ಈ ಗ್ರಾಮದಲ್ಲಿದೆ ವಿಚಿತ್ರ ಕಾಯಿಲೆ-ಇಲ್ಲಿನ ಜನ ವಾರಗಟ್ಟಲೇ ಮಲಗಿರುತ್ತಾರೆ!!

By: Arshad
Subscribe to Boldsky

ಯಾವುದೇ ಅಡ್ಡಿ ಅಡಚಣೆ ಇಲ್ಲದೇ ತುಂಬಾ ಹೊತ್ತು ಮಲಗಿರಬೇಕು ಎನ್ನುವುದು ಹೆಚ್ಚಿನವರ ಅಪೇಕ್ಷೆ. ಅಂತೆಯೇ ನಾವೆಲ್ಲಾ ರಜಾದಿನಗಳಲ್ಲಿ ಬಲುಹೊತ್ತಿನವರೆಗೆ ಹೊದ್ದು ಮಲಗುತ್ತೇವೆ. ಆದರೆ ಮಲಗಿದರೆ ಸುಮಾರು ಎರಡು ದಿನಗಳವರೆಗೆ ಅಥವಾ ವಾರಗಟ್ಟಲೇ ಕೆಲವೊಮ್ಮೆ ತಿಂಗಳುಗಟ್ಟಲೇ ಕೂಡ ಏಳದೇ ಇರುವ ಜನರು ಈ ವಿಶ್ವದ ಗ್ರಾಮವೊಂದರಲ್ಲಿದ್ದಾರೆ.

ಬರೆ ಒಬ್ಬಿಬ್ಬರು ಹೀಗೆ ಮಲಗಿದರೆ ಸೋಮಾರಿಗಳು ಎಂದು ಅಲಕ್ಷಿಸಿಬಿಡಬಹುದಿತ್ತು. ಆದರೆ ಹಿರಿಯರಿಂದ ಕಿರಿಯರವರೆಗೆ ಒಟ್ಟಾರೆ ಇಡಿಯ ಗ್ರಾಮವೇ ದಿನಗಟ್ಟಲೇ ಗಡದ್ದಾಗಿ ಮಲಗಿಬಿಡುತ್ತದೆ. ವಿಚಿತ್ರ ಅನ್ನಿಸುತ್ತದೆ ಅಲ್ಲವೇ? ಆದರೆ ಈ ವಿಚಿತ್ರ ಘಟನೆ ನಿಜವಾಗಿದ್ದು ಇದೇ ಕಾರಣದಿಂದ ಹಲವು ತಜ್ಞರ ನಿದ್ದೆಗೆಡಿಸಿದೆ.  ಯಕ್ಷ ಪ್ರಶ್ನೆಯಂತೆ ಕಾಡುವ, ಈ ವ್ಯಕ್ತಿಗಳ ಚಿದಂಬರ ರಹಸ್ಯ..!

ಇದು ಕಝಾಕಿಸ್ತಾನ್ ದೇಶದ ಕಲಾಚಿ ಎಂಬ ಪ್ರದೇಶದ ಕ್ರಾಸ್ನೋಗೋಸ್ಕ್ ಎಂಬ ಒಂದು ಗ್ರಾಮದ ಕಥೆ. ಬರೆಯ ಮಲಗುವುದು ಮಾತ್ರವಲ್ಲ, ಇಲ್ಲಿನ ಪುರುಷರು ಅತಿ ಹೆಚ್ಚಿನ ಕಾಮಾಸಕ್ತಿ ಪ್ರಕಟಿಸುವುದು, ಮಕ್ಕಳುನಿದ್ದೆಯಲ್ಲಿ ಕನವರಿಸಿ ಇತರರಲ್ಲಿ ಪ್ರಾಣಿಗಳ ಅಂಗಗಳನ್ನು ಕಾಣುವುದು, ತಲೆಯ ಸುತ್ತ ದೀಪಗಳು ಸುತ್ತುತ್ತಿರುವಂತೆ, ಹುಡುಗಿಯೊಬ್ಬಳಿಗೆ ತನ್ನ ತಾಯಿಯ ಹೊಟ್ಟೆಯಿಂದ ಆನೆಯ ಸೊಂಡಿಲು ಹೊರಬಂದಂತೆ ಅನ್ನಿಸುವುದು ಮೊದಲಾದ ಪ್ರಕರಣಗಳು ಮಾಮೂಲಿಯಾಗಿ ಕಂಡುಬರುತ್ತವೆ...! ನಿಗೂಢ ಜಗತ್ತು: ಆಕೆ ಸತ್ತು 42 ವರ್ಷ ಬಳಿಕ ಪತ್ತೆಯಾದಳು!

