For Quick Alerts
ALLOW NOTIFICATIONS  
For Daily Alerts

ಇಂತಹ ಪ್ರಾಣಿ-ಪಕ್ಷಿಗಳ ಕನಸ್ಸು ಬಿದ್ದರೆ 'ಶುಭ ಶಕುನ'ವಾಗಲಿದೆ!

By Deepu
|

ನಮ್ಮ ಕನಸಲ್ಲಿ ಕಾಣುವ ಪ್ರಾಣಿಗಳು ಅಥವಾ ಮನೆಯಿಂದ ಹೊರಡುವಾಗ ಸಿಗುವ ಪ್ರಾಣಿಗಳು ವಿಶೇಷ ಸಂದೇಶ ಹಾಗೂ ಅರ್ಥವನ್ನು ನೀಡುತ್ತದೆ. ಕೆಲವು ಪ್ರಾಣಿಗಳು ದೈವಿಕ ಶಕ್ತಿಯನ್ನು ಹೊಂದಿದೆ. ಹಾಗಾಗಿಯೇ ಅವು ಮುಂದಾಗುವ ಭವಿಷ್ಯ ಹಾಗೂ ಸೂಚನೆಯನ್ನು ನೀಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಬಹಿರಂಗ ಪಡಿಸುತ್ತದೆ.

ಎಲ್ಲಾ ವಸ್ತು, ಪ್ರಾಣಿ, ಪಕ್ಷಿ ಹಾಗೂ ಗಿಡ-ಮರಗಳಲ್ಲೂ ದೈವಶಕ್ತಿಯನ್ನು ಕಾಣುತ್ತೇವೆ. ಜೊತೆಗೆ ಆ ಪವಿತ್ರ ಭಾವನೆಗೆ ಅನುಗುಣವಾಗಿ ದೇವರನ್ನು ಪೂಜಿಸುತ್ತೇವೆ. ಹೌದು, ಕೆಲವು ಪ್ರಾಣಿಗಳಿಗೆ ದೈವ ಶಕ್ತಿಯಿದೆ. ಅವು ಭವಿಷ್ಯದ ಸೂಚನೆ ನೀಡುತ್ತವೆ ಎನ್ನುವುದು ಎಷ್ಟು ನಂಬುತ್ತೇವೆಯೋ ಹಾಗೆಯೇ ಕೆಲವು ಪ್ರಾಣಿಗಳನ್ನು ಅಪಶಕುನ ಎಂದು ಸಹ ಪರಿಗಣಿಸುತ್ತೇವೆ.

ಈ ಪ್ರಾಣಿ-ಪಕ್ಷಿಗಳಿಂದ ನಾವು ನೋಡಿ ಕಲಿಯುವುದು ಸಾಕಷ್ಟಿದೆ...

ಅವುಗಳ ದರ್ಶನ ಹಾಗೂ ಕೂಗುವಿಕೆಯಿಂದ ಏನೋ ಭವಿಷ್ಯದಲ್ಲಿ ಕೆಟ್ಟದ್ದು ಸಂಭವಿಸುವುದು ಎಂದು ಹೇಳಲಾಗುವುದು. ಹಾಗಾದರೆ ಯಾವ ಪ್ರಾಣಿಗಳು ಶುಭ ಶಕುನವನ್ನು ನೀಡುತ್ತದೆ? ಅವುಗಳ ಹಿಂದಿರುವ ರಹಸ್ಯವೇನು ಎನ್ನುವುದನ್ನು ಅರಿಯಲು ಲೇಖನದ ಮುಂದಿನ ಭಾಗವನ್ನು ಅರಿಯಿರಿ...

ಗೂಬೆ

ಗೂಬೆ

ಗೂಬೆಗಳು ದೇವದೂತರು ಎಂದು ಪರಿಗಣಿಸಲಾಗುತ್ತದೆ. ಈ ಪಕ್ಷಿ ಅನೇಕ ದೇವತೆಗಳೊಂದಿಗೆ ಸಂಬಂಧ ಹಾಗೂ ಸಂಪರ್ಕ ಹೊಂದಿರುತ್ತಾರೆ ಎನ್ನಲಾಗುವುದು. ಹಾಗಾಗಿ ಈ ಪಕ್ಷಿಯನ್ನು ರಾಯಲ್ ಬರ್ಡ್ ಎಂದು ಸಹ ಕರೆಯುತ್ತಾರೆ. ಇವುಗಳು ನೋಡಲು ಸಿಗುವುದು ಅಪರೂಪ. ಹಾಗೊಮ್ಮೆ

ನೋಡಿದರೆ ಅದೊಂದು ಸಾಧನೆ ಹಾಗೂ ಇತಿಹಾಸದಂತೆ ಎನ್ನುವರು. ಒಳ್ಳೆಯ ಭವಿಷ್ಯವಿದ್ದರೆ ಇದು ಕೂಗುವುದರ ಮೂಲಕ ತಿಳಿಸುತ್ತದೆ ಎನ್ನಲಾಗುವುದು.

