ವಿಸ್ಮಯ ಜಗತ್ತು: ಈಕೆ ತಾಯಿಯಲ್ಲ, ನರಮಾಂಸ ತಿನ್ನುವ ರಾಕ್ಷಸಿ!

By: manu
Subscribe to Boldsky

ಮಗುವೊಂದರ ತಾಯಿಯಾಗುವುದು ಪ್ರತಿ ಹೆಣ್ಣಿನ ಕನಸಾಗಿದ್ದು ಮಗುವಿನ ಆಗಮನ ಮೂಲಕ ಧನ್ಯತಾಭಾವನೆಯನ್ನು ಪಡೆಯುತ್ತಾಳೆ. ತನ್ನ ಮಗುವಿಗಾಗಿ ಯಾವ ತ್ಯಾಗವನ್ನೂ ಮಾಡಲು ತಯಾರಾಗುತ್ತಾಳೆ. ತನ್ನ ಒಲವು, ಪ್ರೀತಿ, ಆರೈಕೆಗಳ ಧಾರೆಯನ್ನೇ ಎರೆದು ಮಗು ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಬೆಳೆಯುವಂತಾಗಲು ಶ್ರಮಿಸುತ್ತಾಳೆ.

ಆದರೆ ಈ ವಿಶ್ವದಲ್ಲಿ ಎಲ್ಲಾ ತಾಯಂದಿರು ಹೀಗೇ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಮಹಿಳೆಯರು ಮದ್ಯವ್ಯಸನಿಗಳೂ, ಮಾದಕದ್ರವ್ಯ ಸೇವಿಸುವವರೂ ಆಗಿರುತ್ತಾರೆ. ಇವರೂ ತಾಯಿಯಾಗುತ್ತಾರೆ. ಆದರೆ ವ್ಯಸನ ಇವರ ವಿವೇಕವನ್ನು ಕುಂಠಿತಗೊಳಿಸಿರುತ್ತದೆ. ಪರಿಣಾಮವಾಗಿ ಕ್ರೋಧ, ಹುಚ್ಚುತನ ಮೊದಲಾದವು ಮಮತೆಯನ್ನು ಮರೆಸಿ ವಿಜೃಂಭಿಸುತ್ತವೆ. ಈ ತರಹದ ವ್ಯಸನಕ್ಕೆ ತುತ್ತಾದ ಭಾರತೀಯ ಮಹಿಳೆಯೊಬ್ಬಳ ಕಥೆಯನ್ನು ಇಂದು ಕೇಳೋಣ.... ಮರಣದಂಡನೆ ವಿಧಿಸಿದ್ದ ವ್ಯಕ್ತಿಯ ವಿಚಿತ್ರ ಬಯಕೆ! ಹೀಗೂ ಉಂಟೇ?

ಮದ್ಯವ್ಯಸನಿಯಾದ ಈ ಮಹಿಳೆ ತನ್ನ ಮಗುವಿನ ಮಾಂಸವನ್ನೇ ಕಿತ್ತು ತಿನ್ನುತ್ತಿದ್ದಾಗಲೇ ಹಿಡಿಯಲ್ಪಟ್ಟಿದ್ದಾಳೆ. ಆ ಸಮಯದಲ್ಲಿ ಮಗು ಜೀವಂತವಿದ್ದು ನೋವಿನಿಂದ ಕಿರುಚುತ್ತಿತ್ತು. ಅತ್ಯಂತ ಅಸಹ್ಯವಾದ ಈ ಪ್ರಕರಣದ ವಿವರಗಳನ್ನು ನೋಡೋಣ.... 

ಯಾರೀಕೆ?

ಯಾರೀಕೆ?

ಒರಿಸ್ಸಾ ರಾಜ್ಯದ ಗೋಪಾಲಪುರ ಎಂಬ ಪಟ್ಟಣದ ನಿವಾಸಿಯಾದ 'ಪ್ರಮಿಣಾ ಮೊಂಡಲ್' ಎಂಬ ಮದ್ಯವ್ಯಸನಿ ಮಹಿಳೆಯ ಕಥೆಯಿದು.

ಈಕೆ ಏನು ಮಾಡಿದಳು

ಈಕೆ ಏನು ಮಾಡಿದಳು

ಮದ್ಯದ ಅಮಲಿನಲ್ಲಿ ತನ್ನ ಎರಡು ವರ್ಷದ ಮಗುವಿನ ತಲೆಯ ಒಂದು ತುಂಡನ್ನೇ ಕಚ್ಚಿ ತಿನ್ನುತ್ತಿದ್ದಾಗ ಆಕೆಯ ಭಾವ ಮಗುವಿನ ಕಿರುಚಾಟ ಕೇಳಿ ಓಡಿ ಬಂದು ಮಗುವನ್ನು ರಕ್ಷಿಸಿದ್ದ.

ಆಕೆಯ ಭಾವ ಹೇಗೆ ಮಗುವನ್ನು ರಕ್ಷಿಸಿದ?

ಆಕೆಯ ಭಾವ ಹೇಗೆ ಮಗುವನ್ನು ರಕ್ಷಿಸಿದ?