ವಿಪರೀತ ಪರಿಸ್ಥಿತಿಯಲ್ಲಿ ಕೆಲವು ಪುರುಷರು ಉದ್ರೇಕಾವಸ್ಥೆಯಲ್ಲಿ ಗ್ರಾಮದ ರಸ್ತೆಗಳಲ್ಲಿ ತಿರುಗುವುದು ಸಹಾ ಕಂಡುಬಂದಿದೆ. ಈ ಘಟನೆಗಳು ವರದಿಯಾದ ಬಳಿಕ ಈ ವಿದ್ಯಮಾನವನ್ನು ವಿಚಿತ್ರ ಎಂದು ಪರಿಗಣಿಸಿ ಈ ಗ್ರಾಮಕ್ಕೆ 'Sleepy Hollow' ಎಂಬ ಅನ್ವರ್ಥನಾಮವನ್ನೂ ನೀಡಲಾಯಿತು......  

 

ಹಾಳುಬಿದ್ದ ಊರು (Village Of The Damned)

ಹಾಳುಬಿದ್ದ ಊರು (Village Of The Damned)

ಈ ಊರಿನ ಜನರೆಲ್ಲಾ ಸತತ ಎರಡು ದಿನ ನಿದ್ದೆ ಮಾಡಿ ಎದ್ದ ಬಳಿಕ ಕೇವಲ ಹನ್ನೆರಡು ಗಂಟೆ ಎಚ್ಚರಾಗಿದ್ದು ಮತ್ತೆ ಎರಡು ಗಂಟೆ ಮಲಗುತ್ತಾರೆ.

ಹಾಳುಬಿದ್ದ ಊರು (Village Of The Damned)

ಹಾಳುಬಿದ್ದ ಊರು (Village Of The Damned)

ಪುರುಷರು ಎದ್ದ ತಕ್ಷಣ ಕಾಮತೃಷೆಯನ್ನು ಪ್ರಕಟಿಸುತ್ತಾರೆ. ಜನರ ಮಾತುಗಳಲ್ಲಿ ಬೈಗಳು ಯಥೇಚ್ಛವಾಗಿರುತ್ತದೆ. ಈ ಕಾರಣಕ್ಕೆ ಇದಕ್ಕೆ ಹಾಳುಬಿದ್ದ ಊರು ಎಂದು ಕರೆಯಲಾಗುತ್ತದೆ.

ವಿಚಿತ್ರ ಭ್ರಮೆಗಳು

ವಿಚಿತ್ರ ಭ್ರಮೆಗಳು

ಮಕ್ಕಳಿಗೆ ಚಿತ್ರವಿಚಿತ್ರವಾದ ಭ್ರಮೆಗಳು ಎದುರಾಗುತ್ತವೆ. ಕೆಲವು ಮಕ್ಕಳಿಗೆ ತಮ್ಮ ತಾಯಿಯ ಹಣೆಯಲ್ಲಿ ಮೂರನೆಯ ಕಣ್ಣು ಮೂಡಿದಂತೆ, ಹೊಟ್ಟೆಯಲ್ಲಿ ಆನೆಯ ಸೊಂಡಿಲು ಮೂಡಿದಂತೆ ಭ್ರಮೆಯಾಗುತ್ತದೆ.ತಲೆಯ ಸುತ್ತ ದೀಪಗಳು ಸುತ್ತುತ್ತಿರುವಂತೆಯೂ ಕೆಲವು ಹುಡುಗರಿಗೆ ಅನ್ನಿಸುತ್ತದೆಯಂತೆ.