ಜೇಡ

ಜೇಡ

ಜೇಡವು ವಿಶೇಷ ಶಕುನಗಳನ್ನು ತಿಳಿಸುತ್ತದೆ. ಹಾಗಾಗಿ ಇದನ್ನು ಉತ್ತಮ ಶಕುನದ ಪ್ರತೀಕ ಎಂದು ಕರೆಯುತ್ತಾರೆ. ಇದರ ದರ್ಶನದಿಂದ "ನಿಮಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ನೀಡುವಂತಹ ಸ್ನೇಹಿತರ ಭೇಟಿ ಆಗುತ್ತದೆ" ಎನ್ನುವುದನ್ನು ತಿಳಿಸುವುದು. ಜೇಡವನ್ನು ಒಂದು ಒಳ್ಳೆಯ ಶುಭ ಶಕುನ ಎಂದು ಪರಿಗಣಿಸುತ್ತಾರೆ. ಒಂದು ವೇಳೆ ಜೇಡವು ಬಲೆಯನ್ನು ಹೆಣೆಯುತ್ತಿರುವ೦ತೆ ಕನಸು ಕ೦ಡಲ್ಲಿ ಕ೦ಡ೦ತಾದಲ್ಲಿ, ಅದರರ್ಥವು ಆ ವ್ಯಕ್ತಿಯು ತನ್ನ ಪರಿಶ್ರಮಕ್ಕಾಗಿ ಬಹುಬೇಗನೇ ಸೂಕ್ತ ಫಲಕಾಣುವನು/ಳು ಎ೦ದಾಗಿರುತ್ತದೆ. ಕೆಲವೊಮ್ಮೆ ಜೇಡವನ್ನು ಕನಸಿನಲ್ಲಿ ಕಾಣುವುದರ ಅರ್ಥವು ಯಾರೋ ಓರ್ವ ವ್ಯಕ್ತಿ ಅಥವಾ ಯಾವುದೋ ಒ೦ದು ಸ೦ಗತಿಯು ನಿಮ್ಮ ಚೈತನ್ಯವನ್ನೂ ಹಾಗೂ ನಿಮ್ಮ ಜೀವವನ್ನೂ ಹಿ೦ಡಿಹಿಪ್ಪೆ ಮಾಡುತ್ತಿದೆ ಎ೦ದೂ ಆಗಿರುತ್ತದೆ. ಬಹುಶ: ನಿಮ್ಮ ಜೀವನವನ್ನು ನಿಯ೦ತ್ರಿಸುವ ಯಾವುದೋ ಒ೦ದು ಶಕ್ತಿಯು ಕ್ರಿಯಾಶೀಲವಾಗಿದ್ದು, ಅದು ನಿಮ್ಮ ಜೀವನದಲ್ಲಿ ಪ್ರಬಲವಾದ ಅಲ್ಲೋಲ ಕಲ್ಲೋಲವನ್ನು ಉ೦ಟುಮಾಡುತ್ತಿರಬಹುದು.

ಜೇಡವು ಗೋಡೆಯನ್ನು ಏರುತ್ತಿರುವ೦ತೆ

ಜೇಡವು ಗೋಡೆಯನ್ನು ಏರುತ್ತಿರುವ೦ತೆ

ಜೇಡವು ಗೋಡೆಯನ್ನು ಏರುತ್ತಿರುವ೦ತೆ ಒ೦ದು ವೇಳೆ ಕನಸುಗಾರನು/ಳು ತನ್ನ ಕನಸಿನಲ್ಲಿ ಜೇಡವು ಗೋಡೆಯನ್ನೇರುತ್ತಿರುವುದನ್ನು ಕಾಣುವ೦ತಾದಲ್ಲಿ, ಅದರರ್ಥವು ಆತನ/ಆಕೆಯ ಆಸೆಆಕಾ೦ಕ್ಷೆಗಳು ನೆರವೇರುತ್ತವೆ ಎ೦ದಾಗಿರುತ್ತದೆ. ಆದರೆ, ಒ೦ದು ವೇಳೆ ಜೇಡವು ಕೆಳಮುಖವಾಗಿ ಚಲಿಸುತ್ತಾ ನಿಮ್ಮೆಡೆಗೆ ಬ೦ದ೦ತೆ ಕನಸನ್ನು ಕಾಣುವ೦ತಾದಲ್ಲಿ, ನೀವು ಬಯಸದ ಯಾವುದೋ ಸ೦ಬ೦ಧವೊ೦ದರ ಸುಳಿಯಲ್ಲಿ ಸಿಲುಕಿ ಪಾರಾಗಲಾರದೇ ಒದ್ದಾಡುತ್ತಿರುವಿರಿ ಎ೦ಬ ಅರ್ಥವನ್ನು ನೀಡುತ್ತದೆ.