ಈಕೆಯ ಭಾವ ಅಂದು ಮನೆಗೆ ಪ್ರವೇಶಿಸಿದಾಗ ನೋವಿನಿಂದ ಕಿರಿಚಿಕೊಳ್ಳುತ್ತಿದ್ದ ಮಗಿವಿನ ದನಿ ಕೇಳಿ ಒಳಗೆ ಧಾವಿಸಿದ. ಅಲ್ಲಿ ಕಂಡ ದೃಶ್ಯ ಘಲ್ಲೆನಿಸುವಂತಿತ್ತು. ಮಗುವಿನ ತಾಯಿಯೇ ಮಗುವಿನ ತಲೆಬುರುಡೆಯನ್ನು ಬಲವಾಗಿ ಕಚ್ಚಿ ಮಾಂಸದ ತುಂಡೊಂದನ್ನು ಅಗಿಯುತ್ತಿದ್ದಳು. ನೋವಿನಿಂದ ಮಗು ಸೂರು ಹಾರುವಂತೆ ಬೊಬ್ಬೆ ಹೊಡೆಯುತ್ತಿತ್ತು. ತಕ್ಷಣವೇ ಜಾಗೃತನಾದ ಈತ ಆಕೆಯಿಂದ ಮಗುವನ್ನು ಕಿತ್ತುಕೊಂಡು ಒಂದೇ ಓಟಕ್ಕೆ ಆಸ್ಪತ್ರೆಗೆ ಸೇರಿಸಿದ.

ಗ್ರಾಮಸ್ಥರಿಂದ ಆಕೆಗೆ ಬಿತ್ತು ಧರ್ಮದೇಟು

ಗ್ರಾಮಸ್ಥರಿಂದ ಆಕೆಗೆ ಬಿತ್ತು ಧರ್ಮದೇಟು

ಈ ಸುದ್ದಿ ತಿಳಿಯುತ್ತಲೇ ಸುತ್ತಮುತ್ತಲ ಜನರೆಲ್ಲ ತಕ್ಷಣವೇ ಆಕೆಯ ಮನೆಯ ಎದುರು ಜಮಾಯಿಸಿದರು. ಕೆಲವರು ಆಕೆಯನ್ನು ಮನೆಯಿಂದ ಹೊರಗೆಳೆಯುತ್ತಿದ್ದಂತೆಯೇ ಕುಪಿತರಾಗಿದ್ದ ಜನ ಹತ್ತಿರದ ಮರಕ್ಕೆ ಕಟ್ಟಿಹಾಕಿ ಕೈಗೆ ಸಿಕ್ಕ ವಸ್ತುಗಳಿಂದ ಪ್ರಹಾರ ನೀಡಿದರು. ಆದರೆ ಕೆಲವೇ ನಿಮಿಷಗಳಲ್ಲಿ ಆಗಮಿಸಿದ ಪೋಲೀಸರು ಜನರನ್ನು ಚದುರಿಸಿ ಮಹಿಳೆಯನ್ನು ಸಾವಿನಿಂದ ಕಾಪಾಡಿದರು.

ಈ ಕೃತ್ಯ ಎಸಗಲು ಆಕೆಗೆ ಏನು ಪ್ರೇರಣೆ ನೀಡಿತು?

ಈ ಕೃತ್ಯ ಎಸಗಲು ಆಕೆಗೆ ಏನು ಪ್ರೇರಣೆ ನೀಡಿತು?

ಮದ್ಯ ಏನು ಮಾಡಿಸುತ್ತದೆ ಎಂದು ನಮಗೆಲ್ಲಾ ಅರಿವಿದ್ದರೂ ಈ ಮಟ್ಟಿನ ಭೀಭತ್ಸತೆ ಪಡೆಯುವುದನ್ನು ಆಲೋಚಿಸಿರಲಿಕ್ಕಿಲ್ಲ. ಪೋಲೀಸರ ವಿಚಾರಣೆಯ ಬಳಿಕ ಮದ್ಯದ ಅಮಲಿನಲ್ಲಿ ತಾನು ಏನು ಮಾಡುತ್ತಿದ್ದೆನೆಂದು ಅರಿಯೆ ಎಂದು ಆಕೆ ತಿಳಿಸಿದ್ದಾಳೆ. ಸಧ್ಯಕ್ಕೆ ಈಕೆ ಇನ್ನೂ ಪೋಲೀಸರ ಸುಪರ್ದಿಯಲ್ಲಿದ್ದು ನ್ಯಾಯಾಲದ ವಿಚಾರಣೆ ಮತ್ತು ತೀರ್ಪು ಇನ್ನಷ್ಟೇ ಬರಬೇಕಾಗಿದೆ. ಅಮಲು ಎಷ್ಟೇ ಇರಲಿ, ಈ ತರಹದ ಕೃತ್ಯಕ್ಕೆ ಘೋರ ಶಿಕ್ಷೆಯಾಗಲೇಬೇಕು, ಆಕೆ ಮಗುವಿನ ತಾಯಿಯಾದರೂ ಸಹಾ!. ನಿಮ್ಮ ಅಭಿಪ್ರಾಯವೇನು ಎಂಬುದನ್ನು ಕಮೆಂಟ್ಸ್ ವಿಭಾಗದಲ್ಲಿ ಬರೆದು ತಿಳಿಸಿ.

 
English summary

Disgusting Mother Who Was Caught Eating Her Baby's Flesh!

When a woman becomes a mother, there is no better feeling in this world for her. Love, affection and patience become a part of her everyday life. But what happens if a mother is a drug addict or an alcoholic? Things don't remain the same when a person becomes an addict. They become insane and lose their control over their mind and this is what happened to this Indian lady as well!
Subscribe Newsletter