ್ನು ಮನೆಬಾಗಿಲ ಮುಂದೆ ಸ್ಥಾಪಿಸಿ

ಸ್ವಸ್ತಿಕ ಚಿಹ್ನೆ ಶುಭವಾಗಿದ್ದು ಮಂಗಳಕರ ಎಂದು ನಂಬಲಾಗುತ್ತದೆ. ದೀಪಾವಳಿಯ ಸಂದರ್ಭದಲ್ಲಿ ಸ್ವಸ್ತಿಕವನ್ನು ಮನೆಯ ಪ್ರಧಾನ ಬಾಗಿಲ ಬಳಿ ಸ್ಪಷ್ಟವಾಗಿ ಕಾಣುವಂತೆ ತೂಗು ಹಾಕುವ ಮೂಲಕ ಮನೆಗೆ ಶುಭವಾಗುತ್ತದೆ ಹಾಗೂ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಶುಭಘಳಿಗೆಗಳು ಕೇವಲ ದೀಪಾವಳಿಯಲ್ಲಿ ಮಾತ್ರವಲ್ಲ ಇಡಿಯ ವರ್ಷ ಬರುತ್ತಿರುತ್ತದೆ ಎಂದೂ ಹೇಳಲಾಗುತ್ತದೆ.

ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳ

ಮೂರ್ತಿಯನ್ನು ಪ್ರತಿಷ್ಠಾಪಿಸುವ ಸ್ಥಳ

ವಾಸ್ತು ಶಾಸ್ತ್ರದ ಪ್ರಕಾರ ಲಕ್ಷ್ಮಿಪೂಜೆಯನ್ನು ಮನೆಯ ಉತ್ತರ ಭಾಗದಲ್ಲಿ ನಿರ್ವಹಿಸಬೇಕು. ಪೂಜಾಕಾರ್ಯದ ಹೊಣೆಯನ್ನು ಹೊತ್ತಿರುವ ವ್ಯಕ್ತಿ ಗಣೇಶನ ಮೂರ್ತಿ ಎಡಭಾಗದಲ್ಲಿಯೂ ಹಾಗೂ ಲಕ್ಷ್ಮಿದೇವರ ಮೂರ್ತಿಯನ್ನು ಬಲಭಾಗದಲ್ಲಿ ಸ್ಥಾಪಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಉಪ್ಪು ನೀರನ್ನು ಚಿಮುಕಿಸುವುದು

ಉಪ್ಪು ನೀರನ್ನು ಚಿಮುಕಿಸುವುದು

ದೀಪಾವಳಿಗೂ ಮುನ್ನ ಕೆಲವು ದಿನಗಳಾದರೂ ಉಪ್ಪನ್ನು (ಕಲ್ಲುಪ್ಪು ಆದರೆ ಉತ್ತಮ) ಬೆರೆಸಿದ ನೀರನ್ನು ಮನೆಯ ಎಲ್ಲಾ ಕೋಣೆಗಳಲ್ಲಿ, ವಿಶೇಷವಾಗಿ ಎಲ್ಲಾ ಮೂಲೆಗಳಲ್ಲಿ ಚಿಮುಕಿಸುತ್ತಿರಬೇಕು. ದೀಪಾವಳಿಯ ಹಿಂದಿನ ದಿನಗಳಲ್ಲಿ ಈ ಕಾರ್ಯವನ್ನು ತಪ್ಪಿಸಿಕೊಂಡರೂ ದೀಪಾವಳಿಯಂದು ತಪ್ಪಿಸಿಕೊಳ್ಳಬಾರದು. ಉಪ್ಪಿಗೆ ಮನೆಗೆ ಆಗಮಿಸಿರುವ ಋಣಾತ್ಮಕ ಶಕ್ತಿಗಳನ್ನು ಗಾಳಿಯಿಂದ ಹೀರಿಕೊಳ್ಳುವ ಗುಣವಿದ್ದು ವಾತಾವರಣವನ್ನೂ ಸ್ವಚ್ಛಗೊಳಿಸುತ್ತದೆ ಎಂದು ನಂಬಲಾಗಿದೆ.