ಬೆಕ್ಕು

ಬೆಕ್ಕು

ಬೆಕ್ಕು ಶಕ್ತಿಶಾಲಿಯಾದದ್ದು. ಇದು ಶಕ್ತಿಯುತ ದೇವತೆಗಳೊಂದಿಗೆ ಸಂಬಂಧವನ್ನು ಹೊಂದಿರುತ್ತದೆ. ಈ ಪ್ರಾಣಿ ಗುಪ್ತ, ಮಾಂತ್ರಿಕ ಮತ್ತು ಆಧ್ಯಾತ್ಮಿಕ ಶಕ್ತಿಯ ಸಂಕೇತವಾಗಿದೆ. ಬೆಕ್ಕಿನ ಬಣ್ಣವು ವಿಶೇಷವಾದದ್ದು. ವಿವಿಧ ಬಣ್ಣದ ಬೆಕ್ಕುಗಳನ್ನು ನೋಡುವುದು ವಿವಿಧ ಅರ್ಥವನ್ನು ನೀಡುತ್ತದೆ. ಕಪ್ಪು ಬಣ್ಣದ ಬೆಕ್ಕು ನಮ್ಮ ಅದೃಷ್ಟದ ಬದಲಾವಣೆಯನ್ನು ಸೂಚಿಸುತ್ತದೆ. ಕಿತ್ತಳೆ ಬಣ್ಣದ ಬೆಕ್ಕು ಆಧ್ಯಾತ್ಮಿಕ ಪ್ರವಾಸವನ್ನು ಸಂಕೇತಿಸುತ್ತದೆ. ಬಿಳಿಯ ಬೆಕ್ಕು ಪ್ರಣಯ ಹಾಗೂ ಫಲವತ್ತತೆಯಬದಲಾವಣೆಯನ್ನು ಸೂಚಿಸುತ್ತದೆ.

ಕಾಗೆ

ಕಾಗೆ

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಾಮಾನ್ಯವಾಗಿ ಕಾಣುವ ಪಕ್ಷಿಗಳಲ್ಲಿ ಕಾಗೆ ಕೂಡ ಒಂದು. ಇದರ ಕೂಗನ್ನು ವಿಭಿನ್ನ ಬಗೆಯ ಶಕುನ ಎಂದು ಪರಿಗಣಿಸಲಾಗಿದೆ. ಸಾವು ಮತ್ತು ಪುನರ್ಜನ್ಮದ ಜೀವನ ಚಕ್ರದ ಬಗ್ಗೆ ತಿಳಿಸಿಕೊಡುತ್ತದೆ.. ಅದು ಏನೇ ಇರಲಿ ಆದರೆ, ಕಾಗೆಯು ಕೆಟ್ಟ ಸಮಾಚಾರದ ಸಂಕೇತವಾಗಿದೆ. ಆದರೆ ಅದು ಸತ್ಯದ ಸಂಕೇತ. ಒಂದು ಕಾಗೆಯನ್ನು ನೋಡಿದರೆ ಸತ್ಯವು ಸದ್ಯದಲ್ಲೇ ಬಹಿರಂಗವಾಗುವುದು ಎನ್ನುವುದು ತಿಳಿಯುತ್ತದೆ. ಸತ್ಯವನ್ನು ಎದುರಿಸಲು ನೀವು ಸಿದ್ಧರಾಗಿರಿ ಎಂಬ ಸೂಚನೆಯನ್ನು ನೀಡುತ್ತದೆ. ಅಲ್ಲದೆ ಕೆಲವು ವಾಸ್ತವ ವಿಚಾರಗಳನ್ನು ನೀವು ಅರಿಯುವಿರಿ ಎಂದು ಸೂಚಿಸುತ್ತದೆ.

ಜಿಂಕೆ

ಜಿಂಕೆ

ಜಿಂಕೆಯನ್ನು ನೋಡುವುದು ಸ್ವರ್ಗದ ಸಂಕೇತವಾಗಿದೆ. ನೀವು ಕೃಷೆಯಿಂದ ಶುದ್ಧತೆ ಮತ್ತು ಘನತೆಯೊಂದಿಗೆ ಸಮಸ್ಯೆಯನ್ನು ಎದುರಿಸಬೇಕಾಗಿದೆ ಎನ್ನುವುದನ್ನು ತಿಳಿಸುತ್ತದೆ. ನೀವು ಜಿಂಕೆಯನ್ನು ನೋಡಿದಾಗ ಅದು ತಲೆಯನ್ನು ಎತ್ತಿರುವಂತೆ ಮಾಡಿದರೆ "ನೀವು ಸಮಸ್ಯೆ ಬಂದಾಗ ಆಂತರಿಕವಾಗಿ ದೃತಿಗೆಡದೆ ಎದುರಿಸಬೇಕು" ಎನ್ನುವ ಸೂಚೆನ ನೀಡುತ್ತದೆ.

