ಈ ರೋಗಗಳಿಗೆ ಚಿಕಿತ್ಸೆಯೇ ಇಲ್ಲ... ಹುಷಾರು...

Posted By: Divya Pandith
Subscribe to Boldsky

ನಿತ್ಯವೂ ವಿಜ್ಞಾನಿಗಳು ಒಂದಲ್ಲಾ ಒಂದು ವಿಚಾರದ ಕುರಿತು ಸಂಶೋಧನೆ ನಡೆಸುತ್ತಲೇ ಇರುತ್ತಾರೆ. ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ಚಿಕಿತ್ಸೆ ಹಾಗೂ ಔಷಧಗಳ ಆವಿಷ್ಕಾರ ಹಾಗೂ ರೋಗಗಳ ಗುಣಲಕ್ಷಣ ಅವುಗಳಿಗೆ ಸೂಕ್ತವಾದ ಚಿಕಿತ್ಸೆ, ಹೀಗೆ ಅನೇಕ ವಿಚಾರದ ಸಂಶೋಧನೆ ಹಾಗೂ ಪರೀಕ್ಷೆಗಳು ನಡೆಯುತ್ತಲೇ ಇರುತ್ತವೆ. ಆದರೆ ವಿಶಾದದ ಸಂಗತಿಯೆಂದರೆ ಇಂದಿಗೂ ಕೆಲವು ರೋಗಗಳು ಹೇಗೆ ಬರುತ್ತದೆ? ಹಾಗೂ ಅದರ ನಿವಾರಣೆ ಹೇಗೆ? ಎನ್ನುವುದಕ್ಕೆ ಉತ್ತರವೇ ಸಿಗದಿರುವುದು.

ನಿಜ, ಮನುಕುಲಕ್ಕೆ ಬರುವ ಕೆಲವು ರೋಗಗಳ ಕಾರಣ ಹಾಗೂ ಅದರ ಚಿಕಿತ್ಸೆಗೆ ಔಷಧಿ ಕಂಡುಹಿಡಿಯಲು ವಿಫಲರಾಗಿದ್ದಾರೆ. 2014ರ ವೇಳೆ ಎಬೊಲ ಎನ್ನುವ ಸೋಂಕಿನಿಂದ ಬಾಯಿ ಸುಡುವಂತಹ ಸಂವೇದನೆಗೆ ಒಳಗಾಗುವ ರೋಗವೊಂದು ಕಾಣಿಸಿಕೊಂಡಿತು. ಇದು ನೀರಿನಿಂದ ಬರುವ ಅಲರ್ಜಿಯಾ? ಅಥವಾ ಇಲ್ಲವಾ ಎನ್ನುವುದನ್ನು ಕಂಡು ಹಿಡಿಯಲು ವಿಜ್ಞಾನಿಗಳು ವಿಫಲರಾದರು. ನಂತರ ಒಮ್ಮೆ ಮಾರಣಾಂತಿಕ ಕಾಯಿಲೆಯಾಗಿ ಪರಿವರ್ತನೆಗೊಂಡ ಎಬೊಲ ವಿಜ್ಞಾನಿಗಳನ್ನು ಕಂಗೆಡಿಸಿತು.