ದೀಪಾವಳಿ ದಿನ ಮನೆಗೆ ಉಪ್ಪು ತರಬೇಕು ಹೇಳುತ್ತಾರೆ, ಯಾಕೆ ಗೊತ್ತೇ?

ಸುಂದರವಾದ ರಂಗೋಲಿ ರಚಿಸಿ

ಸುಂದರವಾದ ರಂಗೋಲಿ ರಚಿಸಿ

ಇದು ದೀಪಾವಳಿಯಲ್ಲಿ ಪ್ರತಿಮನೆಯ ಎದುರು ಕಾಣುವ ಸುಂದರ ನೋಟವಾಗಿದೆ. ಆದರೆ ಸುಮ್ಮನೇ ಒಂದೇ ಬಣ್ಣದ ರಂಗೋಲಿಗಿಂತ ಪ್ರಖರ ಬಣ್ಣಗಳಾದ ಹಸಿರು, ನೀಲಿ ಹಾಗೂ ಗುಲಾಬಿ ಬಣ್ಣದ ಪುಡಿಗಳನ್ನು ಬಳಸಬೇಕು. ಗಾಢ ಬಣ್ಣಗಳಾದ ಕಪ್ಪು ಹಾಗೂ ಬೂದು ಬಣ್ಣಗಳನ್ನು ಬಳಸದಿರಿ. ರಂಗೋಲಿ ಆದಷ್ಟು ಆಕರ್ಷಕವಾಗಿರಲಿ ಹಾಗೂ ಮನೆಯ ಪ್ರಧಾನ ಬಾಗಿಲಿನ ಮುಂದೆ ಇರುವಂತೆ ರಚಿಸಿ. ಈ ರಂಗೋಲಿ ಮನೆಗೆ ಸಮೃದ್ದತೆಯನ್ನು ಆಹ್ವಾನಿಸುತ್ತದೆ ಎಂದು ನಂಬಲಾಗುತ್ತದೆ.

ಮನೆಯ ಪ್ರಧಾನ ಬಾಗಿಲನ್ನು ತೆರೆದಿರಿಸಿ

ಮನೆಯ ಪ್ರಧಾನ ಬಾಗಿಲನ್ನು ತೆರೆದಿರಿಸಿ

ದೀಪಾವಳಿಯ ದಿನಗಳಂದು ನಿಮ್ಮ ಮನೆಯ ಮುಂಬಾಗಿಲನ್ನು ವಿಶಾಲವಾಗಿ ತೆರೆದು ನಿಮ್ಮ ಅತಿಥಿಗಳನ್ನು ಆಹ್ವಾನಿಸಿ. ಈ ಶುಭದಿನಗಳಲ್ಲಿ ತೆರೆದಿರುವ ಬಾಗಿಲಿನ ಮನೆಯೊಳಗೆ ಲಕ್ಷ್ಮೀದೇವಿ ನೇರವಾಗಿ ಒಳಬರುತ್ತಾಳೆ ಎಂದು ನಂಬಲಾಗಿದೆ. ಆದರೆ ರಾತ್ರಿ ಹೊತ್ತಿನಲ್ಲಿ ಬಾಗಿಲನ್ನು ತೆರೆದಿರಿಸುವುದು ಸುರಕ್ಷಿತವಲ್ಲದ ಕಾರಣ ಮುಂಬಾಗಿಲಿನ ಪಕ್ಕದ ಕಿಟಕಿಯ ಒಂದು ಬಾಗಿಲನ್ನಾದರೂ ತೆರೆದಿರಿಸಿ. ಈ ಬಾಗಿಲಿನ ಮೂಲಕವೂ ಲಕ್ಷ್ಮಿ ಒಳಬರುತ್ತಾಳೆ. ಆದರೆ ತೆರೆದಿರುವ ಒಂದೂ ಬಾಗಿಲಿಲ್ಲದೇ ಇದ್ದರೆ ಲಕ್ಷ್ಮಿದೇವಿ ಒಳಬರದೇ ಹಾಗೇ ಹೊರಟುಹೋಗುತ್ತಾಳೆ ಎಂದು ಹೇಳಲಾಗುತ್ತದೆ.