ಹಲ್ಲಿ

ಹಲ್ಲಿ

ಎಲ್ಲರ ಮನೆಯಲ್ಲೂ ಅನಪೇಕ್ಷಿತ ಅತಿಥಿಯಾಗಿರುವ ಹಲ್ಲಿ ಎಲ್ಲರ ಅವಗಣನೆಗೆ ಗುರಿಯಾಗಿದೆ. ಇದನ್ನು ಮನೆಯಿಂದ ಓಡಿಸಲು ಏನೇನು ತಂತ್ರ ಹೂಡಿದರೂ ಮರುದಿನ ಇನ್ನೊಂದು ಮೂಲೆಯಲ್ಲಿ ಪ್ರತ್ಯಕ್ಷವಾಗಿರುತ್ತದೆ. ಎಲ್ಲರೂ ಇದನ್ನು ದೂರ ಓಡಿಸುವವರೇ ಹೊರತು ಹೊಡೆಯಲು ಹೋಗುವುದಿಲ್ಲ. ಏಕೆಂದರೆ ಹೊಡೆಯಲು ಹೋದಾಕ್ಷಣ ಹಲ್ಲಿ ತನ್ನ ಬಾಲವನ್ನು ಕಳಚಿಕೊಂಡು ಆ ಬಾಲ ಒದ್ದಾಡುತ್ತಿರುವಂತೆಯೇ ಅಲ್ಲಿಂದ ಜಾಗ ಖಾಲಿ ಮಾಡುತ್ತದೆ. ವಿಲವಿಲ ಒದ್ದಾಡುವ ಈ ಬಾಲವನ್ನು ನೋಡಲು ಅಸಹ್ಯಕರವಾಗಿದ್ದು ಯಾರೂ ಇದನ್ನು ನೋಡಬಯಸದ ಕಾರಣ ಹೊಡೆಯಲು ಹೋಗುವುದಿಲ್ಲ. ಅಲ್ಲದೇ ಹಲ್ಲಿ ಮೇಲ್ಛಾವಣಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅಡುಗೆಯಲ್ಲಿ ಬಿದ್ದರೆ, ಆ ಅಡುಗೆ ವಿಷವಾಗುತ್ತದೆ ಎಂದೂ ಜನರು ನಂಬುತ್ತಾರೆ. ಮುಂಬೈಯ ಭೆಂಡಿ ಬಜಾರ್ ನಲ್ಲಿ ಹಾಲಿನಲ್ಲಿ ಹಲ್ಲಿ ಇದೆ ಎಂದು ಹೇಳಿ ಹಾಲನ್ನು ಚೆಲ್ಲಿದ್ದ ಫಕೀರರು ತೀರಿದ ಬಳಿಕ ಅಲ್ಲಿ ಸಮಾಧಿ ಕಟ್ಟಿ ಈಗ ದರ್ಗಾ ಮಾಡಲಾಗಿದೆ. ಆಗಾಗ ಲೊಚಗುಟ್ಟುವ ಹಲ್ಲಿ ಏನೋ ಹೇಳುತ್ತಿದೆ ಎಂದು ಹೇಳಲಾಗುತ್ತದೆ. ಆದರೆ ಹಲ್ಲಿಗಳು ಅತ್ಯಂತ ಅದೃಷ್ಟದ ಜೀವಿಗಳೆಂದು ಪರಿಗಣಿಸಲ್ಪಡುತ್ತವೆ. ನೀವು ಮುಂದೆ ಸಾಗುವಾಗ ನಿಮ್ಮ ಹಾದಿಗೆ ಅಡ್ಡ ಬಂದು ದಾಟಿದರೆ "ನಿಮ್ಮ ಕೆಲಸವು ದೈವಿಕ ಶಕ್ತಿಯಿಂದ ಆಶೀರ್ವದಿಸಲ್ಪಡುತ್ತದೆ" ಎಂದು ನಂಬಲಾಗುವುದು.

English summary

Different Animals And Their Hidden Meanings

Do you know that seeing animals either in dreams or in real can have a hidden meaning behind it? Astrologers have revealed that a close encounter with animals is supposed to be a divine intervention at some point. So, we here at Boldsky are sharing some of the hidden meanings behind the appearance of these specific animals.
X
Desktop Bottom Promotion