ಇದರ ವಿರುದ್ಧ ಹೋರಾಡುವ ಔಷಧಿಯನ್ನು ಕಂಡು ಹಿಡಿಯಲು ಒತ್ತಾಯಿಸಲಾಯಿತು. ಅನೇಕ ಕಾಯಿಲೆಗಳು ಇಂದಿಗೂ ವೈದ್ಯರಿಗೆ ಹಾಗೂ ವಿಜ್ಞಾನಿಗಳಿಗೆ ಪ್ರಶ್ನೆಯಾಗಿ ನಿಂತಿವೆ. ಕೆಲವು ಕಾಯಿಲೆಗಳ ಬರುವಿಕೆ ಹಾಗೂ ಅದರ ಚಿಕಿತ್ಸೆಯ ಕುರಿತು ಯಾವುದೇ ಆವಿಷ್ಕಾರಗಳು ಯಶಸ್ವಿಯಾಗಲಿಲ್ಲ. ಹಾಗಾದರೆ ಆ ರೋಗಗಳು ಯಾವವು? ಎನ್ನುವುದನ್ನು ನೀವು ತಿಳಿದುಕೊಳ್ಳಬೇಕೆನ್ನುವ ಕುತೂಹಲ ಇದ್ದರೆ ಈ ಮುಂದೆ ವಿವರಿಸಲಾದ ವಿವರಣೆಯನ್ನು ಪರಿಶೀಲಿಸಿ.... 

ನೀರಿನ ಅಲರ್ಜಿ

ನೀರಿನ ಅಲರ್ಜಿ

ನೀರಿನ ಅಲರ್ಜಿ ಎಂದು ಕರೆಯುವ ರೋಗವು ಅತ್ಯಂತ ಅಸಮಾನ್ಯ ಹಾಗೂ ಅಪರೂಪದ ಕಾಯಿಲೆಯಾಗಿದೆ. ಭೂಮಿಯು ಪ್ರತಿಶತ 70 ರಷ್ಟು ನೀರಿನಿಂದ ಕೂಡಿದೆ. ಅಂತೆಯೇ ಜಗತ್ತಿನಾದ್ಯಂತ ನೀರಿನ ಅಲರ್ಜಿಯಿಂದ ಕೂಡಿದ ರೋಗಿಗಳಿರುವುದು ಕಂಡು ಬಂದಿದೆ. ಈ ಅಲರ್ಜಿಯಿಂದ ದಿನವಿಡೀ ಕೆರಳಿಕೆ ಮತ್ತು ತುರಿಕೆ ಕಾಣಿಸಿಕೊಳ್ಳುತ್ತದೆ. ಅಕ್ವಾಜೆನಿಕ್ ಯುಟಿಟೇರಿಯಾ ಅಥವಾ ನೀರಿನ ಅಲರ್ಜಿಯಿಂದ ಬಳಲುವ ರೋಗಿಗಳಿಗೆ ಯಾವುದೇ ಚಿಕಿತ್ಸೆ ದೊರೆಯದು.

ಎಸ್ಐಡಿಎಸ್

ಎಸ್ಐಡಿಎಸ್

ಇದೊಂದು ಸಾಮಾನ್ಯ ಕಾರಣಗಳಿಂದ ಬರುವಂತಹ ರೋಗವಾಗಿದೆ. ಈ ರೋಗವು ಒಂದು ಮಗುವಿಗೆ ಬಂದರೆ ಹತ್ತಿರ ಇರುವ ನೂರು ಮಕ್ಕಳಿಗೆ ಹರಡುವುದು. ಹಾಗಾಗಿ ಇದನ್ನು ಕೊಟ್ಟಿಗೆ ಸಾವು ಎಂದು ಕರೆಯುತ್ತಾರೆ. ಈ ರೋಗ ಬಂದಾಗ ಮಗು ನಿದ್ರೆಂiÀಲ್ಲಿರುವಾಗಲೇ ಸಾವನ್ನಪ್ಪುತ್ತದೆ. ರೋಗಕ್ಕೆ ಕಾರಣ ಇನ್ನು ತಿಳಿದಿಲ್ಲ. ಈ ರೋಗವು ಸಾಮಾನ್ಯವಾಗಿ ಒಂದು ತಿಂಗಳಿನ ಮಗುವಿನಿಂದ ಹಿಡಿದು ಒಂದು ವರ್ಷದ ಒಳಗಿನ ಮಗುವಿಗೆ ಬರುತ್ತದೆ.