ಉದ್ರೇಕಾವಸ್ಥೆಯಲ್ಲಿ ಊರು ತಿರುಗುವ ಪುರುಷರು

ಉದ್ರೇಕಾವಸ್ಥೆಯಲ್ಲಿ ಊರು ತಿರುಗುವ ಪುರುಷರು

ಈ ಗ್ರಾಮದ ಅತಿ ವಿಚಿತ್ರ ವಿದ್ಯಮಾನವೆಂದರೆ ನಿದ್ದೆಯಿಂದ ಎದ್ದ ತಕ್ಷಣ ಪುರುಷರು

ಕಾಮಪಿಪಾಸುಗಳಾಗುವುದು. ಉದ್ರೇಕಗೊಂಡ ಸ್ಥಿತಿಯಲ್ಲಿಯೇ ಗುಪ್ತಾಂಗವನ್ನು ಮರೆಮಾಚದೇ ಊರು ತಿರುಗುವುದು ಅತ್ಯಂತ ವಿಚಿತ್ರವಾಗಿದೆ. ಹೆಚ್ಚಿನವರಿಗೆ ಈ ಉದ್ರೇಕಾವಸ್ಥೆ ಒಂದು ತಿಂಗಳಾದರೂ ಇಳಿಯುವುದಿಲ್ಲ.

ಈ ಸ್ಥಿತಿಯ ಹಿಂದಿನ ರಹಸ್ಯ

ಈ ಸ್ಥಿತಿಯ ಹಿಂದಿನ ರಹಸ್ಯ

ಈ ಬಗ್ಗೆ ಕಾಳಜಿ ವಹಿಸಿದ ಹಲವು ವಿಜ್ಞಾನಿಗಳು ಈ ಊರಿನಿಂದ ಕೊಂಚ ದೂರದಲ್ಲಿ ತ್ಯಜಿಸಲ್ಪಟ್ಟ ಯುರೇನಿಯಂ ಗಣಿಯೇ ಕಾರಣ ಎಂದು ಕಂಡುಹಿಡಿದಿದ್ದಾರೆ. ಕಜಾಕಸ್ತಾನದಲ್ಲಿ ಹಿಂದೊಮ್ಮೆ ವಿಕಿರಣಸೂಸುವ ಯುರೇನಿಯಂ ಗಣಿಯನ್ನು ಪ್ರಾರಂಭಿಸಲಾಗಿತ್ತು.

ಈ ಸ್ಥಿತಿಯ ಹಿಂದಿನ ರಹಸ್ಯ

ಈ ಸ್ಥಿತಿಯ ಹಿಂದಿನ ರಹಸ್ಯ

ಆದರೆ ಸಾಕಷ್ಟು ಪ್ರಮಾಣದಲ್ಲಿ ಸಿಗದ ಕಾರಣ ಹೇಗಿತ್ತೋ ಹಾಗೇ ಬಿಟ್ಟು ಹೋಗಲಾಗಿತ್ತು. ವಾಸ್ತವವಾಗಿ ಗಣಿಯನ್ನು ಮುಚ್ಚಲೂ ಕೆಲವು ಕಾಯ್ದೆಗಳಿವೆ. ಸರಿಯಾಗಿ ಮುಚ್ಚದ ಗಣಿಯಿಂದ ಕಾರ್ಬನ್ ಮಾನಾಕ್ಸೈಡ್ ಎಂಬ ವಿಷಾನಿಲ ಸತತವಾಗಿ ಸೂಸುತ್ತಾ ಅಕ್ಕಪಕ್ಕದ ಗಾಳಿಯನ್ನು ಕಲುಷಿತಗೊಳಿಸುತ್ತದೆ.