ಮನೆಗೆ ಕಾರಂಜಿಯೊಂದನ್ನು ತನ್ನಿ

ಮನೆಗೆ ಕಾರಂಜಿಯೊಂದನ್ನು ತನ್ನಿ

ಮನೆಯ ಆವರಣದಲ್ಲಿ ಚಲಿಸುತ್ತಿರುವ ನೀರು ಶುಭವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಹರಿಯುತ್ತಿರುವ ನೀರು ಮನೆಯ ವಾತಾವರಣದಲ್ಲಿರುವ ಋಣಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುತ್ತದೆ. ಮನೆಯಲ್ಲಿ ಋಣಾತ್ಮಕ ಶಕ್ತಿ ಕಡಿಮೆಯಾಗಿ ಧನಾತ್ಮಕ ಶಕ್ತಿ ಹೆಚ್ಚಾಗಲು ಪುಟ್ಟ ಕಾರಂಜಿಯೊಂದನ್ನು ತನ್ನಿ, ಇದನ್ನು ಮನೆಯ ಈಶಾನ್ಯ ಭಾಗದಲ್ಲಿ ಸ್ಥಾಪಿಸಿ.

ದೇವರಿಗೆ ಧೂಪದ ಧೂಮವನ್ನು ಅರ್ಪಿಸಿ!

ದೇವರಿಗೆ ಧೂಪದ ಧೂಮವನ್ನು ಅರ್ಪಿಸಿ!

ಮನೆಯಲ್ಲಿ ಧೂಪವನ್ನು ಬೆಳಗಿಸಿ ಇದರ ಹೊಗೆ ಮನೆಯ ಒಳಾಂಗಣವನ್ನು ಪೂರ್ಣವಾಗಿ ಆವರಿಸುವಂತೆ ಮಾಡಿ. ಇದರಿಂದ ಮನೆಯ ವಾತಾವರಣದಲ್ಲಿ ಸುವಾಸನೆ ಹಾಗೂ ಧನಾತ್ಮಕ ಶಕ್ತಿ ಹೆಚ್ಚಲು ನೆರವಾಗುತ್ತದೆ. ಕೊಂಚ ದುಬಾರಿಯಾದರೂ ಸರಿ, ಚಂದನದ ಧೂಪವನ್ನೇ ತನ್ನಿ.

ಎಲ್ಲವೂ ಒಳ್ಳೆಯದಾಗಲಿ-ದೀಪಾವಳಿ ಹಬ್ಬದ ಶುಭಾಶಯಗಳು

ಎಲ್ಲವೂ ಒಳ್ಳೆಯದಾಗಲಿ-ದೀಪಾವಳಿ ಹಬ್ಬದ ಶುಭಾಶಯಗಳು

ಮೇಲಿನ ಪಟ್ಟಿ ನೋಡಿದ ಬಳಿಕ ಖಂಡಿತವಾಗಿಯೂ ಒಂದೆರಡನ್ನಾದರೂ ನೀವು ಮರೆತಿರುವುದು ಕಂಡುಬಂದಿರಬಹುದು. ತಕ್ಷಣ ಕಾರ್ಯತತ್ಪರರಾಗಿ ಈ ಕೊರತೆಯನ್ನು ನೀಗಿಸಿಕೊಳ್ಳುವ ಮೂಲಕ ಹಬ್ಬದ ಸಂಭ್ರಮವನ್ನು ಸಂಪೂರ್ಣವಾಗಿ ಆಚರಿಸಿಕೊಳ್ಳಲು ಇಂದಿನ ಲೇಖನ ನಿಮಗೆ ನೆರವಾಗಿರಬಹುದು. ಹೌದು ಎಂದಾದರೆ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮಗೆ ಖಂಡಿತಾ ತಿಳಿಸಿ. ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.

English summary

Have You Done All Of These Things For Diwali?

These are certain vaastu tips that will bring in good luck and prosperity in the house and family. So, check out on the list and find out if you have missed out on completing any of these significant vaastu tips! Read on to find out.
X
Desktop Bottom Promotion