ಮ್ಯಾಡ್ ಕೌ ಡಿಸೀಸ್

ಮ್ಯಾಡ್ ಕೌ ಡಿಸೀಸ್

ಇದೊಂದು ಹಸುವಿಗೆ ಬರುವ ಅಪರೂಪದ ಕಾಯಿಲೆ. ಈ ರೋಗ ಬಂದಾಗ ಹಸುವಿನ ಮೆದುಳು ಮಶ್ರೂಮ್ ನಂತೆ ಆಗುತ್ತದೆ. ಇದು ಅದರ ಮರಣಕ್ಕೆ ಕಾರಣವಾಗುವುದು. ಈ ರೋಗವನ್ನು ಬೊವೆನ್ ಸ್ಪಾಂಜಿಫಾರ್ಮ್ ಎನ್ಸೆಫಲೋಪತಿ ಅಥವಾ ಬಿಎಸ್ ಇ ಎಂದು ಕರೆಯಲಾಗುತ್ತದೆ. ಈ ರೋಗವು ಮನುಷ್ಯರ ಮೇಲೆ ಪರಿಣಾಮ ಬೀರದು.

ಡಾನ್ಸಿಂಗ್ ಪ್ಲೇಗ್

ಡಾನ್ಸಿಂಗ್ ಪ್ಲೇಗ್

1518ರಲ್ಲಿ 400ಕ್ಕಿಂತ ಹೆಚ್ಚಿನ ಜನರು ಈ ನಿಗೂಢ ರೋಗದಿಂದ ನರಳಿ ಸತ್ತರು ಎಂದು ಹೇಳಲಾಗುತ್ತದೆ. ಈ ಸೋಂಕು ಬಂದ ನಂತರ ಜನರು ಅನಿಯಂತ್ರಿತವಾಗಿ ನೃತ್ಯ ಮಾಡುತ್ತಿರುತ್ತಾರೆ. ನೃತ್ಯ ಮಾಡಿ ಹಾಗೂ ಹೃದಯಘಾತದಿಂದ ಸಾವನ್ನು ಕಾಣುವರು. ಈ ರೋಗಕ್ಕೆ ಕಾರಣವೇನು ಎನ್ನುವುದನ್ನು ನಿಖರವಾಗಿ ಇನ್ನೂ ತಿಳಿದುಬಂದಿಲ್ಲ. ಜೊತೆಗೆ ಇದರ ಚಿಕಿತ್ಸೆಗೆ ಔಷಧವನ್ನೂ ಆವಿಷ್ಕರಿಸಲು ಸಾಧ್ಯವಾಗಲಿಲ್ಲ ಎನ್ನಲಾಗುತ್ತದೆ.

ಸ್ಲೀಪಿಂಗ್ ಸಿಕ್ನೆಸ್

ಸ್ಲೀಪಿಂಗ್ ಸಿಕ್ನೆಸ್

ಈ ಕಾಯಿಲೆ ಇರುವ ವ್ಯಕ್ತಿಗಳ ಮೆದುಳಿನ ಯಾವುದೋ ಒಂದು ಭಾಗ ನಿಷ್ಟೇಷ್ಟಿತವಾಗಿ ಇದು ನಿಯಂತ್ರಿಸುವ ದೇಹದ ಅಂಗಗಳೂ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಈ ವ್ಯಕ್ತಿಗಳಿಗೆ ಚಲನೆ, ಮಾತನಾಡಲು ಆಗದೇ ಪ್ರತಿಮೆಯಂತೆ ಒಂದೇ ಕಡೆ ಇರುತ್ತಾರೆ. ಈ ಕಾಯಿಲೆಗೆ ಕೆಲವಾರು ವಿವರಣೆಗಳನ್ನು ನೀಡಿದರೂ ಇದಕ್ಕೆ ಕಾರಣವನ್ನು ಮಾತ್ರ ಇದುವರೆಗೆ ನೀಡಲು ಸಾಧ್ಯವಾಗಿಲ್ಲ. ಈ ರೋಗ ಪ್ರಥಮ ಸ್ಥಿತಿ ದಾಟುವ ಮೊದಲೇ ಹೆಚ್ಚಿನ ರೋಗಿಗಳು ಪರಂಧಾಮಕ್ಕೆ ಧಾವಿಸುತ್ತಾರೆ. ವೈದ್ಯರ ಪ್ರಕಾರ ಅಜ್ಞಾತ ವೈರಸ್ ಒಂದು ಇದಕ್ಕೆ ಕಾರಣವಾಗಿದ್ದು ಇದರ ಪರಿಣಾಮವಾಗಿ ರೋಗಿಯನ್ನು ಮಾತನಾಡಲು ಹಾಗೂ ಚಲಿಸಲು ಇಡಿಯ ಜೀವಮಾನದಲ್ಲಿ ಅಸಾಧ್ಯವಾಗುವಂತೆ ಮಾಡುತ್ತದೆ.