ಈ ಸ್ಥಿತಿಯ ಹಿಂದಿನ ರಹಸ್ಯ

ಈ ಸ್ಥಿತಿಯ ಹಿಂದಿನ ರಹಸ್ಯ

ಆಮ್ಲಜನಕ ವಿರಳವಾದ ಈ ಗಾಳಿಯನ್ನು ಸೇವಿಸಿದವರ ದೇಹದಲ್ಲಿ ಈ ಗಾಳಿ ಬೆರೆತು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಆದರೆ ಇದರ ಪರಿಣಾಮ ನಿಧಾನವಾಗಿ ಕಾಣಬರುತ್ತದೆ. ಈ ತೊಂದರೆ ಪ್ರಾರಂಭವಾಗಿ ಈಗ ಸುಮಾರು ಮೂರು ವರ್ಷಗಳೇ ಕಳೆದಿವೆ. ಈ ಮೂರು ವರ್ಷಗಳಲ್ಲಿ ಈ ಅನಿಲ ಈ ಗ್ರಾಮದ ಎಲ್ಲಾ ನಿವಾಸಿಗಳ ಆರೋಗ್ಯದ ಮೇಲೆ ಭಾರೀ ಪ್ರಭಾವ ಬೀರಿದೆ.

ಸಂಶೋಧನೆಯ ವರದಿಗಳು ಏನು ಹೇಳುತ್ತವೆ?

ಸಂಶೋಧನೆಯ ವರದಿಗಳು ಏನು ಹೇಳುತ್ತವೆ?

ಸೋವಿಯತ್ ಒಕ್ಕೂಟ ಬಿದ್ದು ಹೋದ ಬಳಿಕ ಈ ಯುರೇನಿಯಂ ಗಣಿಯನ್ನು ಹೆಚ್ಚೂ ಕಡಿಮೆ ಇದ್ದ ಹಾಗೇ ಬಿಟ್ಟು ಹೋಗಲಾಗಿತ್ತು. ಇದರಿಂದ ಹೊರಸೂಸುವ ಇಂಗಾಲದ ಮೋನಾಕ್ಸೈಡ್ ಹಾಗೂ ಹೈಡ್ರೋಕಾರ್ಬನುಗಳು ಗಾಳಿಯಲ್ಲಿನ ಆಮ್ಲಜನಕವನ್ನು ಕಡಿಮೆ ಮಾಡುತ್ತವೆ. ಆಮ್ಲಜನಕದ ಕೊರತೆ ಮತ್ತು ಇದರ ಪರಿಣಾಮವಾಗಿ ಭ್ರಮೆ, ಉದ್ರೇಕ ಮೊದಲಾದವು ಕಾಣಿಸಿಕೊಂಡಿವೆ.

ಕಡೆಗೂ ಈ ಗ್ರಾಮವನ್ನು ಖಾಲಿ ಮಾಡಲಾಯಿತು

ಕಡೆಗೂ ಈ ಗ್ರಾಮವನ್ನು ಖಾಲಿ ಮಾಡಲಾಯಿತು

ಕಡೆಗೂ ಈ ತೊಂದರೆಗೆ ಕಾರಣವನ್ನು ಕಂಡುಕೊಂಡ ಬಳಿಕ ಕಜಾಕಸ್ತಾನದ ಸರ್ಕಾರ ಅನಿವಾರ್ಯವಾಗಿ ಈ ಗ್ರಾಮವನ್ನು ಖಾಲಿ ಮಾಡಿಸಿ ಗ್ರಾಮಸ್ಥರಿಗೆ ಉಚಿತ ಚಿಕಿತ್ಸೆ ಒದಗಿಸಿ ಇತರ ಸ್ತಳಗಳಲ್ಲಿ ನೆಲೆಸುವಂತೆ ಕ್ರಮ ಕೈಗೊಂಡಿತು. ಈಗ ಈ ಊರು ನಿರ್ಜನವಾಗಿದ್ದು ಹಾಳೂರಾಗಿದೆ.

English summary

Do you know about this village where the villagers fell asleep

This is the story of a Kazakhstan village, located in Kalachi. It was nicknamed the 'Sleepy Hollow' due to the mysterious condition of people sleeping for hours together in this village. Residents of this village slept for days together and men had uncontrollable sex cravings. Check out the story of this mysterious village unfold here.
Please Wait while comments are loading...
Subscribe Newsletter