ಬೆವರಿನ ಕಾಯಿಲೆ

ಬೆವರಿನ ಕಾಯಿಲೆ

ಈ ಕಾಯಿಲೆಯನ್ನು ಮಾರಣಾಂತಿಕ ಎಂದು ಪರಿಗಣಿಸಲಾಗಿದೆ. ಇದುವರೆಗೆ ಸಾವಿರಾರು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಇದರ ಲಕ್ಷಣಗಳೆಂದರೆ ಥಟ್ಟನೇ ನೋವು ಪ್ರಾರಂಭವಾಗುವುದು, ಚಳಿಜ್ವರ ಆವರಿಸುವುದು ಹಾಗೂ ಬಳಿಕ ಧಾರಾಕಾರವಾಗಿ ಬೆವರು ಸುರಿಯುವುದು. ಒಂದು ವೇಳೆ ಸತತವಾಗಿ ಕೆಲವು ಘಂಟೆಗಳ ಕಾಲ ಬೆವರು ದೇಹದಿಂದ ಹರಿದು ಹೋದರೆ ಇದು ದೇಹವನ್ನು ನಿರ್ಜಲೀಕರಣಕ್ಕೆ ಈಡು ಮಾಡುತ್ತದೆ ಹಾಗೂ ಇದು ವ್ಯಕ್ತಿಗ ಸಾವಿಗೆ ಕಾರಣವಾಗುತ್ತದೆ. ಈ ಸ್ಥಿತಿಯನ್ನು ಕೆಲವಾರು ರೋಗಿಗಳಲ್ಲಿ ಇಂದಿಗೂ ಕಂಡುಬರುತ್ತಿದ್ದು ಇದಕ್ಕೆ ಸೂಕ್ತ ಚಿಕಿತ್ಸೆ ಮಾತ್ರ ಇದುವರೆಗೆ ಸಿದ್ಧಪಡಿಸಲಾಗಿಲ್ಲ.

ನಿರಂತರವಾದ ಜನನಾಂಗದ ಅಸ್ವಸ್ಥತೆ

ನಿರಂತರವಾದ ಜನನಾಂಗದ ಅಸ್ವಸ್ಥತೆ

ನಿರಂತರ ಜನನಾಂಗದ ಅಸ್ವಸ್ಥತೆ ಇರುವವರಿಗೆ ಕಾರಣವಿಲ್ಲದೆಯೇ ರಾತ್ರಿ ಎಚ್ಚರವಾಗುತ್ತದೆ. ಈ ಕುರಿತು ವೈದ್ಯರು ಅನೇಕ ಬಗೆಯ ಸಂಶೋಧನೆಯನ್ನು ನಡೆಸಿದ್ದಾರೆ. ಆದರೆ ಯಾವುದೇ ಹೊಸ ರೋಗಿಗೆ ಈ ಲಕ್ಷಣ ಉಂಟಾಗಿರುವುದು ಕಂಡುಬಂದಿಲ್ಲ. ಒಬ್ಬ ವ್ಯಕ್ತಿಯ ನಿರಂತರ ಉಲ್ಬಣಗೊಳ್ಳುವಿಕೆಯ ಕಾರಣವನ್ನು ಪತ್ತೆಹಚ್ಚುವುದು ಕಷ್ಟವಾಗಿದೆ. ಈ ರೋಗ ಕೆಲವು ತಿಂಗಳವರೆಗೆ ಉಳಿದುಕೊಳ್ಳಬಹುದು. ಅಲ್ಲದೆ ನಿತ್ಯದ ಜೀವನದಲ್ಲೂ ಗಂಭೀರ ಪರಿಣಾಮ ಬೀರುವುದು ಎಂದು ಹೇಳಲಾಗುತ್ತದೆ.

ಆಲಿಸ್ ಇನ್ ವಂಡರ್ಲ್ಯಾಂಡ್ ಸಿಂಡ್ರೋಮ್

ಆಲಿಸ್ ಇನ್ ವಂಡರ್ಲ್ಯಾಂಡ್ ಸಿಂಡ್ರೋಮ್

ಪಾಶ್ಚಾತ್ಯ ದಂತಕತೆಯೊಂದರ ಹೆಸರನ್ನೇ ಪಡೆದ ಈ ಕಾಯಿಲೆ ಕೇಳಲು ಚೆನ್ನಾಗಿದ್ದರೂ ರೋಗಿಗಳು ಮಾತ್ರ ಮಾನಸಿಕವಾಗಿ ವ್ಯಾಕುಲನಾಗಿರುತ್ತಾರೆ. ಇವರು ತಮ್ಮ ಸಾಮಾನ್ಯ ಗಾತ್ರಕ್ಕಿಂತಲೂ ಚಿಕ್ಕದಾಗಿರುವ ಅಥವಾ ದೊಡ್ಡದಾಗಿರುವಂತೆ ಭಾವಿಸಿ ಆದೇ ಪ್ರಕಾರ ಅವರ ನಡವಳಿಕೆಯೂ ಬದಲಾಗುತ್ತದೆ. ಕೆಲವರಿಗೆ ತಾವು ಬೆಳೆಯದೇ ತಮ್ಮ ವಸ್ತುಗಳು ಅಂದರೆ ಹಾಸಿಗೆ, ಕೋಣೆ ಮೊದಲಾದವು ಚಿಕ್ಕದಾಗುತ್ತಿರುವಂತೆ ಅಥವಾ ದೊಡ್ಡದಾಗುತ್ತಿರುವಂತೆ ಅನ್ನಿಸುತ್ತದೆ. ಈ ಕಾಯಿಲೆಯ ಬಗ್ಗೆ ನಡೆಸಿದ ಹಲವಾರು ಸಂಶೋಧನೆಗಳ ಬಳಿಕವೂ ಈ ಸ್ಥಿತಿಗೆ ಸೂಕ್ತವಾದ ವಿವರಣೆ ನೀಡಲು ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ.

ಕೈಜೋಮು ಹಿಡಿಯುವ ಕಾಯಿಲೆ (Working Hand Syndrome)

ಕೈಜೋಮು ಹಿಡಿಯುವ ಕಾಯಿಲೆ (Working Hand Syndrome)

ವಿಚಿತ್ರ ಕಾಯಿಲೆಗಳಲ್ಲಿ ಯಾರಿಗೂ ಬಾಧಿಸಬಹುದಾದ ಈ ಕಾಯಿಲೆ ಆವರಿಸಿದ ವ್ಯಕ್ತಿಗಳಿಗೆ ರಾತ್ರಿ ಸಮಯದಲ್ಲಿ ಕೈ ಅಥವಾ ಇತರ ಪ್ರಮುಖ ಅಂಗದಲ್ಲಿ ನೋವು, ಜೋಮು ಹಿಡಿಯುವುದು, ಬೆಂಕಿ ಹಿಡಿದಂತೆ ಉರಿಯುವುದು ಅಥವಾ ಕಚಗುಳಿ ಇಟ್ಟಂತೆ, ಒಳಗಿನಿಂದ ಸೂಜಿಗಳು ಚುಚ್ಚಿದಂತೆ ಅನ್ನಿಸುತ್ತದೆ. ಈ ಬಗ್ಗೆ ಹಲವಾರು ಸಂಶೋಧನೆಗಳು ನಡೆದಿದ್ದು ಇದುವರೆಗೂ ಯಾವುದೇ ಖಚಿತ ಚಿಕಿತ್ಸೆ ಲಭ್ಯವಾಗಿಲ್ಲ. ಆದರೆ ಸಂಶೋಧನೆಯ ಮೂಲಕ ಈ ವ್ಯಕ್ತಿಗಳ ನರಗಳು ಘಾಸಿಗೊಂಡಿದ್ದು ನರತಂತುಗಳ ಸಂವೇದನೆಯಿಂದ ನೋವು ಕಾಣಿಸಿಕೊಳ್ಳುತ್ತದೆ ಎಂದು ಮಾತ್ರ ಕಂಡುಕೊಳ್ಳಲಾಗಿದೆ. ಇದುವರೆಗೆ ಈ ಕಾಯಿಲೆಗೆ ಚಿಕಿತ್ಸೆ ಕಂಡುಹಿಡಿಯಲಾಗಿಲ್ಲ.

ಬ್ಲೂ ಸ್ಕಿನ್ ಡಿಸೀಸ್

ಬ್ಲೂ ಸ್ಕಿನ್ ಡಿಸೀಸ್

ಇದೊಂದು ವಂಶವಾಹಿನಿಯ ಮೂಲಕ ಆವರಿಸುವ ಕಾಯಿಲೆಯಾಗಿದ್ದು ರೋಗಿಯ ಚರ್ಮ ನೀಲಿ ಬಣ್ಣಕ್ಕೆ ತಿರುಗುತ್ತದೆ. ವೈದ್ಯವಿಜ್ಞಾನದಲ್ಲಿ ಈ ಕಾಯಿಲೆಗೆ Methemoglobinemia ಎಂದು ಕರೆಯುತ್ತಾರೆ. ಈ ಕಾಯಿಲೆ ಇರುವ ವ್ಯಕ್ತಿಯ ರಕ್ತದಲ್ಲಿ met-hemoglobin ಎಂಬ ಕಣ ಕೆಂಪು ರಕ್ತಕಣಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುತ್ತದೆ. ಈ ಕಣ ರಕ್ತ ಆಮ್ಲಜನಕವನ್ನು ಹೊತ್ತೊಯ್ಯುವ ಕೆಲಸ ಮಾಡುತ್ತದೆ. ಹೆಚ್ಚಿನ ಕಣಗಳ ಕಾರಣ ಆಮ್ಲಜನಕವೂ ಹೆಚ್ಚಾಗಿದ್ದು ಚರ್ಮ ನೀಲಿಯಾಗುತ್ತದೆ. ಇಂದು ಈ ರೋಗದಿಂದ ನೂರಾರು ವ್ಯಕ್ತಿಗಳು ಬಳಲುತ್ತಿದ್ದಾರೆ. ಆದರೆ ಇದುವರೆಗೆ ಈ ತೊಂದರೆಗೆ ಯಾವುದೇ ಚಿಕಿತ್ಸೆ ಕಂಡುಹಿಡಿಯಲು ಸಾಧ್ಯವಾಗಿಲ್ಲ.

English summary

Crazy Diseases Science Can't Explain

check out for some of the most bizarre diseases that science is yet to find an answer for to eradicate it completely.
Story first published: Monday, November 20, 2017, 18:57 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more